Wednesday, June 12, 2019

#ನಾಲ್ಕು ದಶಕ


ಶಾಲೆಯ ಪಾಠ ಓದು ಮುಗಿಯಿತು
ಕಲಿಕೆ ಏನಾಯ್ತೋ ಸ್ಪರ್ಧೆ ಅನ್ನಿಸಿಕೊಂಡಿತ್ತು 
ಯವ್ವನ ಬಂತು ಸಂಗಾತಿ ಬಯಸಿತು
ಎರಡು ಮಕ್ಕಳಾದರೂ ಇರ್ಲಿ ಎಂದೆನಿಸಿತು 
ಮನೆ ಮಠ ಲಾಲನೆ ಪಾಲನೆ
ಜವಾಬ್ದಾರಿ ಹೆಚ್ಚುತ್ತಾ ಹೋಯಿತು 
ವೃತ್ತಿ ಅನಿವಾರ್ಯವಾಯ್ತು 
ಪ್ರವೃತ್ತಿ ಮೂಲೆಗುಂಪಾಯಿತು 
ಅಂತರಾತ್ಮ ಹೇಳುತ್ತಲೇ ಇತ್ತು
ಕೇಳುವ ಮನಸ್ಸು ಬುದ್ದಿಗೆಲ್ಲಿತ್ತು 
ಏನು ಬೇಕೆಂದು ಅರಿವಾಗುವವರಗೆ
ಜೀವಕ್ಕೆ ನಾಲ್ಕು ದಶಕಗಳ ವಯಸ್ಸಾಗಿತ್ತು 
-ಸುಬ್ಬು ಪದ್ಮನಾಭ

# ಕನ್ನಡ ಕಲ್ಪವೃಕ್ಷ


ನಾನು ರಾಷ್ಟ್ರ ಕಟ್ಟಬೇಕಿದೆ
ಕೆಲಸ ಸಾಕಷ್ಟಾಗಬೇಕಿದೆ

ಸಂಸ್ಕೃತಿಯು ಪಸರಿಸಬೇಕಿದೆ
ಧರ್ಮ ಪಾಲನೆ ಮಾಡಬೇಕಿದೆ

ಶೃತಿ ಸ್ಮೃತಿಯಲ್ಲಿರುವುದು ನಮ್ಮ ಬೇರಾಗಿದೆ
ಮರವೆತ್ತರ ಬೆಳೆದು ತಂಪನ್ನು ಕೊಡಬೇಕಿದೆ

ಕನ್ನಡಕ್ಕೆ ಕೈ ಎತ್ತಿ ನೋಡಬೇಕಾಗಿದೆ  
ಕಲ್ಪವೃಕ್ಷವಾಗುವುದ ಅನುಭವಿಸಬೇಕಿದೆ

-ಸುಬ್ಬು ಪದ್ಮನಾಭ