Sunday, December 29, 2019

"ನಾನು" - ಆತ್ಮ

ಆತ್ಮವನ್ನರಿಯಲಿಕ್ಕೆ ಹೋಗದ ನಾವು "ನಾನು" ಅನ್ನುವ ವ್ಯಕ್ತಿತ್ವ ಸ್ವಂತ ಮನೆನೇ ಅಂತನಾದ್ರೂ ಅರಿಯಬೇಕು. ನನ್ನ ಸ್ವಂತ ಮನೆಯ ಮುಂದೆ ಯಾರು ದೊಡ್ಡವರಲ್ಲ ನನ್ನ ಬಾಡಿಗೆ ಮನೆಯೂ ಕೂಡ. ಇದನ್ನಾದರೂ ನನ್ನ ಬುದ್ದಿಗೆ ನಿತ್ಯ ಹೇಳಿಕೊಳ್ಳಬಹುದಲ್ಲ ? - ಸುಬ್ಬು ಪದ್ಮನಾಭ
ನಿತ್ಯ ಇದನ್ನ ಹೇಳಿಕೊಂಡರೆ ಭಯ ಹೋಗುತ್ತೆ ಅದೇ ರಾಮ ಮಂತ್ರ ಜಪ ಅಂತಿಟ್ಕೊಬೋದು ಯಾಕೆ ಅಂದ್ರೆ ಪ್ರೊವೆನ್ ಅದು. ಅದಕ್ಕೆ ರಾಮ ಮಂದಿರ ಆಗ್ಬೇಕು ಅಂತ ಅವರು ಕೆಲಸ ಮಾಡಿದ್ದು . ಇದೇ ನಮ್ಮ ಹಿರಿಯರು ಗಾಯತ್ರಿ ಮಂತ್ರದಲ್ಲಿ ಕೊಟ್ಟಿರುವುದು . ಇದಕ್ಕೆ ದಿನನಿತ್ಯ ಸಂಧ್ಯಾವಂದನೆ ಮಾಡಿ ಗಾಯತ್ರಿ ಜಪವನ್ನು ೧೦೮ ಮಾಡಬೇಕು . ಇಷ್ಟು ದೊಡ್ಡ ಸೀಕ್ರೆಟ್ ಕೊಟ್ಟಿದ್ರು ನಾವು ಬ್ಯುಸಿ ಬ್ಯುಸಿ ಅಂತೀವಿ. ಏನಿಕ್ಕೆ ಬ್ಯುಸಿ ? ೨ ಹೊತ್ತು ಊಟ ಮಾಡಕ್ಕೆ ......
೨೪ ಗಂಟೇನೂ ನನ್ನ ಬಾಡಿಗೆ ಮನೆಯ ಬಗ್ಗೆ ಯೋಚಿಸುವುದಾದರೆ ಬ್ರಾಹ್ಮಣ ಜನ್ಮ ಯಾತಿಕ್ಕೆ ಮತ್ತೆ ? ಸಾಧನೆ ಮಾಡೋದು ದೂರ ಆದರೆ ೧೦೮ ಗಾಯತ್ರಿ ಜಪಾನೂ ಮಾಡದೆ ಬಾಡಿಗೆ ಮನೆ ಬಿಡುವುದಾದರೆ ಒಳ್ಳೆ ಜನ್ಮನಾ ಅದು ಅಥವಾ ದೇವರು ಕೊಟ್ಟ ಈ ಜನ್ಮವನ್ನು ವೇಸ್ಟ್ ಮಾಡಿಕೊಂಡ್ವಾ ?



