Tuesday, November 29, 2022

Nov 29 2022 - Notes

 ೫ - ಶಿವಗುರು ಒಬ್ಬನೇ ಮಗನನ್ನು ಬೇಡಿಕೊಳ್ಳುತ್ತಾನೆ .

ಆರ್ಯಾಂಬಾ ಗರ್ಭವಂತಳಾಗುತ್ತಾಳೆ . ಭೂಲಕಕ್ಕೆ ಬಂದಿರುವ ಶಿವಸ್ವರೂಪಿ ಆದಿಶಂಕರಾಚಾರ್ಯ ಗರ್ಭದಲ್ಲಿ ಬೆಳೆಯುತ್ತಿರುತ್ತದೆ . ಆಗ ಜ್ಞಾನಿಗಳು ಪಂಡಿತರು ಓಡಾಡುವ ಊರು ಪರಿಸರ . ನಿತ್ಯ ವೇದ ಮಂತ್ರ ಭಗವದ್ಗೀತೆ ತಾಯಿಯ ಕಿವಿ ಮೇಲೆ ಬೀಳುತ್ತಿತ್ತು .

ಸಂಸ್ಕಾರ ಗರ್ಭದಲ್ಲೇ ಬೆಳೆಯುವಂತದ್ದು . 


ಲೌಕಿಕ ಜನರು ಇದನ್ನು ಗಮನಿಸಬೇಕು .

ಯೋಗ ಧ್ಯಾನ ಸ್ತೋತ್ರಗಳ ಪಟನೆ ಆ ಹೆಣ್ಣಿಗೆ ಗರ್ಭವತಿಯಾದಾಗ ಕೊಡಬೇಕು . 

ಲೌಕಿಕ ಜಗತ್ತಿಗೆ ಬಂದಾಗ ಭಯ ಬಂದು ಅಳುತ್ತದೆ.


ಆದರೆ ಆರ್ಯಾಂಬಳಿಗೆ ಹುಟ್ಟಿದ ಮಗುವಿಗೆ ತುಂಬಾ ಸಂತೋಷವಿತ್ತು . 

ದುಃಖ ಇಲ್ಲ , ಅಳು ಇಲ್ಲ. ಏನಿಕ್ಕೆ ಹುಟ್ಟಿದೀನಿ ಎಂದು ತಿಳಿದಿತ್ತೇನೋ ಅನ್ನುವ ಹಾಗೆ .


ತೋಳಿನ ಬಲಭಾಗದಲ್ಲಿ ಈಶ್ವರ ಸಾಕೇತಿಕವಾಗಿ ತ್ರಿಶೂಲದ ಚಿನ್ಹೆ ಹೊತ್ತಿಕೊಂಡು ಹುಟ್ಟಿದ್ದ .  

ತೋಳಿನ ಎಡಬಾಗದಲ್ಲಿ ಅರ್ಧ ಚಂದ್ರಾಕೃತಿ .


ಪಂಡಿತರು ಜ್ಞಾನಿಗಳು ಮಗುವನ್ನು ನೋಡಿದ ತಕ್ಷಣ ಗೊತ್ತಾಗುತ್ತೆ ಈ ಮಗು ಸನ್ಯಾಸಿ ಆಗುತ್ತಾನೆ . ಲೋಕಕಲ್ಯಾಣಕ್ಕೆ ಹುಟ್ಟಿರೋ ಮಗು ಇದು ಎಂದು ಆತ್ರೇಯರು ( ಕುಲ ಗುರುಗಳು ) ಹೇಳುತ್ತಾರೆ.

ಪಂಡಿತರು ಮುಂದೆ ನಾವು ನಮಸ್ಕಾರ ಮಾಡುತ್ತೇವೆ ಎಂದು ಭವಿಷ್ಯ ನುಡಿತಾರೆ .


೬. ಚಾರುವಾಕ ಸಿದ್ದಾಂತ ಪರಿಚಯ ಆಗಿದೆ . ಈಗ ಬೌದ್ಧ ದರ್ಶನ ತಿಳಿದುಕೊಳ್ಳೋಣ .

ಶಂಕರಾಚಾರ್ಯರು ಹೋರಾಡಿದ್ದು ಈ ದರ್ಶನದ ವಿರುದ್ಧ .

