ನೆನಪಿರಲಿ ಚೈತನ್ಯಕ್ಕೆ ಎಂದೂ ಸಾವಿಲ್ಲ. ಆ ಚೈತನ್ಯ ನಮ್ಮ ಮಧ್ಯೆಯಿಂದ ಮಾಯವಾಗಿರುವುದು ತುಂಬಾ ನೋವು ಸಂಕಟ ತಂದಿದೆ . ಇದು ಮಹಾಸಂತನ ದೈಹಿಕ ಅಂತ್ಯಕ್ರಿಯೆ .
ಮಹಾಸಂತನ ದೈಹಿಕ ಅಂತ್ಯಕ್ರಿಯೆ ಅಷ್ಟಮಠಗಳ ಯತಿಗಳಲ್ಲಿ ಗುರು ಪೀಠದಲ್ಲಿ ಇದ್ದು ಎಲ್ಲರನ್ನು ಸಮಭಾವದಲ್ಲಿ ಕಂಡು ದೇಶ ಮೊದಲು ಎಂದು ಸಾರಿ ಸಾರಿ ಹೇಳಿ ಸಮಸ್ತ ಜನರಿಗೆ ಅನ್ನ ಅಕ್ಷರ ಜ್ಞಾನ ಇವರ ನೆರಳಿನಲ್ಲಿ ನಿತ್ಯ ನಡೆಯುತ್ತಿತ್ತು . ಹಿಂದೂಗಳು ಒಟ್ಟಿಗೆ ಆಗಬೇಕು ಎಂದು ಯಾವಾಗಲೂ ಸಾರಿ ಸಾರಿ ಹೇಳುತ್ತಿದ್ದರು. ದಲಿತರನ್ನು ಅಸ್ಪೃಶ್ಯರಾಗಿ ಯಾವತ್ತೂ ಕಾಣಬಾರದು ನಾವೆಲ್ಲಾ ಹಿಂದೂಗಳು ಒಂದೇ ಎಂದು ಗುರು ಪೀಠದಲ್ಲಿ ಕುಳಿತು ಹೇಳುತ್ತಿದ್ದರು .
ರಾಮ ಮಂದಿರ ನಿಧಾನವಾದಾಗ ಪ್ರಧಾನ ಮಂತ್ರಿಗಳಲ್ಲಿ ಕೋರಿಕೆ ಇಟ್ಟಿದ್ದರು . ಯಾವ ಜಾತಿ ಪಂತ ಪಂಗಡ ಗುಂಪು ಬೇರೆ ಬೇರೆ ಎಂದು ನೋಡಿದವರಲ್ಲ . ಎಲ್ಲರೂ ಒಟ್ಟಿಗೆ ಸೇರಿ ದೇಶ ಸಂಸ್ಕೃತಿ ಪರಂಪರೆಯನ್ನು ಉಳಿಸಬೇಕು ಎಂದು ಹೇಳುತ್ತಿದ್ದ ಸಂತರು.
ಪ್ರತಿ ಸಾರಿ ದೇಶದ ನಾಯಕರಿಗಳಿಗೆ ಬುದ್ದಿವಾದ ತಿಳಿಸಿ ಮಾರ್ಗದರ್ಶನ ನೀಡುತ್ತಿದ್ದ ಪೇಜಾವರ ಶ್ರೀಗಳು.

No comments:
Post a Comment