Thursday, March 24, 2016

ಬೆಟ್ಟದಷ್ಟು ಕಷ್ಟ


ಕಷ್ಟವು ಬೆಟ್ಟದಷ್ಟು ಎತ್ತರವಾದರೇನು  
ಅದರೊಳಗಿಹ ಸತ್ವ ಬದುಕಿಗೆ ತತ್ವ  

ನೀಲಾಕಾಶದಷ್ಟು ಮನ ವಿಶಾಲವಾಗಿರಲು

ನಿನ್ನೊಳಿಹ ಚೇತನ ನಲಿವುದು ಓ ನೋಡ 
ಜ್ಞಾನದ ಹಸಿರಲಿ ಕರಗುವುದು ನೀ ಹಾಡ

-ಸುಬ್ಬು ಪದ್ಮನಾಭ
24 March 2016

Tuesday, March 22, 2016

ಉದಾಹರಣೆಯಾಗು


ಅರವತ್ನಾಲ್ಕು ಸಾವಿರ
ಮೆದುಳಿನ ಯೋಚನೆಗಳು
ಒಂದು ಗಂಟೆಗೆ ಕೇಳು 
ಅಷ್ಟನ್ನೂ ಚಿಂತಿಸಿದರೆ
ಪ್ರಯೋಜನವೇನು ಹೇಳು 
ಮಾಡಬೇಕಾದ ಕೆಲಸ
ಮಾಡಿ ಮುಂದೆ ಹೋಗಕ್ಕೇಳು
ನಿನ್ನ ಮಕ್ಕಳಿಗಾದರೂ
ಉದಾಹರಣೆಯಾಗು ಏಳು
-ಸುಬ್ಬು ಪದ್ಮನಾಭ

Sunday, March 20, 2016

ದೇವ ನಮ್ಮೊಳಗೆ

ಹಸಿರಾದ ಮನಸ್ಸು
ಕಲ್ಲಂತ ಮೇಲ್ಕವಚ  
ಜೋತೆಯಿರೆ ಅನುದಿನ 
ಪ್ರತಿದಿನವೂ ಹರುಷ
ವಿಷಯ ಸಾಕಷ್ಟಿದೆಯಲ್ಲ
ದೇವ ನಮ್ಮೊಳಗಿರುವನಲ್ಲ 
- ಸುಬ್ಬು ಪದ್ಮನಾಭ
೨೦ ಮಾರ್ಚ್ ೨೦೧೬

Saturday, March 19, 2016

ವಿರಾಟ -ಬಾವುಟ


ವಿಜಯ ಲಭಿಸುವುದು
ಮನದಲ್ಲಿರೆ ಗೆಲ್ಲುವ ಹಟ
ವಿರಾಟನಿಗೆ ಕಾಣುವುದು
ಭಾರತದ ಬಾವುಟ
ಛಲಬಿಡದೆ ಆಡುವನು
ಗೆಲುವಿವನಿಗೆ ಚಟ
- ಸುಬ್ಬು ಪದ್ಮನಾಭ

Monday, March 14, 2016

ಮನಸಿನ ನಗೆ

ಮನದೊಳಗಿನ ನೋವು ಸಂಕಟ ಇರಲಿ 
ರಾಮನಿಗೂ ಬಿಟ್ಟಿರಲಿಲ್ಲ ಬದುಕಿನ ಬವಣೆ
ಮನಸಿನ ನಗೆ ನಿತ್ಯ ಮುಖದ ಮೇಲಿರಲಿ
ಶಾಶ್ವತವಲ್ಲ ನಾವು ಇಲ್ಲಿ ಕೇಳು ನನ್ನಾಣೆ 
- ಸುಬ್ಬು ಪದ್ಮನಾಭ
೧೪ ಮಾರ್ಚ್ ೨೦೧೬

Friday, March 11, 2016

ಹಸಿರುಳಿಸಿ ಉಸಿರುಳಿಸಿ


ಹಸಿರಿಲ್ಲದೆ ಉಸಿರಿಲ್ಲ
ಉಸಿರಿಲ್ಲದೆ ಬದುಕಿಲ್ಲ
ಬದುಕಿರದಿರೆ ಸ್ನೇಹವಿಲ್ಲ
ಸ್ನೇಹವಿರದಿರೆ ಪ್ರೀತಿ ಇಲ್ಲ
ಪ್ರೀತಿಯಿರದಿರೆ ಸಂತೋಷವಿಲ್ಲ
- ಸುಬ್ಬು ಪದ್ಮನಾಭ

Tuesday, March 8, 2016

ನಿನ್ನೊಂದಿಗೆ

ನಡೆಗೆ ಗುರುತಿರಲಿ 
ನುಡಿಗೆ ಸವಿಯಿರಲಿ
ಬದುಕಿಗೆ ಅರ್ಥವಿರಲಿ 
ಜೀವನಕ್ಕೆ ಘನವಿರಲಿ 
ನಿನ್ನೊಂದಿಗೆ ನಾನಿರಲಿ 
-ಸುಬ್ಬು ಪದ್ಮನಾಭ

