Friday, December 29, 2017

ಚೆಲುವೆಯ ಕಂಗಳು

ಚೆಲುವೆಯ ಕಂಗಳ ನೋಟ 
ತನು ಹೂವಾಗಿಸಿದೆ
ಬಳುಕುವ ಮೈ ಮಾಟ 
ಮನ ಕವಿತೆಯ ಹಾಡಿಸಿದೆ

-ಸುಬ್ಬು ಪದ್ಮನಾಭ

Wednesday, December 6, 2017

Gaur Gopal Das - Talk in London

External processes, protocols , rituals and practices are all the medium to express our genuine intent . At the end of it all its the genuine intent, sincerity and the purpose that matters and not just the rituals. Rituals processes and the very medium itself is our way of expressing out sincere thank you to the divine - Gaur Gopal Das
https://youtu.be/UON0P_f30qY

Monday, November 27, 2017

ಕಗ್ಗ 904 - ಕನ್ನಡದ ಭಗವದ್ಗೀತೆ

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |
ಪ್ರಹರಿಸರಿಗಳನನಿತು ಯುಕ್ತಗಳನರಿತು ||
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |
ವಿಹರಿಸಾತ್ಮಾಲಯದಿ - ಮಂಕುತಿಮ್ಮ

ಜೀವನದ ಕೆಲವು ಭಾರಗಳನ್ನು ನಾವು ವಹಿಸಿಕೊಳ್ಳಲೇಬೇಕು , ಕೆಲವು ನೋವುಗಳನ್ನು ಸಹಿಸಿಕೊಳ್ಳಲೇಬೇಕು . ಯೋಗ್ಯ ಯಾವುದು ಅನುಚಿತ ಯಾವುದು ಎಂದು ಅರಿತು ನಮಗೆ ಹಿತವೆನಿಸದೆ ಇರುವುದರಿಂದ ದೂರವಿರಬೇಕು . ಈ ಜಗತ್ತಿನ ನಾಟಕದಲ್ಲಿ ನಾವು ಮನಸ್ಸು ಕೊಟ್ಟು ಕುಣಿಯುತ್ತಾ ಆತ್ಮಸಂತೋಷದಿಂದ ವಿಹರಿಸಬೇಕು .

Sunday, November 26, 2017

ಕಗ್ಗ 919 - ಕನ್ನಡದ ಭಗವದ್ಗೀತೆ

ಕಗ್ಗ - ಕನ್ನಡದ ಭಗವದ್ಗೀತೆ
--------------------
ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||
ಜೀವದ+ಉದಯ , ಬಿಸಿಲ್+ಕುದುರೆ , ಭಾವಿಸಲು+ಇದೆ , ಕೇವಲ + ಆತ್ಮ
ವ್ಯಾಖ್ಯಾನ :
ಜೀವವು ಒಂದು ಉಪಾದಿಯಲ್ಲಿ ಹೇಗೆ ಹುಟ್ಟಿಕೊಂಡು ಒಂದು ದಿನ ಕೊನೆಗೊಳ್ಳುತ್ತದೆ ಎನ್ನುವ ವಿಚಾರವೇ ರಹಸ್ಯವಾಗಿದೆ . ಆದರೆ ಈ ಜೀವನದ ದೃಶ್ಯ ಮಾತ್ರ ಒಂದು ಮರುಭೂಮಿಯಲ್ಲಿನ ( ಮರುವಿನ ) ಬಿಸಿಲ್ಗುದುರೆಯ ಹಾಗೆ ಕಾಣುತ್ತಿದೆ . ಭಾವಿಸಲು ಇದೇ ತತ್ವ - ವಿಶ್ವವೆಲ್ಲವೂ ಬ್ರಹ್ಮನು ಸೃಷ್ಟಿಸಿದ ಮಾಯಾಲೋಕ . ಕೇವಲ ಆತ್ಮವೇ ಬ್ರಹ್ಮ . ಇನ್ನೂ ಹೆಚ್ಚು ವಿವರಣೆ ನೀಡುವುದಾದರೆ ನಮ್ಮ ದೇಹ ಬುದ್ದಿ ಅಹಂಕಾರವೆಂಬುದು ಪ್ರಕೃತಿ ಅಂದರೆ ಅದು ನಿಧಾನವಾಗಿ ಬದಲಾವಣೆಯಾಗಿ ನಶಿಸಿಹೋಗುವಂತಹದ್ದು. ಆದರೆ ಆತ್ಮಕ್ಕೆ ಸಾವಿಲ್ಲ , ಅದು ನಿರ್ಗುಣ ನಿರಾಕಾರ ಸಗುಣ ಸರ್ವವ್ಯಾಪಿ - ಎಲ್ಲೆಲ್ಲೂ ಬೆಳಗುತ್ತಿರುವ ಜ್ಯೋತಿ. ಇದನ್ನೇ ಜಗದ್ಗುರು ಭಗವತ್ಪಾದರಾದ ಆದಿಶಂಕರರು " ಅಹಂ ಬ್ರಹ್ಮಾಸ್ಮಿ " ಎಂದು ವಿಶ್ವಕ್ಕೆ ತಿಳಿಸಿರುವ ಅದ್ವೈತ ಸಿದ್ದಾಂತ .

