Tuesday, February 14, 2017

ಏನಿದು ?


ಮೊದಲ ಮಧುರವಿದು 
ಮನ ಮೀಟಿ ಅರಳಿದೆ 
ಉಸಿರಿನ ಉತ್ಸವವಿದು 
ಎದೆಯ ಚಿಪ್ಪಲಿ ಅವಿತಿದೆ
-ಸುಬ್ಬು ಪದ್ಮನಾಭ 

Monday, February 13, 2017

ರಸಿಕ ಮನದ ಶೃಂಗಾರ ಕವನ


ಲತೆಯಲ್ಲಿ ನಗುವ ಹೂವಿನ 
ಗಂಧವ ಹೀರುವ ದುಂಬಿಯೋ 
ಮಿಂಚು ಕಣ್ಣಿನ ಹೊಳಪಿಗೆ 
ಹೃದಯದಂಚಿನ ಮಿಡಿತವೊ 
ಸಾಗರ ಹುಡುಕುವ ನದಿಗೆ 
ನಿತ್ಯ ಹರಿಯುವ ಹಂಬಲವೋ 
ಆಗಸದಿರದ ರವಿಯ ಕಾಂತಿಗೆ
ಕಾದು ಕೂರುವ ಸೆಳೆತವೋ 
-ಸುಬ್ಬು ಪದ್ಮನಾಭ

Thursday, February 9, 2017

ಕವಿ ಕಾಣದ ಶೃಂಗಾರದ ರಸಕಾವ್ಯ


ಹುಟ್ಟುವುದೇತಕೆ ಗೆಳೆಯ
ಸಾಧಿಸಿ ಸಾರ್ಥಕವಾಗಿಸಲು 
ಬದುಕುವುದೇತಕೆ ಗೆಳತಿ  
ಪ್ರೀತಿಸಿ ಪ್ರೇಮದೊಂದಿಗಿರಲು

-ಸುಬ್ಬು ಪದ್ಮನಾಭ 


ಎರಡು ಸಾರಿ ಮನುಷ್ಯ ಹುಟ್ಟುತ್ತಾನೆಂದು ಯಾರೋ ಪುಣ್ಯಾತ್ಮರು ಹೇಳಿದ್ದಾರೆ.
ಒಂದು ಅವನ ನಿಜವಾದ ಜನ್ಮ ದಿನ ಇನ್ನೊಂದು ಯಾತಕ್ಕೆ ಜನ್ಮ ತಾಳಿದ್ದು ಎಂದು ತಿಳಿದುಕೊಂಡ ದಿನ 

Wednesday, February 8, 2017

ಕೋಟಿ ಕೋಟಿಯೂ ಕನ್ನಡ


ಹೂವಿನ ಕುಸುಮದಲಿ 
ಕನ್ನಡ ತನವೊಂದಿದೆ 
ಹೃದಯದ ಬಡಿತದಲಿ 
ಕಂಪಿನ ಕನ್ನಡವೊಂದಿದೆ 
ನಾಡಿಯ ಮಿಡಿತದಲಿ
ತಂಪಿನ ಕನ್ನಡವೊಂದಿದೆ 
ಕನ್ನಡ ತನವೊಂದಿರಲು 
ಉಸಿರುಸಿರೂ ಹಾಡಿದೆ 
ಕನ್ನಡ ಬದುಕಿಗೆ ಕನ್ನಡ
ಏಳು ಕೋಟಿಯೂ ಕನ್ನಡ 
-ಸುಬ್ಬು ಪದ್ಮನಾಭ