Sunday, December 25, 2022

Adishanakra -NotesDec25_2022

 ೧೪. 

ಆತ್ಮಜ್ಞಾನಕ್ಕೆ 

ತ್ರೈಷೆ ಬೇಕು ( ಶ್ರದ್ದೆ )

ಸಮಾಜಮುಖಿ ಆದಂತ ವಿಧ್ಯೆ ಬಂದರೆ ರಾಜಯೋಗ ಸಿಗುತ್ತೆ 

ಗುರುಕುಲ ಪದ್ಧತಿ ಬೇಕು . ಏಕಾಗ್ರತೆಯಲ್ಲಿ ಒಂದೇ ಜಾಗದಲ್ಲಿ ಇದ್ದು ಆಧ್ಯಾತ್ಮಿಕ ವಿಧ್ಯೆ ಕಲಿಯಬೇಕು.

ಸಾತ್ವಿಕ್ ವಾತಾವರಣ ಬೇಕು.

ಸಮಾನತೆ ಇದ್ದರೆ ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಸಾಧ್ಯ  

ಮಾತೃ ಋಣ ಪಿತೃ ಋಣ ದೇವ ಋಣ ಋಷಿ ಋಣ 

ಗುರುವೇ ಸಾಕ್ಷಾತ್ ದೈವ 

ತಂದೆ ಕೊಡುವುದು ಲೌಕಿಕಾದ್ದು. ಗುರುಗಳು ಕೊಡುವುದು ಅಲೌಕಿಕವಾದ ಜ್ಞಾನ ವೇದ ಜ್ಞಾನ .

ಅಲೆಕ್ಸಾಂಡರ್ ಗು ಕೂಡ ವೇದ ವಿಧ್ಯೆ ಬೇಕು ಎಂದು ತಿಳಿದಿತ್ತು ಆದರೆ ಸಿಗಲಿಲ್ಲ 

ಸ್ವಾಮಿ ವಿವೇಕಾನಂದರವರಿಗೆ ಕೂಡ ಗುರು ರಾಮಕೃಷ್ಣರ ಹೆಸರು ಕೂಡ ಸಂಬೋಧಿಸಿ ಹೇಳುತ್ತಿರಲಿಲ್ಲ .

ಎದುರುಗಡೆ ಚಾದಲ ಬಂದಾಗ ಶಂಕರಾಚಾರ್ಯರು ತಪ್ಪಾಗಿ ಗ್ರಹಿಸಿದರು ಅದೇ ತೋರ್ಸುತ್ತೆ ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ತಕ್ಷಣ ತಿದ್ದು ಕೊಳ್ಳಬೇಕು ಎಂದು .

ನರ್ಮದಾಷ್ಟಕ ಸ್ತೋತ್ರದ ಮೂಲಕ ಸಮಸ್ಯೆ ನಿರ್ಮೂಲನೆ ಮಾಡಿದರು. ಸಮಸ್ಯೆ ಬಂದಾಗ ಮಾತ್ರ ಅಷ್ಟಸಿದ್ಧಿಯನ್ನು ಉಪಯೋಗಿಸಿದರು. ತಮ್ಮ ಅನುಕೂಲಕ್ಕೆ ಬಳಸಲಿಲ್ಲ .

ಚರ್ಚೆಯಲ್ಲಿ ಸೋತವರು ಇವರ ವ್ಯಕ್ತಿತ್ವನ್ನು ತುಂಬಾ ಇಷ್ಟಪಡುತ್ತಿದ್ದರು. ಅಜಾತಶತ್ರು .

ಗುರುಕುಲದಲ್ಲಿ ಗೋವಿಂದ ಭಗವದ್ಪಾದರನ್ನು ಭೇಟಿ ಮಾಡಿದ್ದರು. ಅವರ ಗುರು ಗೌಡಪಾದಾಚಾರ್ಯರು ಉಪನಿಷತ್ತಿಗೆ ಕಾರಿಕೆ ಬರೆದಿದ್ದರು. ಪೂರ್ವಪಕ್ಷ , ಉತ್ತರ ಉತ್ತರಾಪಕ್ಷ ಮಂಡಿಸಿದ ಗುರುಗಳ ಗುರು ಅವರು .

ಆತ್ಮಾವಲೋಕವನ್ನು ಮಾಡಿಕೊಳ್ಳುವುದು ಮುಖ್ಯ ( ಶ್ರಾವಣ ಮನಾನಾ ನಿಧಿಧ್ಯಾಸನ )

೧-೨ ಪುಸ್ತಕ ನೋಡಿ ಅಳವಡಿಸಿಕೊಳ್ಳಬೇಕು . 

ಎಷ್ಟು ತಿಳಿದರೂ ಅಳವಡಿಸಿಕೊಳ್ಳಲೇಬೇಕು ಆಗಲೇ ಮುಕ್ತಿ ಮಾರ್ಗ ದಾರಿ ತೆಗೆದುಕೊಳ್ಳುತ್ತದೆ.

ಭಕ್ತಿ ಯೋಗ ( ಮೊದಲು ಬೇಕಾಗಿರೋದು ), ಜ್ಞಾನ ಯೋಗ ( ಭಕ್ತಿಯನ್ನು ಉಪಯೋಗಿಸಿ ಅಭ್ಯಾಸ ಮಾಡಬೇಕು , ಅದಕ್ಕೆ ವೈರಾಗ್ಯಬೇಕು ). ಅದನ್ನು ಉಪಯೋಗಿಸಿ ವಿವೇಕ ಬರಿಸಿಕೊಳ್ಳಬೇಕು . ವಿವೇಕದಿಂದ ಬ್ರಹ್ಮ ಜ್ಞಾನ ಪ್ರಾಪ್ತಿ . ಆಮೇಲೆ ನಿತ್ಯ ಕರ್ಮವೂ ಬಿಟ್ಟುಹೋಗುತ್ತದೆ . ನಿವೃತ್ತಿ ಮಾರ್ಘಕ್ಕೆ ಸೇರುತ್ತೇವೆ .

ಶಂಕರಾಚಾರ್ಯರು ಸೂಕ್ತವಾದ ಪಂಡಿತರು /ವಾರ್ತಿಕರು / ಗಣಪಂಡಿತರು ಸಿಕ್ಕಿದರು . ಅವರೇ ಕುಮಾರಿಲಭಟ್ಟರು. ಲಕ್ಷಾಂತರ ಶಿಷ್ಯರನ್ನು ಸಿದ ಪಡಿಸಿದ ಕುಮಾರಿಲ ಭಟ್ಟರನ್ನು ವಾದದಲ್ಲಿ ಸೋಲಿಸಿ ಜನನ ಮಾರ್ಗಕ್ಕೆ ತರಬೇಕು ಎಂದು ಬಾವಿಸಿದ್ದರು .

ಆದರೆ ಭಟ್ಟರು ದೇಹ ತ್ಯಾಗ ಮಾಡಲು ನಿಶ್ಚಯಿಸಿರುತ್ತಾರೆ .

ಪ್ರಯಾಗದಲ್ಲಿ ವಾಸಿಸುತ್ತಿರುತ್ತಾರೆ .

