Thursday, September 17, 2020

ಹತ್ತು ವರ್ಷಗಳಲ್ಲಿ

 ಹತ್ತು ವರ್ಷಗಳಲ್ಲಿ......#10yearschallenge

-------------------
ಕೂದಲು ಉದುರಿ ಹೋಗಿದೆ
ಜೀವನಾನುಭವ ಹೆಚ್ಚಿಸಿ ಬಿಟ್ಟಿದೆ

ವಿಭೂತಿ ಅನುಷ್ಠಾನಕ್ಕೆ ಮರಳಿದೆ
ಸ್ಪಷ್ಟತೆ ಬದುಕನ್ನು ವೃದ್ಧಿಸಿದೆ

ಚಿನ್ನದ ಸರ ಬೇಡ ಎನಿಸಿದೆ
ರುದ್ರಾಕ್ಷಿ ಶಿಸ್ತು ಬೇಕೆನಿಸಿದೆ

ದೇಹಕ್ಕೆ ನಲವತ್ತ ಮೂರು ಕಳೆದಿದೆ
ಮನಸ್ಸಿನ ಉತ್ಸಾಹ ಕಡಿಮೆಯಾಗಿಸದೆ
-ಸುಬ್ಬು ಪದ್ಮನಾಭ



Friday, September 11, 2020

Sep 10 , 2020 - ಗುರುವಾರದ ಗುರುವಾಣಿ :

 Sep 10 , 2020 - ಗುರುವಾರದ ಗುರುವಾಣಿ :

------------------------

ಶ್ರೀ ಗುರುಭ್ಯೋ ನಮಃ , ಹರಿಃ ಓಂ 🙏

ವಿಷ್ಣುಪುರಾಣದ ಮೂಲ ಪ್ರತಿ ( ಒರಿಜಿನಲ್ ) ಓದಿಕೊಂಡರೆ ತಿಳುಯುವುದೇನು ಎಂದರೆ ಆದಿಮಾಯೆಯ ಮನಸ್ಸಿನ ಸಂಕಲ್ಪದಿಂದ ಬ್ರಹ್ಮಾ ವಿಷ್ಣು ಮಹೇಶ್ವರನನ್ನು ಸೃಷ್ಟಿ ಮಾಡಿರುವುದು ಎಂದು ಉಲ್ಲೇಖಿಸಿದ್ದಾರೆ . 


ಆದಿಶಕ್ತಿ ಬೇರೆ ಆದಿಮಾಯೆ ಬೇರೆ ಬೇರೆನ ?

ಇಲ್ಲ , ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಶಕ್ತಿಯ ಪ್ರತೀಕ ಒಂದೇ ಅಥವಾ ಒಬ್ಬಳೇ ಅದನ್ನು ಆದಿಮಾಯೆ ಅಥವಾ ಆದಿಶಕ್ತಿ ಎಂದು ಕರೆದಿರುವುದು .


ಟಿ ವಿ ಸೀರಿಯಲ್ ಅಲ್ಲಿ ಮತ್ತೆ ಅವಳಿಂದ ಬಂದಿರದು ಅಂತ ತೋರ್ಸ್ತಾರಲ್ಲ ?

ತೋರಿಸಿದ್ದಾರೆ ಅಂದರೆ ನಿರ್ದೇಶಕರ ರಿಸರ್ಚ್ ಚೆನ್ನಾಗಿಲ್ಲ ಎಂದರ್ಥ ಅಷ್ಟೇ . ಅದು ದಿಕ್ಕು ತಪ್ಪಿಸುವ ಯತ್ನ . ಆದಿಶಕ್ತಿಯಿಂದ ಬಂದಿರುವುದು ಅನ್ನಬಾರದು . ತಪ್ಪಾಗುತ್ತದೆ  ಅವಳ ಮನಸ್ಸಿನ ಸಂಕಲ್ಪದ ಸೃಷ್ಟಿ . ಮನುಷ್ಯ ಮನಸ್ಸಿನಲ್ಲಿ ಕಲ್ಪನೆ ಮಾಡಿ ಸೃಷ್ಟಿ ಮಾಡಿಕೊಳ್ಳುವ ರೀತಿ .


ದೊಡ್ಡವರು ಚಿಕ್ಕವರು ಎಂಬ ಮನುಷ್ಯ ಭೇದ ಮಾಡುವ ಹಾಗೆ ತ್ರಿಮೂರ್ತಿಗಳಲ್ಲಿ ಭೇದ ಇಲ್ಲ . ವ್ಯಾವಹಾರಿಕ ಜೀವನದಲ್ಲಿ ಒಂದು ದೃಷ್ಟಾಂತ ಕೊಡಬೇಕಾದರೆ ಒಬ್ಬ ಸಿ ಈ ಓ , ಒಬ್ಬ ಎಂ ಡಿ ಮತ್ತೊಬ್ಬ ಡೈರೆಕ್ಟರ್ ಇದ್ದ ರೀತಿ ಅಂತ ಕಲ್ಪಿಸಿಕೊಳ್ಳಿ ಆದರೆ ಮೇಲು ಕೀಳು ಎಂಬ ಭೇದ ಇಲ್ಲ( No Hierarchy like in our work place) . ವಿಶ್ವವು ಕಾಲ ಕಾಲಕ್ಕೆ ಸರಿಯಾಗಿ ನಡೆಯಲಿ ಎಂದು ಒಂದೊಂದು ಕೆಲಸ ಹಂಚಿದೆ.ಒಬ್ಬೊಬ್ಬರಿಗೆ ಒಂದೊಂದು ಕೆಲಸ ಹಂಚಿದೆ ಎಂದು ತೆಗೆದುಕೊಳ್ಳಬೇಕು. ಒಬ್ಬ ಸೃಷ್ಟಿ ಅಂದರೆ ಇನ್ನೊಬ್ಬ ಸ್ಥಿತಿ ಮತ್ತೊಬ್ಬ ಲಯ ಕರ್ತ.