ಬುದ್ಧ ತತ್ವಜ್ಞಾನಿ . ಅವನಿಂದ ಜಗತ್ತಿಗೆ ಬೌದ್ಧ ದರ್ಶನವಾಯಿತು . ಸಿದ್ದಾರ್ಥ( ಬುದ್ಧನ ಬಾಲ್ಯದ ಹೆಸರು )  ಹುಟ್ಟಿದ್ದು ಕ್ರಿಸ್ತ ಪೂರ್ವ  ೫೬೩ ರಲ್ಲಿ ಈಗಿನ ನೇಪಾಳದಲ್ಲಿ ಹುಟ್ಟಿದ .

ಸಿದ್ದಾರ್ಥನ ತಂದೆಗೆ ಮಗನ ಭವಿಷ್ಯ ಗೊತ್ತಾಗಿರುತ್ತೆ .

ಕಾಯಿಲೆಗೆ ಸಿಕ್ಕಿರುವ ಮನುಷ್ಯ ಮತ್ತು ಸತ್ತು ಹೋಗಿರುವ ವ್ಯಕ್ತಿಯನ್ನು ಒಮ್ಮೆ ನೋಡುತ್ತಾನೆ .

ಸತ್ಯಾನ್ವೇಷಣೆ ಬೇಕು ಎಂಬುದಾಗಿ ಆಸ್ತಿ ರಾಜ್ಯ ಎಲ್ಲ ತೊರೆದು ಹೊರಡುತ್ತಾನೆ .


ಎಂಟು ವಿಷಯಗಳನ್ನು ಬುದ್ಧ ಕೊಟ್ಟಿದ್ದು .

ಮಾಡುವ ಕೆಲ್ಸಕ್ಕೆ ಉದ್ದೇಶ ಚೆನ್ನಾಗಿರಬೇಕು . 

ಮಾತು ಚೆನ್ನಾಗಿರಬೇಕು 

ಒಳ್ಳೆಯ ಕೆಲಸ ಸರಿಯಾದ ಮಾರ್ಗದಲ್ಲಿ ಇದ್ದು ಮಾಡಬೇಕು .

ಸರಿಯಾದ ಪ್ರಯತ್ನ ಮಾಡಬೇಕು .

ಏಕಾಗ್ರತೆಯಿಂದ ಮಾಡಬೇಕು .

ಸರಿಯಾದ ಬುದ್ದಿಯಲ್ಲಿ ಶುದ್ಧತೆ ತಂದುಕೊಳ್ಳಬೇಕು.


ಮನುಷ್ಯನ ದುಃಖಕ್ಕೆ ಆಸೆಯೇ ಕಾರಣ ಎಂದು ಹೇಳಿದ . ಅದು ಸ್ವಲ್ಪ ಗಿಂಡಲಕ್ಕೆ ಈಡಾಗಿತ್ತು .

ಬುದ್ಧ ಅನ್ನೋದು ಬಿರುದು . ಯಾವುದೇ ವ್ಯಕ್ತಿ ಜ್ಞಾನಿಯಾದರೆ ಬುದ್ಧ ಎಂದು ಕರೆದರು.

ನಮ್ಮ ವೈಧಿಕ ಮಾರ್ಗವನ್ನು ಹಿಂದೆ ಸರಿಸಿ ಬುದ್ಧ ದರ್ಶನವನ್ನು ಸಿದ್ದಾರ್ಥ ನಿಲ್ಲಿಸಿದ್ದ.


ಸಿದ್ದಾರ್ಥ ತಾನೇ ಸತ್ಯವನ್ನು ಕಂಡುಹಿಡಿದುಕೊಳ್ಳುವುದಾಗಿ ಪ್ರಯತ್ನ ಪಟ್ಟ. ಅವನಿಗೆ ಗುರು ಇರಲಿಲ್ಲ.

ಆತ್ಮ ಅಂದರೆ ಏನು . ಯಾವುದು ನಿತ್ಯ ಯಾವುದು ಅಶಾಶ್ವತ ಅನ್ನೋದು ನಿತ್ಯ ವಿಚಾರ ಮಾಡಿಲ್ಲ ಅದಕ್ಕೆ ನಮಗೆ ದುಃಖ ಜಾಸ್ತಿ . ಅದು ಗೊತ್ತಾದರೆ ಜ್ಞಾನಿ ಎಂದು ತಿಳಿಯುವುದು .


