Wednesday, September 6, 2017

ಎಡರು

ಬದುಕೊಂದು ಅಲ್ಪಾವಧಿಗೆ 
ನಿನಗವನಿತ್ತ ಬಳುವಳಿ
ಹಿಂಸಿಸಿ ಕಾಡಿಸಿ ಬೇಡಿಸಿ 
ಅಂತ್ಯಮಾಡುವುದ ಹಳಿ 
ಎದುರಾಗುವ ಎಡರುಗಳ ತುಳಿ
ಹರಿಸು ಸಂತೋಷದೋಕುಳಿ
-ಸುಬ್ಬು ಪದ್ಮನಾಭ್

Monday, September 4, 2017

ನಿನ್ನ ನೋಡಲೆಂತೋ


ನಿನ್ನ ಕಣ್ಣಿನ ಮಿಂಚು 

ನೋಡಲೆನ್ನ ಸಂಚು

ಸುಂದರ ಹೂನಗೆ 
ತುಟಿ ಕೆಂಡಸಂಪಿಗೆ

ಹಣೆಯಲ್ಲಿ ಮಿನುಗುವ ಬಿಂದಿ
ನೋಡಿ ನಾನಾಗದಿರೆನೆ ಚಿಂದಿ

ಕೇಶ ರಾಶಿಯ ಬಾಲಿಕೆ 
ಅಂದೇ ಸೋತೆನಲ್ಲೆ ಏತಕೆ
-ಸುಬ್ಬು ಪದ್ಮನಾಭ