Monday, March 7, 2016

ಗುಂಡ ಹುಡುಗಿಯ ನೊಡಲು ಹೊದ

ಗುಂಡ ಹುಡುಗಿಯ ನೊಡಲು ಹೊದ :
-------------------------------------
ಹಣೆಯ ನೋಡಿ ಕೂತ 
ದುಂಬಿಯ ಮುಂಗುರುಳು ಕಾಣಲಿಲ್ಲ
ಕಣ್ಣ ಕಾಡಿಗೆ ನೋಡಿ ಕೂತ
ಮಿನುಗುವ ಬೊಗಸೆ ಕಣ್ಣ ನೋಡಲಿಲ್ಲ 
ಮೂಗುತಿ ನೋಡಿ ಕೂತ
ಸಂಪಿಗೆ ಮೂಗು ನೋಡಲಿಲ್ಲ 
ಜುಮಕಿ ನೋಡಿ ಕೂತ
ಹುಡುಗಿಯ ಕಿವಿ ಗಮನಿಸಿಲ್ಲ 
ತುಟಿಯ ಕೆಂಪು ನೋಡಿ ಕೂತ
ನೈದಿಲೆ ಬಾಯಿ ನೋಡಲಿಲ್ಲ 
ಗೆಜ್ಜೆ ಸದ್ದು ಕೇಳಿ ಕೂತ
ಹುಡುಗಿಯ ಕಾಲೇ ಗಮನಿಸಿಲ್ಲ 
ಅರಳು ಹುರಿದ ಮಾತು ಕೇಳಿ ಕೂತ
ಹುಡುಗಿಗೆ ಹಾಡು ಹಾಡಿಸಲಿಲ್ಲ 
ಮನೆಗೆ ಬಂದೊಡನೆ ತಿಳಿಸಿದ 
ಹುಡುಗಿಯ ನೋಡಬೇಕಲ್ಲ !!
-ಸುಬ್ಬು ಪದ್ಮನಾಭ

ಯೋಗಿ

ಬಿಸಿಲಿನ ಬೇಗೆ ನೀ ಸಹಿಸುವೆ
ನಿತ್ಯ ಎಲ್ಲರಿಗೆ ಅನ್ನ ನೀ ನೀಡುವೆ
ಮೆಂದು ಮಲಗುವೆ ನಾ ಭೋಗಿ
ಭೂಮಿ ತಾಯಿಯ ನಂಬಿ ದುಡಿವ
ನೀ ಎಂದೆಂದಿಗೂ ನಮಗೆ ಯೋಗಿ !!

-ಸುಬ್ಬು ಪದ್ಮನಾಭ್  

Sunday, March 6, 2016

ಸಾಗರದ ಅಲೆ

ಬೀಸುವ ಗಾಳಿಯೇ ಬಿಡುವಿಲ್ಲದೆ ಮಾಡುವೆ ನಿನ್ನ ಕಾಯಕವ 
ಉಸಿರನ್ನಪ್ಪಿ ಹಿಡಿದು ದೇಹದಿ ಕ್ಷಣ ಕ್ಷಣವೂ ನೀಡುವೆ ಚೇತನವ  

ಸಾಗರದ ಅಲೆಯೇ ರಭಸದಿ ಬಂದಪ್ಪಳಿಸಿ ಮರಳುವೆ ಕಡಲಿಗೆ
ದಡ ಮೀರದೆ ನಿಂತಿರುವ ಆ ಘನತೆ ಮೂಡಿಸು ಎನ್ನ ಒಡಲಿಗೆ !!

-ಸುಬ್ಬು ಪದ್ಮನಾಭ್

Thursday, March 3, 2016

ಉಪ್ಪಿಯೊಂದಿಗೆ ಒಂದು ಸುಂದರ ಸಂಜೆ - ಉಪ್ಪಿ ೨

Natakothsava-2015 Charity to Nepal Earthquake victims - Highest ticket sold volunteer

Very satisfying night indeed when I learnt that Natakothsava-2015 was able to make profits and donate it to Nepal Earthquake victims. Thanks to all those who supported and watched multilingual drama festival. Its because of you Nepal is re building the nation by building schools for educating kids. When I spare my extra time for such cause I feel contented and I am happy to receive appreciation from our Bannadavesha and Natakothsava-2015 (8 language multilingual drama festival) leader Padma Kadur . It has not only provided many part time artists like me a chance to showcase the talent but also enhanced our lives in a big way. Leadership is commendable. Congratulations to the team and proud of you. I also thank my directors  Nagabharana.T.S sir and Vinay Bhardwaj for a role in their drama direction.

ಚಂದ್ರಹಾಸ ಪ್ರಸಂಗದಲ್ಲಿ ಕಟುಕ

Sep 26 2015

ಪುಣ್ಯಭೂಮಿ

Nov 1, 2015 - SSCF Charity Event _ Cricket Umpire

It was my privilege to play a role of an umpire for SSCF Charity event- Cricket matches held on Nov 1 for Mayors cup in San Ramon, CA .
Met Dublin and San Ramon Mayor and spoke to them. During the discussion Dublin city mayor David Haubert popularly known as "Dublin Dave" told me he really enjoyed the most energetic speech by an Indian PM Narendra Modi in San Jose on Sep 27 and showed me pictures from his phone the photos he took with Indian PM with some pride. I felt so proud ,this is nothing but a pure majic that our PM Narendra Modi is able to create the impression of India worldwide. I was never been so proud of any PM in my lifetime so far.
Thank you Girish Kota for those beautiful pictures.

ಯಮ - ಕೊಟ್ರಲ್ಲೋ ಕೈ- Nov 8 2015

4th Kannada Drama on stage : "ಯಮ - ಕೊಟ್ರಲ್ಲೋ ಕೈ Yama - kotralloo kai "
----------------------------------------------------------------------------------------------------
A humourous comedy drama was staged on Tri valley kannada sangha's Kannada Rajyothsava celebration on Nov 7 at Gale ranch middle school , San Ramon 
Got an offer to play a role of a swamiji who comes to bay area from Yama loka and never returns from bay area. Yama is left with no one as everyone who comes from Yama loka prefer staying back in the area.
Very thankful to my friend Sudheer Gundanna who offered me a swamiji's role, this drama was hugely popular in Natakothsava-2015 as well so very well directed by most enthusiastic Deepa Chithranna and Raviraj Pangal Thank you Deepa for hosting us for all the practice session as well.

