Sunday, December 25, 2022

Adishanakra -NotesDec25_2022

 ೧೪. 

ಆತ್ಮಜ್ಞಾನಕ್ಕೆ 

ತ್ರೈಷೆ ಬೇಕು ( ಶ್ರದ್ದೆ )

ಸಮಾಜಮುಖಿ ಆದಂತ ವಿಧ್ಯೆ ಬಂದರೆ ರಾಜಯೋಗ ಸಿಗುತ್ತೆ 

ಗುರುಕುಲ ಪದ್ಧತಿ ಬೇಕು . ಏಕಾಗ್ರತೆಯಲ್ಲಿ ಒಂದೇ ಜಾಗದಲ್ಲಿ ಇದ್ದು ಆಧ್ಯಾತ್ಮಿಕ ವಿಧ್ಯೆ ಕಲಿಯಬೇಕು.

ಸಾತ್ವಿಕ್ ವಾತಾವರಣ ಬೇಕು.

ಸಮಾನತೆ ಇದ್ದರೆ ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಸಾಧ್ಯ  

ಮಾತೃ ಋಣ ಪಿತೃ ಋಣ ದೇವ ಋಣ ಋಷಿ ಋಣ 

ಗುರುವೇ ಸಾಕ್ಷಾತ್ ದೈವ 

ತಂದೆ ಕೊಡುವುದು ಲೌಕಿಕಾದ್ದು. ಗುರುಗಳು ಕೊಡುವುದು ಅಲೌಕಿಕವಾದ ಜ್ಞಾನ ವೇದ ಜ್ಞಾನ .

ಅಲೆಕ್ಸಾಂಡರ್ ಗು ಕೂಡ ವೇದ ವಿಧ್ಯೆ ಬೇಕು ಎಂದು ತಿಳಿದಿತ್ತು ಆದರೆ ಸಿಗಲಿಲ್ಲ 

ಸ್ವಾಮಿ ವಿವೇಕಾನಂದರವರಿಗೆ ಕೂಡ ಗುರು ರಾಮಕೃಷ್ಣರ ಹೆಸರು ಕೂಡ ಸಂಬೋಧಿಸಿ ಹೇಳುತ್ತಿರಲಿಲ್ಲ .

ಎದುರುಗಡೆ ಚಾದಲ ಬಂದಾಗ ಶಂಕರಾಚಾರ್ಯರು ತಪ್ಪಾಗಿ ಗ್ರಹಿಸಿದರು ಅದೇ ತೋರ್ಸುತ್ತೆ ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ತಕ್ಷಣ ತಿದ್ದು ಕೊಳ್ಳಬೇಕು ಎಂದು .

ನರ್ಮದಾಷ್ಟಕ ಸ್ತೋತ್ರದ ಮೂಲಕ ಸಮಸ್ಯೆ ನಿರ್ಮೂಲನೆ ಮಾಡಿದರು. ಸಮಸ್ಯೆ ಬಂದಾಗ ಮಾತ್ರ ಅಷ್ಟಸಿದ್ಧಿಯನ್ನು ಉಪಯೋಗಿಸಿದರು. ತಮ್ಮ ಅನುಕೂಲಕ್ಕೆ ಬಳಸಲಿಲ್ಲ .

ಚರ್ಚೆಯಲ್ಲಿ ಸೋತವರು ಇವರ ವ್ಯಕ್ತಿತ್ವನ್ನು ತುಂಬಾ ಇಷ್ಟಪಡುತ್ತಿದ್ದರು. ಅಜಾತಶತ್ರು .

ಗುರುಕುಲದಲ್ಲಿ ಗೋವಿಂದ ಭಗವದ್ಪಾದರನ್ನು ಭೇಟಿ ಮಾಡಿದ್ದರು. ಅವರ ಗುರು ಗೌಡಪಾದಾಚಾರ್ಯರು ಉಪನಿಷತ್ತಿಗೆ ಕಾರಿಕೆ ಬರೆದಿದ್ದರು. ಪೂರ್ವಪಕ್ಷ , ಉತ್ತರ ಉತ್ತರಾಪಕ್ಷ ಮಂಡಿಸಿದ ಗುರುಗಳ ಗುರು ಅವರು .

ಆತ್ಮಾವಲೋಕವನ್ನು ಮಾಡಿಕೊಳ್ಳುವುದು ಮುಖ್ಯ ( ಶ್ರಾವಣ ಮನಾನಾ ನಿಧಿಧ್ಯಾಸನ )

೧-೨ ಪುಸ್ತಕ ನೋಡಿ ಅಳವಡಿಸಿಕೊಳ್ಳಬೇಕು . 

ಎಷ್ಟು ತಿಳಿದರೂ ಅಳವಡಿಸಿಕೊಳ್ಳಲೇಬೇಕು ಆಗಲೇ ಮುಕ್ತಿ ಮಾರ್ಗ ದಾರಿ ತೆಗೆದುಕೊಳ್ಳುತ್ತದೆ.

ಭಕ್ತಿ ಯೋಗ ( ಮೊದಲು ಬೇಕಾಗಿರೋದು ), ಜ್ಞಾನ ಯೋಗ ( ಭಕ್ತಿಯನ್ನು ಉಪಯೋಗಿಸಿ ಅಭ್ಯಾಸ ಮಾಡಬೇಕು , ಅದಕ್ಕೆ ವೈರಾಗ್ಯಬೇಕು ). ಅದನ್ನು ಉಪಯೋಗಿಸಿ ವಿವೇಕ ಬರಿಸಿಕೊಳ್ಳಬೇಕು . ವಿವೇಕದಿಂದ ಬ್ರಹ್ಮ ಜ್ಞಾನ ಪ್ರಾಪ್ತಿ . ಆಮೇಲೆ ನಿತ್ಯ ಕರ್ಮವೂ ಬಿಟ್ಟುಹೋಗುತ್ತದೆ . ನಿವೃತ್ತಿ ಮಾರ್ಘಕ್ಕೆ ಸೇರುತ್ತೇವೆ .

ಶಂಕರಾಚಾರ್ಯರು ಸೂಕ್ತವಾದ ಪಂಡಿತರು /ವಾರ್ತಿಕರು / ಗಣಪಂಡಿತರು ಸಿಕ್ಕಿದರು . ಅವರೇ ಕುಮಾರಿಲಭಟ್ಟರು. ಲಕ್ಷಾಂತರ ಶಿಷ್ಯರನ್ನು ಸಿದ ಪಡಿಸಿದ ಕುಮಾರಿಲ ಭಟ್ಟರನ್ನು ವಾದದಲ್ಲಿ ಸೋಲಿಸಿ ಜನನ ಮಾರ್ಗಕ್ಕೆ ತರಬೇಕು ಎಂದು ಬಾವಿಸಿದ್ದರು .

ಆದರೆ ಭಟ್ಟರು ದೇಹ ತ್ಯಾಗ ಮಾಡಲು ನಿಶ್ಚಯಿಸಿರುತ್ತಾರೆ .

ಪ್ರಯಾಗದಲ್ಲಿ ವಾಸಿಸುತ್ತಿರುತ್ತಾರೆ .

ಶಂಕರಾಚಾರ್ಯರು ಅಲ್ಲಿಗೆ ಬಂದು ಪದ್ಮಾಸನದಲ್ಲಿ ಬತ್ತದ ಹೊಟ್ಟಿನ ಮೇಲೆ ಕುಳಿತು ಬೆಂಕಿ ( ತೃಷಾಗ್ನಿ ಪ್ರಾಯಶ್ಚಿತ್ತ ) ಹಾಕಿಸಿಕೊಂಡಿರುತ್ತಾರೆ. 

ಭಟ್ಟರು ಬೌದ್ಧ ಧರ್ಮವನ್ನು ಸೋಲಿಸಿ ನಿಂತು ಗೆದ್ದವರು . ಅವರು ಶಂಕರಾಚಾರ್ಯರ ಜೊತೆ ವಾದ ಮಾಡಲು ಮನಸ್ಸು ಬದಲಾಯಿಸುವುದಿಲ್ಲ . ಆಳವಾಗಿ ಬೌದ್ಧ ಧರ್ಮವನ್ನು ತಿಳಿದು ಅದನ್ನು ಖಂಡಿಸಿದರು . ಪಾಪ ಪ್ರಜ್ಞೆಗೆ ತೃಷಾಗ್ನಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡರು . ಮಾಡಿಕೊಳ್ಳುವ ಮನ್ಯಾಚೆ ಮಂಡನ ಮಿಶ್ರರಿಂದ ವಾರ್ತಿಕೇಯನ್ನು ಬರೆಸಿಕೊಳ್ಳಿ ಎಂದು ತಿಳಿಸಿದರು .

ಶಂಕರರು ಕಾಶಿಗೆ ಬಂದು ವೈಧಿಕ ವಿಷಯವನ್ನು ಚರ್ಚೆ ಮಾಡಿದ್ದಾರೆ . ಪರಿಪಕ್ವರಾಗಿದ್ದಾರೆ .

ಗೋವಿಂದ ಭಾಗವದ್ಪಾದರ ಆಶೀರ್ವಾದ ಮತ್ತು ಅಪ್ಪಣೆಯೊಂದಿಗೆ ಬಾಷ್ಯದ ಕೆಲಸ ಶುರುವಾಗುತ್ತದೆ.

ನಾರಾಯಣನ ವಿಗ್ರಹವನ್ನು ತಮ್ಮ ತಪಶಕ್ತಿಯಿಂದ ತೆಗೆದು ಕಾಶಿಯಲ್ಲಿ ಸ್ಥಾಪಿಸುತ್ತಾರೆ .