ನನ್ನ ತಂದೆಯ ಬದುಕು ನನಗೆ ಕಲಿಸಿಕೊಟ್ಟ ಪಾಠಗಳು


ನಮ್ಮ ಮನೆಯಲ್ಲಿ ನನ್ನ ತಂದೆಯವರ ಒಂದು ಹೆರ್ಕ್ಯುಲಸ್ ಸೈಕಲ್ಲು. ನಾನು ಹುಟ್ಟುವ ವೇಳೆಗೆ ಅದಕ್ಕೆ ೨೦ ವರ್ಷ ಆಗಿತ್ತು. ಅದರಲ್ಲೇ ಅವರು ಪೂರ್ತಿ ಜೀವನ ಕಳೆದರು. ನನಗೆ ನಮ್ಮ ಚಿಕ್ಕಪ್ಪ ಹೈ ಸ್ಕೂಲ್ ಗೆ ಬಂದಾಗ ಅಟ್ಲಾಸ್ ಸೈಕಲ್ ಕೊಟ್ಟರು. ಒಟ್ಟು ಮನೆಯಲ್ಲಿ ಎರಡು ಸೈಕಲ್ಲುಗಳೇ ಕಲಿಸಿಕೊಟ್ಟಂತ ಪಾಠ , ಅದರಿಂದ ಸಿಕ್ಕಂತಾ ಸಂತೋಷ ಇವತ್ತು ಬಂಗಲೆಯಂತ ಮನೆಯಲ್ಲಿ ವಾಸವಾಗಿದ್ದು ಕಣ್ಣಿಗೆ ಕಾಣುವುದೆಲ್ಲವನ್ನೂ ಅನುಭವಿಸಿ ಏ ಸಿ ಕಾರಿನಲ್ಲೇ ಓಡಾಡಿದರು ಸಿಗದಿರುವುದು ನನ್ನ ಸ್ವಂತ ಅನುಭವ.
ಆ ಸೈಕಲ್ಲುಗಳನ್ನು ದಿನಾ ಒರೆಸಿಕೊಂಡು ಆಗಾಗ ಸ್ನಾನ ಮಾಡ್ಸಿ , ಆಯುಧ ಪೂಜೆಯ ದಿನ ಪೂಜೆ ಮಾಡಿ ಬಲೂನ್ ಸಿಕ್ಸಿ , ಗಂಧದ ಕಡ್ಡಿ ಸಿಕ್ಸಿ ಒಂದು ದೊಡ್ಡ ರೌಂಡ್ ಹೋಗಿ ಬರುತ್ತಿದ್ದೆ . ಎಂಟನೇ ತರಗತಿಯಿಂದ ಇಂಜಿನಿಯರಿಂಗ್ ೫ ನೇ ಸೆಮಿಸ್ಟರ್ ತನಕ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿ ನನ್ನ ಜೊತೆಯೇ ಇತ್ತು . ಪ್ರತಿನಿತ್ಯ ಶಾರದಾ ವಿಲಾಸ್ ಶಾಲೆ ಮತ್ತು ಕಾಲೇಜಿಗೆ ಹೋಗಿ ಬರುತ್ತಿದ್ದೆ . ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ಮೈಸೂರು ಬಸ್ ಸ್ಟಾಂಡ್ ಎದುರು ಇದ್ದ ವೆಲ್ಲಿಂಗ್ಟನ್ ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ಲನ್ನು ಇಟ್ಟು ಬಸ್ ಹಿಡಿದು ಮಂಡ್ಯಕ್ಕೆ ಇಂಜಿನಿಯರಿಂಗ್ ಕಲಿಯಲು ಹೋಗುತ್ತಿದ್ದೆ. ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ೨:೨೦ ಕ್ಕೆ ವಾಪಸ್ ಬಂದು ಮಂದಿರಾ ಬೇಡಿ ನಟಿಸಿದ್ದ 'ಶಾಂತಿ' ಧಾರಾವಾಹಿ ನೋಡುವ ಹಂಬಲ, ಅದಕ್ಕೆಂದೇ ಸೀದಾ ಮನೆಗೆ ಬಂದು ನಮ್ಮ ಕೇಶುಭಾವನ ಮನೆಯಲ್ಲಿ ಟೀವಿ ಮುಂದೆ ಹಾಜರು .
ಮೈಸೂರಿನ ಹಲವಾರು ಚಿತ್ರಮಂದಿರಕ್ಕೆ ( ಗಣೇಶ , ವಿದ್ಯಾರಣ್ಯ , ಸರಸ್ವತಿ , ಪದ್ಮ , ಶಾಂತಲಾ , ವುಡ್ಲ್ಯಾಂಡ್ಸ್ , ಸಂಗಮ್ , ರಣಜಿತ್ , ರತ್ನ, ಸ್ಟರ್ಲಿಂಗ್ , ಸ್ಕೈಲೈನ್, ಲಿಡೋ ) ನಾನು ಮತ್ತು ನನ್ನ ಸ್ನೇಹಿತರು ನನ್ನ ಸೈಕಲ್ ಹತ್ತಿ ಡಬಲ್ಸ್ ಕೆಲವು ಸರಿ ಟ್ರಿಪ್ಪಲ್ ರೈಡ್ ಮಾಡಿಕೊಂಡು ಸಿನೆಮಾ ನೋಡಲು ಹೋಗುತ್ತಿದ್ದೆವು.
ನಾನು ಮತ್ತು ನನ್ನ ಪೂಜ್ಯ ತಂದೆಯವರು ಪ್ರತಿ ಗುರುವಾರ ನಮ್ಮ ತಂದೆಯ ಸೈಕಲ್ಲಲ್ಲೇ ಕೃಷ್ಣಮೂರ್ತಿಪುರಂ ರಾಯರ ಮಠಕ್ಕೆ ಡಬಲ್ಸ್ ಹೋಗುತ್ತಿದ್ದವು ರಾಯರ ದರ್ಶನ ಮಾಡುತ್ತಿದ್ದೆವು.
ಚಾಮುಂಡಿಪುರಂ ತುಂಬಾ ಅಪ್ ಇದೆ ಮತ್ತು ಶಾರದಾ ವಿಲಾಸ್ ಕಾಲೇಜು ಹತ್ರ ಅಪ್ ಇದೆ ನನ್ನ ತಂದೆ ಪೆಡಲ್ ಹೊಡೆಯುವಾಗ ಅವರು ಕಷ್ಟ ಪಡುತ್ತಾ ಇದ್ದಿದ್ದು ನೋಡಿ ಅದೇ ಪೆಡಲ್ ಮೇಲೆ ಅರ್ಧ ಕಾಲು ಹಾಕಿ ಪೆಡಲ್ ಮಾಡ್ತಿದ್ದೆ. ರಾಯರ ಪಂಚಾಮೃತ ಅಭಿಷೇಕ ಸೇವಿಸಲು ಮಹಾ ಇಷ್ಟ , ಕಾತುರತೆ. ವಠಾರದಲ್ಲಿ ಎಲ್ಲರ ಮನೆಗೆ ಕೊಟ್ಟು ಬಾ ಅಂತ ಅಜ್ಜಿ ಕಳುಹಿಸುತ್ತಿದ್ದರು. ವಾಪಸ್ ಬಂದ ಮೇಲೆ ಶಾಲೆಗೆ ಹೋಗುವುದು. ಅವರು ಕೆಲ್ಸಕ್ಕೆ ಹೋಗುವುದು.ಇವೆಲ್ಲವೂ ಚಿಕ್ಕಂದಿನಿಂದ ರೂಡಿ.
ಇಬ್ಬರಿಗೂ ಎರಡು ಸೈಕಲ್ ಅಷ್ಟೇ , ತಂದೆಯ ರೈಲ್ವೆ ಕೆಲ್ಸದಿಂದ ವಸ್ತು ವಾಹನ ಮನೆ ಕಟ್ಟಿಕೊಳ್ಳುವಷ್ಟು ದುಡ್ಡು ನಮ್ಮ ತಂದೆಗೆ ಇರಲಿಲ್ಲ . ಸಂಸಾರ ದೊಡ್ಡದು ..೫ ಜನರಿಗೆ ವಿದ್ಯೆ ಕೊಡಿಸಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೇ ಆಗಿನ ಕಾಲಕ್ಕೆ ದೊಡ್ಡ ವಿಷಯ , ಸಾಲ ಸೌಲ ಮಾಡಿ ಮನೆ ಕಟ್ಕೋಬೇಕು ಅನ್ನೋದು ಅವರಿಗೆ ಬೇಕಿರಲಿಲ್ಲ. ಸಾಲ ಮಾತ್ರ ಯಾವತ್ತೂ ಮಾಡಬಾರದು ಅನ್ನೋ ಮನೋಭಾವ . ವಸ್ತು ವಾಹನಗಳು ಬೇಕು ಬೇಕು ಅನ್ನುವ ಆಸೆ ಆಗ ನನ್ನಲ್ಲಿ ಇರಲಿಲ್ಲ, ನನ್ನ ತಂದೆ ಒಂದೇ ಮಾತು ಹೇಳುತ್ತಿದ್ದರು ಚೆನ್ನಾಗಿ ಓದು ಬರಿ. ಎರಡನೇ ಪೀ ಯು ಇಂದ ಇಂಜಿನಿಯರಿಂಗ್ ಮುಗಿಯುವ ತನಕ ಬರೀ ಟೀವಿ , ಸ್ನೇಹಿತರು ಅಂತ ಕಾಲ ಹರಣ ಮಾಡುತ್ತಿದ್ದೆ . ಕಾಲೇಜು ಪುಸ್ತಕಗಳನ್ನು ತುಂಬಾ ಏನೂ ಓದಿ ಓದಿ ದಬ್ಬಾಕಿಲ್ಲ , ಎಷ್ಟು ಬೇಕೋ ಅಷ್ಟು . ಜೀವನ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡೆ ಅನ್ನಬಹುದು. ಅವರ ಮಾತುಗಳನ್ನು ಚಾಚೂತಪ್ಪದೆ ಅಕ್ಷರಸಹ ಇವತ್ತಿಗೂ ನೆನಪಿಟ್ಟುಕೊಂಡು ಪರಿಪಾಲಿಸಕೊಂಡು ಬರ್ತಾ ಇದ್ದೀನಿ. ನನ್ನ ಕೈಲಿ ಆಗುವುದು ನಾನು ಮಾಡ್ತೀನಿ ಅನ್ನುತ್ತಿದ್ದರು. ಅವರು ತುಂಬಾ ಕಷ್ಟ ಜೀವಿ ಅದಕ್ಕೆ ನನಗೆ ಏನೂ ಕೇಳಬಾರದು ದುಡ್ಡು ಕೇಳಬಾರದು ಶೋಕಿ ಮಾಡುವುದಕ್ಕೆ ದುಡ್ಡು ಸುರಿಯಬಾರದು ಅನ್ನುವುದು ಆಗಲೇ ಮನದಟ್ಟಾಗಿತ್ತು . ಯಾರಾದ್ರೂ ತುಂಬಾ ಕಷ್ಟ ಇವರಿಗೆ ಅಂತ ಅಂದ್ರೆ ನನಗೆ ಮಲ್ಕೋಳೊ ಸಮಯದಲ್ಲಿ ಹೇಳ್ತಾ ಇದ್ದ ಮಾತುಗಳು "ಕಷ್ಟ ಕಾರ್ಪಣ್ಯದಿಂದ ಮಾತ್ರ ಮನುಷ್ಯ ಕಲಿಯೋಕ್ಕೆ ಸಾಧ್ಯ ರಾಜ . ಸುಖದ ಸುಪ್ಪತಿಗೆ ಇದ್ರೆ ಏನೂ ಕಲ್ಯಲ್ಲ "-- ಎಷ್ಟು ಸತ್ಯ ಅಲ್ವಾ ? ತಮ್ಮ ನಲವತ್ತೆರಡನೆ ವಯಸ್ಸಿನಲ್ಲಿ ನನ್ನ ಅಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಮುಳುಗಿಹೋಗಿದ್ದರು. ನನಗೆ ಆಗ ಎರಡುವರೆ ವರ್ಷ. ಅವರಿಗೆ ಒಂದಿಬ್ಬರು ಪುನಃ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದರಂತೆ , ಅವರ ಮಾತನ್ನು ನಿರಾಕರಿಸಿದ್ದರು. ನನ್ನ ತಾಯಿಯ ಸಾವಿನ ದುಃಖದಿಂದ ಬಹಳ ಬೇಗ ಹೊರಬಂದು ಮಕ್ಕಳ ಸಲುವಾಗಿ ಎರಡೆರಡು ಶಿಫ್ಟ್ ಕೆಲಸ ಮಾಡಿ ನನ್ನ ೪ ಜನ ಅಕ್ಕಂದಿರ ಮದುವೆ ಮಾಡಿಸಿ, ನನಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು.