ಬೆಳಕು

ಬೆಳಕೆಂಬುದು ಅವನಿರುವಿಕೆಯ ಪ್ರತೀಕ
ಬುದ್ದಿಯ ಕ್ಷಮತೆಗೆ ಎಟುಕದು ಯಾತ್ರಿಕ
ಕಾಣಿಸುವುದೇ ಕತ್ತಲಾದ ಬಳಿಕ ನೆರಳು
ಆಂತರ್ಯ ತಿಳಿಯದೆ ಇರುವಿಕೆಯ ತಿರುಳು !!
--ಸುಬ್ಬು ಪದ್ಮನಾಭ್

The light represents his existence
The light that those do not seem to see
cannot be seen by the intellectual mind
Our own shadow cannot be seen in darkness
The resonating light in everyone should be felt !
Subbu Padmanabh

ಮಾತೃಭಾಷೆ

ತಾಯಿ ಇಲ್ಲದವನು ನತದೃಷ್ಟ 
ಬದುಕಿಯಾನು ಕಳೆದುಕೊಂಡು ತ್ರಾಣ 
ಮಾತೃಭಾಷೆ ಇರುವುದು ಅದೃಷ್ಟ 
ಮರೆತರೆ ಹೋಗಲಿ ಇಂದಿಲ್ಲೇ ಪ್ರಾಣ 
- ಸುಬ್ಬು ಪದ್ಮನಾಭ್

ಮಾತೃಭಾಷೆ ಕೇವಲ ಮಾತನಾಡುವುದಕ್ಕೆ ಇರುವ ಸಾಧನ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ, ನಮ್ಮತನ ನಮ್ಮ ಆಚಾರ-ವಿಚಾರಗಳು , ದೇಶದ ನಂಬಿಕೆ ವಿಶ್ವಾಸಗಳು , ನಮ್ಮಿಂದ ನಾಡಿಗೆ ಸಹಾಯವಾಗಲಿರುವ ಅಂಶಗಳು ಅಲ್ಲಿ ಹುದುಕಿಕೊಂಡಿರುತ್ತದೆ, ಹೀಗೆ ಹುದುಗಿಕೊಂಡಿರುವ ನಿಧಿಯನ್ನು ಆಚೆ ತರುವುದಕ್ಕೆ ಸಹಾಯ ಮಾಡುವ ಶ್ರೇಷ್ಠ ಸಾಧನ -ಅವರವರ ಮಾತೃಭಾಷೆ. ಅದಕ್ಕೋ ಏನೋ ನನ್ನ ೫ ವರ್ಷದ ಮಗ ಕನ್ನಡ ಕಲಿಯುವಾಗ ನನಗಾಗುವ ಆನಂದ ಅಪಾರ. ಕನ್ನಡ ಭಾಷೆಯನ್ನೂ ಅವನಿಗೆ ಕಲಿಸುತ್ತಿರುವ "ಕನ್ನಡ ಕಲಿ" ಗುರು ವೃಂದಕ್ಕೆ ನಮಸ್ಕರಿಸುತ್ತೇನೆ.

ಯಾವುದು ಅಸಹಿಷ್ಣುತೆ ?


ಅನ್ನ ಕೊಡುವ ಮನೆಗೆ
ಕನ್ನ ಹಾಕುವುದುಲ್ಲವೇ ? 
ಉಪ್ಪು ಕೊಡುವ ತಾಯಿಗೆ
ಕಪ್ಪು ಬಳಿಯುವುದಲ್ಲವೇ ?
-ಸುಬ್ಬು ಪದ್ಮನಾಭ್

ನಮ್ಮ ಸಂಸಾರ ಇಂದು ಒಟ್ಟಿಗೆ ಕೂತು ಊಟ ಮಾಡುತ್ತಿದ್ದಾಗ

ನೋವ ೨ನಮ್ಮ ಸಂಸಾರ ಇಂದು ಒಟ್ಟಿಗೆ ಕೂತು ಊಟ ಮಾಡುತ್ತಿದ್ದಾಗ :
-----------------------------------------------------------------

ನವೆಂಬರ ೨೯ , ೨೦೧೫

೫ ವರ್ಷದ ಮಗ ನಮಿತ್ ನ ಜೊತೆ ಸಂಭಾಷಣೆ :
ನಾನು : ನಿನ್ನೆ ಒಂದು ಹುಟ್ಟು ಹಬ್ಬಕ್ಕೆ ಹೋಗಿದ್ವಲ್ಲ ಪುಟ್ಟ , ಅಲ್ಲಿ ಇಬ್ಬರು ಫ್ಯಾಮಿಲಿ ನನಗೆ ಹೊಸಬರು . ನಾನು ಭೇಟಿ ಮಾಡಿದೆ ಮತ್ತು ಅವರಿಗೆ ಹೇಳಿದೆ ಕೆ ಕೆ ಏನ್ ಸಿ membership ತೆಕೋಳಿ ಅಂತ ತಿಳಿಸಿದೆ . 