ಸರಸ್ವತಿ ನದಿಯ ತೀರದಲ್ಲಿ ವ್ಯಾಸಗುಹದಲ್ಲಿ ಕುಳಿತು ಉಪನಿಷದ್ ಭಗವದ್ಗೀತೆ ಮತ್ತು ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುತ್ತಾರೆ. ಎಲ್ಲರಿಗೂ ತಲುಪಲೆಂದು ಆಗಾಗ ಉಪನ್ಯಾಸಗಳನ್ನು ಕೊಡುತ್ತಿದ್ದಾರೆ .

ಅವರ ಪರಮ ಶಿಷ್ಯ ಸನಂದ ( ವಿಷ್ಣುಶರ್ಮ ) ನ ಜೊತೆ ಇರುತ್ತಾರೆ .

ಸನಂದ ಎಂದು ಕೂಗಿದ ತಕ್ಷಣ ಗುರುಗಳನ್ನು ಭೇಟಿ ಮಾಡಲು ನೀರಿನ ಮೇಲೆ ಓಡೋಡಿ ಬರುತ್ತಾರೆ. ಅಲ್ಲೆಲ್ಲಾ ಪದ್ಮ ಪಾತ್ರ ಉದ್ಭವಿಸುತ್ತದೆ . ಅವರಿಗೆ ಸನ್ಯಾಸ ಸ್ವೀಕರಿಸಿದಾಗ ಸನಂದ ಎಂದು ಹೆಸರಿಟ್ಟು ನಂತರ ಪದ್ಮಪಾದಾಚಾರ್ಯ ಎಂಬ ಹೆಸರನ್ನು ಕೊಡುತ್ತಾರೆ . 

ಭಗವದ್ಪಾದರಿಗೆ ಈಗ ೧೬ ವರ್ಷ . ಆಯಸ್ಸು ಮುಗಿತಾ ಬಂದಿದೆ . ಕಾರ್ಯ ಬಹಳಷ್ಟಿದೆ. ನಾಸ್ತಿಕ ಧರ್ಮವನ್ನು ಖಂಡಿಸಿ ವೇದ ಧರ್ಮವನ್ನು ಸ್ಥಾಪಿಸಬೇಕಾಗಿದೆ . 

 ವೇದವ್ಯಾಸರು ಒಬ್ಬ ವೃದ್ಧ ರೂಪದಲ್ಲಿ ಬಂದು ಪ್ರಶ್ನೆ ಮಾಡಿದರು . ಸಮಾಧಾನವಾಗಿ ಉತ್ತರಿಸುತ್ತಾರೆ . ಶಂಕರಾಚಾರ್ಯರಿಗೆ ಅವರು ವೇದವ್ಯಾಸರು ಎಂದು ತಿಳಿಯುತ್ತದೆ . ಆಗ ಸಾಕ್ಷಾತ್ ವೇದವ್ಯಾಸರೇ ಅಲ್ಲಿರುವುದು ಎಂದು  ನಮಸ್ಕರಿದ ಶಂಕರರಿಗೆ ಇನ್ನೂ ೧೬ ವರ್ಷ ಆಯಸ್ಸು ಕರುಣಿಸುತ್ತಾರೆ .

Wednesday, December 14, 2022

8. Adishankara - Kannada Notes.

 ಕನಕಧಾರಾ ಸ್ತೋತ್ರದಿಂದ ಒಂದು ಬಡ ಮನೆಯ ಉದ್ದಾರವಾದ ಉದಾಹರಣೆ ನೋಡಿದೀವಿ . 

ಆ ಬಾಲಕ ಈಶ್ವರನ ಅವತಾರವೇ ಎಂದು ನಿಶ್ಚಿತವಾಯಿತು 

೧೨ ವರ್ಷದ ವೇದ ವಿಧ್ಯಾಭ್ಯಾಸವನ್ನು ೨ ವರ್ಷಕ್ಕೆ ಮುಗಿಸಿದ ಬಾಲಕ .

ಮನೆಯಲ್ಲೇ ಗುರುಕುಲ ಆರಂಭ ಮಾಡಿ ಪಾಠ ಪ್ರವಚನ ಮುಂದುವರಿಯುತ್ತಾ ಬರುತ್ತೆ . 

ಸಣ್ಣ ಗುರುಕುಲವಾಗಿ ಆರಂಭವಾಗಿ ದೊಡ್ಡ ವಿಶ್ವವಿದ್ಯಾನಿಲಯವಾಗಿ ಬೆಳೆಯುತ್ತೆ.ಆಗ ಶಂಕರರಿಗೆ ೭ ವರ್ಷ.

ನಮ್ಮ ಬಗ್ಗೆ ಗರ್ವ ಅಹಂಕಾರ ಬೆಳೆಯುತ್ತೆ ಆದರೆ ಅಷ್ಟು ದೊಡ್ಡ ಪಾಂಡಿತ್ಯ ಹೊಂದಿದ್ದ ಶಂಕರರಿಗೆ ಅದು ಇರಲಿಲ್ಲ. ರಾಜ ಸನ್ಮಾನಿಸಲು ಕರೆದಾಗ ವಿನಯಪೂರ್ವಕವಾಗಿ ತಿರಸ್ಕರಿತ್ತಾರೆ.

ಆಡಂಬರದ ಜೀವನ ಲೌಕಿಕ ಜೀವನದಲ್ಲಿ ಇಷ್ಟವಿರಲಿಲ್ಲ. ಸನ್ಯಾಸ ಮಾರ್ಗಕ್ಕೆ ಅರ್ಪಿಸಿಕೊಳ್ಳುತ್ತಿದ್ದರು.

ತಾಯಿಗೆ ಕಷ್ಟ ಪಡಬಾರದು ಎಂದು ಗಾಯತ್ರಿ ಜಪ ಮತ್ತು ವೇದಾಮಾತ್ರವನ್ನು ಸಮರ್ಪಿಸಿ ತನ್ನ ತಪಶಕ್ತಿಯಿಂದ ಪೂರ್ಣ ನದಿಯು ಹರಿಯುವ ದಿಕ್ಕನ್ನೇ ಬದಲಿಸಿ ತಾಯಿಯ ಕಷ್ಟ ನಿವಾರಣೆ ಮಾಡುತ್ತಾರೆ.


ಭಾರತ ವೇದ ಭೂಮಿ. ವೇದವನ್ನು ಉಳಿಸೋದಕ್ಕೆ ಬೇರೆ ದೇಶದಿಂದ ಭಾರತಕ್ಕೆ ಜನ ಬರುತ್ತಿದ್ದರು.

ವೇದ ಅಂದರೆ ಸಾಮಾನ್ಯ ಜ್ಞಾನ ಅಲ್ಲ , ವಿಶೇಷ ಜ್ಞಾನ.

ಇದು ಮನುಷ್ಯರು ಕೊಟ್ಟಿದ್ದಲ್ಲ. ದೇವರಿಂದ ಬಂದಿರೋ ಜ್ಞಾನ. ಋಷಿ ಮುನಿಗಳು ತಪಸ್ಸಿಗೆ ಕುಳಿತಿದ್ದಾಗ ಕಣ್ಣಿಗೆ ಕಾಣಿಸಿ ಕಿವಿಗೆ ಬಿದ್ದಂತಹ ಸಂಸ್ಕೃತ ಭಾಷೆಯಲ್ಲಿರುವ ಭಾಷೆ . ಇದನ್ನೇ ವೇದಗಳು ಎಂದು ಕರೆಯುತ್ತೇವೆ. ಆಗಿನ ಕಾಲಕ್ಕೆ ಗುರು ಶಿಷ್ಯರ ಮೂಲಕ ಮೌಖಿಕವಾಗಿ ತಿಳಿಸಿದ ಜ್ಞಾನ. ಸಾವಿರಾರು ವರ್ಷ ಹೀಗೆ ಪರಂಪರೆಯಲ್ಲಿ ಬಂದಿದೆ ಅಂದರೆ ಆಗಿನ ಜನರ ನೆನಪಿನ ಶಕ್ತಿ ಮತ್ತು ಅರಿವು ಹೇಗಿತ್ತು ಎಂದು ತಿಳಿಯುತ್ತದೆ.

ವೇದ ನ್ನೊಂದು ವಿದ್ ಅನ್ನೋ ಧಾತುವಿನಿಂದ ಬಂದಿರೋದು.

ವೇದ - ಜ್ಞಾನ 

ಅನಂತವೈ ವೇದ: - ಜೀವ ಜಗತ್ತು ಮಂತ್ರ ಪೂಜೆ ಸಂಸ್ಕಾರ , ಅರೋಗ್ಯ ಶಸ್ತ್ರ ವಿಜ್ಞಾನ ಸಂಗೀತ  , ಯಂತ್ರ ಮಂತ್ರ ಎಲ್ಲವೂ ಜ್ಞಾನ.

ವೇದವನ್ನು ಕರ್ಮಖಾಂಡ ಮತ್ತು ಜ್ಞಾನ ಎಂಬ ಎರಡು ಭಾಗ ಮಾಡಿದ್ದಾರೆ .

ವೇದಾಂತ ಅಂದರೆ ಅಂತ್ಯದಲ್ಲಿ ಇರುವುದು. ಅದೇ ಉಪನಿಷತ್ ಅಥವಾ ವೇದಾಂತ.