ಶಂಕರಾಚಾರ್ಯರು ಅಲ್ಲಿಗೆ ಬಂದು ಪದ್ಮಾಸನದಲ್ಲಿ ಬತ್ತದ ಹೊಟ್ಟಿನ ಮೇಲೆ ಕುಳಿತು ಬೆಂಕಿ ( ತೃಷಾಗ್ನಿ ಪ್ರಾಯಶ್ಚಿತ್ತ ) ಹಾಕಿಸಿಕೊಂಡಿರುತ್ತಾರೆ. 

ಭಟ್ಟರು ಬೌದ್ಧ ಧರ್ಮವನ್ನು ಸೋಲಿಸಿ ನಿಂತು ಗೆದ್ದವರು . ಅವರು ಶಂಕರಾಚಾರ್ಯರ ಜೊತೆ ವಾದ ಮಾಡಲು ಮನಸ್ಸು ಬದಲಾಯಿಸುವುದಿಲ್ಲ . ಆಳವಾಗಿ ಬೌದ್ಧ ಧರ್ಮವನ್ನು ತಿಳಿದು ಅದನ್ನು ಖಂಡಿಸಿದರು . ಪಾಪ ಪ್ರಜ್ಞೆಗೆ ತೃಷಾಗ್ನಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡರು . ಮಾಡಿಕೊಳ್ಳುವ ಮನ್ಯಾಚೆ ಮಂಡನ ಮಿಶ್ರರಿಂದ ವಾರ್ತಿಕೇಯನ್ನು ಬರೆಸಿಕೊಳ್ಳಿ ಎಂದು ತಿಳಿಸಿದರು .

ಶಂಕರರು ಕಾಶಿಗೆ ಬಂದು ವೈಧಿಕ ವಿಷಯವನ್ನು ಚರ್ಚೆ ಮಾಡಿದ್ದಾರೆ . ಪರಿಪಕ್ವರಾಗಿದ್ದಾರೆ .

ಗೋವಿಂದ ಭಾಗವದ್ಪಾದರ ಆಶೀರ್ವಾದ ಮತ್ತು ಅಪ್ಪಣೆಯೊಂದಿಗೆ ಬಾಷ್ಯದ ಕೆಲಸ ಶುರುವಾಗುತ್ತದೆ.

ನಾರಾಯಣನ ವಿಗ್ರಹವನ್ನು ತಮ್ಮ ತಪಶಕ್ತಿಯಿಂದ ತೆಗೆದು ಕಾಶಿಯಲ್ಲಿ ಸ್ಥಾಪಿಸುತ್ತಾರೆ .

ಸರಸ್ವತಿ ನದಿಯ ತೀರದಲ್ಲಿ ವ್ಯಾಸಗುಹದಲ್ಲಿ ಕುಳಿತು ಉಪನಿಷದ್ ಭಗವದ್ಗೀತೆ ಮತ್ತು ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುತ್ತಾರೆ. ಎಲ್ಲರಿಗೂ ತಲುಪಲೆಂದು ಆಗಾಗ ಉಪನ್ಯಾಸಗಳನ್ನು ಕೊಡುತ್ತಿದ್ದಾರೆ .

ಅವರ ಪರಮ ಶಿಷ್ಯ ಸನಂದ ( ವಿಷ್ಣುಶರ್ಮ ) ನ ಜೊತೆ ಇರುತ್ತಾರೆ .

ಸನಂದ ಎಂದು ಕೂಗಿದ ತಕ್ಷಣ ಗುರುಗಳನ್ನು ಭೇಟಿ ಮಾಡಲು ನೀರಿನ ಮೇಲೆ ಓಡೋಡಿ ಬರುತ್ತಾರೆ. ಅಲ್ಲೆಲ್ಲಾ ಪದ್ಮ ಪಾತ್ರ ಉದ್ಭವಿಸುತ್ತದೆ . ಅವರಿಗೆ ಸನ್ಯಾಸ ಸ್ವೀಕರಿಸಿದಾಗ ಸನಂದ ಎಂದು ಹೆಸರಿಟ್ಟು ನಂತರ ಪದ್ಮಪಾದಾಚಾರ್ಯ ಎಂಬ ಹೆಸರನ್ನು ಕೊಡುತ್ತಾರೆ . 

ಭಗವದ್ಪಾದರಿಗೆ ಈಗ ೧೬ ವರ್ಷ . ಆಯಸ್ಸು ಮುಗಿತಾ ಬಂದಿದೆ . ಕಾರ್ಯ ಬಹಳಷ್ಟಿದೆ. ನಾಸ್ತಿಕ ಧರ್ಮವನ್ನು ಖಂಡಿಸಿ ವೇದ ಧರ್ಮವನ್ನು ಸ್ಥಾಪಿಸಬೇಕಾಗಿದೆ . 

 ವೇದವ್ಯಾಸರು ಒಬ್ಬ ವೃದ್ಧ ರೂಪದಲ್ಲಿ ಬಂದು ಪ್ರಶ್ನೆ ಮಾಡಿದರು . ಸಮಾಧಾನವಾಗಿ ಉತ್ತರಿಸುತ್ತಾರೆ . ಶಂಕರಾಚಾರ್ಯರಿಗೆ ಅವರು ವೇದವ್ಯಾಸರು ಎಂದು ತಿಳಿಯುತ್ತದೆ . ಆಗ ಸಾಕ್ಷಾತ್ ವೇದವ್ಯಾಸರೇ ಅಲ್ಲಿರುವುದು ಎಂದು  ನಮಸ್ಕರಿದ ಶಂಕರರಿಗೆ ಇನ್ನೂ ೧೬ ವರ್ಷ ಆಯಸ್ಸು ಕರುಣಿಸುತ್ತಾರೆ .

Wednesday, December 14, 2022

8. Adishankara - Kannada Notes.

 ಕನಕಧಾರಾ ಸ್ತೋತ್ರದಿಂದ ಒಂದು ಬಡ ಮನೆಯ ಉದ್ದಾರವಾದ ಉದಾಹರಣೆ ನೋಡಿದೀವಿ . 

ಆ ಬಾಲಕ ಈಶ್ವರನ ಅವತಾರವೇ ಎಂದು ನಿಶ್ಚಿತವಾಯಿತು 

೧೨ ವರ್ಷದ ವೇದ ವಿಧ್ಯಾಭ್ಯಾಸವನ್ನು ೨ ವರ್ಷಕ್ಕೆ ಮುಗಿಸಿದ ಬಾಲಕ .

ಮನೆಯಲ್ಲೇ ಗುರುಕುಲ ಆರಂಭ ಮಾಡಿ ಪಾಠ ಪ್ರವಚನ ಮುಂದುವರಿಯುತ್ತಾ ಬರುತ್ತೆ . 

ಸಣ್ಣ ಗುರುಕುಲವಾಗಿ ಆರಂಭವಾಗಿ ದೊಡ್ಡ ವಿಶ್ವವಿದ್ಯಾನಿಲಯವಾಗಿ ಬೆಳೆಯುತ್ತೆ.ಆಗ ಶಂಕರರಿಗೆ ೭ ವರ್ಷ.