ತನ್ನ ಕೊನೆಯ ಉಸಿರಿರುವವರೆಗೂ ಸ್ವಂತ ಮಗನಾದ ನನ್ನನ್ನೂ ಸೇರಿಸಿ ಒಬ್ಬರನ್ನೂ ಒಂದು ರೂಪಾಯಿ ಸಹ ಕೇಳದೆ ಆದರ್ಶ ಬದುಕು ಬದುಕಿದವರು. ಆದಷ್ಟು ದೇವರ ಪೂಜೆ ಪುನಸ್ಕಾರ ಅವನ ನಾಮಸ್ಮರಣೆಯಲ್ಲೇ ತಮ್ಮ ಜೀವನ ನಡೆಸಿದವರು. ನೆಂಟರಿಷ್ಠರ ಮದುವೆ ಸಮಾರಂಭಗಳಲ್ಲಿ ಹೋಗಿ ತಮಗೆ ಯಾರು ಹೇಳದಿದ್ದರೂ ಮುನ್ನುಗ್ಗಿ ತಾವೇ ಕೆಲಸ ಮಾಡಿಕೊಡುತ್ತಿದ್ದರು. ಅವರ ಓದಾರ್ಯವನ್ನು ದುರುಪಯೋಗ ಪಡೆಸಿಕೊಂಡವರ ನೆಂಟರನ್ನೂ ನಾನು ಹಲವು ಬಾರಿ ನೋಡಿದ್ದೇನೆ. ಕೆಲವು ಬಾರಿ ಈ ಕುರಿತು ಪ್ರಶ್ನಿಸಿದಾಗ ಅವರು ಹೇಳುತ್ತಿದ್ದ್ದ ಮಾತು - " ರಾಜ , ನಾವು ಮಾಡಿದ್ದು ನಮಗೆ ಅವರು ಮಾಡೋದು ಅವರಿಗೆ " .
ಆ ಮಾತಿನ ಅರ್ಥ ಮಾತಿನ ಸಿದ್ದಾಂತ ಮತ್ತವರ ಆಂತರ್ಯ ಎಲ್ಲವೂ ನನಗೆ ಇವತ್ತಿಗೆ ತಿಳಿಯುತ್ತದೆ .
ಸ್ವಂತ ಮಕ್ಕಳಾದ ನಾವೇ ಎಷ್ಟೊಂದು ಸಾರಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದೆವು , ಹಾಗೆ ಮಾತನಾಡಬಾರದು ಅನ್ನುವ ತಿಳುವಳಿಕೆ ನಮಗೆ ಇರಲಿಲ್ಲ. ಈಗಲೂ ಇಲ್ಲ ಬಿಡಿ. ನನ್ನ ತಂದೆ ನಿಜವಾಗಿ ಸಿಟ್ಟು ಮಾಡಿಕೊಂಡು ಒಂದಕ್ಕೂ ಪ್ರತಿಕ್ರಿಯಿಸಿದ್ದು ನನ್ನ ಜನ್ಮದಲ್ಲಿ ನಾನು ನೋಡೇ ಇಲ್ಲ. ಬಹಳ ಮೃದು ಸ್ವಭಾವದ ಏಕಾಂಗಿ ವ್ಯಕ್ತಿತ್ವ ಮತ್ತು ಸರ್ವಶಕ್ತ ಆಧ್ಯಾತ್ಮ ಚಿಂತಕರು. ಉತ್ತುಂಗತ ಮಟ್ಟದಲ್ಲಿ ಬದುಕನ್ನು ಅರ್ಥ ಮಾಡಿಕೊಂಡು ಅವರ ಅತ್ಯುತ್ತಮ ಚಿಂತನೆಗಳೊಂದಿಗೆ ನಡೆದುಕೊಂಡವರು. ತುಂಬಾ ಸರಳವಾದ ಜೀವನ ಶೈಲಿ ನಡೆಸಿದವರು. ಈ ಮಾತುಗಳನ್ನು ಒಪ್ಪುವುದಕ್ಕೆ ಇವತ್ತಿಗೆ ಕನಿಷ್ಠ ಅಂದ್ರು ೫೦೦ ಜನರಾದ್ರು ಸಿಗುತ್ತಾರೆ .
ಇನ್ನು ನಮ್ಮ ಮನೆ ಬಗ್ಗೆ ಏನು ಹೇಳಲಿ ...ಅವರ ಪಾಲಿಗೆ ಬಂದಿದ್ದು ಒಂದು ಚಿಕ್ಕ ಹಂಚಿನ ಮನೆ(300 sq feet) ,ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕ ಮನೆ (300 Sq feet ,ತಿಂಗಳಿಗೆ ೨೦೦ ರೂಪಾಯಿ ಬಾಡಿಗೆ ಅದು ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಕೊಡುತ್ತಿದ್ದರು , ಅದರಲ್ಲಿ ನನ್ನ ಓದು ಬರಹ, ಪುಸ್ತಕ ,ಪೆನ್ನು, ಪೆನ್ಸಿಲ್ಲು ಬಟ್ಟೆ ,ಶಾಲೆ ಬ್ಯಾಗು ಮತ್ತು ಸಿನಿಮಾ ಶೋಕಿ ಇಷ್ಟು ನಡೆಯುತ್ತಿತ್ತು ) ನಮ್ಮ ಮನೆಯ ಹಂಚು ೩-೪ ಜಾಗದಲ್ಲಿ ಮುರಿದ ಕಾರಣ ಮಳೆಗಾಲದಲ್ಲಿ ತುಂಬಾ ದಿನಗಳು ಪೂರ್ತಿಯಾಗಿ ನಿದ್ದೆ ಮಾಡಿದ್ದೇ ಇಲ್ಲ. ಅಲ್ಲಲ್ಲಿ ಬಕೀಟು ಇಟ್ಟು ನೀರು ಬೀಳದೆ ಇರುವ ಜಾಗದಲ್ಲಿ ಕೂತು ಕಳೆದ ಹಲಾವಾರು ರಾತ್ರಿಗಳು ಲೆಕ್ಕವೇ ಇಲ್ಲ. ಆ ಚಿಕ್ಕ ಚಿಕ್ಕ ಮನೆಯನ್ನು ಜೋಡಿಸಿ ಈಗ ಶೀಟ್ ಮನೆ ಅಂತ ಇದೆ , ಅಲ್ಲಿ ನನ್ನ ಅಕ್ಕ ತನ್ನ ಮಗನೊಂದಿಗೆ ವಾಸಿಸುತ್ತಿದ್ದಾಳೆ. ನಮ್ಮ ಅಜ್ಜಿ ನಮ್ಮ ಮನೆಯ ಕಷ್ಟ ಕಾರ್ಪಣ್ಯಗಳನ್ನು ನೋಡಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮುದ್ದೆ ಸಾರು ತಿಳಿ ಮಜ್ಜಿಗೆ ನಮ್ಮ ಅಪ್ಪನ ಪ್ರೀತಿಯ ಊಟ . ಅದನ್ನೇ ನಮ್ಮ ಅಜ್ಜಿ ಹೆಚ್ಚು ಮಾಡುತ್ತಿದ್ದರು , ಆಗಲೇ ನನಗೆ ಮುದ್ದೆ ತಿನ್ನುವ ಅಭ್ಯಾಸವಾಯಿತು. ನನ್ನ ಹಲಾವಾರು ಪ್ರಶ್ನೆಗಳಿಗೆ ತುಂಬಾ ಆಧ್ಯಾತ್ಮ ವಿಚಾರಗಳು ಅಡಕವಾಗಿರುವ ಉತ್ತರ ಕೊಡುತ್ತಿದ್ದರು , ಇದು ಅವರ ತುಂಬಾ ಸ್ವಂತ ವಿಚಾರ ಆಚೆಯವರಿಗೆ ಒಂದು ತುಣುಕು ಗೊತ್ತಾಗುತ್ತಿರಲಿಲ್ಲ.
ಹೋದ ವರ್ಷ Sep 8, 2016 ಇದೇ ದಿನ ಮೊದಲು ಅವರು ಹೊಟ್ಟೆಯಲ್ಲಿ ನೋವು ತಡೆಯಕ್ಕೆ ಕಷ್ಟ ಆಗ್ತಾ ಇದೆ ಎಂದು ಹೇಳಿಕೊಂಡಿದ್ದು. ವಿಷಯ ಹೀಗೆ ಅಂತ ತಿಳಿದ ಮೇಲೆ ಒಂದು ಕ್ಷಣವೂ ಅಮೇರಿಕಾದಲ್ಲಿ ಉಳಿಯುದಕ್ಕೆ ಮನಸ್ಸಿರಲಿಲ್ಲ . ಮ್ಯಾನೇಜರ್ ಹತ್ರ ಹೋದೆ , ಎಷ್ಟು ಕಾಲ ಆಗುತ್ತೋ ಗೊತ್ತಿಲ್ಲ ನನ್ನ ಕೆಲ್ಸಕ್ಕೆ ರಾಜೀನಾಮೆ ಅಂತ ಲೆಕ್ಕ ಅಂದೆ... ಸೀದಾ ಭಾರತಕ್ಕೆ ಮರಳಿದೆ . ೧೦ ವರ್ಷಗಳಿಂದ ಅಮೇರಿಕಾದಲ್ಲಿ ವಾಸವಾಗಿದ್ದ ನನಗೆ ನನ್ನನ್ನು ತುಂಬಾ ಕಾಡುವ ವಿಷಯ ಅಂತ ಇದ್ದಿದ್ದು ನನ್ನ ತಂದೆಯ ಕಡೆಯ ದಿನಗಳ ಬಗ್ಗೆ ಮಾತ್ರ . ನಾನು ಅವರ ಕಡೆಯ ದಿನಗಳಲ್ಲಿ ಹೇಗಾದರೂ ಉಪಯೋಗವಾಗಬೇಕು ಅನ್ನುವುದೊಂದೇ , ಮತ್ತೇನೂ ಇಲ್ಲ . ಸ್ಕ್ಯಾನ್ ಮಾಡಿಸಿಕೊಂಡು ಮೈಸೂರಿನಲ್ಲಿ ಆಸ್ಪತ್ರೆ ಸೇರಿಕೊಂಡವರು (ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು ).ಇನ್ನು ನಾನು ಅಮೇರಿಕಾದಿಂದ ಹೋಗಿ ಬೆಂಗಳೂರಿನ ಆಸ್ಪತ್ರೆಯಿಂದ ನಮ್ಮ ಬೆಂಗಳೂರಿನ ಮನೆಗೆ ಕರೆದುಕೊಂಡು ಬರುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದರು. ೮೪ ವರ್ಷ ಮತ್ತು ನಾಲ್ಕನೇ ಹಂತದ Esophageal cancer. ಏನು ನಿರೀಕ್ಷಿಸಬಹುದು ಎಂಬುದು ನಮಗೆ ತಿಳಿದರೆ ಸಾಕು.
