ಚಿತ್ರ ನೋಡಿ ನನಗನಿಸಿದ್ದು:
ರಕ್ಷಿತ್ ಶೆಟ್ಟಿ ಮಹಾನ್ ಪ್ರತಿಭೆ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ. ಅದ್ಭುತವಾದ ಯೋಚನಾಲಹರಿಗಳ ಶಕ್ತಿಯನ್ನು ಒಟ್ಟಿಗೆ ಜೋಡಿಸಿ ಕಥೆ ಹೆಣೆದು ಕಥೆ ಬರೆಯುವ ಸುಂದರ ಕಲೆ ಅವರಿಗೆ ಮತ್ತು ಅವರ "Seven Odds " ತಂಡಕ್ಕೆ ಇದೆ. ಚಿತ್ರದ ಕಥೆಯನ್ನು ಯೋಚಿಸಿಕೊಂಡು ಬರೆದು ರಿವ್ಯೂ ಮಾಡಿ ಕಥೆ ಸಂಭಾಷಣೆ ಎಲ್ಲವನ್ನು ಪಕ್ಕ ಮಾಡಿಕೊಂಡು ಅದ್ಭುತವಾದ ಚಿತ್ರೀಕರಣ ಮಾಡುವ ಚಾಣಾಕ್ಷ . ಬೇರೆ ಬೇರೆ ರೀತಿಯಾದ ಎರಡು ಚಿತ್ರಗಳು ಈ ಕಥೆ ಬರೆಯುವ ೭ ಆಡ್ಸ್ ತಂಡದಿಂದ ಬಂದು ಗೆದ್ದಿದೆ .ಯಾವುದೇ ಚಿತ್ರ ಯಶವ್ವಿಯಾಗುವುದಕ್ಕೆ ಚಿತ್ರಕ್ಕೆ ಇರುವ ಬರಹ ಮತ್ತು ಅದರ ಕತೆಯೇ ಜೀವಾಳ . ಚಿತ್ರ ಇಲ್ಲೇ ಗೆದ್ದಿರುವುದು. ಸಂಭಾಷಣೆ ಅಚ್ಚ ಕನ್ನಡದಲ್ಲಿ ಚೆನ್ನಾಗಿ ಬರೆದಿದ್ದಾರೆ. ಬರವಣಿಗೆಯ ವಿಶೇಷ ಏನಪ್ಪಾ ಅಂದ್ರೆ ನಗೆ ಮೂಡುವ ಹಾಗೆ ಸಂಭಾಷಣೆ ಮತ್ತು ಕತೆ ಹೆಣೆದಿರುವುದು ಈ ಚಿತ್ರದ ವಿಶೇಷತೆ.
ಇನ್ನು ಚಿತ್ರ ಗೆಲ್ಲುವುದಕ್ಕೆ ಸಿನೆಮಾಕ್ಕೆ ಬೇಕಾದ ಸಂಗೀತ ಮತ್ತು ಲಿರಿಕ್ಸ್ ಎರಡನೇ ಅಂಶ. ಚಿತ್ರಕಥೆ ಗೆದ್ದಿದೆ ಮತ್ತು ಮಿದುಳಿಗೆ ಕೆಲಸ ಜಾಸ್ತಿ ಕೊಡುತ್ತದೆ . ಎರಡು ಮೂರು ಸರ್ತಿ ನೋಡಿದರೆ ಕೊಟ್ಟಿರುವ ಕ್ಲೂ ಎಲ್ಲವೂ ಅರ್ಥವಾಗುತ್ತದೆ ಅನ್ನಿಸಿತು.ಕಥೆ ಹೆಣೆದಿರುವುದು ಕಡೆಯ ತನಕ ನಮ್ಮನ್ನು ಹಿಡಿದಿಟ್ಟುಕೊಂಡಿತ್ತು .