ನಮಿತ್ : ಪ್ರೆಸಿಡೆಂಟ್ ಆದ್ರ ಹಾಗದ್ರೆ ನೀವು ?
ನಾನು : ಇಲ್ಲ ಪುಟ್ಟ -ಪ್ರೆಸಿಡೆಂಟ್ ಅಲ್ಲ , ಮುಂದಿನ ವರ್ಷಕ್ಕೆ ಬೇರೆ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ , Member Relations Chair . ಅದನ್ನೇ ಮಾಡ್ತೀನಿ 
ನಮಿತ್ : ಅದು ನಿಮಗೆ ಇಷ್ಟನ ?
ನಾನು : ನೋಡು ಪುಟ್ಟ , ಇಷ್ಟ ಕಷ್ಟ ಅಂತ ನೋಡಕ್ಕೆ ಆಗಲ್ಲ , ಕೆಲಸ ಮಾಡ್ಬೇಕು ಅನ್ನುವುದು ನನ್ನ ಮನಸ್ತಿತಿ .
ನನಗೆ ಏನಿಷ್ಟ ಅನ್ನುವುದಕ್ಕಿಂತ ಕನ್ನಡ ನಮ್ಮ ಭಾಷೆ ಅಲ್ವಾ ? ಆದ್ರಿಂದ ಕನ್ನಡ ಸಂಘಟನೆಯಾದ ಕೆ ಕೆ ಏನ್ ಸಿ ಗೆ ಸಿಕ್ಕಿರುವ ಜವಾಬ್ದಾರಿಯನ್ನು ಸಂತೋಷದಿಂದ ಮಾಡ್ಬೇಕು ಪುಟ್ಟ.
ನಮಿತ್ : ಒಹ್ , ಸರಿ . ಅಮ್ಮ ಮೊಸರು ಹಾಕಿ .

ಮಣ್ಣಿನ ಕಣಕಣದ ಪರಿಚಯ

ಮಣ್ಣಿನ ಕಣಕಣದ ಪರಿಚಯವಿರುವವರು
ದೇಶವನ್ನಾಳಿ ಎಲ್ಲರ ಮೆಚ್ಚುಗೆಗಳಿಸಿರುವರಿವರು
ರಾಷ್ಟ್ರದ ಸಾಮಾನ್ಯರ ನಾಡಿಮಿಡಿತವನ್ನರಿತವರು
ಮೋದಿಯನ್ನು ಪ್ರಧಾನಿಯಾಗಿ ನಮಗಿತ್ತವರು
ಜನುಮದಿವಸದಿ ಶುಭ ಕೊರುವರು ಕೊಟಿ ಜನರು 
-ಸುಬ್ಬು ಪದ್ಮನಾಭ್

ನೋಟ - ಮಾಟ

ಚೆಲುವೆಯ ಕಂಗಳ ನೋಟ
ತನು ಹೂವಾಗಿಸಿದೆ
ಬಳುಕುವ ಮೈ ಮಾಟ
ಮನ ಕವಿತೆಯ ಹಾಡಿಸಿದೆ
-ಸುಬ್ಬು ಪದ್ಮನಾಭ

ನುಡಿ - ನಡೆ

ಕಾವೇರಿ ನೀರಿನ ಕಂಗಳಾಗು 
ಸಹ್ಯಾದ್ರಿ ಸಿರಿಯ ಬಂಧುವಾಗು
ಕನ್ನಡ ನುಡಿಯ ಸಿರಿಯಾಗು 
ಕನ್ನಡ ನಡೆಯ ಮನಸಾಗು 
-ಸುಬ್ಬು ಪದ್ಮನಾಭ

ಸೂರ್ಯ - ಚಂದ್ರ

ಕಲ್ಲುಮುಳ್ಳನೇ ನೆನೆನೆನೆದು ಕೂರಲಾರೆ  
ಪೇಚಾಡಿ ಪರರನು ನೋಯಿಸಿ ಬಾಳಲಾರೆ  
ಸೂರ್ಯ ತಾನುರಿಯದೆ ಬೆಳಕು ನೀಡಲಾರ  
ಚಂದಿರ ತಂಪಾಗಿರದೆ ಕಂಪನೂ ಬೀರಲಾರ 
-ಸುಬ್ಬು ಪದ್ಮನಾಭ್

ಏನನ್ನು ಬೇಡುವುದು ?

ಬೇಡು ಬೇಡುವುದಾದರೆ
ನಿತ್ಯ ಹರಸುವ
ಬೊಗಸೆ ಕೈಗಳನು 
ತೋರು ತೋರುವುದಾದರೆ  
ಪ್ರತಿಫಲ ಬಯಸದಿರುವ
ಕಾಯುವ ಕರುಣೆಯನು 
-ಸುಬ್ಬು ಪದ್ಮನಾಭ