ಬೆಂಗಳೂರಿನ ಆಸ್ಪತ್ರೆಗೆ ಹೋಗಿ ನಮ್ಮಪ್ಪನನ್ನು ತಬ್ಬಿಕೊಂಡು ಗಳ ಗಳ ಅತ್ತುಬಿಟ್ಟೆ . ನನ್ನಪ್ಪ ನನಗೆ ಕಣ್ಣು ಒರೆಸಿ ಅಳಬೇಡಪ್ಪ ಅಂತ ಸಮಾಧಾನ ಮಾಡಿದ್ದರು . ಎಷ್ಟೇ ಸಮಾಧಾನ ಮಾಡಿದ್ರು ಮನಸ್ಸು ಸುಮ್ನೆ ಇರ್ಬೇಕಲ್ಲ , ದುಃಖ ಆವರಿಸಿಕೊಂಡು ಬಂದೇ ಬರುತ್ತೆ. ದೇವರ ಸತ್ಯ ಅಂತ ಒಂದು ಇರುತ್ತೆ ಅದರ ಪ್ರಕಾರ ಎಲ್ಲವೂ ನಡಿಯುತ್ತೆ ಅಂತ ನನ್ನನ್ನು ಮತ್ತೆ ಮತ್ತೆ ಸಮಾಧಾನ ಮಾಡಿದ್ರು. ಅವರಲ್ಲಿ ಆ ಮಟ್ಟಕ್ಕೆ ಚಿಂತನೆಗಳು ಇದೆ ಎಂದು ಮಗನಾದ ನನ್ನ ಬಿಟ್ಟರೆ ಬೇರೆ ಯಾರಿಗೂ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಸ್ವಂತ ವಿಷಯಗಳು ಅವರದಾಗಿತ್ತು . ಅವರ ಕೊನೆಯ ಹತ್ತು ವರ್ಷಗಳಲ್ಲಿ ಅವರು ತುಂಬಾ ಇಷ್ಟ ಪಟ್ಟು ಹೋಗುತ್ತಿದ್ದ ಜಾಗ ಮೈಸೂರಿನ ಮನೆ ಹತ್ತಿರದ ಸಂಗೀತ ಸಭೆ-ನಾದಬ್ರಹ್ಮ ಸಂಗೀತ ಸಭಾ , ಮೈಸೂರು ಅವರ ತುಂಬಾ ಇಷ್ಟವಾದ ಸ್ಥಳ. ದೊಡ್ಡ ದೊಡ್ಡ ವಿದ್ವಾಂಸರು ಬಂದು ಗೀತಾಜ್ಞಾನ ಯಜ್ಞ , ಮಂಕುತಿಮ್ಮನ ಕಗ್ಗ ಎಲ್ಲದರ ಬಗ್ಗೆ ಮಾತನಾಡುವುದನ್ನು ತಿಳಿದುಕೊಂಡು ಬರುತ್ತಿದ್ದರು. ನಾವಿಬ್ಬರು ಸ್ನೇಹಿತರ ಹಾಗೆ ಗಂಟೆ ಗಟ್ಟಲೆ ಅದರ ಬಗ್ಗೆ ಅಕ್ಟೋಬರ್ ೨೦೧೬ ರ ತನಕವೂ ಮಾತನಾಡುತ್ತಿದ್ದೆವು.
ಸೆಪ್ಟೆಂಬರ್ ತಿಂಗಳ ಕೊನೆಯ ೨೮ ನೇ ತಾರೀಕು ಆಸ್ಪತ್ರೆಯಲ್ಲಿ ಅವರಿದ್ದಾಗ ನಾನು ಕ್ಯಾಂಟೀನ್ ಇಂದ ಸ್ವಲ್ಪ ತಿಂಡಿ ಕಾಫಿ ತಂದು ಒಳಗೆ ಬರುವಾಗ ಅವರ ಕ್ಯಾನ್ಸರ್ ರಿಪೋರ್ಟ್ ಓದುತ್ತಾ ಇದ್ರು ತಮಗೆ ಕ್ಯಾನ್ಸರ ಆಗಿರುವುದು ತಿಳಿದುಕೊಂಡು ದೇವರ ಫೋಟೋ ನೋಡಿ ದೇವರಿಗೆ ಕೈ ಮುಗಿದರು. ಒಹ್ ನನಗೆ ಕ್ಯಾನ್ಸರ ಆಗಿರೋದು ಅದಕ್ಕೆ ಇಷ್ಟು ಸಂಕಟ ನೋವು ಎಂದು ಬಾಯಿ ಬಿಟ್ಟು ಹೇಳುದ್ರು . ಅದೆಲ್ಲ ಅಷ್ಟು ಯೋಚ್ನೆ ಮಾಡ್ಬೇಡಪ್ಪಾ , ನಾಳೆ ಡಿಸ್ಚಾರ್ಜ್ ಮಾಡ್ತಾರೆ Morphin ಕೊಟ್ಟಿದಾರೆ ನೋವೆಲ್ಲಾ ಕಡಿಮೆ ಆಗ್ತಾ ಹೋಗುತ್ತೆ ಅಂತ ಸುಳ್ಳು ಹೇಳ್ದೆ , ಆಚೆ ಬಂದು ವಿಪರೀತ ಅತ್ತೆ . ಅವರಿಗೆ ತಿಳಿದಿತ್ತು ಇನ್ನು ಹೆಚ್ಚು ಕಾಲ ಇಲ್ಲ ಅಂತ. ಆದರೂ ದುಃಖ ಪಟ್ಟವರಲ್ಲ. ಸುಮ್ಮನೆ ಕುಳಿತು ಮುಂದೆ ಮಾಡುವ ಕೆಲ್ಸಗಳ ಬಗ್ಗೆ ವಿಚಾರ ಮಾಡುತ್ತಾ ಸ್ವಲ್ಪ ನಮ್ಮೆಲ್ಲರ ಯೋಗಕ್ಷೇಮ ವಿಚಾರಗಳನ್ನು ಮಾತನಾಡಿದರು. ಆ ಮಟ್ಟಕ್ಕೆ ಜೀವನ ತೃಪ್ತಿ ಅನುಭವಿಸಿ ಮುಂದಿನ ಪ್ರಯಾಣಕ್ಕೆ ಒಪ್ಪಿಕೊಂಡು ತಯಾರಿದ್ದರು. ದೇವರ ಧ್ಯಾನವೊಂದೇ ಧ್ಯೇಯ. ನನಗೆ ಯಾಕಪ್ಪ ಹೀಗೆ ಮಾಡಿದೆ ಅಂತ ಒಂದು ದಿನವೂ ಅವರ ಬಾಯಲ್ಲಿ ಬರ್ಲೇ ಇಲ್ಲ. ೫೦-೬೦ ಜನ ನೆಂಟರು ಇಷ್ಟರು ಆಸ್ಪತ್ರೆಗೆ ಮತ್ತು ಮನೆಗೆ ಅವರು ಬದುಕಿದ್ದಾಗ ಬಂದು ನಾನು ಅಮೇರಿಕಾದಿಂದ ಕಡೆಗಾಲದಲ್ಲಿ ಬಂದೆ ಅಂತ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಅಪ್ಪನನ್ನು ಚೆನ್ನಾಗಿ ನೋಡಿಕೊಪ್ಪ ಅಂದು ಹೋದರು , ಆದರೆ ಇನ್ನು ಕೆಲವರು ಬೇರೆ ಬೇರೆ ವಿಚಾರಗಳನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ, ಅವರಿಗೆಲ್ಲರಿಗೂ ತಮ್ಮ ತಮ್ಮ ಗೊಂದಲಗಳನ್ನು ಬಿಡಿಸಿಕೊಂಡು ವಿಚಾರಗಳನ್ನು ಮೇಲ್ಮಟ್ಟದಲ್ಲಿ ಚಿಂತಿಸುವಂತಾಗಲಿ ಎಂದು ಪ್ರಾರ್ಥಿಸುವೆ.
ಮನೆಗೆ ಕರೆದುಕೊಂಡು ಬಂದು ನಾವಿಬ್ಬರು ಬೇಕಾದಷ್ಟು ವಿಷಯಗಳನ್ನು ಮಾತನಾಡಿದ್ದೇ ನನ್ನಲ್ಲಿ ಉಳಿದ ಎಂದೂ ಅಳಿಯದ ಅತ್ಯುತ್ತಮವಾದ ಆಸ್ತಿ. ನನಗೆ ಏನೆಲ್ಲಾ ವಿಷಯಗಳನ್ನು ತಿಳಿಸಬೇಕೋ ಎಲ್ಲವನ್ನು ತಿಳಿಸಿದರು, ವೇದ ಮಂತ್ರಗಳನ್ನು ಪಕ್ಕದಲ್ಲೇ ಕೂತು ಓದುತ್ತಿದ್ದೆ , ಕೇಳಿ ಸಂತೋಷ ಪಟ್ಟು ನನ್ನ ಕೈಯನ್ನು ಗಟ್ಟಿಯಾಗಿ ಒತ್ತಿ ತಮ್ಮ ಹಣೆಯ ಮೇಲೆ ಇಟ್ಟಿಕೊಳ್ಳುತ್ತಿದ್ದರು .ನನಗೆ ಅಂತರಾಳದಲ್ಲಿ ತುಂಬಾ ಕಾಡುತ್ತಾ ಇದ್ದಿದ್ದು ಅದೇ , ನನ್ನ ತಂದೆಯವರಿಗೆ ಕಡೆಗಾಲದಲ್ಲಿ ನೆರವಾಗಬೇಕು ಅನ್ನುವುದೊಂದೇ.
ನನ್ನ ಪಾಲಿಗೆ ತುಂಬಾ ಖುಷಿ ತಂದಿದೆ, ಅಷ್ಟೊಂದು ದಿನಗಳು ಅವರೊಂದಿಗೆ ಒಟ್ಟಿಗೆ ಕಾಲ ಕಳೆದಿರುವುದು ಎಂದೆಂದಿಗೂ ಮರೆಯಲಾರೆ. ಅದನ್ನು ದೇವರು ಈ ರೀತಿಯಾಗಿ ನನಗೆ ಕರುಣಿಸಿದ ಎಂದು ಭಾವಿಸಿದೆ . ಇದೆಲ್ಲವೂ ನನ್ನ ತಂದೆಯ ಮೂಲಕ ದೇವರು ತನ್ನ ಇರುವಿಕೆಯನ್ನು ನನ್ನ ಅನುಭವಕ್ಕೆ ತಂದುಕೊಟ್ಟ ರೀತಿ.
ಅವರು ಹೇಳಿಕೊಟ್ಟಿರುವ ಮಾತುಗಳು ನಡೆದುಕೊಂಡು ಬಂದ ಆದರ್ಶಗಳನ್ನೇ ಅನುಸರಿಸಿ ನಾನು ಅವರಂತೆಯೇ ನಡೆದುಕೊಳ್ಳಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದೇನೆ. - Subbu Padmanabh