ನಮ್ಮ ಬಗ್ಗೆ ಗರ್ವ ಅಹಂಕಾರ ಬೆಳೆಯುತ್ತೆ ಆದರೆ ಅಷ್ಟು ದೊಡ್ಡ ಪಾಂಡಿತ್ಯ ಹೊಂದಿದ್ದ ಶಂಕರರಿಗೆ ಅದು ಇರಲಿಲ್ಲ. ರಾಜ ಸನ್ಮಾನಿಸಲು ಕರೆದಾಗ ವಿನಯಪೂರ್ವಕವಾಗಿ ತಿರಸ್ಕರಿತ್ತಾರೆ.

ಆಡಂಬರದ ಜೀವನ ಲೌಕಿಕ ಜೀವನದಲ್ಲಿ ಇಷ್ಟವಿರಲಿಲ್ಲ. ಸನ್ಯಾಸ ಮಾರ್ಗಕ್ಕೆ ಅರ್ಪಿಸಿಕೊಳ್ಳುತ್ತಿದ್ದರು.

ತಾಯಿಗೆ ಕಷ್ಟ ಪಡಬಾರದು ಎಂದು ಗಾಯತ್ರಿ ಜಪ ಮತ್ತು ವೇದಾಮಾತ್ರವನ್ನು ಸಮರ್ಪಿಸಿ ತನ್ನ ತಪಶಕ್ತಿಯಿಂದ ಪೂರ್ಣ ನದಿಯು ಹರಿಯುವ ದಿಕ್ಕನ್ನೇ ಬದಲಿಸಿ ತಾಯಿಯ ಕಷ್ಟ ನಿವಾರಣೆ ಮಾಡುತ್ತಾರೆ.


ಭಾರತ ವೇದ ಭೂಮಿ. ವೇದವನ್ನು ಉಳಿಸೋದಕ್ಕೆ ಬೇರೆ ದೇಶದಿಂದ ಭಾರತಕ್ಕೆ ಜನ ಬರುತ್ತಿದ್ದರು.

ವೇದ ಅಂದರೆ ಸಾಮಾನ್ಯ ಜ್ಞಾನ ಅಲ್ಲ , ವಿಶೇಷ ಜ್ಞಾನ.

ಇದು ಮನುಷ್ಯರು ಕೊಟ್ಟಿದ್ದಲ್ಲ. ದೇವರಿಂದ ಬಂದಿರೋ ಜ್ಞಾನ. ಋಷಿ ಮುನಿಗಳು ತಪಸ್ಸಿಗೆ ಕುಳಿತಿದ್ದಾಗ ಕಣ್ಣಿಗೆ ಕಾಣಿಸಿ ಕಿವಿಗೆ ಬಿದ್ದಂತಹ ಸಂಸ್ಕೃತ ಭಾಷೆಯಲ್ಲಿರುವ ಭಾಷೆ . ಇದನ್ನೇ ವೇದಗಳು ಎಂದು ಕರೆಯುತ್ತೇವೆ. ಆಗಿನ ಕಾಲಕ್ಕೆ ಗುರು ಶಿಷ್ಯರ ಮೂಲಕ ಮೌಖಿಕವಾಗಿ ತಿಳಿಸಿದ ಜ್ಞಾನ. ಸಾವಿರಾರು ವರ್ಷ ಹೀಗೆ ಪರಂಪರೆಯಲ್ಲಿ ಬಂದಿದೆ ಅಂದರೆ ಆಗಿನ ಜನರ ನೆನಪಿನ ಶಕ್ತಿ ಮತ್ತು ಅರಿವು ಹೇಗಿತ್ತು ಎಂದು ತಿಳಿಯುತ್ತದೆ.

ವೇದ ನ್ನೊಂದು ವಿದ್ ಅನ್ನೋ ಧಾತುವಿನಿಂದ ಬಂದಿರೋದು.

ವೇದ - ಜ್ಞಾನ 

ಅನಂತವೈ ವೇದ: - ಜೀವ ಜಗತ್ತು ಮಂತ್ರ ಪೂಜೆ ಸಂಸ್ಕಾರ , ಅರೋಗ್ಯ ಶಸ್ತ್ರ ವಿಜ್ಞಾನ ಸಂಗೀತ  , ಯಂತ್ರ ಮಂತ್ರ ಎಲ್ಲವೂ ಜ್ಞಾನ.

ವೇದವನ್ನು ಕರ್ಮಖಾಂಡ ಮತ್ತು ಜ್ಞಾನ ಎಂಬ ಎರಡು ಭಾಗ ಮಾಡಿದ್ದಾರೆ .

ವೇದಾಂತ ಅಂದರೆ ಅಂತ್ಯದಲ್ಲಿ ಇರುವುದು. ಅದೇ ಉಪನಿಷತ್ ಅಥವಾ ವೇದಾಂತ.

ವೇದಗಳು ಅಪೌರುಷೇಯ ಅಂದರೆ ಋಷಿ ಮುನಿಗಳಿಂದ ಬಂದಿರುವ ಪರಮಾತ್ಮನ ಜ್ಞಾನ ಆದ್ದರಿಂದ ಅದಕ್ಕೆ ತಿದ್ದುಪಡಿ ಬೇಕಿಲ್ಲ .  ಹೇಗಿದೆ ಹಾಗೆ ಕಲಿತುಕೊಂಡರೆ ಸಾಕು ಜೀವನ ಸಾರ್ಥಕ .

Sunday, December 11, 2022

Adishankaracharya - Dec 11 2022 - Notes in Kannada

 ೭.ಶಂಕರಾಚಾರ್ಯರಿಗೆ ಸಂಬಧಪಟ್ಟ ಶ್ಲೋಕ.

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್ 

ನಮಾಮಿ ಭಾಗವದ್ಪಾದಂ ಶಂಕರಂ ಲೋಕಶಂಕರಂ 


ಪುಸ್ತಕಾಲಯ - ಪುಸ್ತಕಗಳಿರುವ ಸ್ಥಾನ.

ಗ್ರಂತಾಲಯ - ಗ್ರಂಥಗಳು ಇರುವ ಸ್ಥಾನ .


ವೇದಗಳನ್ನು ಯಾರು ಬೆರೆದಿದ್ದಲ್ಲ . ದಾರ್ಶನಿಕ , ಋಷಿ ಮುನಿಗಳಿಗೆ ಗೋಚರವಾದದ್ದು .

ಶ್ರುತಿ - ಕೇಳಿಸ್ಕೊಳ್ಳುವ ಮೂಲಕ ಬರುವ ಜ್ಞಾನ .

ಸ್ಮೃತಿ - ಬರವಣಿಗೆಗೆ ಬಂದಿರುವ ಕಾರಣ ಅದೇ ಜ್ಞಾನ ಸ್ಮೃತಿಯಾಗಿದೆ .

ಪುರಾಣದಲ್ಲಿ ಹಲವಾರು ಇದೆ.

ಜೀವಿಗಳ ಮೇಲಿರುವ ಕಾರುಣ್ಯ .