ಅವನೇ ಶ್ರೀಮನ್ನಾರಾಯಣ - Avane Srimmannarayana


ಚಿತ್ರ ನೋಡಿ ನನಗನಿಸಿದ್ದು: 
ರಕ್ಷಿತ್ ಶೆಟ್ಟಿ ಮಹಾನ್ ಪ್ರತಿಭೆ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ. ಅದ್ಭುತವಾದ ಯೋಚನಾಲಹರಿಗಳ ಶಕ್ತಿಯನ್ನು ಒಟ್ಟಿಗೆ ಜೋಡಿಸಿ ಕಥೆ ಹೆಣೆದು ಕಥೆ ಬರೆಯುವ ಸುಂದರ ಕಲೆ ಅವರಿಗೆ ಮತ್ತು ಅವರ "Seven Odds " ತಂಡಕ್ಕೆ ಇದೆ. ಚಿತ್ರದ ಕಥೆಯನ್ನು ಯೋಚಿಸಿಕೊಂಡು ಬರೆದು ರಿವ್ಯೂ ಮಾಡಿ ಕಥೆ ಸಂಭಾಷಣೆ ಎಲ್ಲವನ್ನು ಪಕ್ಕ ಮಾಡಿಕೊಂಡು ಅದ್ಭುತವಾದ ಚಿತ್ರೀಕರಣ ಮಾಡುವ ಚಾಣಾಕ್ಷ . ಬೇರೆ ಬೇರೆ ರೀತಿಯಾದ ಎರಡು ಚಿತ್ರಗಳು ಈ ಕಥೆ ಬರೆಯುವ ೭ ಆಡ್ಸ್ ತಂಡದಿಂದ ಬಂದು ಗೆದ್ದಿದೆ .ಯಾವುದೇ ಚಿತ್ರ ಯಶವ್ವಿಯಾಗುವುದಕ್ಕೆ ಚಿತ್ರಕ್ಕೆ ಇರುವ ಬರಹ ಮತ್ತು ಅದರ ಕತೆಯೇ ಜೀವಾಳ . ಚಿತ್ರ ಇಲ್ಲೇ ಗೆದ್ದಿರುವುದು. ಸಂಭಾಷಣೆ ಅಚ್ಚ ಕನ್ನಡದಲ್ಲಿ ಚೆನ್ನಾಗಿ ಬರೆದಿದ್ದಾರೆ. ಬರವಣಿಗೆಯ ವಿಶೇಷ ಏನಪ್ಪಾ ಅಂದ್ರೆ ನಗೆ ಮೂಡುವ ಹಾಗೆ ಸಂಭಾಷಣೆ ಮತ್ತು ಕತೆ ಹೆಣೆದಿರುವುದು ಈ ಚಿತ್ರದ ವಿಶೇಷತೆ.
ಇನ್ನು ಚಿತ್ರ ಗೆಲ್ಲುವುದಕ್ಕೆ ಸಿನೆಮಾಕ್ಕೆ ಬೇಕಾದ ಸಂಗೀತ ಮತ್ತು ಲಿರಿಕ್ಸ್ ಎರಡನೇ ಅಂಶ. ಚಿತ್ರಕಥೆ ಗೆದ್ದಿದೆ ಮತ್ತು ಮಿದುಳಿಗೆ ಕೆಲಸ ಜಾಸ್ತಿ ಕೊಡುತ್ತದೆ . ಎರಡು ಮೂರು ಸರ್ತಿ ನೋಡಿದರೆ ಕೊಟ್ಟಿರುವ ಕ್ಲೂ ಎಲ್ಲವೂ ಅರ್ಥವಾಗುತ್ತದೆ ಅನ್ನಿಸಿತು.ಕಥೆ ಹೆಣೆದಿರುವುದು ಕಡೆಯ ತನಕ ನಮ್ಮನ್ನು ಹಿಡಿದಿಟ್ಟುಕೊಂಡಿತ್ತು . 
ಅಜನೀಶ್ ಲೋಕನಾಥ್ ರವರ ಹಿನ್ನಲೆ ಸಂಗೀತ ಈ ಚಿತ್ರಕ್ಕೆ ನನ್ನ ಪ್ರಕಾರ ಚಿತ್ರದ ಎರಡನೇ ಹೀರೋ ಆಗಿ ಹೊರಹೊಮ್ಮಿದ್ದಾರೆ . ಚರಣ್ ರಾಜ್ ಸಂಗೀತ ಕೂಡ ಚೆನ್ನಾಗಿ ಮೂಡಿ ಬಂದಿದೆ. ವಿಜಯ್ ಪ್ರಕಾಶ್ ಹಾಡಿದ ಮೇಲೆ ಚಿತ್ರದ ಹಾಡು ಮನೆಮಂದಿಯ ಬಾಯಲ್ಲಿ ಬರುವುದು ಖಂಡಿತ ... ಚರಿತ್ರೆ ಸೃಷ್ಟಿಸೋ ಅವತಾರ ಅಂತ ನಾಗಾರ್ಜುನ ಶರ್ಮ ಬರೆದಿರುವುದು ಚಿತ್ರದ ಹಾಡುಗಳಲ್ಲಿ ಅತ್ಯುತ್ತಮ ಸಾಲು . "ಕಟುಕರ ಮುಂದೆ ಓದಬಾರ್ದು ಭಗವದ್ಗೀತೆ " ಅನ್ನೋ ಸಾಲು ಇದ್ಯಲ್ಲ ಇವತ್ತಿನ ಸಂಜಾದ ಬದುಕ್ತಿರೋ ಸ್ಥಿತಿಗತಿಗೆ ಪಕ್ಕ ಸಾಲು ಹಾಡಿನಲ್ಲಿ ತಂದ ನಾಗಾರ್ಜುನ ಶರ್ಮ ನಿಮಗೆ ಅಭಿನಂದನೆಗಳು . ಚಿತ್ರದ ವಿಶುಯಲ್ ಅದ್ಬುತಯಾಗಿ ಶಬ್ದದೊಂದಿಗೆ ಮೇಲೆ ಎದ್ದಿರುವುದು ಕಾಣುತ್ತದೆ ಸಿನಿಮಾಟೋಗ್ರಫಿ ಗೆದ್ದಿದೆ . ಲೈಟ್ ಬಳಕೆ ಕರಮ್ ಚಾವ್ಲಾಗೆ ತಿಳಿದಿದೆ ಅನ್ನಿಸ್ತು . ಇಂಗ್ಲಿಷ್ ಫಿಲಂ ನ ಕನ್ನಡದವರು ಇದೆ ಕಾರಣಕ್ಕೆ ನೋಡ್ತಾ ಇದ್ದಿದ್ದು . ಈ ರೀತಿ ಇರ್ಬೇಕು ಅಂತ ಸೆಟ್ ಕಾಸ್ಟ್ಯೂಮ್ ಎಲ್ಲಾ ಕಥೆಗೆ ಬೇಕಾಗಿರೋ ತರ ಇದೆ. ಕೆ ಜಿ ಫ್ ನೋಡಿದ ಮೇಲೆ ಸ್ವಲ್ಪ ಅದೇ ರೀತಿ ಇತ್ತೇನೋ ಅನ್ನುಸ್ತು . 
ಎಲ್ಲಾ ಪಾತ್ರಗಳಿಗೂ ಮಹತ್ವ ಇದೆ ಮತ್ತು ಪಾತ್ರ ಪೋಷಣೆ ಕೂಡ ಚೆನ್ನಾಗಿ ಕೊಟ್ಟಿದ್ದಾರೆ ಬರಹಗಾರ ರಕ್ಷಿತ್ . ನಾರಾಯಣ ಲಕ್ಷ್ಮಿ ಇಬ್ಬರಿಗೂ ಮಹತ್ವಪೂರ್ಣ ಪಾತ್ರ ಇದೆ ಹಾಗೆ ಚೆನ್ನಾಗಿ ನಿರ್ವಹಿಸಿದ್ದಾರೆ . ಪೂರ್ತಿ ಚಿತ್ರ ನಕ್ಕು ನಲಿಯುವ ಸಂಭಾಷಣೆ ಇದೆ . ಅದನ್ನು ರಕ್ಷಿತ್ ಮತ್ತು ಅಚ್ಯುತ್ ನಿರ್ವಹಿಸಿದ್ದಾರೆ . 
ಇದು "next level " ಚಿತ್ರ ಅನ್ನುವುದರಲ್ಲಿ ಸಂಶಯವೇ ಇಲ್ಲ . ರಕ್ಷಿತ್ ಶೆಟ್ಟಿ ದಿ ಫಿಲಂ ಮೇಕರ್ , ರಾಜ ಮೌಳಿ ದಿ ಫಿಲಂ ಮೇಕರ್ ಏನಿಷ್ಟ ಆಗುತ್ತೆ ಗೊತ್ತಾ ನಮ್ಮ ಸಂಸ್ಕೃತಿಯ ಪುರಾಣ ಇತಿಹಾಸದ್ದು ಪಾತ್ರಗಳನ್ನಾಗಿ ಮಾಡಿ ಒಳ್ಳೆಯ ರೀತಿಯಲ್ಲಿ ತೆರೆ ಮೇಲೆ ತೋರಿಸುವ ಕಲೆ ನಿಮಗೆ ಪರಮಾತ್ಮ ಕೊಟ್ಟಿದ್ದಾನೆ ಅನ್ನಿಸ್ತು. ಪ್ರಪಂಚದವರಿಗೆ ನಮ್ಮಲ್ಲಿರುವ ಪಾತ್ರಗಳನ್ನು ಹೀಗೆ ತೋರಿಸಬೇಕು ಆಗ ನಾರಾಯಣ ಸೀರೀಸ್ ಅಂತ ಪುಸ್ತಕವನ್ನು ಮಕ್ಕಳಿಗೆ ತರ್ಬೋದಲ್ಲ ...ಹಾಗೆ ಮಾಡಿದರೆ ನಮ್ಮ ಸಂಸ್ಕೃತಿ ಸ್ವಲ್ಪ ಉಳಿದುಕೊಳ್ಳುತ್ತೆ ಕೂಡ . ಮನರಂಜನೆ ಜೊತೆಜೊತೆಗೆ ಇದನ್ನು ಕೊಟ್ಟಿರುವ ನಿಮ್ಮ ಬುದ್ದಿವಂತಿಕೆಗೆ ಸ್ಪೆಷಲ್ ಥ್ಯಾಂಕ್ಸು . ರಕ್ಷಿತ್ ಅಂತರಂಗದಲ್ಲಿ ತನ್ನನ್ನು ತಾನು ಅರಿತುಕೊಂಡವರು ಬಹಿರಂಗದಲ್ಲಿ ಇಷ್ಟು ಅದ್ಭುತವಾದ ಚಿತ್ರ ಕಟ್ಟಿಕೊಡಲು ಸಾಧ್ಯ ಎಂದು ಹೇಳಲು ಇಚ್ಛಿಸುತ್ತೇನೆ . ಕನ್ನಡ ಮತ್ತು ಚಿತ್ರರಂಗಕ್ಕೆ ಮೆರುಗು ತಂದುಕೊಟ್ಟಿದ್ದಾರೆ . ಇಡೀ ಪ್ರಪಂಚ ನೋಡಬಹುದಾದ ಚಿತ್ರ . 
ಪುಷ್ಕರ ಮಲ್ಲಿಕಾರ್ಜುನಯ್ಯ ಅವರಿಗೆ ವಿಶೆವಾಗಿ ಅಭಿನಂದನೆ ಸಲ್ಲಿಸಲೇಬೇಕು. ಅಷ್ಟು ಖರ್ಚು ಮಾಡುವುದಕ್ಕೆ ಮುಂದಾಳತ್ವ ತೆಗೆದುಕೊಂಡು ಕಥೆಯನ್ನು ರಕ್ಷಿತ್ ಮತ್ತು ತಂಡವನ್ನು ನಂಬಿ ಹಣ ಸುರಿದಿದ್ದಾರೆ . ಪ್ರಕಾಶ್ ಗೌಡ್ರು ರಂಗಿತರಂಗ ಆದ ನಂತರ ಮತ್ತೆ ಇದರಲ್ಲಿ ಕೈ ಜೋಡಿಸಿರುವುದು ಸಂತೋಷ ಆಗಿದೆ ಮತ್ತು ಪರಂವಾ ಸ್ಟುಡಿಯೊಸ್ ನಿರ್ಮಾಣದಲ್ಲಿ ಕೈ ಜೋಡಿಸಿದೆ . ನಿಮ್ಮೆಲ್ಲರಿಗೆ ಅಭಿನಂದನೆಗಳು . ಪ್ರಪಂಚದಾದ್ಯಂತ ಜನರು ಚಿತ್ರಮಂದಿರದಲ್ಲಿ ಚಿತ್ರ ನೋಡಲಿ, ಪುಣ್ಯಕೋಟಿ ನಿಮ್ಮ ಇಚ್ಛೆಯಂತೆ ಮಾಡುವಂತೆ ಆಗಲಿ ಎಂದು ನನ್ನೊಳಗಿರುವ ನಾರಾಯಣನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಮನ್ನಾರಾಯಣ 🙏