Saturday, November 25, 2017

tarati shokam-aatmavit - उपनिषद् 7.1.3

तरति शोकम् आत्मवित् - छान्दोग्य – उपनिषद् 7.1.3
tarati shokam-aatmavit
You go beyond sorrow when you know the Pure Self or Knower of self(aatman) transcends sorrow.

Tuesday, November 21, 2017

ಆನಂದ ಪ್ರಾಪ್ತಿ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿ ಆತ್ಯಂತಿಕ ದುಃಖ ನಿವೃತ್ತಿ

ಆನಂದ ಪ್ರಾಪ್ತಿ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿ ಆತ್ಯಂತಿಕ ದುಃಖ ನಿವೃತ್ತಿ
-----------------------------------------------------------
Every single human life has purpose . Purpose of life is to attain profound lasting happiness and to overcome sufferings . This is for those who does not understand what God realization/ Enlightening one self means.
Attain 
1) Ultimate eternal everlasting bliss 
2) Complete transcendents of sorrow/cessation of sorrow.
One view is some people are little more happy and some are not, thats the whole thing of life and we all die. This is a hopeless way of looking at life. This is called materialistic outlook. Every religion says there is a possibility of attaining bliss and overcoming sorrow. All our struggles from babyhood till now, everything that we do is trying to overcome discomfort and sorrow and trying to attain some kind of worthwhile happiness, Joy and peace. The moksha in Vedanta means attaining this highest level of bliss , ever lasting happiness, joy and peace.

Monday, November 20, 2017

Swamy Vivekananda says recognize the reality.


Om Ishaa Vaasyam -Idam Sarvam
Yatkincha Jagatyaam Jagat
Tena Tyaktena Bhunjeethaa
Maa Gridha Kasya svid Dhanam
One of the most popular and meaningful of verses from the Vedas
Whatever you see in this world, all pervaded by the Lord, Not only pervaded , Vaasyam - it means to pervade it, recognize the existing reality. There is an underlying reality, Existence, consciousness and bliss right here, Recognize it. How ?
Example: When you see waves in an ocean, comes up at sometime and disappears.Each wave is different from the other waves but all the waves are water. As water pervades all the waves , as the table chairs are all wood, wood pervades all the wood items like chairs tables. Similarly as Gold pervades all ornaments, similarly there is one existence and conciousness which pervades all of us. Every existence in this world is pervaded by one reality. Swamy Vivekananda says recognize the reality.
There are two extremes who might miss their way. Those who feel I shall cut myself off from this life and return to the Himalyan cave to meditate, to be in samadhi there and to give up the body there, Ignoring the world has missed the way.
Those who do many plunges headlong into the enjoyments of the world , He too has missed the way.
Two extremes, Ignoring the world many altogether trying to find the one apart from the many , the other one Ignoring the one in the material world as it is and diving deep into the wordly enjoyment , make merry as long as life lasts .
Swamy Vivekananda says both these extremes have missed their way.
Then what is the way ?
Answer : In a number of place, Swamy Vivekananda says from Vedanta that the way out is defy the world . Mark the words ...Defy the world - Here is the world before you. See Brahman in this world , brahman is appearing which is the ultimate reality , one reality is appearing as many realities before you.
Swamiji says to be religious one need not abandon husband wife and children, they can very much remain but important thing is to see the God in Husband ,Wife and Children.