ಬೌದ್ಧ ದರ್ಶನ ಭಾರದಲ್ಲಿ ಉಳಿಯಲೇ ಇಲ್ಲ. ಬೇರೆ ಕಡೆಯೂ ಕೂಡ ಉಳಿಲಿಲ್ಲ ಯಾಕೆ ಅಂದ್ರೆ ಆತ್ಮತತ್ವನ್ನು ಒಪ್ಪಿರಲಿಲ್ಲ . ಮನಸ್ಸೇ ಎಲ್ಲವೂ ಎನ್ನೋ ವಾದ ಅವರದ್ದಾಗಿತ್ತು . ವೇದವನ್ನು ಮಾನ್ಯತೆ ಮಾಡಿರದೆ ಇರೋದ್ರಿಂದ ಬುದ್ಧನ ವಾದವನ್ನು ನಾಸ್ತಿಕ ವಾದ ಎಂದು ಹೇಳುತ್ತಿದ್ದರು .


ಪುನರ್ಜನ್ಮದಲ್ಲಿ ನಂಬಿಕೆ ಇತ್ತು ಆದರೆ ಆತ್ಮಕ್ಕೆ ಬೆಲೆ ಕೊಡದೆ ಇದ್ದಿದ್ದು , ವೇದವನ್ನು ತಿರಸ್ಕಾರ ಮಾಡಿರೋ ಕಾರಣ ಬೌದ್ಧ ದರ್ಶನ ನಿಲ್ಲುವುದಕ್ಕೆ ಆಗಲಿಲ್ಲ .

ಬುದ್ಧ ಅಹಿಂಸೆಯನ್ನು ನಂಬಿದ್ದ ಆದರೆ ಅವನ ಅನುಯಾಯಿಗಳು ಮಾಂಸ ತಿನ್ನುತ್ತಿದ್ದರು . ಅದಕ್ಕೆ ಪ್ರಖ್ಯಾತಿ ಆಗಲಿಲ್ಲ, ಬಿದ್ದು ಹೋಯ್ತು .     

 

Monday, November 28, 2022

Nov 28, 2022 - Notes

 ಶಂಕರಾಚಾರ್ಯರು ಯಾವಾಗಲೂ ವೇಗವಾಗಿ ನಡೆಯುತ್ತಿದ್ದರು. 

೮ ನೇ ಶತಮಾನದಲ್ಲಿ ಹೆಂಡ ಸೇಂಧಿ ಸಾರಾಯಿ ಅಂಗಡಿ ಊರಿನ ಒಳಗೆ ಇರುತ್ತಿರಲಿಲ್ಲ.

ಒಂದು ಸಾರಿ ಶಿಷ್ಯರಿಗೆ ಅವರ ದೇಹ ಶಕ್ತಿಯ ಬಗ್ಗೆ ತೋರಿಸಿಕೊಟ್ಟರು .

ಒಂದು ಸಾರಿ ಶಿಷ್ಯರು ಏನು ಮಾಡುತ್ತಾರೆ ನೋಡೋಣ ಎಂದುಕೊಂಡು , ದೊಡ್ಡ ಮಡಕೆ ಸಾರಾಯಿ ಕುಡಿದ ಮೇಲೆ ತಮ್ಮ ಶಿಷ್ಯರ ಮನಸ್ಸಿನಲ್ಲಿ ಆದ ಬದಲಾವಣೆ ತಕ್ಷಣ ತಿಳಿದುಕೊಳ್ಳುತ್ತಿದ್ದರು. ಶಿಷ್ಯರಿಗೂ ಕುಡಿಯುವ ಮನಸ್ಸು ಬಂದಿದ್ದು ತಿಳಿಯಿತು .

ಎರಡನೇ ಸಾರಿ ಕಬ್ಬಿಣದ ರಸ ಕುಡಿದ ಮೇಲೆ ಹಿಂದೆ ತಿರುಗಿ ಶಿಷ್ಯರ ಕುರಿತು ಹೇಳುತ್ತಾರೆ ಕಣ್ಣೂ ಮುಚ್ಚಿ ಒಬ್ಬರನ್ನು ಅನುಸರಿಸಬಾರದು ಎಂದು. ವಿಧ್ಯೆ ಕಲಿತು ಸ್ವಂತ ಬುದ್ದಿ ಉಪಯೋಗಿಸಬೇಕು ಎಂದು ಅವರ ನಡತೆಯಿಂದ ಪಾಠ ಮಾಡಿದರು. ಅತಿಮಾನುಶರು ಎಂದು ಆಗ ಶಿಷ್ಯರು ತಿಳಿದರು.


ರಾಮಾಯಣ ಮಹಾಭಾರತ ವೇದ ಪುರಾಣ ನಿತ್ಯಕ್ಕೆ ಓದುವ ಬರೆಯುವ ಅಭ್ಯಾಸ ಮಾಡಬೇಕು.