ಬೆಂಗಳೂರು ವಾಯ್ಸ್ ರೇಡಿಯೋ ಕಾರ್ಯಕ್ರಮ- ಗ್ಲೋಬಲ್ ಕನ್ನಡಿಗರಿಗೆ ಯೋಗರಾಜ್ ಭಟ್ ರ ಸಂದೇಶ


ಕರ್ನಾಟಕದ ಕನ್ನಡಿಗರು ಅಥವಾ ದೇಶದ ಹೊರಗೆ ಬದುಕುತ್ತಿರುವ ಗ್ಲೋಬಲ್ ಕನ್ನಡಿಗರಾಗಲಿ ದಿನದಲ್ಲಿ ೧೨ ಗಂಟೆಗಳ ಕಾಲ ಎಚ್ಚರವಾಗಿದ್ರೆ ಒಂದಿಷ್ಟು ೧೦-೧೫ ನಿಮಿಷವಾದರು ನಮ್ಮ ಬದುಕು ನಮ್ಮ ತನ ನಾವು ಏನು ಮಾಡಬೇಕು ಎಂದು ಅನಿಸಬೇಕು, ಕೆಲವರಿಗೆ ಅನಿಸಬಹುದು. ಕೆಲವು ಸಾಧಕರಿಗೆ ಬದುಕುವುದಕ್ಕೆ ನಮ್ಮ ತನ ನಮ್ಮನ್ನು ಸದಾ ಕಾಡುವುದು ಖಂಡಿತ .ವಿಶೇಷವಾಗಿ ಕನ್ನಡಿಗರಿಗೆ ಸ್ವಲ್ಪ ಮುದ್ದು ಮಾಡಿ ಎಳಿಸಬೆಕಾಗುತ್ತದೆ ಅಥವಾ ಹಾರೆಕೊಲಿನ ಪ್ರಯೋಗ ಬೇಕಾಗುತ್ತದೆ , ಅಷ್ಟು ಸುಲಭದಲ್ಲಿ ನಾವು ಎಳುವವರಲ್ಲ. 
ನಮ್ಮ ತನವನ್ನು ಕಾಪಾಡುವುದಕ್ಕೆ ನಾವೇ ಕನ್ನಡಿಗರು ಸ್ವಪ್ರೇರಣೆಯಿಂದ ಎದ್ದು ನಿಂತು ಸಂಘ ಸಂಸ್ಥೆಗಳು, ಗುಂಪುಗಳು ಮಾಡಿಕೊಂಡು ವೃತ್ತಿಯ ಜೊತೆ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ನಮ್ಮ ತನ ಉಳಿಯುತ್ತೆ. ಅಂತ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂತೃಪ್ತಿಯನ್ನೂ ಕೂಡ ಕಂಡುಹಿಡಿದುಕೊಳ್ಳಬಹುದು ಅದಕ್ಕೆ ಮನಸ್ಸು ಕೆಲವರಿಗೆ ಹಾತೊರೆಯುವುದು. 
ನಮ್ಮೂರಿಗೆ ಬಂದು ಸಾಧನೆ ಮಾಡುತ್ತೇನೆ ಅನ್ನುವುದು ಒಂದು ಸಿದ್ಧಾಂತವಾದರೆ, ಇರುವ ಜಾಗದಲ್ಲೇ ಇದ್ದುಕೊಂಡು ಕೂಡ ಸಾಧಿಸಿ ತೋರಿಸಬಹುದು . ಸಾಧನೆ ಮಾಡುವವರು ಬೆಟ್ಟ ಹತ್ತಲೇಬೇಕು ನೆಲದಲ್ಲಿಯೇ ಕೂತು ಬೆಟ್ಟ ಹತ್ತದೇ ಈ ಕಾರ್ಯ ಸಿದ್ದಿಯಾಗುವುದಿಲ್ಲ. ಕರ್ನಾಟಕದಲ್ಲಿ ಇದ್ದು ಬದುಕುವ ಹಾಗೆಯೇ ಎಲ್ಲಿಯೂ ಕೂಡ ಬಾಳಿ ಬದುಕಬಹುದು ಮತ್ತು ತೃಪ್ತಿಯ ಜೀವನ ಅನುಭವಿಸಬಹುದು .

ಕೈತುತ್ತಿನ ಮುದ್ದು ಕಂದ

ಕೈತುತ್ತಿನ ಮುದ್ದು ಕಂದನೆ 
ಕೈಕಾಲುಗಳ ಬಲ ನೀನೆ 
ಎದೆಗೆ ಒತ್ತಿ ತಬ್ಬಿಕೊಂಡೆ
ಮುತ್ತುಮಳೆ ಸುರಿಸಿಕೊಂಡೆ 
ನನ್ನೆದೆಯ ವಿಶಾಲ ರಾಜ್ಯದಿ 
ಸಮೃದ್ಧಿಯ ಶಿಖರ ನೀನಾದೆ 
-ಸುಬ್ಬು ಪದ್ಮನಾಭ್