Sunday, November 19, 2017

ನಾಣಿ ಅಣ್ಣನ ಮನೆಯಲ್ಲಿ ಒಟ್ಟಿಗೆ ಊಟ


೨೫ ವರ್ಷದ ಹಿಂದಿನ ಮಾತು . ನಾನು ನಮ್ಮ ಬೆಂಗಳೂರಿನ ದೊಡ್ಡಪ್ಪನ ಮನೆಗೆ ತಂದೆಯೊಡನೆ ಹೋಗಿ ಬರುತ್ತಿದ್ದಾಗ ನಮ್ಮ ಅಣ್ಣ ನಾರಾಯಣ ಅಮೇರಿಕಾದಲ್ಲಿ ಬಂದು ನೆಲೆಸಾಗಿತ್ತು . ಆಗೆಲ್ಲ ತುಂಬಾ ಕಷ್ಟದ ದಿನಗಳು , ಓದು ಬರಹ ಒಂದೇ ನಮಗೆ. ಅಪ್ಪ ಹಾಕಿದ ಆಲದ ಮರ ಏನೂ ಇಲ್ಲ , ಸುಮಾರು ಜನರ ಮನೆಯಲ್ಲಿ ಹೀಗೆ ಇದ್ದ ಪರಿಸ್ಥಿತಿ. ನಮ್ಮ ಇಡೀ ಕುಟುಂಬದಲ್ಲಿ ಮೊದಲು ಅಮೆರಿಕಕ್ಕೆ ಬಂದು ತನಗೆ ಗೊತ್ತಿಲ್ಲದ ಹಾಗೆ ಬಹಳಷ್ಟು ಜನರಿಗೆ ಉದಾಹರಣೆಯಾಗಿದ್ದು ನಮ್ಮ ಅಣ್ಣ, ನನಗೂ ಕೂಡ. ನಾನು ಇಂಜಿನಿಯರಿಂಗ್ ಕಲಿಯುವಾಗ ನಮ್ಮ ದೊಡ್ಡಪ್ಪ ಮತ್ತು ತಂದೆಯವರು ನಾಣಿಯ ಬಗ್ಗೆ ಹೆಚ್ಚು ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದರು , ಮುಖ್ಯವಾಗಿ ಅಣ್ಣನ ಗುಣಗಾನ ಮಾಡುತ್ತಿದ್ದರು , ಅವನಲ್ಲಿರುವ ಸಹಾಯ ಮಾಡುವ ಗುಣ , ಔಧಾರ್ಯದ ಬಗ್ಗೆ , ಮುಂದೆ ಬರುವ ಹುಡುಗರಿಗೆ ಉದಾಹರಣೆಯಾಗಿ ಇರುವ ಬಗ್ಗೆ ಮಾತನಾಡುತ್ತಿದ್ದರು. ನಾಣಿ ಅಣ್ಣ ವರ್ಷಕೊಮ್ಮೆ ಅಮೆರಿಕಾದಿಂದ ಬೆಂಗಳೂರಿಗೆ ಬರುವಾಗ ಒಂದೆರಡು ಬಾರಿ ನೋಡಬೇಕು ಮಾತಾಡಿಸಬೇಕು ಅಂತ ನಾನೂ ಕೂಡ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಇದೆಲ್ಲಾ ಕಳೆದು ಹೋದ ದಿನಗಳ ಸುದ್ದಿ. ಕಳೆದ ಐದು ವರ್ಷಗಳಿಂದ ನಾಣಿ ಅಣ್ಣನ ಮನೆಯ ಹತ್ತಿರವೇ ಇದ್ದೇನೆ. ಸಮಯ ಸಿಕ್ಕಾಗ ಭೇಟಿ ಮಾಡೋದು, ಹಬ್ಬ ಒಟ್ಟಿಗೆ ಆಚರಿಸೋದು , ಸ್ವಲ್ಪ ಸಮಯ ಒಟ್ಟಿಗೆ ಕಳೆಯೋದು ನನ್ನ ಪಾಲಿಗೆ ದೊರಕಿದೆ. ನಾವು ಒಟ್ಟಿಗೆ ವೇದ ಮಂತ್ರಗಳನ್ನು ಕಲಿಯುತ್ತಿದ್ದೇವೆ . ವಾರಕೊಮ್ಮೆಯಾದರು ಅಣ್ಣನನ್ನು ಭೇಟಿ ಮಾಡುವುದು ನನಗೆ ಸಂತೋಷ ತರುತ್ತದೆ .ಈ ವಿಷಯವನ್ನು ನಮ್ಮ ತಂದೆ ಬದುಕಿದ್ದಾಗ ಹೇಳುತ್ತಿದ್ದೆ, ತುಂಬಾ ಸಂತೋಷ ಪಡುತ್ತಾ ಇದ್ದರು. ನಮ್ಮ ತಂದೆ ದೇವರ ಫೋಟೋ ನೋಡಿ ಕೈ ಮುಗಿಯುತ್ತಿದ್ದರು ಮತ್ತು ದೇವರು ಕೊಟ್ಟಿರುವ ಈ ಬದುಕಿಗೆ ಯಾವಾಗಲೂ ಕೃತಾರ್ಥನಾಗಿರಬೇಕು ರಾಜ ಎಂದು ಹೇಳುತ್ತಿದ್ದರು. ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ ನಮ್ಮ ದೊಡ್ಡಪ್ಪನಿಗೂ ಇದೇ ವಿಷಯ ಹೇಳಿದೆ , ಸಂತೋಷ ಪಟ್ಟರು.
ಅವರ ಮನೆಯಲ್ಲೇ ಇವತ್ತಿನ ರಾತ್ರಿಯ ಊಟ, ಕೆಳಗೆ ಕೂತು ಊಟ ಮಾಡುವ ಸಂತೋಷವೇ ಬೇರೆ. ಶಾಂತಿ ಮಂತ್ರದಿಂದ ಊಟ ಶುರು.
ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ | 
ಸಂತೋಷ ಪಟ್ಟೆ. ಅನ್ನದಾತೋ ಸುಖಿ ಭವ

Thursday, November 16, 2017

ಧ್ಯಾನದಿಂದರಿವೆ


ಸಂಸಾರಿಯೋ ಸನ್ಯಾಸಿಯೊ 
ಶರೀರ ಇಂದ್ರಿಯ ಬುದ್ದಿ ಮನ 
ಅಹಂಕಾರದ ಹಿಂದಿರುವವನೇ  
ನಿನ್ನರಿತರೆ ನನ್ನನಾನರಿತಂತೆ !!