ಅಜನೀಶ್ ಲೋಕನಾಥ್ ರವರ ಹಿನ್ನಲೆ ಸಂಗೀತ ಈ ಚಿತ್ರಕ್ಕೆ ನನ್ನ ಪ್ರಕಾರ ಚಿತ್ರದ ಎರಡನೇ ಹೀರೋ ಆಗಿ ಹೊರಹೊಮ್ಮಿದ್ದಾರೆ . ಚರಣ್ ರಾಜ್ ಸಂಗೀತ ಕೂಡ ಚೆನ್ನಾಗಿ ಮೂಡಿ ಬಂದಿದೆ. ವಿಜಯ್ ಪ್ರಕಾಶ್ ಹಾಡಿದ ಮೇಲೆ ಚಿತ್ರದ ಹಾಡು ಮನೆಮಂದಿಯ ಬಾಯಲ್ಲಿ ಬರುವುದು ಖಂಡಿತ ... ಚರಿತ್ರೆ ಸೃಷ್ಟಿಸೋ ಅವತಾರ ಅಂತ ನಾಗಾರ್ಜುನ ಶರ್ಮ ಬರೆದಿರುವುದು ಚಿತ್ರದ ಹಾಡುಗಳಲ್ಲಿ ಅತ್ಯುತ್ತಮ ಸಾಲು . "ಕಟುಕರ ಮುಂದೆ ಓದಬಾರ್ದು ಭಗವದ್ಗೀತೆ " ಅನ್ನೋ ಸಾಲು ಇದ್ಯಲ್ಲ ಇವತ್ತಿನ ಸಂಜಾದ ಬದುಕ್ತಿರೋ ಸ್ಥಿತಿಗತಿಗೆ ಪಕ್ಕ ಸಾಲು ಹಾಡಿನಲ್ಲಿ ತಂದ ನಾಗಾರ್ಜುನ ಶರ್ಮ ನಿಮಗೆ ಅಭಿನಂದನೆಗಳು . ಚಿತ್ರದ ವಿಶುಯಲ್ ಅದ್ಬುತಯಾಗಿ ಶಬ್ದದೊಂದಿಗೆ ಮೇಲೆ ಎದ್ದಿರುವುದು ಕಾಣುತ್ತದೆ ಸಿನಿಮಾಟೋಗ್ರಫಿ ಗೆದ್ದಿದೆ . ಲೈಟ್ ಬಳಕೆ ಕರಮ್ ಚಾವ್ಲಾಗೆ ತಿಳಿದಿದೆ ಅನ್ನಿಸ್ತು . ಇಂಗ್ಲಿಷ್ ಫಿಲಂ ನ ಕನ್ನಡದವರು ಇದೆ ಕಾರಣಕ್ಕೆ ನೋಡ್ತಾ ಇದ್ದಿದ್ದು . ಈ ರೀತಿ ಇರ್ಬೇಕು ಅಂತ ಸೆಟ್ ಕಾಸ್ಟ್ಯೂಮ್ ಎಲ್ಲಾ ಕಥೆಗೆ ಬೇಕಾಗಿರೋ ತರ ಇದೆ. ಕೆ ಜಿ ಫ್ ನೋಡಿದ ಮೇಲೆ ಸ್ವಲ್ಪ ಅದೇ ರೀತಿ ಇತ್ತೇನೋ ಅನ್ನುಸ್ತು .
ಎಲ್ಲಾ ಪಾತ್ರಗಳಿಗೂ ಮಹತ್ವ ಇದೆ ಮತ್ತು ಪಾತ್ರ ಪೋಷಣೆ ಕೂಡ ಚೆನ್ನಾಗಿ ಕೊಟ್ಟಿದ್ದಾರೆ ಬರಹಗಾರ ರಕ್ಷಿತ್ . ನಾರಾಯಣ ಲಕ್ಷ್ಮಿ ಇಬ್ಬರಿಗೂ ಮಹತ್ವಪೂರ್ಣ ಪಾತ್ರ ಇದೆ ಹಾಗೆ ಚೆನ್ನಾಗಿ ನಿರ್ವಹಿಸಿದ್ದಾರೆ . ಪೂರ್ತಿ ಚಿತ್ರ ನಕ್ಕು ನಲಿಯುವ ಸಂಭಾಷಣೆ ಇದೆ . ಅದನ್ನು ರಕ್ಷಿತ್ ಮತ್ತು ಅಚ್ಯುತ್ ನಿರ್ವಹಿಸಿದ್ದಾರೆ .
