ಈಶ್ವರ ಮತ್ತು ವಿಷ್ಣು ಚರ್ಚೆ ಮಾಡಿ ೪ ಮಾರ್ಗಗಳನ್ನು ಭೂಲೋಕದ ಸಮಸ್ಯೆಗೆ ಪರಿಹಾರವಾಗಿ ಕೊಟ್ಟರು
ಕರ್ಮ ಮಾರ್ಗ - ಸುಬ್ರಹ್ಮಣ್ಯ ಅಧಿಪತಿ
ಧ್ಯಾನ ಮಾರ್ಗ - ಪತಾಂಜಲಿ ಮಹರ್ಷಿ
ಸಂಕೀರ್ತನ ಅಥವಾ ಉಪಾಸನಾ ಮಾರ್ಗ
ಜ್ಞಾನ ಮಾರ್ಗ - ಆದಿಶಂಕರಾಚಾರ್ಯರು
ಯೋಚನೆ ಬೇಡ
ಆಲೋಚನೆ ಮಾಡಿ
ಒಬ್ಬನೇ ಮಾಡುವುದು ಯೋಚನೆ
ಜೊತೆಗೆ ಮಾಡುವುದು ಆಲೋಚನೆ
ಚರ್ಚೆ ಮಾಡಿದರೆ ಪರಿಹಾರ
ವಾದ ವಿವಾದ ಮಾಡಿದರೆ ಪರಿಹಾರ ಸಿಗುವುದಿಲ್ಲ
ಕಲಿಯುವುದು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ
ಕಲಿತಿರುವುದನ್ನು ಅಳವಡಿಸಿಕೊಳ್ಳಲು ತುಂಬಾ ಸಮಯವಾಗುತ್ತದೆ
ಭಾರತದ ದಕ್ಷಿಣ ದಿಕ್ಕು - ಕೇರಳ ರಾಜ್ಯ - ಕಾಲಟಿ ಪ್ರಾಂತ್ಯ ( ಹಸಿರು ಕೂಡಿದ ವಾತಾವರಣ )
ದೇವರ ಜಾಗ ಎಂದೇ ಕರೆದುಕೊಳ್ಳುವ ಜಾಗ .
ಷಟ್ಕರ್ಮ ವೇದಾಧ್ಯಯನ ಸಕಲ ವಿದ್ಯಾ ಪಾರಂಗತರ ಮಗ ಶಿವಗುರು
ತಂದೆಯ ಗುರುಕುಲದಲ್ಲಿ ೧೨ ವರ್ಷ ವೇದಾಧ್ಯಯನ
ಮದುವೆ ವಯಸ್ಸಿನಲ್ಲಿ ದೈವಭಕ್ತೆ ಆರ್ಯಾಂಬ ಎಂಬ ಸುಂದರ ಹುಡುಗಿಯೊಂದಿಗೆ ವಿವಾಹ .
ಶಿವಗುರು - ಆರ್ಯಾಂಬ ಮನೆಯಲ್ಲಿ ನಿತ್ಯ ವೇದಾಭ್ಯಾಸ, ಸಾವಿರಾರು ಪಂಡಿತರು ಮನೆಗೆ ಬಂದುಹೋಗುವ ವಾತಾವರಣ. ಸತ್ಸಂಘ .
ಹಲವಾರು ವರ್ಷ ಮಕ್ಕಳಿಲ್ಲದ ಹಲವಾರು ವರ್ಷ ದುಃಖದಲ್ಲೇ ಕಳೆದರು.
ಶಿವನನ್ನು ಆರಾಧನೆ ಮಾಡುವುದಾಗಿ ಚರ್ಚೆ ನಡೆಯಿತು .
೪೮ ದಿವಸಗಳ ಮಂಡಲ ನಡೆಯುತ್ತದೆ - ಶಿವನ ಜಪ ತಪ ಹೋಮ ಹವನ ಅನ್ನಸಂತರ್ಪಣೆ .
ಈಶ್ವರ ಸಂತೃಪ್ತನಾಗಿ ಅಲ್ಪಾಯುಷಿಯಾದ ಸರ್ವಜ್ಞ ಬೇಕೋ ಅಥವಾ ದೀರ್ಘಾಯುಷಿಯಾದ ದುರಾಚಾರಿ ಲೋಕಕಂಟಕ ದುರುಳ ಬೇಕೋ ಎಂದು ಕೇಳಿದಾಗ ಶಿವಗುರು ಅಲ್ಪಾಯುಷಿಯನ್ನೇ ಕೇಳುತ್ತಾನೆ .
ಲೋಕಕಲ್ಯಾಣಕ್ಕೆ ಆ ಮಗುವಿನ ಜನನವಾಗುತ್ತದೆ .
No comments:
Post a Comment