Tuesday, June 20, 2017

ನಿನ್ನ ಸೇರುವ ಮುನ್ನ


ಕಾಲವೆಂಬ ಹರಿವ ನದಿಯಲ್ಲಿ
ಬಾಳೆಂಬ ದೋಣಿಯ ಪಯಣ 
ನನ್ನೊಳಿಹ ಅಸುರರನು ಸೆದೆಬಡಿ 
ಒಳಿತಿನೆಡೆ ಉತ್ಸಾಹದಿ ಮುನ್ನಡೆವೆ
ಸ್ಥಿರಚಿತ್ತ ಮನವ ಕೊಡುವೆಯ 
ಬಾಳಿಬದುಕುವೆ ನಾಲ್ಕು ದಿನ
ಬಾಳೆಂಬ ದೋಣಿಯ ಪಯಣ
ಭವಸಾಗರ ಸೇರುವ ಮುನ್ನ 
-ಸುಬ್ಬು ಪದ್ಮನಾಭ