Sanatana dharma’s maadva Parampare’s flag bearer Swamiji is truly an Inspiration 🙏

Sanatana dharma’s maadva Parampare’s flag bearer Swamiji is truly an Inspiration 🙏
———————————————————
He is one of the famous Swamiji of ashtamutts in Udupi because of his own responsibilities in Hindu Vishwa Parishad. He always expressed to Prime Ministers of the country. He always said there might be internal differences between mutts but all are same under Sanatana dharma 🙏.He wanted to worship Rama in his own temple in Ayodhya and pushed govt relentlessly from ages and consolation is he saw the verdict on Ayodhya in this life. He kept himself away from active political career as it was against his guru peeTa principles but supported politicians who support the upliftment of Sanatana dharma and blessed everyone who came in contact with him. He always said Rashtra first dharma should be preserved, hence he travlled way too much in his life and always pushed government for Ram Mandira decision in Bharata for Hindu unification worldwide to protect dharma . He employed Muslim driver for his car and asked him to do namaaz. He also arranged iftar party at his mutt for Hindu Muslim unity in our country . He never ever believed in Dalit untouchability and asked them to come to temple 🙏He broke all barriers of the past hence he is very unique in his thinking high for people of Bharat by protecting majority's interest always. Atalji , Advani ji , Narendra Modiji , Devegowdru and BS Yediyoorappaji touched his feet and took blessings many times. Rajarushi of our time who advised state heads and blessed them to function well for the welfare of people.


Pejavara Sri never ever hesitated to say what he believes as a person in public forum 🙏

ಪ್ರೇಮವಾದಿ


ಸನ್ಯಾಸ ಯೋಗ ಎಲ್ಲರಿಗೆ ಸಿಗಲ್ಲ - ಪೇಜಾವರ ಶ್ರೀಗಳು ಮಹಾ ಯೋಗಿಗಳು


ಸನ್ಯಾಸ ಯೋಗ ಎಲ್ಲರಿಗೆ ಸಿಗಲ್ಲ - ಪೇಜಾವರ ಶ್ರೀಗಳು ಮಹಾ ಯೋಗಿಗಳು
----------------------------------
ಆರು ವರ್ಷ ಇರುವಾಗ ಅವರ ತಂದೆ ತಾಯಿ ಮಗು ವೆಂಕಟರಮಣನನ್ನು ಉಡುಪಿ ಮಠಕ್ಕೆ ಕರೆದುಕೊಂಡು ಹೋಗಿರುತ್ತಾರೆ . ಅಲ್ಲಿ ಪೂಜೆ ಪುನಸ್ಕಾರ ಭಕ್ತಿ ಜನರು ಎಲ್ಲವನ್ನು ನೋಡಿ ಆಶ್ಚರ್ಯ ಎಂಬಂತೆ ಕಣ್ಣು ಪಿಳಿ ಪಿಳಿ ಅಂತ ಬಿಟ್ಟುಕೊಂಡು ನೋಡುತ್ತಿದ್ದ ಬಾಲಕ ವೆಂಕಟರಮಣನನ್ನು ನೋಡಿ ಮುಂದೆ ಒಂದು ದಿನ ನೀನು ನನ್ನ ಹಾಗೆ ಸ್ವಾಮೀಜಿ ಆಗಬಹುದು . ನಿನಗೆ ಆಸಕ್ತಿ ಇದೆಯಾ ಎಂದು ಕೇಳಿದರಂತೆ ....
ತಕ್ಷಣವೇ ಸನ್ಯಾಸ ಅನ್ನೋದು ಏನು ಅಂತ ತಿಳಿಯದಿರುವ ವಯಸ್ಸಿನಲ್ಲೇ ಹ್ಞೂ ಎಂದು ಬಿಟ್ರಂತೆ .
ಅಲ್ಲಿಗೆ ಮುಗಿತು . ಸನಾತನ ಧರ್ಮ ಪುನರುತ್ತಾನವಾಗುವುದಕ್ಕೆ ಸ್ವತಃ ಭಗವಾನ್ ಕೃಷ್ಣನೇ ಕಳುಹಿಸಿಕೊಟ್ಟಂತೆ ಆಗಿದೆ ಎಂದು ತಂದೆ ತಾಯಿ ಒಪ್ಪಿಗೆ ಪಡೆದುಕೊಂಡು ಸನ್ಯಾಸ ಸ್ವಲ್ಪ ದಿನ ಬಿಟ್ಟು ತೆಗೆದುಕೊಂಡೇ ಬಿಟ್ಟರು .
ಮಾಧ್ವ ಮಠದ ಅಷ್ಟಮಠದ ಒಂದು ಮಠ ಪೇಜಾವರ . ಗುರು ಪೀಠದಲ್ಲಿ ಕುಳಿತ ನಂತರ ಅದನ್ನು ನಡೆಸಿಕೊಂಡು ಹೋಗುವ ಚಾಣಾಕ್ಷತನ ಬೇಕು . ನಿತ್ಯವೂ ಸಾವಿರ ಧರ್ಮ ಕರ್ಮದ ಕೆಲಸ . ವೇದ ಮಂತ್ರಗಳು ಶಿಷ್ಯರನ್ನು ತಯಾರು ಮಾಡುವ ಕೆಲಸ ಒಂದೆಡೆ ಆದರೆ ಆಸ್ಪತ್ರೆ ಸೇವಾಕ್ಷೇತ್ರ ಪೂರ್ಣಪ್ರಜ್ಞ ವಿದ್ಯಾಭ್ಯಾಸ ಕೇಂದ್ರಗಳ ಮೇಲ್ವಿಚಾರಣೆ ದೇಶಾದ್ಯಂತ ಪ್ರಯಾಣ, ಕಾರ್ಯಕ್ರಮಗಳಿಗೆ ಆಶೀರ್ವಚನ ಹೀಗೆ ಒಂದೇ ಎರಡೇ ಕೆಲ್ಸಗಳು ....ಸಂಸಾರಿಗೆ ಅಬ್ಬಬ್ಬಾ ಅಂದ್ರೆ ೨ ಮಕ್ಳು ಇವತ್ತು . ಪ್ರಪಂಚದಲ್ಲಿರುವವರೆಲ್ಲರೂ ಅವರ ಮಕ್ಕಳೇ ಮತ್ತು ಅವರು ಎಂದೂ ವಿಶ್ವಮಾನವರು . ಇಂತ ಅದಮ್ಯ ಚೇತನ ಉಳ್ಳಂತ ವ್ಯಕ್ತಿತ್ವಗಳೇ ಸನ್ಯಾಸಿಗಳು . ಸನ್ಯಾಸ ಅದಕ್ಕೆ ಒಂದು ಯೋಗ . ಇವರು ತುಂಬಾ ವಿಶೇಷ ಯಾಕೆ ಅಂದರೆ ೫ ಪರ್ಯಾಯ ಮಾಡಿಕೊಂಡು ಬಂದಿರುವ ಅವಕಾಶ ಇವರಿಗೆ ಮಾತ್ರ ಸಿಕ್ಕಿದ್ದು ಮತ್ತದನ್ನು ಅವರ ಅದೃಷ್ಟ ಅಂತ ಭಾವಿಸಿದ್ದ ಅದಮ್ಯ ಚೇತನ ಅವರೇ ಹೇಳಿದ್ದ ಮಾತು " ಅದೂ ದೇವರ ಅನುಗ್ರಹ , ಧನ್ಯತೆಯ ಭಾವನೆ ನನ್ನದ್ದು . ಲೋಕದ ಹಿತ ನನ್ನ ಪಾಲಿಗೆ ಪರಮಾತ್ಮ ಕೊಟ್ಟಿರುವುದು ನನ್ನ ಯೋಗ ಅಂತ ತಿಳಿದಿರುತ್ತೇನೆ" .