ವೇದಗಳು ಅಪೌರುಷೇಯ ಅಂದರೆ ಋಷಿ ಮುನಿಗಳಿಂದ ಬಂದಿರುವ ಪರಮಾತ್ಮನ ಜ್ಞಾನ ಆದ್ದರಿಂದ ಅದಕ್ಕೆ ತಿದ್ದುಪಡಿ ಬೇಕಿಲ್ಲ .  ಹೇಗಿದೆ ಹಾಗೆ ಕಲಿತುಕೊಂಡರೆ ಸಾಕು ಜೀವನ ಸಾರ್ಥಕ .

Sunday, December 11, 2022

Adishankaracharya - Dec 11 2022 - Notes in Kannada

 ೭.ಶಂಕರಾಚಾರ್ಯರಿಗೆ ಸಂಬಧಪಟ್ಟ ಶ್ಲೋಕ.

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್ 

ನಮಾಮಿ ಭಾಗವದ್ಪಾದಂ ಶಂಕರಂ ಲೋಕಶಂಕರಂ 


ಪುಸ್ತಕಾಲಯ - ಪುಸ್ತಕಗಳಿರುವ ಸ್ಥಾನ.

ಗ್ರಂತಾಲಯ - ಗ್ರಂಥಗಳು ಇರುವ ಸ್ಥಾನ .


ವೇದಗಳನ್ನು ಯಾರು ಬೆರೆದಿದ್ದಲ್ಲ . ದಾರ್ಶನಿಕ , ಋಷಿ ಮುನಿಗಳಿಗೆ ಗೋಚರವಾದದ್ದು .

ಶ್ರುತಿ - ಕೇಳಿಸ್ಕೊಳ್ಳುವ ಮೂಲಕ ಬರುವ ಜ್ಞಾನ .

ಸ್ಮೃತಿ - ಬರವಣಿಗೆಗೆ ಬಂದಿರುವ ಕಾರಣ ಅದೇ ಜ್ಞಾನ ಸ್ಮೃತಿಯಾಗಿದೆ .

ಪುರಾಣದಲ್ಲಿ ಹಲವಾರು ಇದೆ.

ಜೀವಿಗಳ ಮೇಲಿರುವ ಕಾರುಣ್ಯ .

ಶ್ರುತಿ ಸ್ಮೃತಿ ಮತ್ತು ಪುರಾಣವೆಲ್ಲ ಶಂಕರಾಚಾರ್ಯರ ಶರೀರವೇ ದೇವಾಲಯವಾಗಿತ್ತು .ಲೋಕಕ್ಕೆ ಶುಭವನ್ನು ಕೋರುವವರೇ ಶಂಕರಂ ಎಂದರ್ಥ .

ಶಂಕರಾಚಾರ್ಯರು ದೀಪ ಮತ್ತು ಪ್ರದೀಪವಾಗಿದ್ರು .

ಬೇರೆಯವರಲ್ಲಿರುವ ತಪ್ಪು ಕಲ್ಪನೆಗಳನ್ನು ದೀಪದಂತೆ ಅವತರಿಸಿ ಪ್ರದೀಪಿಸಿದರು ( ಬೆಳಗಿದರು , ಬೆಳಗುತ್ತಿದ್ದಾರೆ ಮತ್ತು ಬೆಳಗುತ್ತಲೇ ಇರುತ್ತಾರೆ ) ಅಂತಹ ಜಗದ್ಗುರುಗಳಿಗೆ ನಥಮಸ್ಥಕರಾಗಿದ್ದೇವೆ ಅಂದರೆ ನಮಸ್ಕರಿಸುತ್ತೇವೆ. 

ಸೂರ್ಯ ಹೇಗೆ ಲೋಕವನ್ನೇ ಬೆಳಗುವ ಪ್ರದೀಪವೋ ಹಾಗೆಯೇ ದೇಶದಾದ್ಯಂತ ಆಸ್ತಿಕರ ಪರವಾಗಿ ವಾದ ಮಾಡಿ ಗೆದ್ದು ಜಗದ್ಗುರುಗಳು ಎಂದು ಕರೆಸಿಕೊಂಡರು.


ಈ ಶ್ಲೋಕದ ಮೂಲಕ ನಮನ ಸಲ್ಲಿಸುವುದು ಅವರಿಗೆ ಒಳ್ಳೇದಾಗ್ಲಿ ಅಂತ ಅಲ್ಲ ನಮಗೆ ಒಳ್ಳೇದಾಗ್ಲಿ ಅಂತ .


ಉಪನಯನ ಮಾಡಬೇಕು ಎಂದುಕೊಂಡಾಗ ಶಂಕರರ ತಂದೆ ಶಿವಗುರುವಿನ ಕಾಲವಾಗುತ್ತದೆ. 

ಉಪನಯನವಾಗುತ್ತದೆ.

ಸನ್ಯಾಸ ತೆಗೆದುಕೊಂಡು ಭಿಕ್ಷೆ ಸ್ವೀಕರಿಸಿ ಜೀವನ ಸಾಗಿಸುತ್ತಾರೆ .

ಸನ್ಯಾಸಿ ಅಂದರೆ ಹೆಣ್ಣು ಹೊನ್ನು ಮಣ್ಣು ಮೂರನ್ನು ತ್ಯಾಗ ಮಾಡಿ ದೇಶಕ್ಕೆ ಒಳ್ಳೇದಾಗುವುದಕ್ಕೆ ರಾಜ್ಯಗಳನ್ನೆಲ್ಲಾ ಪರ್ಯಾಟನೆ ಮಾಡುತ್ತಾರೆ .

ಅವರನ್ನು ನೋಡಿಕೊಳ್ಳುವುದು ಗೃಹಸ್ತರಾದ ನಮ್ಮಂತವರ ಜವಾಬ್ದಾರಿ.


ಒಂದು ದಿನ ಬಾಲ ಸನ್ಯಾಸಿ ಭಿಕ್ಷೆ ಬೇಡುವುದಕ್ಕೆ ಬಂದಾಗ ಬಡವರ ತಾಯಿ ಒಣಗಿದ ನಲ್ಲಿಕಾಯಿಯನ್ನು ಬಹಳ ನೋವಿನಿಂದ ಕೊಡುತ್ತಾಳೆ. ಹಾಲೋ ಅಕ್ಕಿನೋ ಅನ್ನವನ್ನೋ ಕೊಡಲು ಆಗುತ್ತಿಲ್ಲವಲ್ಲ ಎಂದು ನೋವು ಮಾಡಿಕೊಂಡು ಕೊಡುತ್ತಾಳೆ .

ಬಾಲ ಶಂಕರನ ಮನಸ್ಸು ಮಿಡಿಯುತು. ಬೆಲೆ ಬಾಳುವುದನ್ನು ಕೊಟ್ಟಿದ್ದಾಳೆ ಎಂದು ಆ ಬಾಲ ಸನ್ಯಾಸಿ ಮಹಾಲಕ್ಷ್ಮಿಯನ್ನು ಕುರಿತು ಕನಕಧಾರಾ ಸ್ತೋತ್ರವನ್ನು ಸ್ತುತಿಸುತ್ತಾರೆ.

ಕಷ್ಟವನ್ನು ಪಡುತ್ತಿರುವ ಆ ತಾಯಿಗೆ ಸಾಕ್ಷಾತ್ ಪರಶಿವನೇ ಮಹಾಲಕ್ಷ್ಮಿಗೆ ತಿಳಿಸಿ ಮನೆಯಲ್ಲಿ ಶ್ರೀಮಂತಿಕೆ ತುಂಬುತ್ತಾನೆ. ಸನ್ಯಾಸಿಗಳಿಗೆ ಅಷ್ಟು ಶಕ್ತಿ ಇರುತ್ತದೆ . ಅವರ ಒಂದು ದರ್ಶನ ಅಥವಾ ಆಶೀರ್ವಾದ ನಮ್ಮ ಆತ್ಮದ ವಿಚಾರವನ್ನು ತಿಳಿದುಕೊಳ್ಳುವ ಜ್ಞಾನಕ್ಕೆ ಮತ್ತು ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕೆ ಕೃಪೆ ಮಾಡುತ್ತಾರೆ . 

Thursday, December 1, 2022

Dec 1 , 2022 - Kannada Notes

 ೬  - ವೈಧಿಕ ಸಿದ್ದಂತಕ್ಕೆ ವಿರೋಧ ವ್ಯಕ್ತಿಪಡಿಸಿದವರು - ಚಾರುವಾಕ , ಬೌದ್ಧ ಮತ್ತು ಜೈನ .

ಜೈನರು ಅಹಿಂಸೆವಾದ , ವೈಧಿಕರಿಗೆ ತುಂಬಾ ವಿರುದ್ಧ ವ್ಯಕ್ತಪಡಿಸಿಲ್ಲ .


ಜೈನ ತೀರ್ಥಂಕರರು ನಮ್ಮ ಶಕ್ತಿ ದೇವತೆಗಳನ್ನು ಒಪ್ಪುತ್ತಿದ್ದರು.


ಜೈನ ಅಂದರೆ ಜಯಿಸು ಅಂತ .

ಏನನ್ನು ಜಯಿಸುವುದು ?

ನನ್ನನ್ನು ನಾನು .

ಸ್ಥಿತಪ್ರಜ್ಞತೆಗೆ ಒಟ್ಟು ಕೊಟ್ಟುವರು ಅವರಲ್ಲಿ ಕೂಡ ಇದ್ದರು. 

ಜ್ಞಾನ ಎಲ್ಲಿಂದಲಾದರೂ ಬರಲಿ , ತೆಗೆದುಕೊಳ್ಳಬೇಕು .

ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದಲ್ಲಿ ನಂಬುತ್ತಿದ್ದರು.

ವೇದವನ್ನು ಮಾನ್ಯತೆ ಮಾಡಿದೆ ಇದ್ದ ಕಾರಣ ನಾವು ಅವರನ್ನು ನಾಸ್ತಿಕರು ಎಂದು ಕರೆಯುತ್ತೇವೆ .

ಮನುಷ್ಯನನ್ನೇ ದೇವರನ್ನಾಗಿ ನೋಡಬೇಕಾದರೆ ಮನಯೇವ ಮನುಷ್ಯಾಣಾಮ್  ಎಂಬಂತೆ ಸಮ್ಯಕ್ ದರ್ಶನ ವಾಗಿರಬೇಕು . ಮನಸ್ಸನ್ನು ಪೂರ್ತಿ ತಿಳಿಯಬೇಕು ಆಗಲೇ ಆಸಕ್ತಿ ಬಂದು ಆತ್ಮವಿಚಾರದಲ್ಲಿ ಆಸಕ್ತಿ ಕಂಡುಕೊಳ್ಳಬೇಕು. ಅಧ್ಯಯನ ಮಾಡಬೇಕು .

ವಿಧ್ಯೆಯಿಂದ ವಿನಯ ಬರಬೇಕು . ವಿನಯವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು . ಬರುವ ಹಣವನ್ನು ಧರ್ಮ ಮಾರ್ಗದಲ್ಲಿ ವ್ಯಯ ಮಾಡಬೇಕು .  


ಮಾತೃಭಾಷೆಯಾದ ಮಲಯಾಳಂ ಮತ್ತು ಸಂಸ್ಕೃತವನ್ನು ಮಾತನಾಡುತ್ತಿದ್ದ ಶಂಕರ.

ಗುರುಕುಲದಲ್ಲಿ ಸಂಸ್ಕೃತ ವ್ಯಾಕರಣ ಕಾವ್ಯ ಪುರಾಣ ಎಲ್ಲವೂ ಸ್ವಂತ ಓದಿ ಅರ್ಥಮಾಡಿಕೊಳ್ಳುತ್ತಿತ್ತು ೩ ವರ್ಷದ ಮಗು. ಬೆಳಗ್ಗೆ ತಾನೀರು ಸ್ನಾನ , ಶುಭ್ರವಾದ ಬಟ್ಟೆ , ಹಣೆಗೆ ವಿಭೂತಿ , ಸ್ತೋತ್ರ ಪಾರಾಯಣ ಇದೆಲ್ಲ ನಿತ್ಯ ಮಾಡುತ್ತಿದ್ದ ಶಂಕರ.

ಶಂಕರ ಚಿಕ್ಕ ಮಗುವಾಗಿದ್ದಾಗಲೇ ಗುರುಗಳಿಂದ ಛಂದಸ್ಸು, ಅಲಂಕಾರ , ಕಾವ್ಯ ಎಲ್ಲಾ ಕಲಿತು ೫ ವರ್ಷಕ್ಕೆ ಬಂದಾಗ ಉಪನಯನವಾಯಿತು. ೫ ಕ್ಕೆ ಉಪನಯನ ಮಾಡಿದರೆ ಬ್ರಹ್ಮತೇಜಸ್ಸು ಉಂಟಾಗುವುದು ಎಂದು ಶಸ್ತ್ರ ಹೇಳುತ್ತದೆ. 

ಶಂಕರನ ತಂದೆ ತೀರಿ ಹೋದ ಮೇಲೆ ತಂದೆಯ ಬಾಯಿಗೆ ನೀರು ಹಾಕಿ ನಾರಾಯಣ ನಾರಾಯಣ ಎಂದು ಹೇಳುತ್ತಾನೆ. ಪಕ್ಕದಲ್ಲಿ ಕುಳಿತು ಸ್ತೋತ್ರಗಳನ್ನು ಪಠಣ ಮಾಡಲು ಶುರುಮಾಡುತ್ತಾನೆ .

ಜೊತೆಗೆ ಪಂಡಿತರು ಸೇರಿ ಉಪನಿಷತ್ ಶುರುಮಾಡುತ್ತಾರೆ .

ಶಂಕರಾಚಾರ್ಯರು ಹುಟ್ಟುವುದಕ್ಕೆ ಮುಂಚೆ ಗರ್ಭದಲ್ಲೇ ಕಲಿತು ಬಂದವರ ಹಾಗೆ ಬದುಕುತ್ತಿದ್ದರು .

ನಾವೆಲ್ಲರೂ ಹೊರಗಿಂದ ಕಲಿಯಬೇಕು.

ವಿವೇಕಾನಂದರು ೧೯ನೆ ಶತಮಾನದಲ್ಲಿ ಹುಟ್ಟಿ ೮ ನೇ ಶತಮಾನದಲ್ಲಿ ಹುಟ್ಟಿದ ಶಂಕರಾಚಾರ್ಯರ ಬಗ್ಗೆ ಪೂರ್ತಿ ಅಧ್ಯಯನ ಮಾಡಿ ಅವರ ಬಗ್ಗೆ ಪ್ರಪಂಚದಲ್ಲೆಲ್ಲಾ ತಿಳಿಸಿಕೊಟ್ಟರು.

ಶಂಕರಾಚಾರ್ಯರು ಗುರುಗಳ ಹತ್ತಿರ ಹೋದಾಗಲೇ ಅವರಿಗೆ ಎಲ್ಲಾ ಪಾಠ ತಿಳಿದಿತ್ತು. ಗುರುಗಳ ಪಟ್ಟ ಕೂಡ ಬಯಸಲಿಲ್ಲ. ಅವರಿಗೆ ಅವರೇ ಗುರುಗಳು ಆದ್ದರಿಂದಲೇ ಜಗದ್ಗುರುಗಳಾದರು.

ಬುದ್ಧನಾಗಲಿ , ಶಂಕರಾಚಾರ್ಯರಾಗಲಿ ಪ್ರಪಂಚ ಕಂಡ ಅದ್ಭುತ ವ್ಯಕ್ತಿಗಳು, ದಿವ್ಯಾತ್ಮಗಳು   

Tuesday, November 29, 2022

Nov 29 2022 - Notes

 ೫ - ಶಿವಗುರು ಒಬ್ಬನೇ ಮಗನನ್ನು ಬೇಡಿಕೊಳ್ಳುತ್ತಾನೆ .

ಆರ್ಯಾಂಬಾ ಗರ್ಭವಂತಳಾಗುತ್ತಾಳೆ . ಭೂಲಕಕ್ಕೆ ಬಂದಿರುವ ಶಿವಸ್ವರೂಪಿ ಆದಿಶಂಕರಾಚಾರ್ಯ ಗರ್ಭದಲ್ಲಿ ಬೆಳೆಯುತ್ತಿರುತ್ತದೆ . ಆಗ ಜ್ಞಾನಿಗಳು ಪಂಡಿತರು ಓಡಾಡುವ ಊರು ಪರಿಸರ . ನಿತ್ಯ ವೇದ ಮಂತ್ರ ಭಗವದ್ಗೀತೆ ತಾಯಿಯ ಕಿವಿ ಮೇಲೆ ಬೀಳುತ್ತಿತ್ತು .

ಸಂಸ್ಕಾರ ಗರ್ಭದಲ್ಲೇ ಬೆಳೆಯುವಂತದ್ದು . 


ಲೌಕಿಕ ಜನರು ಇದನ್ನು ಗಮನಿಸಬೇಕು .

ಯೋಗ ಧ್ಯಾನ ಸ್ತೋತ್ರಗಳ ಪಟನೆ ಆ ಹೆಣ್ಣಿಗೆ ಗರ್ಭವತಿಯಾದಾಗ ಕೊಡಬೇಕು . 

ಲೌಕಿಕ ಜಗತ್ತಿಗೆ ಬಂದಾಗ ಭಯ ಬಂದು ಅಳುತ್ತದೆ.


ಆದರೆ ಆರ್ಯಾಂಬಳಿಗೆ ಹುಟ್ಟಿದ ಮಗುವಿಗೆ ತುಂಬಾ ಸಂತೋಷವಿತ್ತು . 

ದುಃಖ ಇಲ್ಲ , ಅಳು ಇಲ್ಲ. ಏನಿಕ್ಕೆ ಹುಟ್ಟಿದೀನಿ ಎಂದು ತಿಳಿದಿತ್ತೇನೋ ಅನ್ನುವ ಹಾಗೆ .


ತೋಳಿನ ಬಲಭಾಗದಲ್ಲಿ ಈಶ್ವರ ಸಾಕೇತಿಕವಾಗಿ ತ್ರಿಶೂಲದ ಚಿನ್ಹೆ ಹೊತ್ತಿಕೊಂಡು ಹುಟ್ಟಿದ್ದ .  

ತೋಳಿನ ಎಡಬಾಗದಲ್ಲಿ ಅರ್ಧ ಚಂದ್ರಾಕೃತಿ .


ಪಂಡಿತರು ಜ್ಞಾನಿಗಳು ಮಗುವನ್ನು ನೋಡಿದ ತಕ್ಷಣ ಗೊತ್ತಾಗುತ್ತೆ ಈ ಮಗು ಸನ್ಯಾಸಿ ಆಗುತ್ತಾನೆ . ಲೋಕಕಲ್ಯಾಣಕ್ಕೆ ಹುಟ್ಟಿರೋ ಮಗು ಇದು ಎಂದು ಆತ್ರೇಯರು ( ಕುಲ ಗುರುಗಳು ) ಹೇಳುತ್ತಾರೆ.