-ಸುಬ್ಬು ಪದ್ಮನಾಭ

Wednesday, November 15, 2017

ನಿಮಗೆ ನಮಸ್ಕಾರ

ಕಥೆ ಕೇಳುವವರು ಇದ್ದರೆ ಕಟ್ಟುವುದಕ್ಕೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು . ಅಲ್ಲೆಲ್ಲೋ ಸ್ವರ್ಗದಲ್ಲಿ ಎಲ್ಲಾ ದೇವರುಗಳು ಕೂತಿರೋ ಹಾಗೆ ಜನರು ಅಂದರೆ ನಾವುಗಳು ಆ ಪರಬ್ರಹ್ಮ ಸ್ವರೂಪನಿಗೆ ಆಕಾರ ಕೊಟ್ಟಿದ್ದೀವಿ ( ನಂಬಿಕೆಗೆ ಸುಲಭವಾಗಲಿ ಎಂದು ). ನಿಮಗೆ ತಿಳಿದಿರುವ ಹಾಗೆ ವೇದಾಂತ ಅಂದರೆ ಉಪನಿಷದ್ ಹೇಳಿರೋ ಸಾರ. ವೇದಾಂತದ ಪ್ರಕಾರ ನಿರ್ಗುಣ ನಿರಾಕಾರ ಪರಮಾತ್ಮನಿಗೆ ಹೆಸರಿಲ್ಲ ಆಕಾರ ಇಲ್ಲ. ನಮ್ಮೊಳಗೇ ಆತ್ಮವನ್ನು ಬೆಳಗುತ್ತಿರುವ ದಿವ್ಯವಸ್ತು ಅದೇ ಆಗಿದೆ . ಶರೀರ ಇಂದ್ರಿಯಗಳು ಜಡ , ಅದು ಪ್ರಕೃತಿ . ಯಾವಾಗಲೂ ಬದಲಾಗುವ ಮತ್ತು ನಾಶವಾಗುವ ವಸ್ತು . ಚಿತ್ತದಲ್ಲಿರುವ ಪರಬ್ರಹ್ಮ ಅನುಭವವನ್ನು ನಿತ್ಯ ಧ್ಯಾನ ಮಾಡಿ ಸೂಕ್ಷ್ಮ ಶರೀರದಿಂದ ಅನುಭವ ಪಡೆದುಕೊಳ್ಳಬಹುದು. ನಮ್ಮ ಸ್ತೂಲ ಶರೀರ(ದೇಹ (ಪ್ರಕೃತಿ)), ಬುದ್ದಿ , ಅಹಂಕಾರಕ್ಕೆ ಎಟುಕದ ಚಿಲುಮೆ . ದೇವ ಮಂದಿರ ಭಜನೆ ಇದೆಲ್ಲವೂ ಭಕ್ತಿಯ ಮಾರ್ಗ ಮತ್ತು ಇದರ ಅಗತ್ಯವೂ ತುಂಬಾ ಇದೆ. ಭಕ್ತಿ ಮಾರ್ಗ , ಕರ್ಮ ಮಾರ್ಗ, ಜ್ಞಾನ ಮಾರ್ಗ ಬೇರೆ ಬೇರೆ ಮಾರ್ಗಗಳು . ಇದರ ಬಗ್ಗೆ ಹಲವಾರು ಸಿದ್ದಂತಾಗಳು ಇದೆ , ಅದ್ವೈತ ಸಿದ್ದಾಂತದ ಪ್ರಕಾರ ಆತ್ಮವಸ್ತು ಶೂನ್ಯ ಅಲ್ಲ ಅದೇ ನಮ್ಮೊಳಗೆ ಮತ್ತು ಹೊರಗೆ ನಿತ್ಯ ನಿರಂತರ ಬೆಳಗುತ್ತಿರುವ ಜ್ಯೋತಿ . ( ಉದಾಹರಣೆ : ಬುದ್ದಿಯು ತನ್ನ ಬುದ್ದಿಯನ್ನು ವಿಚಾರ ಮಾಡುವುದಕ್ಕೆ ಬೇಕಾಗಿರುವ ಆತ್ಮವಸ್ತು ).ಸಾಮಾನ್ಯವಾಗಿ ಹೇಳುವುದಾದರೆ ಧ್ಯಾನ ಮಾಡದೆ ಚಿತ್ತ ವಿಚಾರಗಳನ್ನು ಶ್ರವಣ ಮತ್ತು ಮನನ ಮಾಡದೆ ಅವನಿರುವಿಕೆಯ ಅನುಭವ ಸಾಧ್ಯವಿಲ್ಲ. ಮನಸ್ಸನ್ನು ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸಬೇಕಾದರೆ ದಿನನಿತ್ಯ ಧ್ಯಾನ ಮಾಡುತ್ತಾ ಹೋದರೆ ಆ ದಿವ್ಯ ಪರಬ್ರಹ್ಮ ಸ್ವರೂಪದ ಅನುಭವವಾಗುತ್ತದೆ ( ಧ್ಯಾನ ಮಾಡದೆ ಕೆಲವರಿಗೆ ಆ ಸಿದ್ದಿ ಸಿಗಬಹುದು ,ಅದೇ ಮಹಶ್ರೀ ರಮಣರು ತಮ್ಮ ಹದಿನಾರನೇ ವಯಸ್ಸಿಗೆ ಕಂಡುಕೊಂಡ ಚಾರುರ್ತ್ಯಾವಸ್ಥೆ ಕೂಡ ). ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಈ ಚತುರ್ತ್ಯಾವಸ್ಥೆಯನ್ನು ತಲುಪಿ ಇರುವುದೆಲ್ಲವೂ ಅವನೊಬ್ಬನೇ . ಕಣ್ಣಿಗೆ ಕಾಣುವ ಜಗತ್ತು ಬರಿ ಅವನ ಸೃಷ್ಟಿಯ ಮಾಯೆ ಮಾತ್ರ ಎಂದರು. ಜಗತ್ತೆಲ್ಲ ಮಲಗಿರಲು ಸಿದ್ದಾರ್ಥ ಬುದ್ಧನಾಗುವುದಕ್ಕೂ ಈ ನಾಲ್ಕನೇ ಅವಸ್ಥೆಯನ್ನು ತಲುಪುವ ಅವರವರ ಸಾಧನೆ ಕಾರಣವಾಯಿತು. ಸಾಮಾನ್ಯರಿಗೆ ಮೂರು ಅವಸ್ಥೆಗಳು ಲಭ್ಯ ( ಎಚ್ಚರ ಕನಸ್ಸು ನಿದ್ದೆ ). ಅವನು ನಿತ್ಯ ನಿರಂತರ ಎಲ್ಲೆಲ್ಲೂ ಬೆಳಗುವ ( ನಮ್ಮೊಳಗೆ ಮತ್ತು ಹೊರಗೆ ) ಅವಿನಾಶಿ ನಿರ್ಗುಣ ನಿರಾಕಾರ ಸಾಕ್ಷಿ . ವೇದಾಂತದ ಪ್ರಕಾರ ಚತುರ್ತ್ಯಾವಸ್ಥೆಯನ್ನು ನಮ್ಮದಾಗಿಸಿಕೊಳ್ಳಲು ಯಾವುದಾದರೂ ಒಂದು ನಂಬಿರುವ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಧ್ಯಾನ ಮಾಡಿದರೆ ಆತ್ಮದರ್ಶನ ಪ್ರಾಪ್ತಿ . ವೇದಾಂತದ ಪ್ರಕಾರ ಇದನ್ನ ಯಾರು ಬೇಕಾದರೂ ಅನುಭವಿಸಬಹುದು ಆದರೆ ನಿರಂತರ ಧ್ಯಾನದಿಂದ ಸಾಧ್ಯ .ಅದಕ್ಕೆಂದೇ ನಮ್ಮ ಹಿರಿಯರು ಸ್ವಲ್ಪ ಪೂಜೆ ಮಾಡು , ಧ್ಯಾನ ಮಾಡು , ಸಂಧ್ಯಾವಂದನೆ ಮಾಡಿ ೨೦ ನಿಮಿಷ ೧೦೮ ಗಾಯತ್ರಿ ಜಪ ಮಾಡು ಹೀಗೆಲ್ಲ ಹೇಳುತ್ತಿದ್ದರು . ಅವರು ಏನಿಕ್ಕೆ ಹೇಳುತ್ತಿದ್ದರು ಎಂದು ಅವರಿಗೆ ತಿಳಿಯದಿರಬಹುದು ಆದರೆ ಇದೆಲ್ಲವೂ ಒಂದು ಜಾಗದಲ್ಲಿ ಕೂತು ಕಣ್ಣು ಮುಚ್ಚಿ ಧ್ಯಾನ ಮಾಡುವ ಕಾರ್ಯ ಸ್ವಲ್ಪ ಅಭ್ಯಾಸ ಆಗಲಿ ಎಂದು . ಚಿಕ್ಕಂದಿನಿಂದ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡಿ ಬಂದರೆ ಏನೂ ಬೇಕಾದರೂ ಸಾಧಿಸಬಹುದು ಪರಬ್ರಹ್ಮನ ಇರುವಿಕೆಯೂ ಕೂಡ . ನಾವು ಒಬ್ಬರಿಗೊಬ್ಬರು ಕೈ ಮುಗಿದು ನಮಸ್ಕಾರ ಮಾಡುವ ಅರ್ಥವೂ ಕೂಡ ಇದೇ ಕಾರಣಕ್ಕೆ ನಿನ್ನೊಳಗಿರುವ ಆತ್ಮವನ್ನು ಬೆಳಗುತ್ತಿರುವವನು ನಾನು ನಾನೆಂಬ ಅಸ್ತಿತ್ವವನ್ನು ಬೆಳಗುವವನೂ ಒಬ್ಬನೇ ಆಗಿದ್ದಾನೆ , ಅದಕ್ಕೆ ನಿಮಗೆ ನಮಸ್ಕಾರ 