ಇದು "next level " ಚಿತ್ರ ಅನ್ನುವುದರಲ್ಲಿ ಸಂಶಯವೇ ಇಲ್ಲ . ರಕ್ಷಿತ್ ಶೆಟ್ಟಿ ದಿ ಫಿಲಂ ಮೇಕರ್ , ರಾಜ ಮೌಳಿ ದಿ ಫಿಲಂ ಮೇಕರ್ ಏನಿಷ್ಟ ಆಗುತ್ತೆ ಗೊತ್ತಾ ನಮ್ಮ ಸಂಸ್ಕೃತಿಯ ಪುರಾಣ ಇತಿಹಾಸದ್ದು ಪಾತ್ರಗಳನ್ನಾಗಿ ಮಾಡಿ ಒಳ್ಳೆಯ ರೀತಿಯಲ್ಲಿ ತೆರೆ ಮೇಲೆ ತೋರಿಸುವ ಕಲೆ ನಿಮಗೆ ಪರಮಾತ್ಮ ಕೊಟ್ಟಿದ್ದಾನೆ ಅನ್ನಿಸ್ತು. ಪ್ರಪಂಚದವರಿಗೆ ನಮ್ಮಲ್ಲಿರುವ ಪಾತ್ರಗಳನ್ನು ಹೀಗೆ ತೋರಿಸಬೇಕು ಆಗ ನಾರಾಯಣ ಸೀರೀಸ್ ಅಂತ ಪುಸ್ತಕವನ್ನು ಮಕ್ಕಳಿಗೆ ತರ್ಬೋದಲ್ಲ ...ಹಾಗೆ ಮಾಡಿದರೆ ನಮ್ಮ ಸಂಸ್ಕೃತಿ ಸ್ವಲ್ಪ ಉಳಿದುಕೊಳ್ಳುತ್ತೆ ಕೂಡ . ಮನರಂಜನೆ ಜೊತೆಜೊತೆಗೆ ಇದನ್ನು ಕೊಟ್ಟಿರುವ ನಿಮ್ಮ ಬುದ್ದಿವಂತಿಕೆಗೆ ಸ್ಪೆಷಲ್ ಥ್ಯಾಂಕ್ಸು . ರಕ್ಷಿತ್ ಅಂತರಂಗದಲ್ಲಿ ತನ್ನನ್ನು ತಾನು ಅರಿತುಕೊಂಡವರು ಬಹಿರಂಗದಲ್ಲಿ ಇಷ್ಟು ಅದ್ಭುತವಾದ ಚಿತ್ರ ಕಟ್ಟಿಕೊಡಲು ಸಾಧ್ಯ ಎಂದು ಹೇಳಲು ಇಚ್ಛಿಸುತ್ತೇನೆ . ಕನ್ನಡ ಮತ್ತು ಚಿತ್ರರಂಗಕ್ಕೆ ಮೆರುಗು ತಂದುಕೊಟ್ಟಿದ್ದಾರೆ . ಇಡೀ ಪ್ರಪಂಚ ನೋಡಬಹುದಾದ ಚಿತ್ರ .
ಪುಷ್ಕರ ಮಲ್ಲಿಕಾರ್ಜುನಯ್ಯ ಅವರಿಗೆ ವಿಶೆವಾಗಿ ಅಭಿನಂದನೆ ಸಲ್ಲಿಸಲೇಬೇಕು. ಅಷ್ಟು ಖರ್ಚು ಮಾಡುವುದಕ್ಕೆ ಮುಂದಾಳತ್ವ ತೆಗೆದುಕೊಂಡು ಕಥೆಯನ್ನು ರಕ್ಷಿತ್ ಮತ್ತು ತಂಡವನ್ನು ನಂಬಿ ಹಣ ಸುರಿದಿದ್ದಾರೆ . ಪ್ರಕಾಶ್ ಗೌಡ್ರು ರಂಗಿತರಂಗ ಆದ ನಂತರ ಮತ್ತೆ ಇದರಲ್ಲಿ ಕೈ ಜೋಡಿಸಿರುವುದು ಸಂತೋಷ ಆಗಿದೆ ಮತ್ತು ಪರಂವಾ ಸ್ಟುಡಿಯೊಸ್ ನಿರ್ಮಾಣದಲ್ಲಿ ಕೈ ಜೋಡಿಸಿದೆ . ನಿಮ್ಮೆಲ್ಲರಿಗೆ ಅಭಿನಂದನೆಗಳು . ಪ್ರಪಂಚದಾದ್ಯಂತ ಜನರು ಚಿತ್ರಮಂದಿರದಲ್ಲಿ ಚಿತ್ರ ನೋಡಲಿ, ಪುಣ್ಯಕೋಟಿ ನಿಮ್ಮ ಇಚ್ಛೆಯಂತೆ ಮಾಡುವಂತೆ ಆಗಲಿ ಎಂದು ನನ್ನೊಳಗಿರುವ ನಾರಾಯಣನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಮನ್ನಾರಾಯಣ 🙏