ರಾಜಋಷಿ

ಒಬ್ಬ ರಾಜನನ್ನು ಸರಿ ದಾರಿಯಲ್ಲಿ ನಡೆಸಿದರೆ ಇಡೀ ರಾಜ್ಯ ರಾಷ್ಟ್ರ ಸರಿ ದಾಯಿಯಲ್ಲಿ ನಡೆಯುತ್ತೆ ಅನ್ನೋದು ನಮ್ಮ ಧರ್ಮದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ . ಅಂತ ವ್ಯಕ್ತಿಯನ್ನೇ ರಾಜಗುರು ಅಥವಾ ರಾಜಋಷಿ ಎಂದು ಕರೆಯುತ್ತಾರೆ .

ಅಟಲ್ ಜಿ, ಅಡ್ವಾಣಿ ಜಿ , ಮೋದಿ ಜಿ ದೇವೆ ಗೌಡ್ರು , ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಎಲ್ಲರು ಅವಳ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ .

ಸದಾ ಮೋದಿಜಿ ಬೆನ್ನಿಗೆ‌ ನಿಂತು ಮಾರ್ಗದರ್ಶನ ನೀಡುತ್ತಿದ್ದರು ಪೇಜಾವರ ಶ್ರೀಪಾದರು.. ಮೋದಿಜಿಯನ್ನ ಆಶೀರ್ವದಿಸಲು ಪ್ರಧಾನಿಯವರ ಕಚೇರಿಗೆ ಶ್ರೀಗಳು ತೆರಳಿದ್ದಾಗಿನ ಅದ್ಭುತವಾದ ಪೋಟೋ.









.

ಓಂ ನಮೋ ನಾರಾಯಣ - 🙏


ಎರಡು ತಿಂಗಳ ಹಿಂದೆ ತಿಳಿಸಿದ್ದರು ಇನ್ನು ದೇಹ ಬಿಟ್ಟು ಹೋಗುವ ಸಮಯ ಬಂದಿದೆ ಎಂದು 🙏.
ನೆನಪಿರಲಿ ಚೈತನ್ಯಕ್ಕೆ ಎಂದೂ ಸಾವಿಲ್ಲ. ಆ ಚೈತನ್ಯ ನಮ್ಮ ಮಧ್ಯೆಯಿಂದ ಮಾಯವಾಗಿರುವುದು ತುಂಬಾ ನೋವು ಸಂಕಟ ತಂದಿದೆ . ಇದು ಮಹಾಸಂತನ ದೈಹಿಕ ಅಂತ್ಯಕ್ರಿಯೆ .
ಮಹಾಸಂತನ ದೈಹಿಕ ಅಂತ್ಯಕ್ರಿಯೆ ಅಷ್ಟಮಠಗಳ ಯತಿಗಳಲ್ಲಿ ಗುರು ಪೀಠದಲ್ಲಿ ಇದ್ದು ಎಲ್ಲರನ್ನು ಸಮಭಾವದಲ್ಲಿ ಕಂಡು ದೇಶ ಮೊದಲು ಎಂದು ಸಾರಿ ಸಾರಿ ಹೇಳಿ ಸಮಸ್ತ ಜನರಿಗೆ ಅನ್ನ ಅಕ್ಷರ ಜ್ಞಾನ ಇವರ ನೆರಳಿನಲ್ಲಿ ನಿತ್ಯ ನಡೆಯುತ್ತಿತ್ತು . ಹಿಂದೂಗಳು ಒಟ್ಟಿಗೆ ಆಗಬೇಕು ಎಂದು ಯಾವಾಗಲೂ ಸಾರಿ ಸಾರಿ ಹೇಳುತ್ತಿದ್ದರು. ದಲಿತರನ್ನು ಅಸ್ಪೃಶ್ಯರಾಗಿ ಯಾವತ್ತೂ ಕಾಣಬಾರದು ನಾವೆಲ್ಲಾ ಹಿಂದೂಗಳು ಒಂದೇ ಎಂದು ಗುರು ಪೀಠದಲ್ಲಿ ಕುಳಿತು ಹೇಳುತ್ತಿದ್ದರು .
ರಾಮ ಮಂದಿರ ನಿಧಾನವಾದಾಗ ಪ್ರಧಾನ ಮಂತ್ರಿಗಳಲ್ಲಿ ಕೋರಿಕೆ ಇಟ್ಟಿದ್ದರು . ಯಾವ ಜಾತಿ ಪಂತ ಪಂಗಡ ಗುಂಪು ಬೇರೆ ಬೇರೆ ಎಂದು ನೋಡಿದವರಲ್ಲ . ಎಲ್ಲರೂ ಒಟ್ಟಿಗೆ ಸೇರಿ ದೇಶ ಸಂಸ್ಕೃತಿ ಪರಂಪರೆಯನ್ನು ಉಳಿಸಬೇಕು ಎಂದು ಹೇಳುತ್ತಿದ್ದ ಸಂತರು.
ಪ್ರತಿ ಸಾರಿ ದೇಶದ ನಾಯಕರಿಗಳಿಗೆ ಬುದ್ದಿವಾದ ತಿಳಿಸಿ ಮಾರ್ಗದರ್ಶನ ನೀಡುತ್ತಿದ್ದ ಪೇಜಾವರ ಶ್ರೀಗಳು.