ಪಂಡಿತರು ಮುಂದೆ ನಾವು ನಮಸ್ಕಾರ ಮಾಡುತ್ತೇವೆ ಎಂದು ಭವಿಷ್ಯ ನುಡಿತಾರೆ .


೬. ಚಾರುವಾಕ ಸಿದ್ದಾಂತ ಪರಿಚಯ ಆಗಿದೆ . ಈಗ ಬೌದ್ಧ ದರ್ಶನ ತಿಳಿದುಕೊಳ್ಳೋಣ .

ಶಂಕರಾಚಾರ್ಯರು ಹೋರಾಡಿದ್ದು ಈ ದರ್ಶನದ ವಿರುದ್ಧ .

ಬುದ್ಧ ತತ್ವಜ್ಞಾನಿ . ಅವನಿಂದ ಜಗತ್ತಿಗೆ ಬೌದ್ಧ ದರ್ಶನವಾಯಿತು . ಸಿದ್ದಾರ್ಥ( ಬುದ್ಧನ ಬಾಲ್ಯದ ಹೆಸರು )  ಹುಟ್ಟಿದ್ದು ಕ್ರಿಸ್ತ ಪೂರ್ವ  ೫೬೩ ರಲ್ಲಿ ಈಗಿನ ನೇಪಾಳದಲ್ಲಿ ಹುಟ್ಟಿದ .

ಸಿದ್ದಾರ್ಥನ ತಂದೆಗೆ ಮಗನ ಭವಿಷ್ಯ ಗೊತ್ತಾಗಿರುತ್ತೆ .

ಕಾಯಿಲೆಗೆ ಸಿಕ್ಕಿರುವ ಮನುಷ್ಯ ಮತ್ತು ಸತ್ತು ಹೋಗಿರುವ ವ್ಯಕ್ತಿಯನ್ನು ಒಮ್ಮೆ ನೋಡುತ್ತಾನೆ .

ಸತ್ಯಾನ್ವೇಷಣೆ ಬೇಕು ಎಂಬುದಾಗಿ ಆಸ್ತಿ ರಾಜ್ಯ ಎಲ್ಲ ತೊರೆದು ಹೊರಡುತ್ತಾನೆ .


ಎಂಟು ವಿಷಯಗಳನ್ನು ಬುದ್ಧ ಕೊಟ್ಟಿದ್ದು .

ಮಾಡುವ ಕೆಲ್ಸಕ್ಕೆ ಉದ್ದೇಶ ಚೆನ್ನಾಗಿರಬೇಕು . 

ಮಾತು ಚೆನ್ನಾಗಿರಬೇಕು 

ಒಳ್ಳೆಯ ಕೆಲಸ ಸರಿಯಾದ ಮಾರ್ಗದಲ್ಲಿ ಇದ್ದು ಮಾಡಬೇಕು .

ಸರಿಯಾದ ಪ್ರಯತ್ನ ಮಾಡಬೇಕು .

ಏಕಾಗ್ರತೆಯಿಂದ ಮಾಡಬೇಕು .

ಸರಿಯಾದ ಬುದ್ದಿಯಲ್ಲಿ ಶುದ್ಧತೆ ತಂದುಕೊಳ್ಳಬೇಕು.


ಮನುಷ್ಯನ ದುಃಖಕ್ಕೆ ಆಸೆಯೇ ಕಾರಣ ಎಂದು ಹೇಳಿದ . ಅದು ಸ್ವಲ್ಪ ಗಿಂಡಲಕ್ಕೆ ಈಡಾಗಿತ್ತು .

ಬುದ್ಧ ಅನ್ನೋದು ಬಿರುದು . ಯಾವುದೇ ವ್ಯಕ್ತಿ ಜ್ಞಾನಿಯಾದರೆ ಬುದ್ಧ ಎಂದು ಕರೆದರು.

ನಮ್ಮ ವೈಧಿಕ ಮಾರ್ಗವನ್ನು ಹಿಂದೆ ಸರಿಸಿ ಬುದ್ಧ ದರ್ಶನವನ್ನು ಸಿದ್ದಾರ್ಥ ನಿಲ್ಲಿಸಿದ್ದ.


ಸಿದ್ದಾರ್ಥ ತಾನೇ ಸತ್ಯವನ್ನು ಕಂಡುಹಿಡಿದುಕೊಳ್ಳುವುದಾಗಿ ಪ್ರಯತ್ನ ಪಟ್ಟ. ಅವನಿಗೆ ಗುರು ಇರಲಿಲ್ಲ.

ಆತ್ಮ ಅಂದರೆ ಏನು . ಯಾವುದು ನಿತ್ಯ ಯಾವುದು ಅಶಾಶ್ವತ ಅನ್ನೋದು ನಿತ್ಯ ವಿಚಾರ ಮಾಡಿಲ್ಲ ಅದಕ್ಕೆ ನಮಗೆ ದುಃಖ ಜಾಸ್ತಿ . ಅದು ಗೊತ್ತಾದರೆ ಜ್ಞಾನಿ ಎಂದು ತಿಳಿಯುವುದು .


ಬೌದ್ಧ ದರ್ಶನ ಭಾರದಲ್ಲಿ ಉಳಿಯಲೇ ಇಲ್ಲ. ಬೇರೆ ಕಡೆಯೂ ಕೂಡ ಉಳಿಲಿಲ್ಲ ಯಾಕೆ ಅಂದ್ರೆ ಆತ್ಮತತ್ವನ್ನು ಒಪ್ಪಿರಲಿಲ್ಲ . ಮನಸ್ಸೇ ಎಲ್ಲವೂ ಎನ್ನೋ ವಾದ ಅವರದ್ದಾಗಿತ್ತು . ವೇದವನ್ನು ಮಾನ್ಯತೆ ಮಾಡಿರದೆ ಇರೋದ್ರಿಂದ ಬುದ್ಧನ ವಾದವನ್ನು ನಾಸ್ತಿಕ ವಾದ ಎಂದು ಹೇಳುತ್ತಿದ್ದರು .


ಪುನರ್ಜನ್ಮದಲ್ಲಿ ನಂಬಿಕೆ ಇತ್ತು ಆದರೆ ಆತ್ಮಕ್ಕೆ ಬೆಲೆ ಕೊಡದೆ ಇದ್ದಿದ್ದು , ವೇದವನ್ನು ತಿರಸ್ಕಾರ ಮಾಡಿರೋ ಕಾರಣ ಬೌದ್ಧ ದರ್ಶನ ನಿಲ್ಲುವುದಕ್ಕೆ ಆಗಲಿಲ್ಲ .

ಬುದ್ಧ ಅಹಿಂಸೆಯನ್ನು ನಂಬಿದ್ದ ಆದರೆ ಅವನ ಅನುಯಾಯಿಗಳು ಮಾಂಸ ತಿನ್ನುತ್ತಿದ್ದರು . ಅದಕ್ಕೆ ಪ್ರಖ್ಯಾತಿ ಆಗಲಿಲ್ಲ, ಬಿದ್ದು ಹೋಯ್ತು .     

 

Monday, November 28, 2022

Nov 28, 2022 - Notes

 ಶಂಕರಾಚಾರ್ಯರು ಯಾವಾಗಲೂ ವೇಗವಾಗಿ ನಡೆಯುತ್ತಿದ್ದರು. 

೮ ನೇ ಶತಮಾನದಲ್ಲಿ ಹೆಂಡ ಸೇಂಧಿ ಸಾರಾಯಿ ಅಂಗಡಿ ಊರಿನ ಒಳಗೆ ಇರುತ್ತಿರಲಿಲ್ಲ.

ಒಂದು ಸಾರಿ ಶಿಷ್ಯರಿಗೆ ಅವರ ದೇಹ ಶಕ್ತಿಯ ಬಗ್ಗೆ ತೋರಿಸಿಕೊಟ್ಟರು .

ಒಂದು ಸಾರಿ ಶಿಷ್ಯರು ಏನು ಮಾಡುತ್ತಾರೆ ನೋಡೋಣ ಎಂದುಕೊಂಡು , ದೊಡ್ಡ ಮಡಕೆ ಸಾರಾಯಿ ಕುಡಿದ ಮೇಲೆ ತಮ್ಮ ಶಿಷ್ಯರ ಮನಸ್ಸಿನಲ್ಲಿ ಆದ ಬದಲಾವಣೆ ತಕ್ಷಣ ತಿಳಿದುಕೊಳ್ಳುತ್ತಿದ್ದರು. ಶಿಷ್ಯರಿಗೂ ಕುಡಿಯುವ ಮನಸ್ಸು ಬಂದಿದ್ದು ತಿಳಿಯಿತು .

ಎರಡನೇ ಸಾರಿ ಕಬ್ಬಿಣದ ರಸ ಕುಡಿದ ಮೇಲೆ ಹಿಂದೆ ತಿರುಗಿ ಶಿಷ್ಯರ ಕುರಿತು ಹೇಳುತ್ತಾರೆ ಕಣ್ಣೂ ಮುಚ್ಚಿ ಒಬ್ಬರನ್ನು ಅನುಸರಿಸಬಾರದು ಎಂದು. ವಿಧ್ಯೆ ಕಲಿತು ಸ್ವಂತ ಬುದ್ದಿ ಉಪಯೋಗಿಸಬೇಕು ಎಂದು ಅವರ ನಡತೆಯಿಂದ ಪಾಠ ಮಾಡಿದರು. ಅತಿಮಾನುಶರು ಎಂದು ಆಗ ಶಿಷ್ಯರು ತಿಳಿದರು.


