Tuesday, April 27, 2021

ಶಾಸ್ತ್ರ

 ಹುಟ್ಟು ಸಾವು ದೇಹಕ್ಕೆ ಮಾತ್ರ .ಆತ್ಮಕ್ಕಲ್ಲ . ಅದು ದೇವರಲ್ಲಿ ಸೇರುವ ತನಕ ( ಮುಕ್ತಿ ) ಪುನರಪಿ ಜನನಂ ಪುನರಪಿ ಮರಣಂ .ಸಾವಿಗೆ ಕರೋನ ಕಾರಣವಷ್ಟೇ. ನನ್ನ ಅಮ್ಮ ೩೦ ಕ್ಕೆ ದೇಹತ್ಯಾಗ ಮಾಡಿ ಹೋದರು . ಆಗ ನಾನು ೨ ವರ್ಷದ ಮಗು. ಯಾಕೆ ಅಮ್ಮನನ್ನು ಕಿತ್ತುಕೊಂಡೆ ಎಂದು ನಾನು ದೇವರಿಗೆ ಎಂದೂ ಕೇಳಲಿಲ್ಲ . ಬದಲಿಗೆ ಎದುರಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಅವರಿಚ್ಛೆಯಂತೆ ಇಂಜಿನಿಯರ್ ಆದೆ ಪ್ರಪಂಚ ಸುತ್ತಿದೆ . ನಮ್ರತಾ ಭಾವದಲ್ಲಿ ಇದನ್ನು ಬರೆಯುತಿದ್ದೇನೆ . ದೇವರು ಎಲ್ಲಾ ಜೀವರಾಶಿಗಳಿಗೆ ಇದನ್ನು ಇಟ್ಟಿರುತ್ತಾನೆ . ನಮ್ಮ ಚೇತನ ಕರ್ಮಾನುಸಾರವಾಗಿ ಬುದ್ದಿಯಲ್ಲಿ ಗ್ರಹಿಸಿದ ಹಾಗೆ ಜೀವನ ನಡೆಸುತ್ತೇವೆ, ಮನಸ್ಸಿನ ದನಿ ಆಲಿಸಬೇಕಾದ ಅಗತ್ಯ ಇದೆ. ಉಪಾದಿ ಕಳಚಿ ಇನ್ನೊಂದು ಉಪಾದಿ ಬಂದೇ ಬರುತ್ತದೆ ಎಂದು ತಿಳಿಸಿದೆ ಶಾಸ್ತ್ರ . ಓಂ ಶಾಂತಿ 🙏