Friday, December 27, 2019

ಧರ್ಮ-ಕರ್ಮ

ಅಂದುಕೊಂಡಿದ್ದೆಲ್ಲಾ ನಡೆಯುವುದಿಲ್ಲ
ನಡೆದರೆ ತಲೆ ನೆಟ್ಟಗೆ ನಿಲ್ಲದಿರಬಹುದಲ್ಲ
ಹಾಡುವುದು ಅನಿವಾರ್ಯ ಕರ್ಮ ಎಂದು ಹೇಳಿಹರಲ್ಲ
ಹಾಡುತ್ತಿದ್ದರೆ ಅವನಿರ್ಹ ಧರ್ಮ ಬಂದು ಸೇರುವುದೆಲ್ಲ
- ಸುಬ್ಬು ಪದ್ಮನಾಭ

Wednesday, December 25, 2019

Life is a preperation for death - Its a reality !!!

Someone had a post like this without understanding sanatana dharma jnaana path :

Today, went to a crematorium for the cremation of my friend's mother. She loved us all for nearly 4 decades! I have eaten at their house many times. It was very sad to see all the uncontrollable tears before the parthiva sharira is taken in the ambulance. Emotional day..
This is my sixth visit to a cremation or burial place over the past couple of years. Every time it's very difficult to watch the families bereaving. Seeing total strangers like auto rickshaw drivers do namaste to a passing body, makes me believe that our samskara is very grounded and strong. People behave extremely well when there is a death in the family or neighbourhood. It brings the most polite, compassionate and decent aspect out of them.
Finally after giving shoulder till the final electric furnace, I had one question to the staff there. How many minutes here? Usually the log fired cremation takes up to 2 hours. But this is state of the art facility.
He said 40 minutes. Then 20 more minutes for ashes in the numbered sacred pot.
That's it friends.. all our existence on this planet takes just 40 minutes in the crematorium.. It was a philosophical moment for me, yet again. We fight so much for ideologies, countries, religions, castes, languages, states, cities, designations and what not.. But at the end, we take nothing with is.
Just 40 minutes.. That's all it takes!
Let's spread love and make every minute useful for us, others and the planet. Life is fragile and yet precious.

I replied with a comment on Dec 25 2019 





I understand the emotions . But Please store this information for your record to take it to next level. Adishankaracharyaru whom we consider the greatest scholar of 8th century in his Bhaja Govindam has clearly written - Punarapi Jananam punarapi maranam - Consciousness what we call Atma is one and it is eternal. It will never die but it appears as jeevatma in a body empowered with mind as objects of it. It takes birth again in different form and name when jeevatma leaves.Body and mind both are physical in nature which we gained from earth as loan and give it back or nature takes back its loan after some time ( say 100 yrs for manushya janma ). We are eternal in other words consciousness is eternal as we do not consider body and mind are eternal objects of us the consciousness which is sat chit ananda, thats why we give death as good example always as we see ourselves body ages out every single day and so as the mind which loses its sharpness. This is why we say Karma has phala . Whether we do good karma or bad karma , both has phala. When one gains enormous jnaana through Jnaana path or Jnaana yoga , Other two paths are are( Karma Yoga and Bhakti yoga) with single minded focus and determination, there is a chance to raise above and break the circle of life and death which we call moksha. It does not matter how much Karma we do with devotion , awareness of chitta the consciousness is the key. Thats why they say even if we sit and do Idol worship , do with bhaavane so that chitta shuddi happens daily if we are at it . If we are very strict and show dedication at this, there is a good chance to raise above and touch the consciousness within which we call turiya in Vedanta , the 4th state of samadhi. In this state we have body and mind intact and I can have different experiences which I would not usually have in other 3 states called Awakening state , sleep state or dream state. This comes after many many janmas from mothers womb. Thats why ours is a dharma and not a religion which western world forced upon us and religion word cannot be the equivalent english word for dharma. No way, we do not accept. 

Sanantana means one which is eternal yet ancient and proven as highest science as it has scietific way to explain details in Advaita phylosophy. This is the reason many study Advaita through vedanta society which Swami Vivekanada has established in USA in 1889 or through Chinmaya mission or Arsha Vidya or many such institutions in USA to understand Vedanta of Shankara Bhaashya ( Bhagavadgeete , Upanishads and Brahmasutras ). I am a student of Advaita Vedanta myself from the last 22 yrs I personally came across more than 500 students in USA who are seekers and we need to seek this ultimate truth or knowledge which Vedanta provides. 18 Adyayas of Bhagavadgeete is the first book to read and understand ( has to be shakara bhaashya )with the help of Guru. Krishna clearly tells this to Arjuna in Geete and interpretations are many but follow Shankara siddanta to get to this jnaana paath. Om Tatsat - Krishnarpanamastu 🙏

Thursday, December 19, 2019

ಹಿರಿಯರು ಮನೆಯಲ್ಲಿ ಏನು ಕಲಿಸಿಕೊಟ್ಟಿದ್ದು ???

ಹಿರಿಯರು ಮನೆಯಲ್ಲಿ ಏನು ಕಲಿಸಿಕೊಟ್ಟಿದ್ದು ???
--------------------------------------
ಉಪಾಕರ್ಮಕ್ಕೆ ಅಂತ ನಮ್ಮ ಮನೆಯಲ್ಲೇ ೨೦-೨೫ ಜನ ಬರ್ತಿದ್ದ ಕಾಲ ಅದು .ನಮ್ಮ ತಾತನೇ ಹೋಸ್ಟ್ .
 ನನಗೆ ಆಗ ೧೦ ವರ್ಷ .
ನಮ್ಮ ತಾತನಿಗೆ ಪ್ರಶ್ನೆ ಕೇಳಿದ್ದೆ ,
ಏನ್ ತಾತ ಬ್ರಾಹ್ಮಣ ಅಂದ್ರೆ ?
ದೊಡ್ಡ ಪ್ರಶ್ನೆನೇ ಕೇಳಿದೀಯಾ . ನಾಳೆ ಬರ್ತಾರಲ್ಲ ಮನೆಗೆ ಅವ್ರನ್ನ ಬ್ರಾಹ್ಮಣರು ಅಂತ ಕರೀತೀವಿ .ಅವರು ನಿತ್ಯ ಗಾಯತ್ರಿ ಮಂತ್ರವನ್ನು ಪಠಿಸುವವರು , ನಿತ್ಯ ಶಿಸ್ತಿನ ಬದುಕು ನಡೆಸುವವರು . ಅನುಷ್ಠಾನ ಮಾಡುವವರು .