ಶಿವಲಿಂಗ - ಕನ್ನಡ ಚಿತ್ರದ ವರದಿ

ಶಿವಲಿಂಗ - ಕನ್ನಡ ಚಿತ್ರದ ವರದಿ:
-------------------------------------
ಒಳ್ಳೆಯ ಸಿನಿಮಾ ಕೊಟ್ಟರೆ ನಿಜವಾಗಿ ಹೇಳುತ್ತೇನೆ ಕನ್ನಡಿಗರು ಚಿತ್ರಮಂದಿರಗಳಿಗೆ ಬರ್ತಾರೆ . ಅದಕ್ಕೆ ೨೦೧೫ರ ಕೆಲವು ಸಿನೆಮಗಳನ್ನೇ ನೋಡಿ. ಮೊದಲನೇ ದಿವಸ ಮೊದಲ ವೀಕ್ಷಣೆಗೆ ನನ್ನ ಮಕ್ಕಳಿಬ್ಬರನ್ನೂ ಕರೆದುಕೊಂಡು ಸಂಸಾರ ಸಮೇತ ಹೋಗಿದ್ದೆ . ಆಪ್ತಮಿತ್ರ ಮತ್ತು ಆಪ್ತರಕ್ಷಕ ತೆಗೆದ ಪಿ ವಾಸು ನಿರ್ದೇಶನ ತುಂಬಾ ಇಷ್ಟವಾಗಿತ್ತು..ನನ್ನ ಮಕ್ಕಳು ರಂಗಿತರಂಗ ಸಿನಿಮಾದಲ್ಲಿರೋ ಥ್ರಿಲ್ ನೋಡಿ ಖುಷಿ ಪಟ್ಟಿದ್ದರು. ಆದ್ದರಿಂದ ಮನೆಯವರಿಗೆಲ್ಲಾ ಇಷ್ಟವಾಗುತ್ತದೆ ಎಂದು ನಂಬಿ ಕಥೆ ಕೇಳದೆ ಹೋಗಿ "ಶಿವಲಿಂಗ " ಸಿನಿಮಾ ನೋಡಿ ಬಂದೆವು.
ಸಿನಿಮಾ ಮನೆಯವರಿಗೆಲ್ಲಾ ಹಿಡಿಸಿದೆ. ಮುಖ್ಯವಾಗಿ ಶಿವಣ್ಣರವರಿಗೆ ತುಂಬಾ ಹೊಂದಿಕೊಳ್ಳುವಂತ ಪಾತ್ರ "ಶಿವಲಿಂಗ" - ಸಿನಿಮಾ ಹೆಸರೇ ಜನರನ್ನು ಸಿನೆಮಾಗೆ ಕರೆತರುವ ಹಾಗಿದೆ ಅದರ ಜೊತೆಗೆ ಡ್ರಾಮಾ ಮತ್ತು ಸಸ್ಪೆನ್ಸ್ ಅಂಶವಂತೂ ಕೊನೆಯತನಕ ಜನರನ್ನು ಕುರ್ಚಿಯ ತುದಿಯಲ್ಲಿ ಕೂರಿಸುವ ಹಾಗೆ ಕಥೆ ಇದೆ . 
ಎಲ್ಲಾ ವರ್ಗದ ಜನರನ್ನೂ ಚಿತ್ರಮಂದಿರಗಳಿಗೆ ತರಬೇಕಾದರೆ ಕಥೆಯೇ ಚಿತ್ರದ ರಾಜ, ಆ ಮಾತು ಇವತ್ತಿಗೂ ನಿಜ. ಇಂಥ ಒಂದು ಅದ್ಭುತ ಕಥೆಯನ್ನು ಪಿ ವಾಸುರವರು ರೋಮಾಂಚನವನ್ನು ಉಳಿಸಿಕೊಂಡು ಚೆನ್ನಾಗಿ ಹೆಣೆದಿದ್ದಾರೆ . ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಹೋಗುವುದಂತೂ ಖಂಡಿತ. ದಯವಿಟ್ಟು ಯಾರನ್ನು ಕಥೆ ಬಗ್ಗೆ ಒಂದು ಸ್ವಲ್ಪವೂ ಮಾತನಾಡಿಸದೆ ಸೀದಾ ಚಿತ್ರಮಂದಿರಕ್ಕೆ ಬನ್ನಿ, ಖಂಡಿತ ನಿರಾಸೆಯಾಗುವುದಿಲ್ಲ . 
ಉತ್ತಮವಾಗಿರುವಂತ ಮೂರು ಉದಾಹರಣೆ ಹೇಳುತ್ತೇನೆ :
ಕುರ್ಚಿಯ ಮೇಲೆ ಕೂತು ಒಂದು ಪಾತ್ರ ತಿರುಗುತ್ತದೆ ಆಗ ಇನ್ನೊಂದು ಪಾತ್ರದ ಮುಖ ಅರ್ಧರ್ಧ ಇನ್ನೊಂದು ಪಾತ್ರದೊಳಗೆ ಬಂದು ಹೋಗುತ್ತದೆ . ಕನ್ನಡದಲ್ಲಿ ನಾನು ಈ ರೀತಿ ನೋಡಿದ್ದು ಇದೇ ಮೊದಲು. ಇನ್ನೊಂದು ಹೊಸತನ ಪಾತ್ರದ ಹೊಡೆದಾಡುವ ಸನ್ನಿವೇಶದಲ್ಲಿ ಸ್ಮಾರ್ಟ್ ಫೋನ್ ಬಳಸಿಕೊಂಡಿರುವ ರೀತಿ ಹೊಡೆದಾಡುವ ದೃಶ್ಯಗಳಲ್ಲಿ ಹೊಸತನ ತುಂಬಿದೆ . 
ಸುಧಾರಣೆಯಾಗಬೇಕಿರುವ ಮೂರು ಸನ್ನಿವೇಶ ಕೂಡ ಉದಾಹರಣೆ ಕೊಡುತ್ತೀನಿ..
ಚಿತ್ರದ ನಾಯಕ ಅವಶ್ಯಕತೆಗಿಂತ ಜಾಸ್ತಿ ಹೊಡೆದಾಡುವ ಕೆಲವು ದೃಶ್ಯಗಳನ್ನು ಕತ್ತರಿ ಹಾಕುವಲ್ಲಿ ಎಡವಿದ್ದಾರೆ, ಸುಮ್ಮನೆ ೧೦ ಬೇರೆ ಬೇರೆ ಜನಕ್ಕೆ ಹೊಡೆಯಲೇ ಬೇಕೆಂದೇನಿಲ್ಲವಲ್ಲ , ೨-೩ ಜನಕ್ಕೆ ಹೊಡೆದರೆ ಸಾಕಿತ್ತು. ಚಿತ್ರದಲ್ಲಿ ಹೆಣ್ಣು ಮಕ್ಕಳು ಕತ್ತಿಗೆ ಹಾಕುವ ಸರ ನಾಯಿಯ ಕತ್ತಿಗೆ ಹಾಕುವ ರೀತಿ ವಿಪರೀತ ದಪ್ಪ ಇದೆ smile emoticon
ಪಾತ್ರಗಳು ಯಾತಕ್ಕೆ ವಿದೇಶಕ್ಕೆ ಹೋದವೋ ಹಾಡು ಹೇಳುವುದಕ್ಕೆ ಅದು ಕಥೆಯಲ್ಲಿ ಹೆಣೆಯಬೇಕು ಇಲ್ಲವಾದರೆ ಪಾತ್ರ ಸುಮ್ಸುಮ್ನೆ ಹಾಡು ಬಂದಾಗ ಯೂರೋಪ್ ಖಂಡಕ್ಕೆ ಹೋಗುವುದು ಅಷ್ಟು ಸಮಂಜಸವಲ್ಲ , ನಿಮಗೆ ಗೊತ್ತಾಯಿತು ಅನ್ಕೋತೀನಿ.
