Thursday, July 28, 2016

ಆಗ - ಈಗ


ನಗುವುದಕ್ಕಿಂತ ಅಳುವುದೇ ಹೆಚ್ಚು ಬಾಲ್ಯದಲ್ಲಿಯಾದರೂ 
ಮನಸೊಳಗಿನ ಮುಗ್ಧತೆ ಮಾಸಿರಲಿಲ್ಲ ಸಂತೋಷವಿರುತ್ತಿತ್ತು ಆಗ 
ಅಳುವುದಕ್ಕಿಂತ ನಗುವುದೇ ಹೆಚ್ಚು ಬಾಹ್ಯದಲ್ಲಿಯಾದರೂ 
ಸತ್ಯದ ಜ್ಞಾನ ಅರಿಯುವವರೆಗೂ ಯಾತನೆ ತಪ್ಪಿದ್ದಲ್ಲ ಈಗ !!
-ಸುಬ್ಬು ಪದ್ಮನಾಭ್

Monday, July 25, 2016

ಬೇಡು - ತೋರು

ಬೇಡು ಬೇಡುವುದಾದರೆ
ನಿತ್ಯ ಹರಸುವ
ಬೊಗಸೆ ಕೈಗಳನು

ತೋರು ತೋರುವುದಾದರೆ  
ಪ್ರತಿಫಲ ಬಯಸದಿರುವ
ಕಾಯುವ ಕರುಣೆಯನು

-ಸುಬ್ಬು ಪದ್ಮನಾಭ
 

Friday, July 22, 2016

ಬ್ರಹ್ಮ ವಿಷ್ಣು ಮಹೇಶ್ವರ

ಅರಿವೆಂಬ ಗುರು ಮನದೊಳಗೆ ಮೂಡಿಸುವವರಿವರು ಜೊತೆಗೆ ಜನುಮ ನೀಡಿದ ತಾಯಿತಂದೆ ತೀಡಿ ತಿದ್ದಿ ತಿಳಿ ಹೇಳಿದ ಗುರುವೇ ಬ್ರಹ್ಮ ವಿಷ್ಣು ಮಹೇಶ್ವರರೆನಗೆ -ಸುಬ್ಬು ಪದ್ಮನಾಭ್  

Tuesday, July 19, 2016

ಬ್ರಹ್ಮ ವಿಷ್ಣು ಮಹೇಶ್ವರ

ಅರಿವೆಂಬ ಗುರು ಒಳಗೆ 
ಮೂಡಿಸುವ ಗುರು ಹೊರಗೆ
ಮನಸ್ಸಿನ ಸ್ಥಿರತೆಗೆ ಪ್ರಶಾಂತತೆಗೆ
ಜನುಮ ನೀಡಿದ ತಾಯಿ ತಂದೆಯರೇ 
ಬ್ರಹ್ಮ ವಿಷ್ಣು ಮಹೇಶ್ವರರು ಎನಗೆ !! 
-ಸುಬ್ಬು ಪದ್ಮನಾಭ್

#‎GuruPoornima‬ - ಗುರು ವಂದನೆ


ಒಂದೇ ಸಮ ಕೊಡುವುದೊಂದೇ ಪ್ರಕೃತಿಯ ಕಾಯಕ 
ತೆಗೆದುಕೊಂಡು ಅಷ್ಟಿಷ್ಟು ಉಪಕಾರಿಯಾಗು ಯಾತ್ರಿಕ
ಸರಿತಪ್ಪುಗಳ ಕಲಿಕೆಗೆ ಅರಿವೆಂಬ ಗುರುವಿನ ನೇಮಕ
ಪಡೆದ ಜ್ಞಾನವ ಹಂಚುವುದ ಮರೆಯದಿರು ಮಾಂತ್ರಿಕ
-ಸುಬ್ಬು ಪದ್ಮನಾಭ್

Monday, July 18, 2016

ಗುರುತು

ನಡೆಗೆ ಗುರುತಿರಲಿ 
ನುಡಿಗೆ ಸವಿಯಿರಲಿ  
ಬದುಕಿಗೆ ಅರ್ಥವಿರಲಿ 
ಜೀವನಕ್ಕೆ ಘನವಿರಲಿ 
ನಿನ್ನೊಂದಿಗೆ ನಾನಿರಲಿ !!