ಶ್ರುತಿ ಸ್ಮೃತಿ ಮತ್ತು ಪುರಾಣವೆಲ್ಲ ಶಂಕರಾಚಾರ್ಯರ ಶರೀರವೇ ದೇವಾಲಯವಾಗಿತ್ತು .ಲೋಕಕ್ಕೆ ಶುಭವನ್ನು ಕೋರುವವರೇ ಶಂಕರಂ ಎಂದರ್ಥ .

ಶಂಕರಾಚಾರ್ಯರು ದೀಪ ಮತ್ತು ಪ್ರದೀಪವಾಗಿದ್ರು .

ಬೇರೆಯವರಲ್ಲಿರುವ ತಪ್ಪು ಕಲ್ಪನೆಗಳನ್ನು ದೀಪದಂತೆ ಅವತರಿಸಿ ಪ್ರದೀಪಿಸಿದರು ( ಬೆಳಗಿದರು , ಬೆಳಗುತ್ತಿದ್ದಾರೆ ಮತ್ತು ಬೆಳಗುತ್ತಲೇ ಇರುತ್ತಾರೆ ) ಅಂತಹ ಜಗದ್ಗುರುಗಳಿಗೆ ನಥಮಸ್ಥಕರಾಗಿದ್ದೇವೆ ಅಂದರೆ ನಮಸ್ಕರಿಸುತ್ತೇವೆ. 

ಸೂರ್ಯ ಹೇಗೆ ಲೋಕವನ್ನೇ ಬೆಳಗುವ ಪ್ರದೀಪವೋ ಹಾಗೆಯೇ ದೇಶದಾದ್ಯಂತ ಆಸ್ತಿಕರ ಪರವಾಗಿ ವಾದ ಮಾಡಿ ಗೆದ್ದು ಜಗದ್ಗುರುಗಳು ಎಂದು ಕರೆಸಿಕೊಂಡರು.


ಈ ಶ್ಲೋಕದ ಮೂಲಕ ನಮನ ಸಲ್ಲಿಸುವುದು ಅವರಿಗೆ ಒಳ್ಳೇದಾಗ್ಲಿ ಅಂತ ಅಲ್ಲ ನಮಗೆ ಒಳ್ಳೇದಾಗ್ಲಿ ಅಂತ .


ಉಪನಯನ ಮಾಡಬೇಕು ಎಂದುಕೊಂಡಾಗ ಶಂಕರರ ತಂದೆ ಶಿವಗುರುವಿನ ಕಾಲವಾಗುತ್ತದೆ. 

ಉಪನಯನವಾಗುತ್ತದೆ.

ಸನ್ಯಾಸ ತೆಗೆದುಕೊಂಡು ಭಿಕ್ಷೆ ಸ್ವೀಕರಿಸಿ ಜೀವನ ಸಾಗಿಸುತ್ತಾರೆ .

ಸನ್ಯಾಸಿ ಅಂದರೆ ಹೆಣ್ಣು ಹೊನ್ನು ಮಣ್ಣು ಮೂರನ್ನು ತ್ಯಾಗ ಮಾಡಿ ದೇಶಕ್ಕೆ ಒಳ್ಳೇದಾಗುವುದಕ್ಕೆ ರಾಜ್ಯಗಳನ್ನೆಲ್ಲಾ ಪರ್ಯಾಟನೆ ಮಾಡುತ್ತಾರೆ .

ಅವರನ್ನು ನೋಡಿಕೊಳ್ಳುವುದು ಗೃಹಸ್ತರಾದ ನಮ್ಮಂತವರ ಜವಾಬ್ದಾರಿ.


ಒಂದು ದಿನ ಬಾಲ ಸನ್ಯಾಸಿ ಭಿಕ್ಷೆ ಬೇಡುವುದಕ್ಕೆ ಬಂದಾಗ ಬಡವರ ತಾಯಿ ಒಣಗಿದ ನಲ್ಲಿಕಾಯಿಯನ್ನು ಬಹಳ ನೋವಿನಿಂದ ಕೊಡುತ್ತಾಳೆ. ಹಾಲೋ ಅಕ್ಕಿನೋ ಅನ್ನವನ್ನೋ ಕೊಡಲು ಆಗುತ್ತಿಲ್ಲವಲ್ಲ ಎಂದು ನೋವು ಮಾಡಿಕೊಂಡು ಕೊಡುತ್ತಾಳೆ .

ಬಾಲ ಶಂಕರನ ಮನಸ್ಸು ಮಿಡಿಯುತು. ಬೆಲೆ ಬಾಳುವುದನ್ನು ಕೊಟ್ಟಿದ್ದಾಳೆ ಎಂದು ಆ ಬಾಲ ಸನ್ಯಾಸಿ ಮಹಾಲಕ್ಷ್ಮಿಯನ್ನು ಕುರಿತು ಕನಕಧಾರಾ ಸ್ತೋತ್ರವನ್ನು ಸ್ತುತಿಸುತ್ತಾರೆ.

ಕಷ್ಟವನ್ನು ಪಡುತ್ತಿರುವ ಆ ತಾಯಿಗೆ ಸಾಕ್ಷಾತ್ ಪರಶಿವನೇ ಮಹಾಲಕ್ಷ್ಮಿಗೆ ತಿಳಿಸಿ ಮನೆಯಲ್ಲಿ ಶ್ರೀಮಂತಿಕೆ ತುಂಬುತ್ತಾನೆ. ಸನ್ಯಾಸಿಗಳಿಗೆ ಅಷ್ಟು ಶಕ್ತಿ ಇರುತ್ತದೆ . ಅವರ ಒಂದು ದರ್ಶನ ಅಥವಾ ಆಶೀರ್ವಾದ ನಮ್ಮ ಆತ್ಮದ ವಿಚಾರವನ್ನು ತಿಳಿದುಕೊಳ್ಳುವ ಜ್ಞಾನಕ್ಕೆ ಮತ್ತು ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕೆ ಕೃಪೆ ಮಾಡುತ್ತಾರೆ . 

Thursday, December 1, 2022

Dec 1 , 2022 - Kannada Notes

 ೬  - ವೈಧಿಕ ಸಿದ್ದಂತಕ್ಕೆ ವಿರೋಧ ವ್ಯಕ್ತಿಪಡಿಸಿದವರು - ಚಾರುವಾಕ , ಬೌದ್ಧ ಮತ್ತು ಜೈನ .

ಜೈನರು ಅಹಿಂಸೆವಾದ , ವೈಧಿಕರಿಗೆ ತುಂಬಾ ವಿರುದ್ಧ ವ್ಯಕ್ತಪಡಿಸಿಲ್ಲ .


ಜೈನ ತೀರ್ಥಂಕರರು ನಮ್ಮ ಶಕ್ತಿ ದೇವತೆಗಳನ್ನು ಒಪ್ಪುತ್ತಿದ್ದರು.


ಜೈನ ಅಂದರೆ ಜಯಿಸು ಅಂತ .

ಏನನ್ನು ಜಯಿಸುವುದು ?

ನನ್ನನ್ನು ನಾನು .