ಬೆಂಗಳೂರಿನ ಶಿವಾಜಿನಗರದ ಕನ್ನಡಕ್ಕಿಂತ ಉರ್ದು ಮಿಶ್ರಿತ ಹಿಂದಿ ಅವಶ್ಯಕತೆಗಿಂತ ಜಾಸ್ತಿ ಉಪಯೋಗವಾಗಿದೆ , ಅಷ್ಟೊಂದು ಉರ್ದು ಬೆರಕೆ ಹಿಂದಿಯ ತೂರಿಕೆ ಬೇಕಿರಲಿಲ್ಲ ಅನ್ನಿಸಿತು . 
ಒಂದು ಸಿನಿಮಾ ನೋಡಿ ಬಂದರೆ ಸಿನಿಮಾ ನೋಡಿ ಕಾಲಕ್ರಮೇಣ ಚಿತ್ರವನ್ನು ಮರೆಯಬಹುದು ಆದರೆ ಚಿತ್ರದ ಹಾಡುಗಳು ನಮ್ಮ ಪ್ರಜ್ಞೆಯಲ್ಲಿ ಖಂಡಿತ ಉಳಿಯಬೇಕು ಅಂತ ಸುಮಧುರ ಸಾಹಿತ್ಯವಿರುವ ಒಂದೆರಡು ಹಾಡಂತೂ ( ಬೊಂಬೆ ಮತ್ತು ಉಪಕಾರ ) ತುಂಬಾನೇ ಚೆನ್ನಾಗಿದೆ . ಹರಿಕೃಷ್ಣರ ಸಂಗೀತ ಮತ್ತೊಮ್ಮೆ ಜಯಭೇರಿ, ಸಾಹಿತ್ಯ ಬರೆದಿರುವ ನಾಗೇಂದ್ರ ಪ್ರಸಾದ್ ಕವಿರತ್ನರೆ. 
ನಾಯಕಿಗೆ ಬೆಳಕಿಗೆ ಬರುವುದಕ್ಕೆ ಪಾತ್ರ ಸೂಕ್ತವಾಗಿದೆ ಅದನ್ನು ವೇದಿಕಾ ಚೆನ್ನಾಗಿ ನಿಭಾಯಿಸಿದ್ದಾರೆ. ಶಕ್ತಿ ವಾಸುದೇವನ್ ಪಾತ್ರಕ್ಕೆ ಜೀವ ತುಂಬಿ ಎಲ್ಲಾ ಕನ್ನಡಿಗರಿಗೆ ಬರ್ಜರಿಯಾಗಿ ತಮ್ಮನ್ನು ಪರಿಚಯ ಮಾಡಿಕೊಂಡಿದ್ದಾರೆ . ವಿಜಯ್ ಪ್ರಕಾಶ್ರವರ ಸಿರಿಕಂಠದಿಂದ "ಎತ್ತರ ಎತ್ತರ " ಹಾಡು ಚಿತ್ರದಲ್ಲಿ ತುಂಬಾ ಸೂಕ್ತವಾಗಿ ಹೊಂದುವ ಆ ಸನ್ನಿವೇಶ ಎಲ್ಲವೂ ಮೆಚ್ಚುವಂತದ್ದು. ಸಾಧು ಕೋಕಿಲ ಅವರ ಪಾತ್ರ ಎಲ್ಲೂ ನಿಮಗೆ ತೂರಿಕೆ ಅನ್ನಿಸುವುದಿಲ್ಲ , ಹಾಸ್ಯ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿದೆ .ಕಥೆಯಲ್ಲಿ ಪಾರಿವಾಳಕ್ಕೂ ಪಾತ್ರ ಇದೆ ಮತ್ತು ಅದೂ ಮಿಂಚಿದೆ. ಈ ಚಿತ್ರ ನಿರ್ಮಾಣ ಮಾಡಿದ ಕೆ ಎ ಸುರೇಶ್ ರವರಿಗೆ ಅಭಿನಂದಿಸಲೇಬೇಕು . ಮೈಸೂರು ಬೆಂಗಳೂರು ರೈಲನ್ನು ಹೆಲಿಕ್ಯಾಪ್ಟರ್ ನಿಂದ ಸುಮಾರು ೧ ನಿಮಿಷಗಳ ಕಾಲ ಸೆರೆ ಹಿಡಿರುವುದು ಕೆ ಹೆಚ್ ದಾಸ್ . 
ಶಿವಣ್ಣರ ಆನಂದ್ ಮೈಸೂರಿನ ಪದ್ಮ ಚಿತ್ರಮಂದಿರದಲ್ಲಿ ನೋಡಿದ್ದೆ. ಆಗ ಹೇಗೆ ಕುಣಿದಿದ್ದರೋ ಈಗಲೂ ಅವರ ನೃತ್ಯ ಮಾಸಿಲ್ಲ ಅದೇ ಉತ್ಸಾಹ ಎದ್ದು ಕಾಣುತ್ತದೆ "ಆನಂದ್ " ಚಿತ್ರದಿಂದ ಶುರು ಮಾಡಿ ಮೂವತ್ತು ವರುಷದಿಂದ ನಟನೆ ಮತ್ತು ಅದ್ಧೂರಿ ನೃತ್ಯ ಮಾಡಿಕೊಂಡು ರಂಜಿಸಿದ ಡಾ।। ಶಿವರಾಜಕುಮಾರ C.I.D ಪಾತ್ರದ ಚೌಕಟ್ಟಿನೂಳಗೆ ಹೆಚ್ಚು ಮಿಂಚಿರುತ್ತಾರೆ . ಮಾತುಗಳನ್ನು ಸಾಕಷ್ಟು ನಿಧಾನವಾಗಿ ಆಡಿದ್ದಾರೆ. ಶಿವಣ್ಣರ ನಟನೆ ತುಂಬಾ ಸ್ವಾಭಾವಿಕವಾಗಿದೆ ಮತ್ತು ಅವರಿಗೆ ಹೇಳಿ ಮಾಡಿಸಿದ ಚಿತ್ರ ಮತ್ತು ಪಾತ್ರ . 
ಶಿವಣ್ಣ , ನಿಮ್ಮ ಒಳಗಿರುವ ಆತ್ಮವಿಶ್ವಾಸ ಮತ್ತು ಜೀವನೋತ್ಸಾಹ ಚಿತ್ರದಲ್ಲಿ ಎದ್ದು ಕಾಣಿಸುತ್ತದೆ . ಕೆಲವು ದೃಶ್ಯಗಳಲ್ಲಿ ನಿಮ್ಮ ಮಾತು ಮತ್ತು ಹಾವಾಭಾವಗಳಲ್ಲಿ ನಮ್ಮ ಅಣ್ಣಾವ್ರು ಕಾಣಿಸುತ್ತಾರೆ ಮತ್ತು ಕೇಳಿಸುತ್ತಾರೆ, ಸೂಕ್ಷ್ಮವಾಗಿ ಗಮನಿಸಬೇಕಷ್ಟೆ .
ಒಟ್ಟಾರೆ "ಶಿವಲಿಂಗ " - ಕನ್ನಡ ಪ್ರೇಕ್ಷರಿಗೆ ಮಾತ್ರವಲ್ಲ ನಮ್ಮ ದೇಶದವರೆಲ್ಲಾ ಒಂದು ಬಾರಿ ನೋಡಬಹುದು. ಹತ್ತಕ್ಕೆ ಎಂಟುವರೆ ಅಂಕಗಳು ಕೊಡುತ್ತಿದ್ದೇನೆ ಮತ್ತು ಅಮೆರಿಕನ್ನಡಿಗರನ್ನು ಚಿತ್ರಮಂದಿರಕ್ಕೆ ಕರೆಯುತ್ತಿದ್ದೇನೆ . ಪಿ ವಾಸು ಮತ್ತು ಚಿತ್ರತಂಡದವರಿಗೆ ಅಭಿನಂದನೆಗಳು.