-ಸುಬ್ಬು ಪದ್ಮನಾಭ್

Friday, July 15, 2016

ಕನಸು

ಕನಸು ಶುರುವಾದರೆ ಮನಸ್ಸು ಕುಣಿಯುವುದಯ್ಯ
ರಾತ್ರಿ ನಿದ್ದೆಯ ಕನಸು ಮನಸ್ಸಿಗೆ ತ್ರಾಸ ಕೇಳಯ್ಯ
ಇರುಳಿಗೆ ನಿದ್ದೆ ಬಾರದಿರೋ ಕನಸು ಬೇಕಯ್ಯಾ
ಕನಸಿಗೆ ಹಗಲಿರುಳು ದುಡಿಯೇ ಬಾಳು ಬೆಳಕಯ್ಯ
-ಸುಬ್ಬು ಪದ್ಮನಾಭ 

ಅಹಂ

ನನ್ನೊಳಗಿನ ಅಹಂ ಮೆರೆಯುತ್ತಿರೆ
ನಾನು ಬೇರೆ ಕಾಣುವ ಜಗತ್ತು ಬೇರೆ
ಬುದ್ದಿ ಮೀರಿ ಅಹಂ ಆತ್ಮನಲ್ಲಿ ನಿಂತರೆ
ಕಾಣುವ ಹೊರ ಜಗತ್ತೆಲ್ಲವೂ ನನ್ನೊಳಗೆ
-ಸುಬ್ಬು ಪದ್ಮನಾಭ 

Thursday, July 14, 2016

ನಾನೆಲ್ಲಿ ನೀನೆಲ್ಲಿ


ವಾರಕ್ಕೊಮ್ಮೆ ಬಿಡುವು ಬೇಕೆನ್ನುವ ನಾನೆಲ್ಲಿ 
ಬಿಡುವಿಲ್ಲದೆ ನಿತ್ಯವೂ  ಲೋಕವ ಬೆಳಗುವ ನೀನೆಲ್ಲಿ
 
ಸುಡುಬಿಸಿಲೆಂದು ಅಡಿಗಡಿಗೂ ಜರೆಯುವ ನಾನೆಲ್ಲಿ 
ಸಮಸ್ತ ಜೀವರಾಶಿಯ ಸಮತೋಲನ ಕಾಯುವ ನೀನೆಲ್ಲಿ 

Tuesday, July 12, 2016

ಮನದ ನವಿಲು

ಅವಿತ ಭಯ ತೆಗೆ
ಜೀವನ ಪ್ರೀತಿ ಉಗೆ
ಮನದ ನವಿಲು ನಗೆ
ಸನಿಹ ನೀನಿರೆ ಮಿಗೆ
-ಸುಬ್ಬು ಪದ್ಮನಾಭ್

Friday, July 8, 2016

ಒಳ್ಳೆಯ ಮಾತು

ಪ್ರಿಯ  ವಾಕ್ಯ  ಪ್ರಧಾನೇನ
ಸರ್ವೇ ತುಷ್ಯಂತಿ ಜಂತವ: 
ತಸ್ಮಾತ್ ತದೇವ ವಕ್ತವ್ಯಮ್ 
ವಚನೇ ಕಾ ದರಿದ್ರತಾ 

ಒಳ್ಳೆಯ ಮಾತು ಆಡುವುದರಿಂದ ಎಲ್ಲಾ ಜೀವ ಜಂತುಗಳಿಗೆ ಸಂತೋಷವಾಗುತ್ತದೆ 
ಆದ್ದರಿಂದ ಒಳ್ಳೆಯದನ್ನೇ ಯಾವಾಗಲೂ ಮಾತನಾಡುವುದಕ್ಕೆ ದಾರಿದ್ರ್ಯ ಬೇಡ.

Monday, July 4, 2016

ಮುತ್ತು-ರತ್ನಗಳು


ಓ ಮನವೇ ,
ಜೀವನದ ಪರೀಕ್ಷೆಗಳ ಎದುರಿಸದೆ
ಬದುಕಿನ ಪಾಠ ಕಲಿಯಲು ಸಾಧ್ಯವೆ
ನನ್ನ ಅಸಹನೆಗೆ ಪರರನ್ನೂ ನಿಂದಿಸಲಾರೆ 
ಕಷ್ಟ-ಕಾರ್ಪಣ್ಯಗಳು ಎರಗಿದರೆ ನಲುಗಲಾರೆ 
ಕ್ಲಿಷ್ಟ ಅನುಭವಕ್ಕೊಳಪಡದೆ ಪಕ್ವವಾಗುವೆನೇ 
ನ್ಯೂನತೆಗಳ ತಿದ್ದುವ ಕಲಿಕೆ ಬೇಡ ಎನ್ನುವೆನೇ 
ಕಲಿತ ಪಾಠವೇ ಗಳಿಸಿದ ಮುತ್ತು-ರತ್ನಗಳು
ಹಂಚಿಕೊಳ್ಳಲೆಂದೂ ಮರೆಯದಿರು !!
-ಸುಬ್ಬು ಪದ್ಮನಾಭ
4th July 2016