೬ - ವೈಧಿಕ ಸಿದ್ದಂತಕ್ಕೆ ವಿರೋಧ ವ್ಯಕ್ತಿಪಡಿಸಿದವರು - ಚಾರುವಾಕ , ಬೌದ್ಧ ಮತ್ತು ಜೈನ .
ಜೈನರು ಅಹಿಂಸೆವಾದ , ವೈಧಿಕರಿಗೆ ತುಂಬಾ ವಿರುದ್ಧ ವ್ಯಕ್ತಪಡಿಸಿಲ್ಲ .
ಜೈನ ತೀರ್ಥಂಕರರು ನಮ್ಮ ಶಕ್ತಿ ದೇವತೆಗಳನ್ನು ಒಪ್ಪುತ್ತಿದ್ದರು.
ಜೈನ ಅಂದರೆ ಜಯಿಸು ಅಂತ .
ಏನನ್ನು ಜಯಿಸುವುದು ?
ನನ್ನನ್ನು ನಾನು .
ಸ್ಥಿತಪ್ರಜ್ಞತೆಗೆ ಒಟ್ಟು ಕೊಟ್ಟುವರು ಅವರಲ್ಲಿ ಕೂಡ ಇದ್ದರು.
ಜ್ಞಾನ ಎಲ್ಲಿಂದಲಾದರೂ ಬರಲಿ , ತೆಗೆದುಕೊಳ್ಳಬೇಕು .
ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದಲ್ಲಿ ನಂಬುತ್ತಿದ್ದರು.
ವೇದವನ್ನು ಮಾನ್ಯತೆ ಮಾಡಿದೆ ಇದ್ದ ಕಾರಣ ನಾವು ಅವರನ್ನು ನಾಸ್ತಿಕರು ಎಂದು ಕರೆಯುತ್ತೇವೆ .
ಮನುಷ್ಯನನ್ನೇ ದೇವರನ್ನಾಗಿ ನೋಡಬೇಕಾದರೆ ಮನಯೇವ ಮನುಷ್ಯಾಣಾಮ್ ಎಂಬಂತೆ ಸಮ್ಯಕ್ ದರ್ಶನ ವಾಗಿರಬೇಕು . ಮನಸ್ಸನ್ನು ಪೂರ್ತಿ ತಿಳಿಯಬೇಕು ಆಗಲೇ ಆಸಕ್ತಿ ಬಂದು ಆತ್ಮವಿಚಾರದಲ್ಲಿ ಆಸಕ್ತಿ ಕಂಡುಕೊಳ್ಳಬೇಕು. ಅಧ್ಯಯನ ಮಾಡಬೇಕು .
ವಿಧ್ಯೆಯಿಂದ ವಿನಯ ಬರಬೇಕು . ವಿನಯವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು . ಬರುವ ಹಣವನ್ನು ಧರ್ಮ ಮಾರ್ಗದಲ್ಲಿ ವ್ಯಯ ಮಾಡಬೇಕು .
ಮಾತೃಭಾಷೆಯಾದ ಮಲಯಾಳಂ ಮತ್ತು ಸಂಸ್ಕೃತವನ್ನು ಮಾತನಾಡುತ್ತಿದ್ದ ಶಂಕರ.
ಗುರುಕುಲದಲ್ಲಿ ಸಂಸ್ಕೃತ ವ್ಯಾಕರಣ ಕಾವ್ಯ ಪುರಾಣ ಎಲ್ಲವೂ ಸ್ವಂತ ಓದಿ ಅರ್ಥಮಾಡಿಕೊಳ್ಳುತ್ತಿತ್ತು ೩ ವರ್ಷದ ಮಗು. ಬೆಳಗ್ಗೆ ತಾನೀರು ಸ್ನಾನ , ಶುಭ್ರವಾದ ಬಟ್ಟೆ , ಹಣೆಗೆ ವಿಭೂತಿ , ಸ್ತೋತ್ರ ಪಾರಾಯಣ ಇದೆಲ್ಲ ನಿತ್ಯ ಮಾಡುತ್ತಿದ್ದ ಶಂಕರ.
ಶಂಕರ ಚಿಕ್ಕ ಮಗುವಾಗಿದ್ದಾಗಲೇ ಗುರುಗಳಿಂದ ಛಂದಸ್ಸು, ಅಲಂಕಾರ , ಕಾವ್ಯ ಎಲ್ಲಾ ಕಲಿತು ೫ ವರ್ಷಕ್ಕೆ ಬಂದಾಗ ಉಪನಯನವಾಯಿತು. ೫ ಕ್ಕೆ ಉಪನಯನ ಮಾಡಿದರೆ ಬ್ರಹ್ಮತೇಜಸ್ಸು ಉಂಟಾಗುವುದು ಎಂದು ಶಸ್ತ್ರ ಹೇಳುತ್ತದೆ.
ಶಂಕರನ ತಂದೆ ತೀರಿ ಹೋದ ಮೇಲೆ ತಂದೆಯ ಬಾಯಿಗೆ ನೀರು ಹಾಕಿ ನಾರಾಯಣ ನಾರಾಯಣ ಎಂದು ಹೇಳುತ್ತಾನೆ. ಪಕ್ಕದಲ್ಲಿ ಕುಳಿತು ಸ್ತೋತ್ರಗಳನ್ನು ಪಠಣ ಮಾಡಲು ಶುರುಮಾಡುತ್ತಾನೆ .
ಜೊತೆಗೆ ಪಂಡಿತರು ಸೇರಿ ಉಪನಿಷತ್ ಶುರುಮಾಡುತ್ತಾರೆ .
ಶಂಕರಾಚಾರ್ಯರು ಹುಟ್ಟುವುದಕ್ಕೆ ಮುಂಚೆ ಗರ್ಭದಲ್ಲೇ ಕಲಿತು ಬಂದವರ ಹಾಗೆ ಬದುಕುತ್ತಿದ್ದರು .
ನಾವೆಲ್ಲರೂ ಹೊರಗಿಂದ ಕಲಿಯಬೇಕು.
ವಿವೇಕಾನಂದರು ೧೯ನೆ ಶತಮಾನದಲ್ಲಿ ಹುಟ್ಟಿ ೮ ನೇ ಶತಮಾನದಲ್ಲಿ ಹುಟ್ಟಿದ ಶಂಕರಾಚಾರ್ಯರ ಬಗ್ಗೆ ಪೂರ್ತಿ ಅಧ್ಯಯನ ಮಾಡಿ ಅವರ ಬಗ್ಗೆ ಪ್ರಪಂಚದಲ್ಲೆಲ್ಲಾ ತಿಳಿಸಿಕೊಟ್ಟರು.
ಶಂಕರಾಚಾರ್ಯರು ಗುರುಗಳ ಹತ್ತಿರ ಹೋದಾಗಲೇ ಅವರಿಗೆ ಎಲ್ಲಾ ಪಾಠ ತಿಳಿದಿತ್ತು. ಗುರುಗಳ ಪಟ್ಟ ಕೂಡ ಬಯಸಲಿಲ್ಲ. ಅವರಿಗೆ ಅವರೇ ಗುರುಗಳು ಆದ್ದರಿಂದಲೇ ಜಗದ್ಗುರುಗಳಾದರು.
ಬುದ್ಧನಾಗಲಿ , ಶಂಕರಾಚಾರ್ಯರಾಗಲಿ ಪ್ರಪಂಚ ಕಂಡ ಅದ್ಭುತ ವ್ಯಕ್ತಿಗಳು, ದಿವ್ಯಾತ್ಮಗಳು
No comments:
Post a Comment