Monday, December 16, 2019

ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು-2019 " ಬಿಡುಗಡೆಯ ಕಾರ್ಯಕ್ರಮ


ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು " ಬಿಡುಗಡೆಯ ಕಾರ್ಯಕ್ರಮ
---------------------------------------------------
ಮೊದಲಿಗೆ ಸ್ವರ್ಣಸೇತು ಸಂಪಾದಕರಾದ  Gurumurthy Krishnamurthy ಗುರುಮೂರ್ತಿ ಕೃಷ್ಣಮೂರ್ತಿಯವರು ಭಾಷಣ ಮಾಡಿದರು.
ನಂತರ ಸಭೆಯನ್ನುದ್ದೇಶಿ ಮಾತನಾಡಿದ ಡಾಕ್ಟರ್ ಸೋಮೇಶ್ವರರವರು ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಕನ್ನಡ ಕೂಟವು ದೇಣಿಗೆ ಕೊಟ್ಟಿರುವುದನ್ನು ಸ್ಮರಿಸಿದರು ಮತ್ತು ಕೂಟದ ಸಾಮಾಜಿಕ ಕೆಲಸಗಳನ್ನು ಮಾಡುವ ಕಳಕಳಿಯನ್ನು ಕೊಂಡಾಡಿದರು . ಸಮಾಜದ ಋಣ ಭಾರತದ ಮಣ್ಣಿನಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಇರುತ್ತದೆ ಎಂದು ಈ ನಾಲ್ಕು ಋಣಗಳ ಬಗ್ಗೆ ಸಹ ಮಾತನಾಡಿದರು
1. ದೇವ ಋಣ
2. ಪಿತೃ ಋಣ
3. ಗುರು ಋಣ ಮತ್ತು
4. ಸಮಾಜದ ಋಣ
ಕನ್ನಡ ಕೂಟದ ಕೆಲಸವನ್ನು ಕೊಂಡಾಡಿ ಸಭಿಕರಿಗೆ ಅಭಿನಂದಿಸುವುದರ ಮೂಲಕ ಕನ್ನಡ ಕೂಟವನ್ನು ಶ್ಲಾಘಿಸಿದರು. ಆದ್ದರಿಂದ ಅತ್ಯುತ್ತಮವಾದ ಕೆಲಸ ಎಂದು ಮನದಟ್ಟು ಮಾಡಿದರು .
ನಾಡಗೀತೆಯನ್ನು ಬರೆದ ರಾಷ್ಟ್ರಕವಿ ಕುವೆಂಪುರವರ "ಜಯ ಭಾರತ ಜನನಿಯ ತನುಜಾತೆ " ಪದ್ಯಕ್ಕೆ ಸಭೆಯಲ್ಲಿ ಎಲ್ಲರನ್ನು ನಿಂತು ಗೌರವ ಕೊಡುವುದಾಗಿ ಕೇಳಿಕೊಂಡರು . ನಾವೆಲ್ಲಾ ಭಾರತದ ಕನ್ನಡ ನಾಡಿನ ಮಣ್ಣಿನಲ್ಲಿ ಹುಟ್ಟಿರುವುದಕ್ಕೆ ಈ ಗೌರವ ಬಹಳ ಸೂಕ್ತವಾದುದ್ದು ಮತ್ತು ಇಂದಿನ ಕಾರ್ಯಕ್ರಮದ ವಿಶೇಷ ಎಂದು ಅನಿಸಿ ಹೆಮ್ಮೆಯೆನಿಸಿತು. 
" ತಟ್ ಅಂತ ಹೇಳಿ" ಖ್ಯಾತಿಯ ನಮ್ಮ ನಿಮ್ಮೆಲ್ಲರ ನೆಚ್ಚಿನ ಡಾಕ್ಟರ್ Someswara Narappaಸೋಮೇಶ್ವರರವರಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು. ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು " ಬಿಡುಗಡೆಯ ಕಾರ್ಯಕ್ರಮಕ್ಕೆ ಬರಲೊಪ್ಪಿರೋದೇ ನಮ್ಮ ಪಾಲಿಗೆ ಬಲು ದೊಡ್ಡ ಕೊಡುಗೆ ಎಂದು ಕನ್ನಡ ಕೂಟದ ಅಧ್ಯಕ್ಷ ಅರವಿಂದ ಬಾಯರಿಯವರು Aravind Bairy ಕೂಟದ ಸದಸ್ಯರಿಗೆ ತಿಳಿಸಿ ಸಂತಸ ವ್ಯಕ್ತಪಡಿಸಿದರು. 
"ತಟ್ ಅಂತ ಹೇಳಿ" ಕಾರ್ಯಕ್ರಮವನ್ನು ಕನ್ನಡ ಕೂಟದ ವೇದಿಕೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ನಡೆಸಿಕೊಟ್ಟರು . ಕಾರ್ಯಕ್ರಮದ ನಂತರ ಪ್ರಶಸ್ತಿ ಪ್ರಧಾನ ಸಮಾರಂಭ ಸುಗಮವಾಗಿ ನಡೆಯಿತು . ಬಹಳಷ್ಟು ಪುಸ್ತಕಗಳನ್ನು ಭಾರತದಿಂದ ತಂದು ಎಲ್ಲರಿಗೂ ಪ್ರಶಸ್ತಿಯ ರೂಪದಲ್ಲಿ ಬಹುಮಾನ ವಿತರಿಸಿದರು .
ಇವತ್ತಿನ ದಿವಸ ಜಾಗತಿಕ ಮಟ್ಟದಲ್ಲಿ ಕನ್ನಡ ೨೯ನೇ ಸ್ಥಾನದಲ್ಲಿದೆ ಎಂದು ತಿಳಿಸಿಕೊಟ್ಟರು . ಕನ್ನಡ ಕೂಟ ನಡೆದುಕೊಂಡು ಬರುತ್ತಿರುವುದು , ಮುಂದಿನ ಪೀಳಿಗೆಯ ಕನ್ನಡ ಮಕ್ಕಳಿಗೆ ಕನ್ನಡವನ್ನು ಉಳಿಸಿ ೨೯ ನೇ ಸ್ಥಾನದಲ್ಲೇ ಇರುವ ಹಾಗೆ ನೋಡಿಕೊಳ್ಳಿ, ೩೦ ಅಥವಾ ೩೧ನೇ ಸ್ಥಾನಕ್ಕೆ ಇಳಿಯದಿರಲು ಅವಕಾಶ ಕೊಡದೆ ಕಲೆ ಮತ್ತು ಸಂಸ್ಕೃತಿಯ ಮೂಲಕ ಕನ್ನಡದ ಭಾಷೆಯನ್ನು ಉಳಿಸಿಕೊಳ್ಳುವುದಾಗಿ ಕಿವಿಮಾತು ಕಾರ್ಯಕ್ರಮದ ಮೂಲಕವೇ ಕೊಟ್ಟರು . ಕಡೆಯದಾಗಿ ಮುಖ್ಯ ಅತಿಥಿಗೆ ಶಾಲು ಹೊದಿಸಿ ಮೈಸೂರು ಪೀಠವನ್ನು ತೊಡಿಸುವ ಮೂಲಕ ಅಧ್ಯಕ್ಷರು ಗೌರವ ಸಮರ್ಪಿಸಿದರು.

No comments:

Post a Comment