ಸ್ಥಿತಪ್ರಜ್ಞತೆಗೆ ಒಟ್ಟು ಕೊಟ್ಟುವರು ಅವರಲ್ಲಿ ಕೂಡ ಇದ್ದರು. 

ಜ್ಞಾನ ಎಲ್ಲಿಂದಲಾದರೂ ಬರಲಿ , ತೆಗೆದುಕೊಳ್ಳಬೇಕು .

ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದಲ್ಲಿ ನಂಬುತ್ತಿದ್ದರು.

ವೇದವನ್ನು ಮಾನ್ಯತೆ ಮಾಡಿದೆ ಇದ್ದ ಕಾರಣ ನಾವು ಅವರನ್ನು ನಾಸ್ತಿಕರು ಎಂದು ಕರೆಯುತ್ತೇವೆ .

ಮನುಷ್ಯನನ್ನೇ ದೇವರನ್ನಾಗಿ ನೋಡಬೇಕಾದರೆ ಮನಯೇವ ಮನುಷ್ಯಾಣಾಮ್  ಎಂಬಂತೆ ಸಮ್ಯಕ್ ದರ್ಶನ ವಾಗಿರಬೇಕು . ಮನಸ್ಸನ್ನು ಪೂರ್ತಿ ತಿಳಿಯಬೇಕು ಆಗಲೇ ಆಸಕ್ತಿ ಬಂದು ಆತ್ಮವಿಚಾರದಲ್ಲಿ ಆಸಕ್ತಿ ಕಂಡುಕೊಳ್ಳಬೇಕು. ಅಧ್ಯಯನ ಮಾಡಬೇಕು .

ವಿಧ್ಯೆಯಿಂದ ವಿನಯ ಬರಬೇಕು . ವಿನಯವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು . ಬರುವ ಹಣವನ್ನು ಧರ್ಮ ಮಾರ್ಗದಲ್ಲಿ ವ್ಯಯ ಮಾಡಬೇಕು .  


ಮಾತೃಭಾಷೆಯಾದ ಮಲಯಾಳಂ ಮತ್ತು ಸಂಸ್ಕೃತವನ್ನು ಮಾತನಾಡುತ್ತಿದ್ದ ಶಂಕರ.

ಗುರುಕುಲದಲ್ಲಿ ಸಂಸ್ಕೃತ ವ್ಯಾಕರಣ ಕಾವ್ಯ ಪುರಾಣ ಎಲ್ಲವೂ ಸ್ವಂತ ಓದಿ ಅರ್ಥಮಾಡಿಕೊಳ್ಳುತ್ತಿತ್ತು ೩ ವರ್ಷದ ಮಗು. ಬೆಳಗ್ಗೆ ತಾನೀರು ಸ್ನಾನ , ಶುಭ್ರವಾದ ಬಟ್ಟೆ , ಹಣೆಗೆ ವಿಭೂತಿ , ಸ್ತೋತ್ರ ಪಾರಾಯಣ ಇದೆಲ್ಲ ನಿತ್ಯ ಮಾಡುತ್ತಿದ್ದ ಶಂಕರ.

ಶಂಕರ ಚಿಕ್ಕ ಮಗುವಾಗಿದ್ದಾಗಲೇ ಗುರುಗಳಿಂದ ಛಂದಸ್ಸು, ಅಲಂಕಾರ , ಕಾವ್ಯ ಎಲ್ಲಾ ಕಲಿತು ೫ ವರ್ಷಕ್ಕೆ ಬಂದಾಗ ಉಪನಯನವಾಯಿತು. ೫ ಕ್ಕೆ ಉಪನಯನ ಮಾಡಿದರೆ ಬ್ರಹ್ಮತೇಜಸ್ಸು ಉಂಟಾಗುವುದು ಎಂದು ಶಸ್ತ್ರ ಹೇಳುತ್ತದೆ. 

ಶಂಕರನ ತಂದೆ ತೀರಿ ಹೋದ ಮೇಲೆ ತಂದೆಯ ಬಾಯಿಗೆ ನೀರು ಹಾಕಿ ನಾರಾಯಣ ನಾರಾಯಣ ಎಂದು ಹೇಳುತ್ತಾನೆ. ಪಕ್ಕದಲ್ಲಿ ಕುಳಿತು ಸ್ತೋತ್ರಗಳನ್ನು ಪಠಣ ಮಾಡಲು ಶುರುಮಾಡುತ್ತಾನೆ .

ಜೊತೆಗೆ ಪಂಡಿತರು ಸೇರಿ ಉಪನಿಷತ್ ಶುರುಮಾಡುತ್ತಾರೆ .

ಶಂಕರಾಚಾರ್ಯರು ಹುಟ್ಟುವುದಕ್ಕೆ ಮುಂಚೆ ಗರ್ಭದಲ್ಲೇ ಕಲಿತು ಬಂದವರ ಹಾಗೆ ಬದುಕುತ್ತಿದ್ದರು .

ನಾವೆಲ್ಲರೂ ಹೊರಗಿಂದ ಕಲಿಯಬೇಕು.

ವಿವೇಕಾನಂದರು ೧೯ನೆ ಶತಮಾನದಲ್ಲಿ ಹುಟ್ಟಿ ೮ ನೇ ಶತಮಾನದಲ್ಲಿ ಹುಟ್ಟಿದ ಶಂಕರಾಚಾರ್ಯರ ಬಗ್ಗೆ ಪೂರ್ತಿ ಅಧ್ಯಯನ ಮಾಡಿ ಅವರ ಬಗ್ಗೆ ಪ್ರಪಂಚದಲ್ಲೆಲ್ಲಾ ತಿಳಿಸಿಕೊಟ್ಟರು.

ಶಂಕರಾಚಾರ್ಯರು ಗುರುಗಳ ಹತ್ತಿರ ಹೋದಾಗಲೇ ಅವರಿಗೆ ಎಲ್ಲಾ ಪಾಠ ತಿಳಿದಿತ್ತು. ಗುರುಗಳ ಪಟ್ಟ ಕೂಡ ಬಯಸಲಿಲ್ಲ. ಅವರಿಗೆ ಅವರೇ ಗುರುಗಳು ಆದ್ದರಿಂದಲೇ ಜಗದ್ಗುರುಗಳಾದರು.

ಬುದ್ಧನಾಗಲಿ , ಶಂಕರಾಚಾರ್ಯರಾಗಲಿ ಪ್ರಪಂಚ ಕಂಡ ಅದ್ಭುತ ವ್ಯಕ್ತಿಗಳು, ದಿವ್ಯಾತ್ಮಗಳು   

Tuesday, November 29, 2022

Nov 29 2022 - Notes

 ೫ - ಶಿವಗುರು ಒಬ್ಬನೇ ಮಗನನ್ನು ಬೇಡಿಕೊಳ್ಳುತ್ತಾನೆ .