ನಮ್ ವಠಾರದಲ್ಲಿ ಎಲ್ಲರೂ ಹಾಗಾದ್ರೆ ಬ್ರಾಹ್ಮಣರು ಅಲ್ವಾ , ಅವರ್ಯಾಕೆ ಈ ಗಾಯತ್ರಿ ದೇವರ ಮಂತ್ರ ಹೇಳಲ್ವಾ ? ಮತ್ತೆ ನಮ್ಮನ್ನು ಬ್ರಾಹ್ಮಣ ಜಾತಿ ಅಂತಾರಲ್ಲ ಅದೇನು ಮತ್ತೆ ?
ತಾತ (ನಗಾಡಿಕೊಂಡು ಹೇಳುದ್ರು ) ಎಲ್ಲರೂ ಮಾಡುವುದಿಲ್ಲ . ಬ್ರಾಹ್ಮಣ ಅನ್ನುವುದು ವರ್ಣ , ಹಾಗೆಯೇ ಕ್ಷತ್ರಿಯ , ವೈಶ್ಯ ಶೂದ್ರವರ್ಣಗಳಿವೆ . ಅವರವರ ಕೆಲಸದ ಅಭಿರುಚಿಗೆ ತಕ್ಕಂತೆ ನಮ್ಮ ಪರಂಪರೆಯಲ್ಲಿ ೪ ವರ್ಣಗಳನ್ನು ಮಾಡಿದ್ದಾರೆ.
ಬ್ರಾಹ್ಮಣ್ಯ ಅನ್ನೋದೇ ಉತ್ತಮವಾದ ಸಂಸ್ಕಾರ -ಅದೊಂದು ರೀತಿ ಸಿದ್ದಿ , ಅದನ್ನು ಸಂಪಾದಿಸಿದವರು ನಾಳೆ ಜನಿವಾರ ಬದಲಾಯಿಸಿಕೊಳ್ಳುವ ಹಬ್ಬ . ಅದಕ್ಕೆ ಮನೆಗೆ ಬರುತ್ತಿದ್ದಾರೆ .

ದಿನಕಳೆದಂತೆ ಪೂಜೆ ಪುನಸ್ಕಾರ ಮಾಡುವ ಅರಿವು ಹೆಚ್ಚ್ ಹೆಚ್ಚು ಬಂತು .
ಅವರಿಂದ ಮತ್ತು ದೊಡ್ಡಪ್ಪ ಚಿಕ್ಕಪ್ಪ ತಂದೆಯವರನ್ನು ಕೆದಕಿ ಕೆದಕಿ ಮಾತನಾಡಿಸಿ ಇಷ್ಟು ಕಲಿತುಕೊಂಡ ವಿಷಯಗಳು.
ಚಿನ್ಮಯ ಮಿಷನ್ ಗರಡಿಗೆ ಬಂದ ಮೇಲೆ ಸ್ವಾಮಿ ಬ್ರಹ್ಮಾನಂದರ ಪ್ರವಚನಗಳನ್ನು ಕೇಳಿ ಕೇಳಿ ನನಗೆ ಕೆಳಗಡೆ ಬರೆದಿರುವುದು ಮನವರಿಕೆಯಾಯಿತು .  
ಹುಟ್ಟಿನಿಂದ ಬ್ರಾಹ್ಮಣನಾಗಲು ಸಾಧ್ಯವಿಲ್ಲ.
ಬ್ರಾಹ್ಮಣ್ಯವನ್ನು ಸಂಪಾದಿಸಿದರೆ ಬ್ರಾಹ್ಮಣನಾಗಬಹುದು .
ಅದು ನಮ್ಮ ವೃತ್ತಿಯ ಆಧಾರದ ಮೇಲೆ.
ಎಷ್ಟು ಆಗುತ್ತೆ ಅಷ್ಟು ಜನರನ್ನು ಸಂಪಾದನೆ ಮಾಡು.
ಅವರಲ್ಲೇ ೪-೫ ಜನ ಅನುಷ್ಠಾನ ರೂಡಿಯಲ್ಲಿರಿಸಿಕೊಂಡಿರುವ ವೈದಿಕ ಮನೆತನದವರು ಸಿಕ್ಕೇ ಸಿಗುತ್ತಾರೆ .
ಒಬ್ಬರನ್ನು ಮಾರ್ಗದರ್ಶನಕ್ಕೆ ಅಂತ ಗುರುವನ್ನಾಗಿ ಮಾಡಿಕೊ .
ವೇದ ಮಂತ್ರಗಳನ್ನು ಕಲಿತುಕೊ .
೪೦ ವರ್ಷ ಪೂಜೆ ಪುನಸ್ಕಾರ ಮೊದಲು ಮಾಡು .
ನಿತ್ಯ ಜಪ ಬಿಡಬೇಡ .
ನಿನ್ನೊಳಗೆ ಧ್ಯಾನ ಮಾಡಬೇಕು ಅಂತ ನಿನಗೆ ಅನಿಸಲು ಶುರುವಾಗುತ್ತೆ ಆಗ ಆ ದನಿಯನ್ನು ಆಲಿಸಿಕೊಂಡು ಯಾರಾದರು ಒಬ್ಬರು ನಿನಗೆ ಇಷ್ಟವಾಗುವ ಗುರುಗಳ ಮಾರ್ಗದರ್ಶನ ಪಡೆದುಕೋ .

ಇವತ್ತಿನ ದಿನ ವಯಸ್ಸು ೪೪ ಆದರೆ ನಮ್ಮ ಜಾಯಿಂಟ್ ಫ್ಯಾಮಿಲಿಯಲ್ಲಿ ನನಗೆ ಮಾರ್ಗದರ್ಶನ ನೀಡುತ್ತಿದ್ದವರಲ್ಲಿ ೯೫% ಜನರು ಕಾಲಾತೀತರಾಗಿದ್ದಾರೆ.

ಅವರನ್ನು ನೆನೆಸಿ ಓಂ ವಸು ದೈವ್ಯೋ ರುದ್ರಾಯ ನಮಃ ಎಂದು ಹಿಂದಿನವರನ್ನು ಸ್ಮರಿಸಿ
ಗಂಗೇಚ ಯಮುನೇಚ ಗೋದಾವರಿ ಸರಸ್ವತಿ .....ಶುರು ...
ಸೂರ್ಯನಿಗೆ ಅರ್ಘ್ಯ
ಕೃಷ್ಣನಿಗೆ ಅರ್ಪಣ ಕೊಡದೆ ಆಹಾರ ಸ್ವೀಕರಿಸುವುದಿಲ್ಲ.
ಇದೆಲ್ಲವೂ ಬದುಕಿಗೆ ನಿಯಮವಾಗಿ ಬಿಟ್ಟಿದೆ .
ತತ್ಸತ್ . ಕೃಷ್ಣಾರ್ಪಣಮಸ್ತು  🙏🙏

ಮನೆ ದೇವರು, ಇಷ್ಟ ದೇವತೆ, ಗಣೀಶ - ಯಾವ ಆರ್ಡನಲ್ಲಿ ಪೂಜೆ ಸಲ್ಲಿಸಬೇಕು?

