ಪ್ರೀತಿಯ ಕಾಶೀನಾಥ್ ರವರನ್ನು ಅಕ್ಟೋಬರ್ 2016 ರಲ್ಲಿ ಭೇಟಿ ಮಾಡಿದಾಗ ತೆಗೆದ ಚಿತ್ರ.
ಖುಷಿ ಆಯ್ತಪ್ಪ ನಮ್ಮನ್ನ ನೆನಪಿಸ್ಕೊಂಡು ಮನೆಗೆ ಬಂದ್ರಲ್ಲ ಅಂದ್ರು , ಬೆನ್ನು ತಟ್ಟಿದ್ರು .. ಉಭಯ ಕುಶಲೋಪರಿ ಮಾತು ಕಥೆ ಆದ ಮೇಲೆ ಬರ್ತಾ ಇರಿ ಬೆಂಗಳೂರಿಗೆ ಬಂದಾಗ ಅಂದ್ರು ಇದೇ ನನ್ನ ಜೊತೆ ಕಾಶೀನಾಥ್ ರವರ ಕಡೆಯ ಮಾತು . ಬನ್ನಿ ಸಾರ್ , ಒಂದು ಸೆಲ್ಫಿ ತೆಕೊಳೋಣ ಅಂತ ತೆಕ್ಕೊಂಡೆ.
ನಾನು ಅವರ ಜಯನಗರ ಮನೆನಲ್ಲಿ ಬಾಡಿಗೆಗೆ ಇದ್ದೆ, ಒಟ್ಟು 5 ಮನೆ , ಜಾಯಿಂಟ್ ಫ್ಯಾಮಿಲಿ 5 ಜನ ಅಣ್ಣ ತಮ್ಮಂದಿರು. ಗಾಯತ್ರಿ ಅವರ ಅಕ್ಕ - "ಗಾಯತ್ರಿ stores " ಅಂಗಡಿಯಲ್ಲಿ ಸುಮಾರು ಸರಿ ಸಾಮಗ್ರಿಗಳು ಖರೀದಿ ಮಾಡುತ್ತಿದ್ದೆ. ಕಾಶೀನಾಥ್ ಅಪ್ಪ ಅಮ್ಮ ಎಲ್ಲರನ್ನು ಒಟ್ಟಿಗೆ ನೋಡುತ್ತಿದ್ದೆ .
ಸಾಮಾನ್ಯ ಮನುಷ್ಯರಿಗೆ ಕಾಶೀನಾಥ್ ಸಿನಿಮಾನ ಅಯ್ಯಪ್ಪ ಬೇಡವೇ ಬೇಡ ಅನ್ನೋ ಮನೋಭಾವನೆ ಇಟ್ಟುಕೊಂಡವರು ಹಲವಾರು ಆದರೆ ಅವರ ಹತ್ತಿರ ಅವಕಾಶ ಕೇಳಿ ಹೋದವರಿಗೆ ಅವರ ಜೊತೆ ಮಾತನಾಡದಿದವರಿಗೆ ಅವರ ಅಂತರಂಗ ಗೊತ್ತಾಗುತ್ತದೆ . ತುಂಬಾ ಒಳ್ಳೆಯ ನಡವಳಿಕೆ ಉಳ್ಳಂತವರು, ಅವರಿಗೆ ಸೈಂಟಿಸ್ಟ್ ಆಗ್ಬೇಕು ಅಂತ ಆಸೆ ಇತ್ತು ಅದೇ ಬುದ್ದಿವಂತಿಕೆ ಕನ್ನಡ ಸಿನೆಮಾಕ್ಕೆ ಧಾರೆ ಎರೆದರು . ಅದಕ್ಕೆ ನೋಡಿ ಎಷ್ಟು ಜನರು ಅವರ ಒಡನಾಟ ಇಟ್ಟುಕೊಂಡವರು ತಮ್ಮ ಸಂತಾಪದ ಮಾತುಗಳು ಸುಂದರವಾಗಿ ಮಾತನಾಡುತ್ತಿದ್ದಾರೆ .