ಆರ್ಯಾಂಬಾ ಗರ್ಭವಂತಳಾಗುತ್ತಾಳೆ . ಭೂಲಕಕ್ಕೆ ಬಂದಿರುವ ಶಿವಸ್ವರೂಪಿ ಆದಿಶಂಕರಾಚಾರ್ಯ ಗರ್ಭದಲ್ಲಿ ಬೆಳೆಯುತ್ತಿರುತ್ತದೆ . ಆಗ ಜ್ಞಾನಿಗಳು ಪಂಡಿತರು ಓಡಾಡುವ ಊರು ಪರಿಸರ . ನಿತ್ಯ ವೇದ ಮಂತ್ರ ಭಗವದ್ಗೀತೆ ತಾಯಿಯ ಕಿವಿ ಮೇಲೆ ಬೀಳುತ್ತಿತ್ತು .

ಸಂಸ್ಕಾರ ಗರ್ಭದಲ್ಲೇ ಬೆಳೆಯುವಂತದ್ದು . 


ಲೌಕಿಕ ಜನರು ಇದನ್ನು ಗಮನಿಸಬೇಕು .

ಯೋಗ ಧ್ಯಾನ ಸ್ತೋತ್ರಗಳ ಪಟನೆ ಆ ಹೆಣ್ಣಿಗೆ ಗರ್ಭವತಿಯಾದಾಗ ಕೊಡಬೇಕು . 

ಲೌಕಿಕ ಜಗತ್ತಿಗೆ ಬಂದಾಗ ಭಯ ಬಂದು ಅಳುತ್ತದೆ.


ಆದರೆ ಆರ್ಯಾಂಬಳಿಗೆ ಹುಟ್ಟಿದ ಮಗುವಿಗೆ ತುಂಬಾ ಸಂತೋಷವಿತ್ತು . 

ದುಃಖ ಇಲ್ಲ , ಅಳು ಇಲ್ಲ. ಏನಿಕ್ಕೆ ಹುಟ್ಟಿದೀನಿ ಎಂದು ತಿಳಿದಿತ್ತೇನೋ ಅನ್ನುವ ಹಾಗೆ .


ತೋಳಿನ ಬಲಭಾಗದಲ್ಲಿ ಈಶ್ವರ ಸಾಕೇತಿಕವಾಗಿ ತ್ರಿಶೂಲದ ಚಿನ್ಹೆ ಹೊತ್ತಿಕೊಂಡು ಹುಟ್ಟಿದ್ದ .  

ತೋಳಿನ ಎಡಬಾಗದಲ್ಲಿ ಅರ್ಧ ಚಂದ್ರಾಕೃತಿ .


ಪಂಡಿತರು ಜ್ಞಾನಿಗಳು ಮಗುವನ್ನು ನೋಡಿದ ತಕ್ಷಣ ಗೊತ್ತಾಗುತ್ತೆ ಈ ಮಗು ಸನ್ಯಾಸಿ ಆಗುತ್ತಾನೆ . ಲೋಕಕಲ್ಯಾಣಕ್ಕೆ ಹುಟ್ಟಿರೋ ಮಗು ಇದು ಎಂದು ಆತ್ರೇಯರು ( ಕುಲ ಗುರುಗಳು ) ಹೇಳುತ್ತಾರೆ.

ಪಂಡಿತರು ಮುಂದೆ ನಾವು ನಮಸ್ಕಾರ ಮಾಡುತ್ತೇವೆ ಎಂದು ಭವಿಷ್ಯ ನುಡಿತಾರೆ .


೬. ಚಾರುವಾಕ ಸಿದ್ದಾಂತ ಪರಿಚಯ ಆಗಿದೆ . ಈಗ ಬೌದ್ಧ ದರ್ಶನ ತಿಳಿದುಕೊಳ್ಳೋಣ .

ಶಂಕರಾಚಾರ್ಯರು ಹೋರಾಡಿದ್ದು ಈ ದರ್ಶನದ ವಿರುದ್ಧ .

ಬುದ್ಧ ತತ್ವಜ್ಞಾನಿ . ಅವನಿಂದ ಜಗತ್ತಿಗೆ ಬೌದ್ಧ ದರ್ಶನವಾಯಿತು . ಸಿದ್ದಾರ್ಥ( ಬುದ್ಧನ ಬಾಲ್ಯದ ಹೆಸರು )  ಹುಟ್ಟಿದ್ದು ಕ್ರಿಸ್ತ ಪೂರ್ವ  ೫೬೩ ರಲ್ಲಿ ಈಗಿನ ನೇಪಾಳದಲ್ಲಿ ಹುಟ್ಟಿದ .

ಸಿದ್ದಾರ್ಥನ ತಂದೆಗೆ ಮಗನ ಭವಿಷ್ಯ ಗೊತ್ತಾಗಿರುತ್ತೆ .

ಕಾಯಿಲೆಗೆ ಸಿಕ್ಕಿರುವ ಮನುಷ್ಯ ಮತ್ತು ಸತ್ತು ಹೋಗಿರುವ ವ್ಯಕ್ತಿಯನ್ನು ಒಮ್ಮೆ ನೋಡುತ್ತಾನೆ .

ಸತ್ಯಾನ್ವೇಷಣೆ ಬೇಕು ಎಂಬುದಾಗಿ ಆಸ್ತಿ ರಾಜ್ಯ ಎಲ್ಲ ತೊರೆದು ಹೊರಡುತ್ತಾನೆ .


ಎಂಟು ವಿಷಯಗಳನ್ನು ಬುದ್ಧ ಕೊಟ್ಟಿದ್ದು .

ಮಾಡುವ ಕೆಲ್ಸಕ್ಕೆ ಉದ್ದೇಶ ಚೆನ್ನಾಗಿರಬೇಕು . 

ಮಾತು ಚೆನ್ನಾಗಿರಬೇಕು 

ಒಳ್ಳೆಯ ಕೆಲಸ ಸರಿಯಾದ ಮಾರ್ಗದಲ್ಲಿ ಇದ್ದು ಮಾಡಬೇಕು .

ಸರಿಯಾದ ಪ್ರಯತ್ನ ಮಾಡಬೇಕು .

ಏಕಾಗ್ರತೆಯಿಂದ ಮಾಡಬೇಕು .

ಸರಿಯಾದ ಬುದ್ದಿಯಲ್ಲಿ ಶುದ್ಧತೆ ತಂದುಕೊಳ್ಳಬೇಕು.


ಮನುಷ್ಯನ ದುಃಖಕ್ಕೆ ಆಸೆಯೇ ಕಾರಣ ಎಂದು ಹೇಳಿದ . ಅದು ಸ್ವಲ್ಪ ಗಿಂಡಲಕ್ಕೆ ಈಡಾಗಿತ್ತು .

ಬುದ್ಧ ಅನ್ನೋದು ಬಿರುದು . ಯಾವುದೇ ವ್ಯಕ್ತಿ ಜ್ಞಾನಿಯಾದರೆ ಬುದ್ಧ ಎಂದು ಕರೆದರು.

ನಮ್ಮ ವೈಧಿಕ ಮಾರ್ಗವನ್ನು ಹಿಂದೆ ಸರಿಸಿ ಬುದ್ಧ ದರ್ಶನವನ್ನು ಸಿದ್ದಾರ್ಥ ನಿಲ್ಲಿಸಿದ್ದ.


