Wednesday, December 14, 2022

8. Adishankara - Kannada Notes.

 ಕನಕಧಾರಾ ಸ್ತೋತ್ರದಿಂದ ಒಂದು ಬಡ ಮನೆಯ ಉದ್ದಾರವಾದ ಉದಾಹರಣೆ ನೋಡಿದೀವಿ . 

ಆ ಬಾಲಕ ಈಶ್ವರನ ಅವತಾರವೇ ಎಂದು ನಿಶ್ಚಿತವಾಯಿತು 

೧೨ ವರ್ಷದ ವೇದ ವಿಧ್ಯಾಭ್ಯಾಸವನ್ನು ೨ ವರ್ಷಕ್ಕೆ ಮುಗಿಸಿದ ಬಾಲಕ .

ಮನೆಯಲ್ಲೇ ಗುರುಕುಲ ಆರಂಭ ಮಾಡಿ ಪಾಠ ಪ್ರವಚನ ಮುಂದುವರಿಯುತ್ತಾ ಬರುತ್ತೆ . 

ಸಣ್ಣ ಗುರುಕುಲವಾಗಿ ಆರಂಭವಾಗಿ ದೊಡ್ಡ ವಿಶ್ವವಿದ್ಯಾನಿಲಯವಾಗಿ ಬೆಳೆಯುತ್ತೆ.ಆಗ ಶಂಕರರಿಗೆ ೭ ವರ್ಷ.

ನಮ್ಮ ಬಗ್ಗೆ ಗರ್ವ ಅಹಂಕಾರ ಬೆಳೆಯುತ್ತೆ ಆದರೆ ಅಷ್ಟು ದೊಡ್ಡ ಪಾಂಡಿತ್ಯ ಹೊಂದಿದ್ದ ಶಂಕರರಿಗೆ ಅದು ಇರಲಿಲ್ಲ. ರಾಜ ಸನ್ಮಾನಿಸಲು ಕರೆದಾಗ ವಿನಯಪೂರ್ವಕವಾಗಿ ತಿರಸ್ಕರಿತ್ತಾರೆ.

ಆಡಂಬರದ ಜೀವನ ಲೌಕಿಕ ಜೀವನದಲ್ಲಿ ಇಷ್ಟವಿರಲಿಲ್ಲ. ಸನ್ಯಾಸ ಮಾರ್ಗಕ್ಕೆ ಅರ್ಪಿಸಿಕೊಳ್ಳುತ್ತಿದ್ದರು.

ತಾಯಿಗೆ ಕಷ್ಟ ಪಡಬಾರದು ಎಂದು ಗಾಯತ್ರಿ ಜಪ ಮತ್ತು ವೇದಾಮಾತ್ರವನ್ನು ಸಮರ್ಪಿಸಿ ತನ್ನ ತಪಶಕ್ತಿಯಿಂದ ಪೂರ್ಣ ನದಿಯು ಹರಿಯುವ ದಿಕ್ಕನ್ನೇ ಬದಲಿಸಿ ತಾಯಿಯ ಕಷ್ಟ ನಿವಾರಣೆ ಮಾಡುತ್ತಾರೆ.


ಭಾರತ ವೇದ ಭೂಮಿ. ವೇದವನ್ನು ಉಳಿಸೋದಕ್ಕೆ ಬೇರೆ ದೇಶದಿಂದ ಭಾರತಕ್ಕೆ ಜನ ಬರುತ್ತಿದ್ದರು.

ವೇದ ಅಂದರೆ ಸಾಮಾನ್ಯ ಜ್ಞಾನ ಅಲ್ಲ , ವಿಶೇಷ ಜ್ಞಾನ.

ಇದು ಮನುಷ್ಯರು ಕೊಟ್ಟಿದ್ದಲ್ಲ. ದೇವರಿಂದ ಬಂದಿರೋ ಜ್ಞಾನ. ಋಷಿ ಮುನಿಗಳು ತಪಸ್ಸಿಗೆ ಕುಳಿತಿದ್ದಾಗ ಕಣ್ಣಿಗೆ ಕಾಣಿಸಿ ಕಿವಿಗೆ ಬಿದ್ದಂತಹ ಸಂಸ್ಕೃತ ಭಾಷೆಯಲ್ಲಿರುವ ಭಾಷೆ . ಇದನ್ನೇ ವೇದಗಳು ಎಂದು ಕರೆಯುತ್ತೇವೆ. ಆಗಿನ ಕಾಲಕ್ಕೆ ಗುರು ಶಿಷ್ಯರ ಮೂಲಕ ಮೌಖಿಕವಾಗಿ ತಿಳಿಸಿದ ಜ್ಞಾನ. ಸಾವಿರಾರು ವರ್ಷ ಹೀಗೆ ಪರಂಪರೆಯಲ್ಲಿ ಬಂದಿದೆ ಅಂದರೆ ಆಗಿನ ಜನರ ನೆನಪಿನ ಶಕ್ತಿ ಮತ್ತು ಅರಿವು ಹೇಗಿತ್ತು ಎಂದು ತಿಳಿಯುತ್ತದೆ.

ವೇದ ನ್ನೊಂದು ವಿದ್ ಅನ್ನೋ ಧಾತುವಿನಿಂದ ಬಂದಿರೋದು.

ವೇದ - ಜ್ಞಾನ 

ಅನಂತವೈ ವೇದ: - ಜೀವ ಜಗತ್ತು ಮಂತ್ರ ಪೂಜೆ ಸಂಸ್ಕಾರ , ಅರೋಗ್ಯ ಶಸ್ತ್ರ ವಿಜ್ಞಾನ ಸಂಗೀತ  , ಯಂತ್ರ ಮಂತ್ರ ಎಲ್ಲವೂ ಜ್ಞಾನ.

ವೇದವನ್ನು ಕರ್ಮಖಾಂಡ ಮತ್ತು ಜ್ಞಾನ ಎಂಬ ಎರಡು ಭಾಗ ಮಾಡಿದ್ದಾರೆ .

ವೇದಾಂತ ಅಂದರೆ ಅಂತ್ಯದಲ್ಲಿ ಇರುವುದು. ಅದೇ ಉಪನಿಷತ್ ಅಥವಾ ವೇದಾಂತ.

ವೇದಗಳು ಅಪೌರುಷೇಯ ಅಂದರೆ ಋಷಿ ಮುನಿಗಳಿಂದ ಬಂದಿರುವ ಪರಮಾತ್ಮನ ಜ್ಞಾನ ಆದ್ದರಿಂದ ಅದಕ್ಕೆ ತಿದ್ದುಪಡಿ ಬೇಕಿಲ್ಲ .  ಹೇಗಿದೆ ಹಾಗೆ ಕಲಿತುಕೊಂಡರೆ ಸಾಕು ಜೀವನ ಸಾರ್ಥಕ .

No comments:

Post a Comment