ಶಿವಪುರಾಣ ವಿಷ್ಣುಪುರಾಣ ಯಾವುದನ್ನು ಓದಿದರೂ  ಮೊದಲು ಹೇಳಿರುವುದು ಪ್ರಕೃತಿ ಭೂಮಿ ಈ ವಿಶ್ವದ ಬಗ್ಗೆ . ಈ ಮೂರು ಜನರಿಂದ ಎಲ್ಲಾ ಬಂದಿದ್ದು ಎಂದು ಎಲ್ಲೂ ಹೇಳಿಲ್ಲ . ಶಕ್ತಿಗೆ ಆಕಾರ ಇಲ್ಲ ಅಂದರೆ ಪರಮಾತ್ಮನಿಗೆ ಆಕಾರ ಇಲ್ಲ . ಅವನಿಗೆ ಆಕಾರ ಕೊಟ್ಟು ಹೇಳಿರುವುದು ಯಾತಿಕ್ಕೆ ಅಂದ್ರೆ ಹೇಳುವುದಕ್ಕೆ ಸುಲಭ ಎಂದು. ನಾವು ಮಾನವರಾಗಿರುವ ಕಾರಣ ಮನುಷ್ಯ ಆಕಾರ ಕೊಟ್ಟು ನಿರ್ಗುಣ ಪರಮಾತ್ಮನನ್ನು ಪೂಜಿಸುವುದಕ್ಕೆ ಸಗುಣಾಕಾರ ಕೊಟ್ಟಿರುವುದು ವರ್ಣಿಸಲು ಸುಲಭವಾಗುವುದಕ್ಕೆ. ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಪ್ರಭೇದವೇ ಇಲ್ಲ ಅಂದ್ರೆ ನಿರ್ಗುಣ ನಿರಾಕಾರ ಪರಮಾತ್ಮ ಅಥವಾ ಪರಬ್ರಹ್ಮ ಅಂತ ಹೇಳಿದೆ . ಅವನನ್ನು ನೋಡಿದ್ರೆ ಇವನಿಗೆ ಆಗಲ್ಲ ಇವನನ್ನು ನೋಡಿದ್ರೆ ಅವನಿಗೆ ಆಗಲ್ಲ ಅಂತ ಎಲ್ಲೂ ಇಲ್ಲ . ಅದೆಲ್ಲಾ ಏನಿದ್ರೂ ಮನುಷ್ಯನಲ್ಲಿ ಮಾತ್ರ .  ದೇವತೆಗಳಲ್ಲಿ ಅದೆಲ್ಲಾ ಇರುವುದಿಲ್ಲ . 

ಮಕ್ಕಳಿಗೆ ಸ್ವಲ್ಪ ಸರಿಯಾಗಿ ಹೇಳುವುದು ಒಳ್ಳೆಯದು . ಅರ್ಥ ಆಗುವ ವಿಷಯ ಸೂಕ್ಷ್ಮವಾಗಿ ಮಗುವಿಗೆ ಬೇಕಾದ ಹಾಗೆ ತಿಳಿಸಿಕೊಡಿ ....ನಂತರ ದೊಡ್ಡವರಾದ ಮೇಲೆ ಸರಿಯಾಗಿ ತಿಳಿಸಿಕೊಡಿ . ಎಲ್ಲ ವಿಷಯವನ್ನು ಅರಿತುಕೊಳ್ಳಲು ಜೀವನಾನುಭವ ಮುಖ್ಯ .

ವಿಷ್ಣು ಮತ್ತು ಲಕ್ಷ್ಮಿ ಗಲಾಟೆ ಮಾಡಿಕೊಂಡರಂತೆ ಅನ್ನೋದು ಒಂದು ಲೀಲೆಯಾಗಿ ಅಥವಾ ಒಂದು ಆಟವಾಗಿ  ತೆಗೆದುಕೊಳ್ಳಬೇಕೇ ಹೊರತು ಅದನ್ನು ದಯವಿಟ್ಟು ಆದರ್ಶ ಮಾಡಿಕೊಳ್ಳಬೇಡಿ . ಅದು ಲೀಲೆ ಅಂತ ಹೇಳುತ್ತಾರೆ . ದೇವತೆಗಳು ಅಥವಾ ದೇವರುಗಳು ಮಾಡಿರುವುದನ್ನು ಎಲ್ಲವನ್ನು ಲೀಲೆಯಾಗಿ ತೆಗೆದುಕೊಳ್ಳಿ .


ದ್ರೌಪದಿಗೆ ಯಾಕೆ ೫ ಜನ ಗಂಡಂದರು ಅಂತ ಮುಂದಿನ ವಾರ ತಿಳಿದುಕೊಳ್ಳೋಣ. ಮುಂದಿನ ಗುರುವಾರ ದಯವಿಟ್ಟು ಎಲ್ಲರೂ ಬನ್ನಿ . ಪ್ರಶ್ನೆಯನ್ನು ಕೇಳಲು ಮಾತ್ರ ಮರೆಯಬೇಡಿ . 

ಶ್ರೀ ಗುರುಭ್ಯೋ ನಮಃ , ಹರಿಃ ಓಂ 🙏

ಸುಬ್ರಹ್ಮಣ್ಯ ಪದ್ಮನಾಭ