ಸಿದ್ದಾರ್ಥ ತಾನೇ ಸತ್ಯವನ್ನು ಕಂಡುಹಿಡಿದುಕೊಳ್ಳುವುದಾಗಿ ಪ್ರಯತ್ನ ಪಟ್ಟ. ಅವನಿಗೆ ಗುರು ಇರಲಿಲ್ಲ.

ಆತ್ಮ ಅಂದರೆ ಏನು . ಯಾವುದು ನಿತ್ಯ ಯಾವುದು ಅಶಾಶ್ವತ ಅನ್ನೋದು ನಿತ್ಯ ವಿಚಾರ ಮಾಡಿಲ್ಲ ಅದಕ್ಕೆ ನಮಗೆ ದುಃಖ ಜಾಸ್ತಿ . ಅದು ಗೊತ್ತಾದರೆ ಜ್ಞಾನಿ ಎಂದು ತಿಳಿಯುವುದು .


ಬೌದ್ಧ ದರ್ಶನ ಭಾರದಲ್ಲಿ ಉಳಿಯಲೇ ಇಲ್ಲ. ಬೇರೆ ಕಡೆಯೂ ಕೂಡ ಉಳಿಲಿಲ್ಲ ಯಾಕೆ ಅಂದ್ರೆ ಆತ್ಮತತ್ವನ್ನು ಒಪ್ಪಿರಲಿಲ್ಲ . ಮನಸ್ಸೇ ಎಲ್ಲವೂ ಎನ್ನೋ ವಾದ ಅವರದ್ದಾಗಿತ್ತು . ವೇದವನ್ನು ಮಾನ್ಯತೆ ಮಾಡಿರದೆ ಇರೋದ್ರಿಂದ ಬುದ್ಧನ ವಾದವನ್ನು ನಾಸ್ತಿಕ ವಾದ ಎಂದು ಹೇಳುತ್ತಿದ್ದರು .


ಪುನರ್ಜನ್ಮದಲ್ಲಿ ನಂಬಿಕೆ ಇತ್ತು ಆದರೆ ಆತ್ಮಕ್ಕೆ ಬೆಲೆ ಕೊಡದೆ ಇದ್ದಿದ್ದು , ವೇದವನ್ನು ತಿರಸ್ಕಾರ ಮಾಡಿರೋ ಕಾರಣ ಬೌದ್ಧ ದರ್ಶನ ನಿಲ್ಲುವುದಕ್ಕೆ ಆಗಲಿಲ್ಲ .

ಬುದ್ಧ ಅಹಿಂಸೆಯನ್ನು ನಂಬಿದ್ದ ಆದರೆ ಅವನ ಅನುಯಾಯಿಗಳು ಮಾಂಸ ತಿನ್ನುತ್ತಿದ್ದರು . ಅದಕ್ಕೆ ಪ್ರಖ್ಯಾತಿ ಆಗಲಿಲ್ಲ, ಬಿದ್ದು ಹೋಯ್ತು .     

 

Monday, November 28, 2022

Nov 28, 2022 - Notes

 ಶಂಕರಾಚಾರ್ಯರು ಯಾವಾಗಲೂ ವೇಗವಾಗಿ ನಡೆಯುತ್ತಿದ್ದರು. 

೮ ನೇ ಶತಮಾನದಲ್ಲಿ ಹೆಂಡ ಸೇಂಧಿ ಸಾರಾಯಿ ಅಂಗಡಿ ಊರಿನ ಒಳಗೆ ಇರುತ್ತಿರಲಿಲ್ಲ.

ಒಂದು ಸಾರಿ ಶಿಷ್ಯರಿಗೆ ಅವರ ದೇಹ ಶಕ್ತಿಯ ಬಗ್ಗೆ ತೋರಿಸಿಕೊಟ್ಟರು .

ಒಂದು ಸಾರಿ ಶಿಷ್ಯರು ಏನು ಮಾಡುತ್ತಾರೆ ನೋಡೋಣ ಎಂದುಕೊಂಡು , ದೊಡ್ಡ ಮಡಕೆ ಸಾರಾಯಿ ಕುಡಿದ ಮೇಲೆ ತಮ್ಮ ಶಿಷ್ಯರ ಮನಸ್ಸಿನಲ್ಲಿ ಆದ ಬದಲಾವಣೆ ತಕ್ಷಣ ತಿಳಿದುಕೊಳ್ಳುತ್ತಿದ್ದರು. ಶಿಷ್ಯರಿಗೂ ಕುಡಿಯುವ ಮನಸ್ಸು ಬಂದಿದ್ದು ತಿಳಿಯಿತು .

ಎರಡನೇ ಸಾರಿ ಕಬ್ಬಿಣದ ರಸ ಕುಡಿದ ಮೇಲೆ ಹಿಂದೆ ತಿರುಗಿ ಶಿಷ್ಯರ ಕುರಿತು ಹೇಳುತ್ತಾರೆ ಕಣ್ಣೂ ಮುಚ್ಚಿ ಒಬ್ಬರನ್ನು ಅನುಸರಿಸಬಾರದು ಎಂದು. ವಿಧ್ಯೆ ಕಲಿತು ಸ್ವಂತ ಬುದ್ದಿ ಉಪಯೋಗಿಸಬೇಕು ಎಂದು ಅವರ ನಡತೆಯಿಂದ ಪಾಠ ಮಾಡಿದರು. ಅತಿಮಾನುಶರು ಎಂದು ಆಗ ಶಿಷ್ಯರು ತಿಳಿದರು.


ರಾಮಾಯಣ ಮಹಾಭಾರತ ವೇದ ಪುರಾಣ ನಿತ್ಯಕ್ಕೆ ಓದುವ ಬರೆಯುವ ಅಭ್ಯಾಸ ಮಾಡಬೇಕು.

ನಮ್ಮ ಮಕ್ಕಳು ನಮ್ಮ ಪ್ರತಿಬಿಂಬವಾದ್ದರಿಂದ ನಮ್ಮ ಒಳ್ಳೆಯತನವನ್ನು ಪಾಲಿಸುವರು.


ಕೆಲವು ದಾರ್ಶನಿಕರು ವೇದವನ್ನು ಮಾನ್ಯತೆ ಮಾಡುತ್ತಿರಲಿಲ್ಲ. ಜನರ ಜೀವನ ಹದಗೆಟ್ಟಿತ್ತು. ಸುಸ್ಥಿತಿಗೆ ತರುವ ಸಮಯ ಬಂದಿತ್ತು. ಸನಾತನ ಧರ್ಮ ನಶಿಸಿ ಹೋಗುತಿತ್ತು.   

ಕಾಪಾಲಿಕರು ತಲೆ ಬುರುಡೆಯಲ್ಲಿ ಊಟ ಮಾಡುತಿದ್ದರು.  

ಚಾರುವಾಕರು ದೇವರು ಇಲ್ಲವೇ ಇಲ್ಲ ಎಂದು ನಂಬುವ ಹಾಗೆ ಭಾಷಣ ಮಾಡಿದ.