ರಾಮಾಯಣ ಮಹಾಭಾರತ ವೇದ ಪುರಾಣ ನಿತ್ಯಕ್ಕೆ ಓದುವ ಬರೆಯುವ ಅಭ್ಯಾಸ ಮಾಡಬೇಕು.

ನಮ್ಮ ಮಕ್ಕಳು ನಮ್ಮ ಪ್ರತಿಬಿಂಬವಾದ್ದರಿಂದ ನಮ್ಮ ಒಳ್ಳೆಯತನವನ್ನು ಪಾಲಿಸುವರು.


ಕೆಲವು ದಾರ್ಶನಿಕರು ವೇದವನ್ನು ಮಾನ್ಯತೆ ಮಾಡುತ್ತಿರಲಿಲ್ಲ. ಜನರ ಜೀವನ ಹದಗೆಟ್ಟಿತ್ತು. ಸುಸ್ಥಿತಿಗೆ ತರುವ ಸಮಯ ಬಂದಿತ್ತು. ಸನಾತನ ಧರ್ಮ ನಶಿಸಿ ಹೋಗುತಿತ್ತು.   

ಕಾಪಾಲಿಕರು ತಲೆ ಬುರುಡೆಯಲ್ಲಿ ಊಟ ಮಾಡುತಿದ್ದರು.  

ಚಾರುವಾಕರು ದೇವರು ಇಲ್ಲವೇ ಇಲ್ಲ ಎಂದು ನಂಬುವ ಹಾಗೆ ಭಾಷಣ ಮಾಡಿದ.

ಅವನನ್ನು ಹೇಗೆ ಅಷ್ಟು ಚೆನ್ನಾಗಿ ಮಾತನಾಡಿದೀಯ ಎಂದು ಕೇಳಿದಾಗ ದೇವರ ದಯೆ ಎಂದು ಉತ್ತರಿಸಿದ.

ಅಜ್ಞಾನ / ಅವಿಧ್ಯೆಯಿಂದ ಹೀಗೆ ಜನರಿಗೆ ಆಗುತ್ತದೆ .

ಪ್ರತಿಯೊಂದನ್ನು ನಮ್ಮ ಮನಸ್ಥಿತಿಗೆ ತಕ್ಕಂತೆ ಗೋಚರವಾಗುತ್ತದೆ.

ಚಾರುವಾಕರ ಸಿದ್ದಂತ ಚೆನ್ನಾಗಿ ತಿನ್ನು ಕುಡಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸು. ಬೇರೆಯವರ ಬಗ್ಗೆ ಯೋಚಿಸಬೇಡ, ದೇವರು ಇಲ್ಲ, ಕರ್ಮ ಇಲ್ಲ,  ಸ್ವರ್ಗ ನರಕ ನಂಬಬೇಡಿ, ಆತ್ಮ ಇಲ್ಲ , ಅಪರ ಕರ್ಮ ಮಾಡಬೇಡಿ. ಪುನರ್ಜನ್ಮ ಇಲ್ಲ ಅಂತ ಹೇಳಿ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು.

ಚಾರುವಾಕರು ಪಂಚಬೂತಗಳಿಂದ ಮನುಷ್ಯನ ಶರೀರವು ಆಗಿಲ್ಲ ಎಂದು ಹೇಳುತ್ತಿದ್ದರು . 

ಕಣ್ಣಿಗೆ ಕಾಣದ್ದನ್ನು ನಂಬುವವರಲ್ಲ ( ಉದಾ : ಆಕಾಶ ). ಅವರ ಸಿದ್ದಂತ ಏನು ಅಂದರೆ ಸಾಲ ಆದರು ತುಪ್ಪ ತಿನ್ನು ಎಂದು ಹೇಳುತ್ತಿದ್ದರು. ಒಬ್ಬರಿಗೆ ಮೋಸ ಮಾಡಿದರೆ ಕರ್ಮ ಬರುತ್ತೆ , ನರಕ ಅನುಭವಿಸುತ್ತೀನಿ ಎಂಬುದು ತಳ್ಳಿಹಾಕಿದ್ದರು . ಯಮ ನಿಯಮ ( ನಾವೇ ಹಾಕಿಕೊಳ್ಳುವ ನಿಯಮ ) ನನ್ನ ಮುಂದಿನ ಜನ್ಮಕ್ಕೆ ಮತ್ತು ನನ್ನ ಮುಂದಿನ ಜನಾಂಗಕ್ಕೆ ಒಳ್ಳೇದಾಗ್ಬೇಕು.

ಗಾದೆ : ಹಾಲು ಕುಡಿದು ಬದುಕುವವರೇ ಬದುಕಲ್ಲ ಇನ್ನು ವಿಷ ಕುಡಿದು ಬದುಕುವುದುಂಟೆ ?


ಆ ೮ನೆ ಶತಮಾನದಲ್ಲಿ ಎಲ್ಲಾ ದಾರ್ಶನಿಕರು ಸಹ ಚಾರುವಾಕ ಸಿದ್ದಂತವನ್ನು ಒಪ್ಪುತ್ತಿರಲಿಲ್ಲ . ಅದೊಂದು ತುಂಬಾ ಒಳ್ಳೆಯದು ನಡೀತಿತ್ತು.

Sunday, November 27, 2022

Nov 27 , 2022 - Learnings

 ಗುರು ಅಂದರೆ ಅರ್ಥ ಏನು ? 

ಅಂಧಕಾರವನ್ನು ತೆಗೆಯುವವನು. ಗುರುವಿನಲ್ಲಿ ಇರುವ ಜ್ಞಾನ ಪ್ರಕಾಶ ನಮಗೆ ಬೇಕು. ನಿತ್ಯವೂ ಅಭ್ಯಾಸದಲ್ಲಿ ಇದ್ದರೆ ಅಹಂಕಾರ ನಿರ್ಮೂಲನೆ ನಮ್ಮೊಳಗೇ ಆಗುವ ವಿಷಯ. 

ಸಾಧನೆ ಮಾಡಬೇಕು 

ಹೆಚ್ಚು ಸಮಯ ಅದಕ್ಕೆ ಮೀಸಲಾಗಿಡಬೇಕು.

ದಕ್ಷಿಣೆ ಅನ್ನೋದು ವ್ಯವಹಾರವಾಗಿಬಿಟ್ಟಿದೆ. ಅದು ತಪ್ಪು .

ನಮ್ಮ ಆತ್ಮಪರೀಕ್ಷೆ ನಿತ್ಯ ಮಾಡಿಕೊಳ್ಳಬೇಕು. ಲೌಕಿಕ ವ್ಯವಹಾರದಲ್ಲಿ ನಿನ್ನೆಗಿಂತಲೂ ಚೆನ್ನಾಗಿ ಇದ್ದನಾ ? ದುಷ್ಟರ ತರಹ ನಡೆದುಕೊಂಡಿದ್ದಾರೆ ನಾಳೆ ಅದನ್ನು ಸರಿಪಡಿಸಿಕೊಳ್ಳಬಹುದಾ ಎಂದು ಆಲೋಚಿಸಬೇಕು.


ಧ್ಯಾನ ಮಾಡುವಾಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ? ಮಾಡಬಹುದು 


ದಾನದಿಂದ ಕರ್ಮ ನಾಶ ಚಿತ್ತ ಶುದ್ಧವಾಗುತ್ತದೆ .

ಗೃಹಸ್ಥಾಶ್ರಮದಲ್ಲಿರುವವರು ಇನ್ನಿತರ ಮೂರು ಆಶ್ರಮವನ್ನು ಕಾಪಾಡಬೇಕು.

ಬ್ರಹ್ಮಚರ್ಯಾಶ್ರಮ 

ಸನ್ಯಾಸಾಶ್ರಮ ಮತ್ತು 

ವಾನಪ್ರಸ್ಥಾನಾಶ್ರಮ 

       

ಸಮಸ್ಯೆಗಳು ಬಂದರೆ ಪ್ರಾರಭ್ದದಿಂದಲೇ ಎಂದು ತಿಳಿದು ಅದನ್ನು ಬಗೆಹರಿಸಿಕೊಳ್ಳಬೇಕು .

ಹೆಚ್ಚು ಕಷ್ಟಗಳು ಬಂದರೆ ಅದನ್ನು ಹೆಚ್ಚು ಹೆಚ್ಚು ಬಗೆಹರಿಸಿಕೊಳ್ಳುವುದನ್ನು ಕಲಿಯುತ್ತೇವೆ .


ಉದಾಹರಣೆ : ಜನಿವಾರ ನಾವೇ ನಾವಾಗಿ ಬಿಡಿಸಿಕೊಳ್ಳುವುದು.

Notes Nov 26 2022 - Adishankaracharya group 5

 ಈಶ್ವರ ಮತ್ತು ವಿಷ್ಣು ಚರ್ಚೆ ಮಾಡಿ ೪ ಮಾರ್ಗಗಳನ್ನು ಭೂಲೋಕದ ಸಮಸ್ಯೆಗೆ ಪರಿಹಾರವಾಗಿ ಕೊಟ್ಟರು 

ಕರ್ಮ ಮಾರ್ಗ - ಸುಬ್ರಹ್ಮಣ್ಯ ಅಧಿಪತಿ 

ಧ್ಯಾನ ಮಾರ್ಗ - ಪತಾಂಜಲಿ ಮಹರ್ಷಿ 

ಸಂಕೀರ್ತನ ಅಥವಾ ಉಪಾಸನಾ ಮಾರ್ಗ 

ಜ್ಞಾನ ಮಾರ್ಗ - ಆದಿಶಂಕರಾಚಾರ್ಯರು 

 

ಯೋಚನೆ ಬೇಡ 

ಆಲೋಚನೆ ಮಾಡಿ 


ಒಬ್ಬನೇ ಮಾಡುವುದು ಯೋಚನೆ 

ಜೊತೆಗೆ ಮಾಡುವುದು ಆಲೋಚನೆ 


ಚರ್ಚೆ ಮಾಡಿದರೆ ಪರಿಹಾರ 

ವಾದ ವಿವಾದ ಮಾಡಿದರೆ ಪರಿಹಾರ ಸಿಗುವುದಿಲ್ಲ 


ಕಲಿಯುವುದು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ 

ಕಲಿತಿರುವುದನ್ನು ಅಳವಡಿಸಿಕೊಳ್ಳಲು ತುಂಬಾ ಸಮಯವಾಗುತ್ತದೆ 


ಭಾರತದ ದಕ್ಷಿಣ ದಿಕ್ಕು - ಕೇರಳ ರಾಜ್ಯ - ಕಾಲಟಿ ಪ್ರಾಂತ್ಯ ( ಹಸಿರು ಕೂಡಿದ ವಾತಾವರಣ )

ದೇವರ ಜಾಗ ಎಂದೇ ಕರೆದುಕೊಳ್ಳುವ ಜಾಗ .


ಷಟ್ಕರ್ಮ ವೇದಾಧ್ಯಯನ ಸಕಲ ವಿದ್ಯಾ ಪಾರಂಗತರ ಮಗ ಶಿವಗುರು 

ತಂದೆಯ ಗುರುಕುಲದಲ್ಲಿ ೧೨ ವರ್ಷ ವೇದಾಧ್ಯಯನ 

ಮದುವೆ ವಯಸ್ಸಿನಲ್ಲಿ ದೈವಭಕ್ತೆ ಆರ್ಯಾಂಬ ಎಂಬ ಸುಂದರ ಹುಡುಗಿಯೊಂದಿಗೆ ವಿವಾಹ .

ಶಿವಗುರು - ಆರ್ಯಾಂಬ ಮನೆಯಲ್ಲಿ ನಿತ್ಯ ವೇದಾಭ್ಯಾಸ, ಸಾವಿರಾರು ಪಂಡಿತರು ಮನೆಗೆ ಬಂದುಹೋಗುವ ವಾತಾವರಣ. ಸತ್ಸಂಘ .

ಹಲವಾರು ವರ್ಷ ಮಕ್ಕಳಿಲ್ಲದ ಹಲವಾರು ವರ್ಷ ದುಃಖದಲ್ಲೇ ಕಳೆದರು.

ಶಿವನನ್ನು ಆರಾಧನೆ ಮಾಡುವುದಾಗಿ ಚರ್ಚೆ ನಡೆಯಿತು .

೪೮ ದಿವಸಗಳ ಮಂಡಲ  ನಡೆಯುತ್ತದೆ - ಶಿವನ ಜಪ ತಪ ಹೋಮ ಹವನ ಅನ್ನಸಂತರ್ಪಣೆ .

ಈಶ್ವರ ಸಂತೃಪ್ತನಾಗಿ ಅಲ್ಪಾಯುಷಿಯಾದ ಸರ್ವಜ್ಞ ಬೇಕೋ ಅಥವಾ ದೀರ್ಘಾಯುಷಿಯಾದ ದುರಾಚಾರಿ ಲೋಕಕಂಟಕ ದುರುಳ ಬೇಕೋ ಎಂದು  ಕೇಳಿದಾಗ ಶಿವಗುರು  ಅಲ್ಪಾಯುಷಿಯನ್ನೇ ಕೇಳುತ್ತಾನೆ .

ಲೋಕಕಲ್ಯಾಣಕ್ಕೆ ಆ ಮಗುವಿನ ಜನನವಾಗುತ್ತದೆ .