ನಮ್ಮ ಮಕ್ಕಳು ನಮ್ಮ ಪ್ರತಿಬಿಂಬವಾದ್ದರಿಂದ ನಮ್ಮ ಒಳ್ಳೆಯತನವನ್ನು ಪಾಲಿಸುವರು.


ಕೆಲವು ದಾರ್ಶನಿಕರು ವೇದವನ್ನು ಮಾನ್ಯತೆ ಮಾಡುತ್ತಿರಲಿಲ್ಲ. ಜನರ ಜೀವನ ಹದಗೆಟ್ಟಿತ್ತು. ಸುಸ್ಥಿತಿಗೆ ತರುವ ಸಮಯ ಬಂದಿತ್ತು. ಸನಾತನ ಧರ್ಮ ನಶಿಸಿ ಹೋಗುತಿತ್ತು.   

ಕಾಪಾಲಿಕರು ತಲೆ ಬುರುಡೆಯಲ್ಲಿ ಊಟ ಮಾಡುತಿದ್ದರು.  

ಚಾರುವಾಕರು ದೇವರು ಇಲ್ಲವೇ ಇಲ್ಲ ಎಂದು ನಂಬುವ ಹಾಗೆ ಭಾಷಣ ಮಾಡಿದ.

ಅವನನ್ನು ಹೇಗೆ ಅಷ್ಟು ಚೆನ್ನಾಗಿ ಮಾತನಾಡಿದೀಯ ಎಂದು ಕೇಳಿದಾಗ ದೇವರ ದಯೆ ಎಂದು ಉತ್ತರಿಸಿದ.

ಅಜ್ಞಾನ / ಅವಿಧ್ಯೆಯಿಂದ ಹೀಗೆ ಜನರಿಗೆ ಆಗುತ್ತದೆ .

ಪ್ರತಿಯೊಂದನ್ನು ನಮ್ಮ ಮನಸ್ಥಿತಿಗೆ ತಕ್ಕಂತೆ ಗೋಚರವಾಗುತ್ತದೆ.

ಚಾರುವಾಕರ ಸಿದ್ದಂತ ಚೆನ್ನಾಗಿ ತಿನ್ನು ಕುಡಿ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸು. ಬೇರೆಯವರ ಬಗ್ಗೆ ಯೋಚಿಸಬೇಡ, ದೇವರು ಇಲ್ಲ, ಕರ್ಮ ಇಲ್ಲ,  ಸ್ವರ್ಗ ನರಕ ನಂಬಬೇಡಿ, ಆತ್ಮ ಇಲ್ಲ , ಅಪರ ಕರ್ಮ ಮಾಡಬೇಡಿ. ಪುನರ್ಜನ್ಮ ಇಲ್ಲ ಅಂತ ಹೇಳಿ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು.

ಚಾರುವಾಕರು ಪಂಚಬೂತಗಳಿಂದ ಮನುಷ್ಯನ ಶರೀರವು ಆಗಿಲ್ಲ ಎಂದು ಹೇಳುತ್ತಿದ್ದರು . 

ಕಣ್ಣಿಗೆ ಕಾಣದ್ದನ್ನು ನಂಬುವವರಲ್ಲ ( ಉದಾ : ಆಕಾಶ ). ಅವರ ಸಿದ್ದಂತ ಏನು ಅಂದರೆ ಸಾಲ ಆದರು ತುಪ್ಪ ತಿನ್ನು ಎಂದು ಹೇಳುತ್ತಿದ್ದರು. ಒಬ್ಬರಿಗೆ ಮೋಸ ಮಾಡಿದರೆ ಕರ್ಮ ಬರುತ್ತೆ , ನರಕ ಅನುಭವಿಸುತ್ತೀನಿ ಎಂಬುದು ತಳ್ಳಿಹಾಕಿದ್ದರು . ಯಮ ನಿಯಮ ( ನಾವೇ ಹಾಕಿಕೊಳ್ಳುವ ನಿಯಮ ) ನನ್ನ ಮುಂದಿನ ಜನ್ಮಕ್ಕೆ ಮತ್ತು ನನ್ನ ಮುಂದಿನ ಜನಾಂಗಕ್ಕೆ ಒಳ್ಳೇದಾಗ್ಬೇಕು.

ಗಾದೆ : ಹಾಲು ಕುಡಿದು ಬದುಕುವವರೇ ಬದುಕಲ್ಲ ಇನ್ನು ವಿಷ ಕುಡಿದು ಬದುಕುವುದುಂಟೆ ?