ಅವನನ್ನು ಹೇಗೆ ಅಷ್ಟು ಚೆನ್ನಾಗಿ ಮಾತನಾಡಿದೀಯ ಎಂದು ಕೇಳಿದಾಗ ದೇವರ ದಯೆ ಎಂದು ಉತ್ತರಿಸಿದ.

ಅಜ್ಞಾನ / ಅವಿಧ್ಯೆಯಿಂದ ಹೀಗೆ ಜನರಿಗೆ ಆಗುತ್ತದೆ .

ಪ್ರತಿಯೊಂದನ್ನು ನಮ್ಮ ಮನಸ್ಥಿತಿಗೆ ತಕ್ಕಂತೆ ಗೋಚರವಾಗುತ್ತದೆ.

ಚಾರುವಾಕರ ಸಿದ್ದಂತ ಚೆನ್ನಾಗಿ ತಿನ್ನು ಕುಡಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸು. ಬೇರೆಯವರ ಬಗ್ಗೆ ಯೋಚಿಸಬೇಡ, ದೇವರು ಇಲ್ಲ, ಕರ್ಮ ಇಲ್ಲ,  ಸ್ವರ್ಗ ನರಕ ನಂಬಬೇಡಿ, ಆತ್ಮ ಇಲ್ಲ , ಅಪರ ಕರ್ಮ ಮಾಡಬೇಡಿ. ಪುನರ್ಜನ್ಮ ಇಲ್ಲ ಅಂತ ಹೇಳಿ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು.

ಚಾರುವಾಕರು ಪಂಚಬೂತಗಳಿಂದ ಮನುಷ್ಯನ ಶರೀರವು ಆಗಿಲ್ಲ ಎಂದು ಹೇಳುತ್ತಿದ್ದರು . 

ಕಣ್ಣಿಗೆ ಕಾಣದ್ದನ್ನು ನಂಬುವವರಲ್ಲ ( ಉದಾ : ಆಕಾಶ ). ಅವರ ಸಿದ್ದಂತ ಏನು ಅಂದರೆ ಸಾಲ ಆದರು ತುಪ್ಪ ತಿನ್ನು ಎಂದು ಹೇಳುತ್ತಿದ್ದರು. ಒಬ್ಬರಿಗೆ ಮೋಸ ಮಾಡಿದರೆ ಕರ್ಮ ಬರುತ್ತೆ , ನರಕ ಅನುಭವಿಸುತ್ತೀನಿ ಎಂಬುದು ತಳ್ಳಿಹಾಕಿದ್ದರು . ಯಮ ನಿಯಮ ( ನಾವೇ ಹಾಕಿಕೊಳ್ಳುವ ನಿಯಮ ) ನನ್ನ ಮುಂದಿನ ಜನ್ಮಕ್ಕೆ ಮತ್ತು ನನ್ನ ಮುಂದಿನ ಜನಾಂಗಕ್ಕೆ ಒಳ್ಳೇದಾಗ್ಬೇಕು.

ಗಾದೆ : ಹಾಲು ಕುಡಿದು ಬದುಕುವವರೇ ಬದುಕಲ್ಲ ಇನ್ನು ವಿಷ ಕುಡಿದು ಬದುಕುವುದುಂಟೆ ?


ಆ ೮ನೆ ಶತಮಾನದಲ್ಲಿ ಎಲ್ಲಾ ದಾರ್ಶನಿಕರು ಸಹ ಚಾರುವಾಕ ಸಿದ್ದಂತವನ್ನು ಒಪ್ಪುತ್ತಿರಲಿಲ್ಲ . ಅದೊಂದು ತುಂಬಾ ಒಳ್ಳೆಯದು ನಡೀತಿತ್ತು.

Sunday, November 27, 2022

Nov 27 , 2022 - Learnings

 ಗುರು ಅಂದರೆ ಅರ್ಥ ಏನು ? 

ಅಂಧಕಾರವನ್ನು ತೆಗೆಯುವವನು. ಗುರುವಿನಲ್ಲಿ ಇರುವ ಜ್ಞಾನ ಪ್ರಕಾಶ ನಮಗೆ ಬೇಕು. ನಿತ್ಯವೂ ಅಭ್ಯಾಸದಲ್ಲಿ ಇದ್ದರೆ ಅಹಂಕಾರ ನಿರ್ಮೂಲನೆ ನಮ್ಮೊಳಗೇ ಆಗುವ ವಿಷಯ. 

ಸಾಧನೆ ಮಾಡಬೇಕು 

ಹೆಚ್ಚು ಸಮಯ ಅದಕ್ಕೆ ಮೀಸಲಾಗಿಡಬೇಕು.

ದಕ್ಷಿಣೆ ಅನ್ನೋದು ವ್ಯವಹಾರವಾಗಿಬಿಟ್ಟಿದೆ. ಅದು ತಪ್ಪು .

ನಮ್ಮ ಆತ್ಮಪರೀಕ್ಷೆ ನಿತ್ಯ ಮಾಡಿಕೊಳ್ಳಬೇಕು. ಲೌಕಿಕ ವ್ಯವಹಾರದಲ್ಲಿ ನಿನ್ನೆಗಿಂತಲೂ ಚೆನ್ನಾಗಿ ಇದ್ದನಾ ? ದುಷ್ಟರ ತರಹ ನಡೆದುಕೊಂಡಿದ್ದಾರೆ ನಾಳೆ ಅದನ್ನು ಸರಿಪಡಿಸಿಕೊಳ್ಳಬಹುದಾ ಎಂದು ಆಲೋಚಿಸಬೇಕು.


ಧ್ಯಾನ ಮಾಡುವಾಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ? ಮಾಡಬಹುದು 


ದಾನದಿಂದ ಕರ್ಮ ನಾಶ ಚಿತ್ತ ಶುದ್ಧವಾಗುತ್ತದೆ .

ಗೃಹಸ್ಥಾಶ್ರಮದಲ್ಲಿರುವವರು ಇನ್ನಿತರ ಮೂರು ಆಶ್ರಮವನ್ನು ಕಾಪಾಡಬೇಕು.

ಬ್ರಹ್ಮಚರ್ಯಾಶ್ರಮ 

ಸನ್ಯಾಸಾಶ್ರಮ ಮತ್ತು 

ವಾನಪ್ರಸ್ಥಾನಾಶ್ರಮ 

       

ಸಮಸ್ಯೆಗಳು ಬಂದರೆ ಪ್ರಾರಭ್ದದಿಂದಲೇ ಎಂದು ತಿಳಿದು ಅದನ್ನು ಬಗೆಹರಿಸಿಕೊಳ್ಳಬೇಕು .

ಹೆಚ್ಚು ಕಷ್ಟಗಳು ಬಂದರೆ ಅದನ್ನು ಹೆಚ್ಚು ಹೆಚ್ಚು ಬಗೆಹರಿಸಿಕೊಳ್ಳುವುದನ್ನು ಕಲಿಯುತ್ತೇವೆ .


ಉದಾಹರಣೆ : ಜನಿವಾರ ನಾವೇ ನಾವಾಗಿ ಬಿಡಿಸಿಕೊಳ್ಳುವುದು.