Friday, July 1, 2022

Gayathri Mantra significance

 *#ಗಾಯತ್ರೀ_ಮಂತ್ರದ_ಮಹತ್ವ*

🙏 ಮಕ್ಕಳಿಗೆ ಬ್ರಹ್ಮೋಪದೇಶದಲ್ಲಿ ತಂದೆ ಗುರಸ್ಥಾನದಲ್ಲಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾರೆ. ಗಾಯತ್ರೀ ಮಂತ್ರೋಪದೇಶ ಪಡೆಯದಿದ್ದರೆ ಯಾವದೇ ಪೂಜೆ ಪುನಸ್ಕಾರ , ಕರ್ಮ ಏನೂ ಮಾಡಲು ಅಧಿಕಾರವಿಲ್ಲ ಅದಕ್ಕಾಗಿಯೇ ಮೊದಲು ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡುತ್ತಿದ್ದರು. ಆದರೆ ಈಗ ಬರೀ ಆಡಂಬರಕ್ಕೆ ಮಹತ್ವ , ಕೆಲವರಂತೂ ಮದುವೆ ಮುಂದೆ ಮಾಡಿದರಾಯಿತು ಅನ್ನುವವರು ಇದ್ದಾರೆ. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು.... ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆ ದಿಂದ ದೈಹಿಕ ,ಮಾನಸಿಕ ವಿದ್ಯೆ ಬುದ್ಧಿ ಏಲ್ಲದರಲ್ಲೂ ತೆಜಸ್ಸನ್ನು ಪಡಿತಾರೆ.... ಈ ಪೋಸ್ಟ ಇಷ್ಟವಾದರೆ ಶೇರ ಮಾಡಿ ಕಾಫಿ ಪೇಸ್ಟ ಬೇಡ... ವಿಶ್ವಾಮಿತ್ರ ಮಹರ್ಷಿ ಗಳೇ ಹೇಳುವಂತೆ ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು.. ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ... ಗಾಯತ್ರ್ಯಾಃ ನ ಪರಂಜಪ್ಯಂ ಗಾಯತ್ರ್ಯಾಃ ನ ಪರಂ ತಪಃ l ಗಾಯತ್ರ್ಯಾಃ ನ ಪರಂ ದ್ಯೇಯಂ ಗಾಯತ್ರ್ಯಾಃ ನ ಪರಂ ಹುತಃ ll #ಅರ್ಥಾತ ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ .. #ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು .... ಸ್ನೇಹಿತರೇ ಅದನ್ನು ಬಿಡಿಸಿ ಹೇಳುತ್ತೇನೆ ಕೇಳಿ... ಗಾಯತ್ರೀ ಮಹಾ ಮಂತ್ರ.... ಓಂ ಭೂರ್ಭುವಸ್ಸುವಃ ತತ್ಸುವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌ 1ತ 2 ತ್ಸ 3 ವಿ 4 ತು 5 ರ್ವ 6 ರೇ 7 ಣಿ 8 ಯಂ 9 ಭ 10 ರ್ಗೋ 11 ದೇ 12 ವ 13 ಸ್ಯ 14 ಧೀ 15 ಮ 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 ದ 24 ಯಾತ್.... ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ ಅಂತ ಬಿಡಿಸಿ ಹೇಳುತ್ತೇನೆ ಕೇಳಿ ಮೊದಲನೇ ಅಕ್ಷರ ಕಾರ ಇದು ಅಂದಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ.. #ಓಂಏಕದಂತಾಯ_ವಿದ್ಮಹೇ_ವಕ್ರತುಂಡಾಯ_ಧಿಮಹೀ_ತನ್ನೋದಂತೀ_ಪ್ರಚೋದಯಾತ್ ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ #ಓಂ_ಉಗ್ರನೃಸಿಂಹಾಯ_ವಿದ್ಮಹೇ_ವಜ್ರನಖಾಯ____ಧೀಮಹಿ_ತನ್ನೋ_ನೃಸಿಂಹ_ಪ್ರಚೋದಯಾತ್ ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ #ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯ___ಧೀಮಹಿ_ತನ್ನೋ_ವಿಷ್ಣುಃ_ಪ್ರಚೋದಯಾತ್ ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ #ತತ್ವುರುಷಾಯ_ವಿದ್ಮಹೇ_ಮಹಾದೇವಾಯ_ಧೀಮಹಿ_ತನ್ನೋ_ರುದ್ರಃ_ಪ್ರಚೋದಯಾತ್ ಐದು ಅಕ್ಷರ * ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ. #ದೇವಕಿನಂದಾಯ_ವಿದ್ಮಹೇ_ವಸುದೇವಾಯ_ಧೀಮಹಿ_ತನ್ನೋ_ಕೃಷ್ಣ_ಪ್ರಚೋದಯಾತ್ ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ #ಓಂ_ವೃಷಭಾನುಜಾಯ_ವಿದ್ಮಹೇ_ಕೃಷ್ಣಪ್ರೀಯಾಯ_ಧೀಮಹಿ_ತನ್ನೋ_ರಾಧಾ_ಪ್ರಚೋದಯಾತ್ ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ. #ಓಂ_ಮಹಾಲಕ್ಷೀ_ಚ_ವಿದ್ಮಹೇ_ವಿಷ್ಣುಪತ್ನಿ_ಚ_ಧೀಮಹಿ_ತನ್ನೋ_ಲಕ್ಷೀ_ಪ್ರಚೋದಯಾತ್ ಏಂಟು ಅಕ್ಷರ * ಯಂ.* ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ ಇದು ಅಗ್ನಿ ಗಾಯತ್ರೀ #ಓಂ_ಮಹಾಜ್ವಾಲಾಯ_ವಿದ್ಮಹೇ_ಅಗ್ನಿಜ್ವಾಲಾಯಧೀಮಹಿ_ತನ್ನೋಅಗ್ನಿ_ಪ್ರಚೋದಯಾತ ಒಂಬತ್ತು ಅಕ್ಷರ * ಭ *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ #ಓಂ_ಸಹಸ್ರನೇತ್ರಾಯ_ವಿದ್ಮಹೇ_ವಜ್ರನಖಾಯ__ಧೀಮಹಿ_ತನ್ನೋ_ಇಂದ್ರಃ_ಪ್ರಚೋದಯಾತ್ ಹತ್ತು ಅಕ್ಷರ *ರ್ಗೋ*ಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ #ಓಂ_ಸರಸ್ವತ್ತೈ_ಚ_ವಿದ್ಮಹೇ_ಬ್ರಹ್ಮಪತ್ನಿ_ಚ_ಧೀಮಹಿತನ್ನೋ_ವಾಣಿ_ಪ್ರಚೋದಯಾತ್ ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ.. #ಓಂ_ಗಿರಿಜಾಯೈ_ವಿದ್ಮಹೇ_ಶಿವಪ್ರೀಯಾಯೈ______ಧೀಮಹಿ_ತನ್ನೋ_ದುರ್ಗಾ_ಪ್ರಚೋದಯಾತ್ ಹನ್ನೆರಡು ಅಕ್ಷರ * ವ *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ #ಓಂ_ಅಂಜನಾಸುತಾಯ_ವಿದ್ಮಹೇ_ವಾಯುಪುತ್ರಾಯ_ಧೀಮಹಿ_ತನ್ನೋ_ಆಂಜನೇಯ_ಪ್ರಚೋದಯಾತ್ ಹದಿಮೂರು ಅಕ್ಷರ * ಸ * ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ #ಓಂ_ಪೃಥ್ವಿದೇವೈ_ವಿದ್ಮಹೇ_ಸಹಸ್ರಮೂರ್ತೈ_____ಧೀಮಹೆ_ತನ್ನೋ_ಪೃಥ್ವಿ_ಪ್ರಚೋದಯಾತ್ ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ... ಇದು ಸೂರ್ಯ ಗಾಯತ್ರೀ #ಓಂಭಾಸ್ಕರಾಯವಿದ್ಮಹೇದಿವಾಕರಾಯಧೀಮಹಿತನ್ನೋಸೂರ್ಯಃಪ್ರಚೋದಯಾತ್ ಹದಿನೈದು ಅಕ್ಷರ * ಮ* ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ.... #ಓಂ_ದಾಶರಥಾಯ_ವಿದ್ಮಹೇ_ಸೀತಾವಲ್ಲಭಾಯ_ಧೀಮಹಿ_ತನ್ನೋರಾಮಃ_ಪ್ರಚೋದಯಾತ್ ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ #ಓಂ_ಜನಕನಂದಿನ್ನೈ_ವಿದ್ಮಹೇ_ಭೂಮಿಜಾಯೈ__ಧೀಮಹಿ_ತನ್ನೋ_ಸೀತಾ_ಪ್ರಚೋದಯಾತ್ ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ #ಓಂ_ಕ್ಷೀರಪುತ್ರಾಯ_ವಿದ್ಮಹೇ_ಅಮೃತತತ್ವಾಯ__ಧೀಮಹಿ_ತನ್ನೋ_ಚಂದ್ರಃ_ಪ್ರಚೋದಯಾತ್ ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ.. #ಓಂ_ಸೂರ್ಯಪುತ್ರಾಯ_ವಿದ್ಮಹೇ_ಮಹಾಕಾಲಾಯ_ಧೀಮಹಿ_ತನ್ನೋ_ಯಮಃ_ಪ್ರಚೋದಯಾತ್ ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ #ಓಂ_ಚತುರ್ಮುಖಾಯ_ವಿದ್ಮಹೇ_ಹಂಸರೂಢಾಯಧೀಮಹಿ_ತನ್ನೋ_ಬ್ರಹ್ಮ_ಪ್ರಚೋದಯಾತ್ ಇಪ್ಪತ್ತನೇಯ ಅಕ್ಷರ * ನ *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ್ ಗಾಯತ್ರೀ #ಓಂ_ಜಲಬಿಂಬಾಯ_ವಿದ್ಮಹೇ_ನೀಲಪುರುಷಾಯಧೀಮಹಿ_ತನ್ನೋ_ವರುಣ_ಪ್ರಚೋದಯಾತ್ ಇಪ್ಪತ್ತೊಂದು ಅಕ್ಷರ * ಪ್ರ * ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ #ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯಧೀಮಹಿ_ತನ್ನೋ_ನಾರಾಯಣ_ಪ್ರಚೋದಯಾತ್ ಇಪ್ಪತ್ತೇರಡು ಅಕ್ಷರ ಚೋ ಕಾರ #ಓಂ_ವಾಗೀಶ್ವರಾಯ_ವಿದ್ಮಹೇ_ಹಯಗ್ರೀವಾಯ_ಧೀಮಹಿ_ತನ್ನೋ_ಹಯಗ್ರೀವಃ_ಪ್ರಚೋದಯಾತ್ ಇಪ್ಪತ್ತಮೂರು ಅಕ್ಷರ * ದ * ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ #ಓಂ_ಪರಮಹಂಸಾಯ_ವಿದ್ಮಹೇ_ಮಹಾಹಂಸಾಯಧೀಮಹಿ_ತನ್ನೋ_ಹಂಸಃ_ಪ್ರಚೋದಯಾತ್ ಇಪ್ಪತ್ತನಾಲ್ಕು ಅಕ್ಷರ * ಯಾತ್* ಕಾರ ತ್ರಿಮೂರ್ತಿಗಳ ಪ್ರಸಾರ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌.... #ಓಂ_ತುಲಸ್ಮೈ_ವಿದ್ಮಹೇ_ವಿಷ್ಣುಪ್ರೀಯಾಯೈ____ಧೀಮಹಿ_ತನ್ನೋ__ಬೃಂದಾ__ಪ್ರಚೋದಯಾತ್ ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ..... ಇನ್ನು ಸಂದ್ಯಾವಂದನೆ ಸಮಯದ ಬಗ್ಗೆ ತಿಳಿಸಿ ಕೊಡುತ್ತೇನೆ ಸಂಧ್ಯಾವಂದನೆ ಸಮಯ ಮತ್ತು ಮಹತ್ವ..... ಶ್ಲೋಕ ll ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ l ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ ll ...... .ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರ ಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭಮಾಡಿ ಸುರ್ಯೋದಯವಾಗುವವರೆಗೆ ಮುಗಿಸುವದು ಉತ್ತಮ ಪರ್ಯಾಯ . ಸಂಧೌಭವಾಸಂಧ್ಯಾ ಎಂಬ ಅವಯವಾರ್ಥದ ಪ್ರಕಾರ ‌ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು * ಸಂಧ್ಯಾ* ಎನಿಸಿಕೊಳ್ಳುವದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು.ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ *ಸತ್ವಗುಣ * ಎನಿಸಿಕೊಳ್ಳುವದು. ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವದರೊಳಗಾಗಿ ಸಂಧ್ಯಾವಂದನೆ ಯನ್ನು ಪುರೈಸುವದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆ ಯನ್ನು ಸತ್ವಗುಣಕಾಲವು ಮುಗಿಯುವದರೊಳಗಾಗಿ ಮುಗಿಸುವದು ಅಧಮ ಪರ್ಯಾಯ.. ಮಧ್ಯಾಹ್ನಿಕ ಸಂಧ್ಯಾಕಾಲ ------------------------------------------- ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ .ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರ ವೇ ಆಗಲಿ ಶ್ರೇಷ್ಠವಲ್ಲ... ಸಾಯಂ ಸಾಂಧ್ಯಾಕಾಲ ---------------------------------- ಶ್ಲೋಕ ll ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ l ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾll ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವದು ಅಧಮ. ಮಧ್ಯಾಹ್ನ ನಾಲ್ಕು ಘಂಟೆ ಯಿಂದ ರಾತ್ರಿ ಎಂಟು ಘಂಟೆಯವರೆಗೆ *ಸಾತ್ವಿಕ ಕಾಲ * ಎನಿಸಿಕೊಳ್ಳುವದು. ನಿರ್ದಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆ ಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತ ವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು. ಸಂಧ್ಯಾಕರ್ಮವನ್ನು ಆಚರಿಸದೆ ಇತರ ಯಾವ ದೇವತಾ ಪೂಜೆಯನ್ನಾಗಲೀ ,ದಾನ, ಧರ್ಮ ,ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.

Friday, January 14, 2022

ಶುದ್ಧ ಜ್ಞಾನ

 ಶುದ್ಧ ಜ್ಞಾನ-

-----------
ನಿತ್ಯವೂ ಅಕ್ಷರ ಅಭ್ಯಾಸವಿರಲು
ವೃದ್ಧಿಸುವುದೆನ್ನ ಆತ್ಮಾವಲೋಕನ
ಶುದ್ಧ ಜ್ಞಾನ ಮೇಲೇರುತಿರಲು
ನಿತ್ಯವೂ ಅಹಂಕಾರದ ಅಧ:ಪತನ
-ಸುಬ್ಬು ಪದ್ಮನಾಭ