ಆ ೮ನೆ ಶತಮಾನದಲ್ಲಿ ಎಲ್ಲಾ ದಾರ್ಶನಿಕರು ಸಹ ಚಾರುವಾಕ ಸಿದ್ದಂತವನ್ನು ಒಪ್ಪುತ್ತಿರಲಿಲ್ಲ . ಅದೊಂದು ತುಂಬಾ ಒಳ್ಳೆಯದು ನಡೀತಿತ್ತು.

Sunday, November 27, 2022

Nov 27 , 2022 - Learnings

 ಗುರು ಅಂದರೆ ಅರ್ಥ ಏನು ? 

ಅಂಧಕಾರವನ್ನು ತೆಗೆಯುವವನು. ಗುರುವಿನಲ್ಲಿ ಇರುವ ಜ್ಞಾನ ಪ್ರಕಾಶ ನಮಗೆ ಬೇಕು. ನಿತ್ಯವೂ ಅಭ್ಯಾಸದಲ್ಲಿ ಇದ್ದರೆ ಅಹಂಕಾರ ನಿರ್ಮೂಲನೆ ನಮ್ಮೊಳಗೇ ಆಗುವ ವಿಷಯ. 

ಸಾಧನೆ ಮಾಡಬೇಕು 

ಹೆಚ್ಚು ಸಮಯ ಅದಕ್ಕೆ ಮೀಸಲಾಗಿಡಬೇಕು.

ದಕ್ಷಿಣೆ ಅನ್ನೋದು ವ್ಯವಹಾರವಾಗಿಬಿಟ್ಟಿದೆ. ಅದು ತಪ್ಪು .

ನಮ್ಮ ಆತ್ಮಪರೀಕ್ಷೆ ನಿತ್ಯ ಮಾಡಿಕೊಳ್ಳಬೇಕು. ಲೌಕಿಕ ವ್ಯವಹಾರದಲ್ಲಿ ನಿನ್ನೆಗಿಂತಲೂ ಚೆನ್ನಾಗಿ ಇದ್ದನಾ ? ದುಷ್ಟರ ತರಹ ನಡೆದುಕೊಂಡಿದ್ದಾರೆ ನಾಳೆ ಅದನ್ನು ಸರಿಪಡಿಸಿಕೊಳ್ಳಬಹುದಾ ಎಂದು ಆಲೋಚಿಸಬೇಕು.


ಧ್ಯಾನ ಮಾಡುವಾಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳಬಹುದೇ ? ಮಾಡಬಹುದು 


ದಾನದಿಂದ ಕರ್ಮ ನಾಶ ಚಿತ್ತ ಶುದ್ಧವಾಗುತ್ತದೆ .

ಗೃಹಸ್ಥಾಶ್ರಮದಲ್ಲಿರುವವರು ಇನ್ನಿತರ ಮೂರು ಆಶ್ರಮವನ್ನು ಕಾಪಾಡಬೇಕು.

ಬ್ರಹ್ಮಚರ್ಯಾಶ್ರಮ 

ಸನ್ಯಾಸಾಶ್ರಮ ಮತ್ತು 

ವಾನಪ್ರಸ್ಥಾನಾಶ್ರಮ 

       

ಸಮಸ್ಯೆಗಳು ಬಂದರೆ ಪ್ರಾರಭ್ದದಿಂದಲೇ ಎಂದು ತಿಳಿದು ಅದನ್ನು ಬಗೆಹರಿಸಿಕೊಳ್ಳಬೇಕು .

ಹೆಚ್ಚು ಕಷ್ಟಗಳು ಬಂದರೆ ಅದನ್ನು ಹೆಚ್ಚು ಹೆಚ್ಚು ಬಗೆಹರಿಸಿಕೊಳ್ಳುವುದನ್ನು ಕಲಿಯುತ್ತೇವೆ .


ಉದಾಹರಣೆ : ಜನಿವಾರ ನಾವೇ ನಾವಾಗಿ ಬಿಡಿಸಿಕೊಳ್ಳುವುದು.