ನಾನು ನೋಡಿದ ಬಹಳ ಸರಳ ಜೀವಿ , ಏನೂ ಒಣ ಜಂಬ ಇಲ್ಲ ಸಿನಿಮಾ ಗತ್ತು ಮೊದಲೇ ಏನೂ ಇರಲಿಲ್ಲ . ಒಂದು ಟೋಪಿ ಹಾಕೊಂಡು ಯಾವಾಗ್ಲೂ ಮನೇನಲ್ಲೇ ಇರ್ತಾ ಇದ್ರೂ , ಪುಸ್ತಕಗಳು ಓದೋದು ಪೇಪರ್ ಓದೋ ಅಭ್ಯಾಸ ಜಾಸ್ತಿ , ಸಂಜೆ ಕೆಲ್ಸದಿಂದ ಬಂದ ಮೇಲೆ ಎಷ್ಟೊಂದು ಸರಿ ಮಾತಾಡಿಸ್ತಾ ಇದ್ರು. 2003 ರಲ್ಲಿ ನನಗೆ ಇನ್ನೂ ನೆನಪಿದೆ ಸಿನಿಮಾಕ್ಕೆ ಬರೋ ಇಷ್ಟ ಇದ್ದೀಯ ಅಂತ ನನ್ನ ಕೇಳಿದ್ರು . ಒಳ್ಳೆ ಎತ್ತರ ಇದ್ದೀರಾ , ಎಷ್ಟಿದೀರಪ್ಪಾ ಅಷ್ಟುದ್ದ ಇದ್ದೀರಲ್ಲಾ ಅಂತ ಕೇಳಿದ್ರು . ದುಡ್ಡು ಚೆನ್ನಾಗಿ ದುಡೀಬೇಕು ಅಂದ್ರೆ ಸಿನಿಮಾದಲ್ಲಿ ಸಾಧ್ಯವಾ ಅಂತ ಕೇಳಿದ್ದಕ್ಕೆ ಬಂತು ತಟ್ ಅಂತ ಉತ್ತರ. ಸಿನಿಮಾಕ್ಕೆ ಪ್ರೀತಿ ಇದ್ದರೆ ಮಾತ್ರ ನೆಲೆ ಊರಲು ಕಾರಣ ದುಡ್ಡು ಮಾಡೋ ಚಿಂತನೆ ಇತ್ತು ಬಂದರೆ ಜಾಸ್ತಿ ಉಳ್ಯಲ್ಲ ಇಲ್ಲಿ - ಜೋಪಾನ ಅಂತ ಹೇಳ್ತಾ ಇದ್ರು.
ತುಂಬಾ ಸರಳ ಸಜ್ಜನ - ಎಲ್ಲರಿಗೂ ಒಳ್ಳೆದಾದ್ರೆ ಸರಿ ಅಷ್ಟೇ ಅನ್ನೋ ಮನೋಭಾವ .ಕನ್ನಡದ ಬುದ್ದಿವಂತ ನಟ ನಿರ್ದೇಶಕ ನಿರ್ಮಾಪಕ - ಕನ್ನಡಕ್ಕೆ ದೊಡ್ಡ ನಷ್ಟ ಆಗಿರೋದು ಮಾತ್ರ ಸತ್ಯ .
ಲೊ ಬಜೆಟ್ ಅಲ್ಲಿ ಸಿನಿಮಾ ಮಾಡೋದು ಹೇಗೆ ಅಂತ ಆ ಕಾಲದಲ್ಲೇ ತೋರಿಸಿಕೊಟ್ಟವರು . ಆ ಕಾಲದಲ್ಲೇ ದೊಡ್ಡ ದೊಡ್ಡ ಕಲಾವಿಧರ ದಂಡು ಇರಬೇಕಾದರೆ ಒಳ್ಳೆಯ ಬರವಣಿಗೆ ಇಟ್ಟುಕೊಂಡು ಮಡಿವಂತಿಕೆ ಬಿಟ್ಟು ಕರ್ನಾಟಕ ತಿರುಗಿ ನೋಡುವ ಹಾಗೆ ನಿರ್ದೇಶನ ಮಾಡಿ ತೋರ್ಸಿದ್ರು, ಒಂದಲ್ಲ ಎರಡಲ್ಲ ಹಲಾವಾರು ಚಿತ್ರಗಳು. ಕಡಿಮೆ ಬಜೆಟ್ ಅಲ್ಲಿ ಸಿನಿಮಾ ಮಾಡಿ ಅಪರ್ಣ ಥೀಯೇಟರ್ ಗೆ ಲಗ್ಗೆ ಹೊಡೆದ ಜನರು ಕೋಟಿಗಟ್ಟಲೆ . ಗೆಲುವು ಸೋಲು ಏನು ಬಂದರೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಿದ್ದವರು . ಬರವಣಿಗೆ ಅಚ್ಚುಕಟ್ಟಾಗಿದ್ದರೆ ಯಾರು ಬೇಕಿದ್ರೂ ಹೀರೋ ಆಗಬಹುದು ಅಂತ ತಾವೇ ಹೀರೋ ಆಗಿ ಕೂಡ ಗೆದ್ದವರು , ಸಾಹಿತ್ಯ ಓದಿರುವವರು, ಬರಹ , ವಿಚಾರಗಳು ಹೆಚ್ಚು ಉಳ್ಳಂತವರು. ವಿ ಮನೋಹರ್ , ಬ್ಯಾಂಕ್ ಜನಾರ್ಧನ್, ಸುನಿಲ್ ಕುಮಾರ್ ದೇಸಾಯಿ ಹೀಗೆ ಹಲಾವಾರು ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟು ಬೆಳೆಸಿದ್ದರು . ಕರ್ನಾಟಕದಲ್ಲಿ Super Stardom ಸಂಪಾದಿಸಿ ಅಪಾರ ಜನಪ್ರಿಯತೆ ಕಂಡ , ಪ್ರಜಾಕೀಯ ಹುಟ್ಟು ಹಾಕಿ ಪ್ರಜಕೀಯ ಮಾಡುತ್ತಿರುವ ಕನ್ನಡದ ಗಂಡುಗಲಿ ಮತ್ತೆ ಹೆಸರುವಾಸಿಯಾದಂತ Real Star ಉಪೇಂದ್ರ ಕೂಡ ಇವರ ಘರಡಿಯ ಕೂಸು . ಉಪೇಂದ್ರರವರು ಕಾಶೀನಾಥ್ ಶಿಷ್ಯ ಎಂದು ಹೆಮ್ಮೆಯಿಂದ ಇವತ್ತಿಗೂ ಹೇಳಿಕೊಳ್ಳುತ್ತಾರೆ. ಸಾಧ್ಯವಾದ್ದಂತ ಸಾಮಾಜಿಕ ಚಿಂತನೆ ಮತ್ತು ಕಳಿಕಳಿ ಅಪಾರ , ಅದನ್ನ ಆಧಾರವಾಗಿಟ್ಟುಕೊಂಡು ತಮ್ಮ ಸ್ವಂತ ದುಡ್ಡು ಹಾಕಿ ನಿರ್ದೇಶನ ಮಾಡಿ ಹೊಸಬರ ಗುಂಪು ಕಟ್ಟಿಕೊಂಡು ಸುಮಾರು ಜನರಿಗೂ ಅವಕಾಶ ಕೊಟ್ಟ ಧೀಮಂತ ಹೃದಯವಂತ ಸಿನಿಮಾ ಪ್ರೇಮಿ . ಕಾಶೀನಾಥ್ ಗಲಾಟೆ ಇಲ್ಲ , ಅಬ್ಬರ ಇಲ್ಲ ,ಒಬ್ಬ ವೈರಿಯೂ ಇಲ್ಲದೆ ಕೆಲ್ಸದಿಂದ ಮಾತ್ರ ಮನೆ ಮಾತಾದ ನಿಜ ಜೀವನದ ಹೀರೋ ಕಾಶಿನಾಥ್ - ಬದುಕಿನ ಕೊನೆಯ ಪುಟಗಳು ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ .
ಅವರು ಕಡೆಯದಾಗಿ ನಟಿಸಿದ "ಚೌಕ " ನಾನು ಅಮೇರಿಕಾದಲ್ಲಿ ನೋಡಿದ್ದೆ , ಅವರ ಅತ್ಯುತ್ತಮ ಅಭಿನಯಕ್ಕೆ ಸಿನಿಮಾ ಹೆಸರು ಮಾಡಿತ್ತು . ಎಂಥ ಒಂದು ಸುಂದರವಾದ ಪಾತ್ರ ಮಾಡಿ ಮನೆ ಮಾತಾಗಿ ಅವರ ಜೀವನ ಪ್ರಯಾಣ ಮುಗಿಸಿಕೊಂಡರು .
ಮೃತರಿಗೆ ಶಾಂತಿ ಪ್ರಾಪ್ತಿಯಾಗಲಿ ಹಾಗು ಭಗವಂತ ಅವರ ಮನೆಯವರಿಗೆ ಮರಣದ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥನೆ.
Actor, film producer, director, composer of Kannada Film Industry expired on Jan 18 2018. He was 67 year old. He had one dream that he wanted to direct an English film with universal theme/philosophy but it was not to be.
Om Shanti !!!