Detailed anawer below - ವೈಕುಂಠ ಸಿಕ್ಕಿದ್ರು ಈ ಲೋಕಕ್ಕೆ ಬಂದು ಮೋಕ್ಷ ಸಂಪಾದನೆ ಮಾಡಲೇಬೇಕು . ಅದಕ್ಕೆ ನಮ್ಮಲ್ಲಿ ಮೋಕ್ಷವನ್ನು ಅತ್ಯುತ್ತಮ ಸ್ಥಾನ ಕೊಟ್ಟಿರದು . ಮನುಷ್ಯರು ಇದನ್ನು ಪಡೆಯಬಹುದು ಅದಕ್ಕೆ ೮೪ ಲಕ್ಷ ಸ್ಪೀಸೀಸ್ ಗಳಲ್ಲಿ ಉತ್ತಮನಾದವನು ಮನುಷ್ಯ . ಅಷ್ಟು ಉತ್ತಮವಾದ ಮನುಷ್ಯನಾದ ಮೇಲೆ ಸಾವು ಬರುವುದರೊಳಗೆ ಮೋಕ್ಷಕ್ಕೆ ಹಾತೊರೆಯಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮೋಕ್ಷ ಎನ್ನುವುದು ಬಂಧನದಿಂದ ಬಿಡುಗಡೆಯಲ್ಲ . ಬಂಧನದಲ್ಲಿ ನಾನಿಲ್ಲ ಎಂಬ ಶುದ್ಧ ಜ್ಞಾನ ಮೋಕ್ಷ . ಗಣೇಶನನ್ನು ಮೊದಲು ಪೂಜೆ ಮಾಡಿ . ಯಾಕೆ ಅಂದರೆ ನಮ್ಮೊಳಗೇ ಮೂಲಾಧಾರ ಶಕ್ತಿಯನ್ನು ನಮ್ಮೊಳಗಿರುವ ಗಣಗಳ ಅಧಿಪತಿ ಎಂದು ಹೇಳಲಾಗಿದೆ . ಅಂದ ಹಾಗೆ ದೇವ ಮಂದಿರ ಪೂಜೆ ಭಜನೆ ಜೀವನದ ಅಲಂಕಾರ ಮನಸ್ಸಿನ ಉದ್ದಾರ ಎಂದು D V ಗುಂಡಪ್ಪನವರು ಹೇಳಿರುವುದು ನಿಮಗೆ ತಿಳಿದಿರಬೇಕು . ಪೂಜೆ ಇರುವುದು ಚಿತ್ತ ಶುದ್ಧಿಗೋಸ್ಕರ . ನಿತ್ಯ ಪೂಜೆ ಮಾಡಿದರೆ ಮನಸ್ಸು ಶುದ್ಧವಾಗುತ್ತೆ . ಶುದ್ಧ ಮನಸ್ಸಿನಿಂದ ನೀವು ಯೋಚಿಸುವ ರೀತಿ ಬದಲಾಗುತ್ತೆ . ಮನಸ್ಸು ಬಂಧನದಿಂದ ಬಿಡುಗಡೆಗೆ ಹಾತೊರೆಯುವುದು ನಿಮಗೆ ತಿಳಿಯುತ್ತದೆ .

Monday, December 16, 2019

ಗಜಕೇಸರಿ ಭೀಮನ ಜೊತೆಯಲ್ಲಿ


ಗಜಕೇಸರಿ ಭೀಮನ ಜೊತೆಯಲ್ಲಿ
--------------
ಆನೆಗೆ ಚಿಕ್ಕ ವಯಸ್ಸಿರುವಾಗಲೇ ಕಾಲಿಗೆ ಚೈನ್ ಹಾಕಿ ಕಟ್ಟುತ್ತಾರೆ . ಒಂದೆರಡು ಸರಿ ಬಿಡಿಸ್ಕೊಳಕ್ಕೆ ಪ್ರಯತ್ನಿಸುತ್ತೆ . ಚಿಕ್ಕ ಪ್ರಾಯದ ಆನೆಗೆ ಸರಪಳಿ ಭಾರ ಮತ್ತು ಬಿಡಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ .
ಆಮೇಲೆ ಹೋಗ್ತಾ ಹೋಗ್ತಾ ಆನೆ ತನ್ನ ಬುದ್ದಿಯೊಳಗೆ ನನಗೆ ಆಗಲ್ಲ ಅಂತ ಹಾಕೊಂಡುಬಿಡುತ್ತೆ . ಹಾಗೆ ಬೆಳೆಯುತ್ತೆ ...ದೊಡ್ಡ ಆನೆ ಆದಮೇಲೂ ಕೂಡ ಅದೇ ಚೈನ್ ಕಟ್ಟುತ್ತಾರೆ . ಪ್ರಯತ್ನಿಸಿದರೆ ಆ ಚೈನ್ ಏನೂ ಅಲ್ಲ ಬಿಡಿಸ್ಕೊಂಡು ಓಡಕ್ಕೆ ಆದರೆ ಪ್ರಯತ್ನಿಸುವುದಿಲ್ಲ . ಜೀವನಪರ್ಯಂತ ಜೀತ ಮಾಡ್ಕೊಂಡೆ ಹೋಗ್ಬಿಡುತ್ತೆ . ದೇವ್ರು ಅದಕ್ಕೂ ಸ್ವಲ್ಪ ನಮ್ಮ ಹಾಗೆ ಪ್ರಯತ್ನಿಸುವ ಬುದ್ದಿ ಕೊಟ್ಟಿದ್ದಿದ್ರೆ ಅದರ ಶಕ್ತಿಗೆ ಕಬ್ಬಿಣದ ಚೈನ್ ಏನೂ ಲೆಕ್ಕ ಇಲ್ಲ . ಇದರಿಂದ ಏನ್ ತಿಳಿಯುತ್ತೆ ಅಂದ್ರೆ ನಾವು ಮನಸ್ಸು ಮಾಡಿ ಪ್ರಯತ್ನಿಸಿದರೆ ಮನಸ್ಸಿನ ಇಚ್ಛೆಗಳು ವಾಂಛೆಗಳು ಈಡೇರುತ್ತದೆ . ಇಚ್ಚಿಸಿಕೊಳ್ಳಬೇಕು ಅಷ್ಟೇ .
ನಮಗೆಲ್ಲಾ ಆಶೀರ್ವಾದ ಮಾಡಿ ಭೀಮ ಕಳುಹಿಸಿಕೊಟ್ಟಿದೆ. ಮನಸ್ಸಿನ ಇಚ್ಛೆಗಳಿಗೆ ಭೀಮನ ದೇಹಶಕ್ತಿ ಸೇರಿದರೆ ಎಲ್ಲಾ ಕೆಲಸ ಸಂತೋಷವಾಗಿ ಮಾಡಬಹುದಲ್ಲವೆ .

ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು-2019 " ಬಿಡುಗಡೆಯ ಕಾರ್ಯಕ್ರಮ


ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು " ಬಿಡುಗಡೆಯ ಕಾರ್ಯಕ್ರಮ
---------------------------------------------------
ಮೊದಲಿಗೆ ಸ್ವರ್ಣಸೇತು ಸಂಪಾದಕರಾದ  Gurumurthy Krishnamurthy ಗುರುಮೂರ್ತಿ ಕೃಷ್ಣಮೂರ್ತಿಯವರು ಭಾಷಣ ಮಾಡಿದರು.
ನಂತರ ಸಭೆಯನ್ನುದ್ದೇಶಿ ಮಾತನಾಡಿದ ಡಾಕ್ಟರ್ ಸೋಮೇಶ್ವರರವರು ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಕನ್ನಡ ಕೂಟವು ದೇಣಿಗೆ ಕೊಟ್ಟಿರುವುದನ್ನು ಸ್ಮರಿಸಿದರು ಮತ್ತು ಕೂಟದ ಸಾಮಾಜಿಕ ಕೆಲಸಗಳನ್ನು ಮಾಡುವ ಕಳಕಳಿಯನ್ನು ಕೊಂಡಾಡಿದರು . ಸಮಾಜದ ಋಣ ಭಾರತದ ಮಣ್ಣಿನಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಇರುತ್ತದೆ ಎಂದು ಈ ನಾಲ್ಕು ಋಣಗಳ ಬಗ್ಗೆ ಸಹ ಮಾತನಾಡಿದರು
1. ದೇವ ಋಣ
2. ಪಿತೃ ಋಣ
3. ಗುರು ಋಣ ಮತ್ತು
4. ಸಮಾಜದ ಋಣ
ಕನ್ನಡ ಕೂಟದ ಕೆಲಸವನ್ನು ಕೊಂಡಾಡಿ ಸಭಿಕರಿಗೆ ಅಭಿನಂದಿಸುವುದರ ಮೂಲಕ ಕನ್ನಡ ಕೂಟವನ್ನು ಶ್ಲಾಘಿಸಿದರು. ಆದ್ದರಿಂದ ಅತ್ಯುತ್ತಮವಾದ ಕೆಲಸ ಎಂದು ಮನದಟ್ಟು ಮಾಡಿದರು .
ನಾಡಗೀತೆಯನ್ನು ಬರೆದ ರಾಷ್ಟ್ರಕವಿ ಕುವೆಂಪುರವರ "ಜಯ ಭಾರತ ಜನನಿಯ ತನುಜಾತೆ " ಪದ್ಯಕ್ಕೆ ಸಭೆಯಲ್ಲಿ ಎಲ್ಲರನ್ನು ನಿಂತು ಗೌರವ ಕೊಡುವುದಾಗಿ ಕೇಳಿಕೊಂಡರು . ನಾವೆಲ್ಲಾ ಭಾರತದ ಕನ್ನಡ ನಾಡಿನ ಮಣ್ಣಿನಲ್ಲಿ ಹುಟ್ಟಿರುವುದಕ್ಕೆ ಈ ಗೌರವ ಬಹಳ ಸೂಕ್ತವಾದುದ್ದು ಮತ್ತು ಇಂದಿನ ಕಾರ್ಯಕ್ರಮದ ವಿಶೇಷ ಎಂದು ಅನಿಸಿ ಹೆಮ್ಮೆಯೆನಿಸಿತು. 
" ತಟ್ ಅಂತ ಹೇಳಿ" ಖ್ಯಾತಿಯ ನಮ್ಮ ನಿಮ್ಮೆಲ್ಲರ ನೆಚ್ಚಿನ ಡಾಕ್ಟರ್ Someswara Narappaಸೋಮೇಶ್ವರರವರಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು. ಕನ್ನಡ ಕೂಟದ ವಾರ್ಷಿಕ "ಸ್ವರ್ಣಸೇತು " ಬಿಡುಗಡೆಯ ಕಾರ್ಯಕ್ರಮಕ್ಕೆ ಬರಲೊಪ್ಪಿರೋದೇ ನಮ್ಮ ಪಾಲಿಗೆ ಬಲು ದೊಡ್ಡ ಕೊಡುಗೆ ಎಂದು ಕನ್ನಡ ಕೂಟದ ಅಧ್ಯಕ್ಷ ಅರವಿಂದ ಬಾಯರಿಯವರು Aravind Bairy ಕೂಟದ ಸದಸ್ಯರಿಗೆ ತಿಳಿಸಿ ಸಂತಸ ವ್ಯಕ್ತಪಡಿಸಿದರು. 
"ತಟ್ ಅಂತ ಹೇಳಿ" ಕಾರ್ಯಕ್ರಮವನ್ನು ಕನ್ನಡ ಕೂಟದ ವೇದಿಕೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ನಡೆಸಿಕೊಟ್ಟರು . ಕಾರ್ಯಕ್ರಮದ ನಂತರ ಪ್ರಶಸ್ತಿ ಪ್ರಧಾನ ಸಮಾರಂಭ ಸುಗಮವಾಗಿ ನಡೆಯಿತು . ಬಹಳಷ್ಟು ಪುಸ್ತಕಗಳನ್ನು ಭಾರತದಿಂದ ತಂದು ಎಲ್ಲರಿಗೂ ಪ್ರಶಸ್ತಿಯ ರೂಪದಲ್ಲಿ ಬಹುಮಾನ ವಿತರಿಸಿದರು .
ಇವತ್ತಿನ ದಿವಸ ಜಾಗತಿಕ ಮಟ್ಟದಲ್ಲಿ ಕನ್ನಡ ೨೯ನೇ ಸ್ಥಾನದಲ್ಲಿದೆ ಎಂದು ತಿಳಿಸಿಕೊಟ್ಟರು . ಕನ್ನಡ ಕೂಟ ನಡೆದುಕೊಂಡು ಬರುತ್ತಿರುವುದು , ಮುಂದಿನ ಪೀಳಿಗೆಯ ಕನ್ನಡ ಮಕ್ಕಳಿಗೆ ಕನ್ನಡವನ್ನು ಉಳಿಸಿ ೨೯ ನೇ ಸ್ಥಾನದಲ್ಲೇ ಇರುವ ಹಾಗೆ ನೋಡಿಕೊಳ್ಳಿ, ೩೦ ಅಥವಾ ೩೧ನೇ ಸ್ಥಾನಕ್ಕೆ ಇಳಿಯದಿರಲು ಅವಕಾಶ ಕೊಡದೆ ಕಲೆ ಮತ್ತು ಸಂಸ್ಕೃತಿಯ ಮೂಲಕ ಕನ್ನಡದ ಭಾಷೆಯನ್ನು ಉಳಿಸಿಕೊಳ್ಳುವುದಾಗಿ ಕಿವಿಮಾತು ಕಾರ್ಯಕ್ರಮದ ಮೂಲಕವೇ ಕೊಟ್ಟರು . ಕಡೆಯದಾಗಿ ಮುಖ್ಯ ಅತಿಥಿಗೆ ಶಾಲು ಹೊದಿಸಿ ಮೈಸೂರು ಪೀಠವನ್ನು ತೊಡಿಸುವ ಮೂಲಕ ಅಧ್ಯಕ್ಷರು ಗೌರವ ಸಮರ್ಪಿಸಿದರು.

Meet SVP and MD of SAP Labs -Sindhu Gangadharan

Meet SVP and MD of SAP Labs -Sindhu Gangadharan
————————————
We know each other as colleagues from my SAP Labs India days. I met her for the first time when we were in ITPL discover building. I also used to meet her for discussions in SAP AG., Walldorf , Germany.

When I learnt that she has become Managing Director of SAP Labs where I worked 6 years before coming to USA, I wanted to meet her and wish her the best for her future .

Sindhu Gangadharan moved to SAP AG Germany in 2001 after joining SAP Labs India in 1999 and relocated back in 2019 to Bengaluru and assumed the big responsibility to lead SAP Labs India as SVP and MD recently.

I am so thankful she gave me so much time. Sindhu is the first woman to head SAP Labs India, a German Tech Giant.
She is born and brought up in Bengaluru and she is the mother of two children.

I am glad the first woman MD of SAP Labs is Sindhu and I wish her loads of best wishes for her to shine like a star in her new role.