ಗುರಿ-ಗರಿ

ಕನಸಿನ ದಾರಿಯಲ್ಲಿ
ಒಂದಿಷ್ಟು ಗುರಿಗಳಿವೆ
ಬದುಕಿನ ಪಯಣದಲಿ
ಒಂದಿಷ್ಟು ಗರಿಗಳಿವೆ

 -ಸುಬ್ಬು ಪದ್ಮನಾಭ

ನೆನಪಿನ ಮೂಟೆ


ಚೇತನ ಮಾಸದ ಬದುಕು
ಒಂದು ನೆನಪಿನ ಮೂಟೆ
ಕಟ್ಟಬೇಡ ಇಲ್ಲಿ ದ್ವೇಷ 
ಅಸೂಯೆಗಳ ಕೋಟೆ
-ಸುಬ್ಬು ಪದ್ಮನಾಭ

ಮನೆ ಮತ್ತು ಬೆಣ್ಣೆ ದೋಸೆ

ಮನೆಯಲ್ಲೆಂದೂ ಕೂರದಿರು
ಕೂತರು ಪರವಾಗಿಲ್ಲ
ತಿಂಡಿ ಯೋಚನೆ ಮಾಡದಿರು 
ಯೋಚನೆ ಮಾಡಿದರೂ ಪರವಾಗಿಲ್ಲ
ಮಲ್ಲೇಶ್ವರ ದೋಸೆ ನೆನೆಯದಿರು
ನೆನೆದರೂ ಪರವಾಗಿಲ್ಲ
ದೋಸೆ ಸಿಗಲಿಲ್ಲವೆಂದು ಚಿಂತಿಸದಿರು
ಚಿಂತಿಸಿದರೂ ಪರವಾಗಿಲ್ಲ
ಉದ್ದು ಅಕ್ಕಿ ನೆನೆ ಹಾಕಲು ಒಳಗಿರು
ಇನ್ನೂ ಎಷ್ಟು ಬರೆಯುತ್ತಿರಲಿ
ಮೆಂತ್ಯ ಬೆರೆಸಲು ಮರೆಯದಿರು 
--ಸುಬ್ಬು ಪದ್ಮನಾಭ್

ಜೀವನೋತ್ಸಾಹ