Notes Nov 26 2022 - Adishankaracharya group 5

 ಈಶ್ವರ ಮತ್ತು ವಿಷ್ಣು ಚರ್ಚೆ ಮಾಡಿ ೪ ಮಾರ್ಗಗಳನ್ನು ಭೂಲೋಕದ ಸಮಸ್ಯೆಗೆ ಪರಿಹಾರವಾಗಿ ಕೊಟ್ಟರು 

ಕರ್ಮ ಮಾರ್ಗ - ಸುಬ್ರಹ್ಮಣ್ಯ ಅಧಿಪತಿ 

ಧ್ಯಾನ ಮಾರ್ಗ - ಪತಾಂಜಲಿ ಮಹರ್ಷಿ 

ಸಂಕೀರ್ತನ ಅಥವಾ ಉಪಾಸನಾ ಮಾರ್ಗ 

ಜ್ಞಾನ ಮಾರ್ಗ - ಆದಿಶಂಕರಾಚಾರ್ಯರು 

 

ಯೋಚನೆ ಬೇಡ 

ಆಲೋಚನೆ ಮಾಡಿ 


ಒಬ್ಬನೇ ಮಾಡುವುದು ಯೋಚನೆ 

ಜೊತೆಗೆ ಮಾಡುವುದು ಆಲೋಚನೆ 


ಚರ್ಚೆ ಮಾಡಿದರೆ ಪರಿಹಾರ 

ವಾದ ವಿವಾದ ಮಾಡಿದರೆ ಪರಿಹಾರ ಸಿಗುವುದಿಲ್ಲ 


ಕಲಿಯುವುದು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ 

ಕಲಿತಿರುವುದನ್ನು ಅಳವಡಿಸಿಕೊಳ್ಳಲು ತುಂಬಾ ಸಮಯವಾಗುತ್ತದೆ 


ಭಾರತದ ದಕ್ಷಿಣ ದಿಕ್ಕು - ಕೇರಳ ರಾಜ್ಯ - ಕಾಲಟಿ ಪ್ರಾಂತ್ಯ ( ಹಸಿರು ಕೂಡಿದ ವಾತಾವರಣ )

ದೇವರ ಜಾಗ ಎಂದೇ ಕರೆದುಕೊಳ್ಳುವ ಜಾಗ .


ಷಟ್ಕರ್ಮ ವೇದಾಧ್ಯಯನ ಸಕಲ ವಿದ್ಯಾ ಪಾರಂಗತರ ಮಗ ಶಿವಗುರು 

ತಂದೆಯ ಗುರುಕುಲದಲ್ಲಿ ೧೨ ವರ್ಷ ವೇದಾಧ್ಯಯನ 

ಮದುವೆ ವಯಸ್ಸಿನಲ್ಲಿ ದೈವಭಕ್ತೆ ಆರ್ಯಾಂಬ ಎಂಬ ಸುಂದರ ಹುಡುಗಿಯೊಂದಿಗೆ ವಿವಾಹ .

ಶಿವಗುರು - ಆರ್ಯಾಂಬ ಮನೆಯಲ್ಲಿ ನಿತ್ಯ ವೇದಾಭ್ಯಾಸ, ಸಾವಿರಾರು ಪಂಡಿತರು ಮನೆಗೆ ಬಂದುಹೋಗುವ ವಾತಾವರಣ. ಸತ್ಸಂಘ .

ಹಲವಾರು ವರ್ಷ ಮಕ್ಕಳಿಲ್ಲದ ಹಲವಾರು ವರ್ಷ ದುಃಖದಲ್ಲೇ ಕಳೆದರು.

ಶಿವನನ್ನು ಆರಾಧನೆ ಮಾಡುವುದಾಗಿ ಚರ್ಚೆ ನಡೆಯಿತು .

೪೮ ದಿವಸಗಳ ಮಂಡಲ  ನಡೆಯುತ್ತದೆ - ಶಿವನ ಜಪ ತಪ ಹೋಮ ಹವನ ಅನ್ನಸಂತರ್ಪಣೆ .

ಈಶ್ವರ ಸಂತೃಪ್ತನಾಗಿ ಅಲ್ಪಾಯುಷಿಯಾದ ಸರ್ವಜ್ಞ ಬೇಕೋ ಅಥವಾ ದೀರ್ಘಾಯುಷಿಯಾದ ದುರಾಚಾರಿ ಲೋಕಕಂಟಕ ದುರುಳ ಬೇಕೋ ಎಂದು  ಕೇಳಿದಾಗ ಶಿವಗುರು  ಅಲ್ಪಾಯುಷಿಯನ್ನೇ ಕೇಳುತ್ತಾನೆ .

ಲೋಕಕಲ್ಯಾಣಕ್ಕೆ ಆ ಮಗುವಿನ ಜನನವಾಗುತ್ತದೆ .