Friday, November 10, 2017

ರಾಜ್ಯೋತ್ಸವ

ಅನ್ನ ನೀಡಿ
ಹಸಿವು ನೀಗಿಸಿದೆ 
ಭಾಷೆ ನೀಡಿ 
ಜ್ಞಾನ ವೃದ್ಧಿಸಿದೆ 
ವಿದ್ಯೆ ಕಲಿಸಿ
ಜೀವನ ಕಲ್ಪಿಸಿದೆ
-ಸುಬ್ಬು ಪದ್ಮನಾಭ
Whom do we call God ? Concept/Principle called Brahman
------------------------------------------------------------------------
Basic question many would ask as to why there are many Gods in Hinduism or Santana Dharma ?
Do you have doubt/confusion too ?
If yes, please see the beautiful answer.
Brahman ( not the brahma , Its a principle which everyone of us are , we can meditate and realize the true self (Brahman) which is alone truth and existing ). Various Gods (turning the principle into personality ) we all worship are the names and forms to realize the brahman within us.

Monday, October 30, 2017

Why Rudra Veda Mantra ?

Why Rudra Veda Mantra ?
-------------------------
My secret to get rid off the negativity :
Many years ago , I learnt to dilute the negativity within me by various shiva stuthis. Invoking the Rudra mantra make the physical body a spiritual entity and make it very divine ready for the process. To worship Lord Shiva, try and become one from within. Rudra Veda Mantra has more than 300 namaha which is 8000 years old given to us from Rishis. In this Rudra Veda Mantras, We say "namaha" to each and everything in the world. First namaha goes to manyu (Anger).

So much of divine knowledge shared in this satsanga today. The scholar who is talking is Pundit Venugopal from Mysuru who flew from my home town for Athirudra in USA. Blessed to be part of Athirudra event . Must watch video is here for you

ātmā tvaṃ girijā mati: sahacarā: prāṇā: śarīraṃ gṛhaṃ
pūjā te viṣayopabhogaracanā nidrā samādhisthiti: |
saṃcāra: padayo: pradakṣiṇavidhi: stotrāṇi sarvā giro
yadyatkarma karomi tattadakhilaṃ śambho tavārādhanam
-- Shivamānasapūjā
Parameshwara , You are my Atma (Soul), Devi Girija (the Divine Mother) is my Buddhi (Pure Intellect), the Shiva Ganas (the Companions or Attendants) are my Prana and my Body is Your Temple,
 My Interactions with the World are Your Worship and my Sleep is the State of Samadhi (complete absorption in You),
My Feet Walking about is Your Pradakshina (Circumambulation); all my Speech are Your Hymns of Praises,
 Whatever work I do, all that is Your Aradhana (Worship).

Rudrabhisheka - The Ancient Sounds
--------------------------------------
Rudrabhisheka is an ancient chanting method from thousands of years. came from rishis.
The effect of Rudrabhisheka is, it creates positive energy and removes negative vibrations atleast while chanting. The main thing is the vibration, that it creates. If you ask me, ’Do you know the meaning of all the chants? I will say, ’I also don’t know.’ It’s the vibration of the chants that is more important than the meaning. When Rudrabisheka happens, nature flourishes; nature becomes joyful and happy.
Mainly, it creates more positive ions; more so when people are meditating.
The First Part of Rudrabhisheka :
----------------------------------
There are two parts to Rudrabhisheka, the first part says, ’Namo, namo, namo, namo’.
Mana means mind. The word mind in English comes from the Sanskrit word Mana.
Nama is the reverse of the mind. The mind going to its source is called Nama.
When the mind goes outside to experience the world, it is Mana. When the mind goes back to its source, it is Nama, and when it goes to its source what does it find? It finds that everything is made up of one consciousness.
Today, scientists are talking about the God Particle – the one particle by which everything has been made. Thousands of years ago the Rishis said the same thing, that everything is made up of one thing, and that they called Brahman.
That which is neither male nor female, which is nothing but a Tattva (Tattva means principle), by which everything is made, is called Bramhan. And when that Bramhan becomes personal, it is called Shiva Tattva – the innocent divinity that is in everything. That is why we say, ‘Namo, namo!’
In the trees, in the greenery, in the birds, even in the thieves, and in a dacoit, everywhere, it is the same one principle that present.
The Second Part of Rudrabhisheka
------------------------------------
Then, the second part will say, ‘Chame, chame, chame, chame.’ You have heard this, isn’t it?! This means, 'Everything is in me'.
‘Me’ in English comes from the Sanskrit word ’Ma’, which means 'Myself'. ‘Ma Ma’ means ’ For Me’ and ‘In Me’. So, everything is in terms of 'Myself'.
The second part is 'Everything is for me, and everything is in terms of me.
Even for the numbers they say, ‘Ekaachame’, which means, one, two, three, four, they are all my form.
Like that, ‘Sugamchame’, happiness for me!
‘Abhayanchame’, fearlessness, happiness, health, all the good things in the universe, let them all come to me, and they are all part of me. That is it!
As this is being chanted, usually milk and water runs through the crystal, drop by drop. This is the ancient method. It is done with water, or by putting herbs in fire.
What they do is, they keep a fire and they put different herbs for the different chants. This is the ancient method.
Rudrabhisheka On Mondays :
When done on Mondays it is even more special. Monday is the day of the moon, and the moon and mind are connected. Mantra, mind, moon, they are all connected somewhere. So in India, it is a tradition to have this chanting in the Ashrams/temples every Monday.
All the five elements are used in pooja. Pooja means honoring all the elements. So, fire, water, incense sticks, fruits, flowers, rice, whatever nature has given to us, those things are used (for worship) along with the chanting.
Just doing it as a ritual is not that effective because it is said that the Veda Mantras are effective when people are awake from within; for them, these mantras have more meaning. So, these mantras help you to go deep into meditation.

Thursday, October 26, 2017

Namit's first blog

MYname is namit.my dad was writing letters when he was 13 years old i am writing letters at 7 years old. i started early from my dad now i am writing my first blog now.

Tuesday, October 3, 2017

ಪ್ರೀತಿ

ಅವನಿತ್ತ ಚೇತನ ಜೊತೆಯಿರಲಿ 
ಇಂದಿಗೆ ಇಂದಿನ ಬದುಕಿರಲಿ 
ಅವನಿತ್ತ ಪ್ರೀತಿಯಲಿ ಬಾಳಿರಲಿ 
ಮುಂದೇನಿದೆ ಅದವನಲ್ಲಿರಲಿ
-ಸುಬ್ಬು ಪದ್ಮನಾಭ

ನಂಬಿಕೆ

ನಿರಂತರ ಪ್ರಯತ್ನವು ಸಾಗುತಿರಲಿ 
ನಂಬಿಕೆ ಕೊಟ್ಟಿರುವ ಶಕ್ತಿಯ ಮೇಲಿರಲಿ 
ಒದಗಿರುವ ಯುಕ್ತಿಯು ಜೊತೆಯಿರಲಿ 
ನಿನಗಿತ್ತ ಸಕಲ ಶಕ್ತಿಯ ಮೇಲೆಯೇ 
ಅವನಿಗೂ ಇಹುದು ಪೂರ್ಣ ನಂಬಿಕೆ 
-ಸುಬ್ಬು ಪದ್ಮನಾಭ

ಜ್ಞಾನ


ಪರಿಸರದ ಒಡಲ ಶುದ್ದಿಗೆ
ಎಲ್ಲರಿಗೆ ನಿಗ್ರಹಿಸು ಅಜ್ಞಾನ
ಅಂತರಂಗದ ಒಡಲ ಶುದ್ದಿಗೆ
ಎನಗೆ ಅನುಗ್ರಹಿಸು ಜ್ಞಾನ
-ಸುಬ್ಬು ಪದ್ಮನಾಭ

Wednesday, September 6, 2017

ಎಡರು

ಬದುಕೊಂದು ಅಲ್ಪಾವಧಿಗೆ 
ನಿನಗವನಿತ್ತ ಬಳುವಳಿ
ಹಿಂಸಿಸಿ ಕಾಡಿಸಿ ಬೇಡಿಸಿ 
ಅಂತ್ಯಮಾಡುವುದ ಹಳಿ 
ಎದುರಾಗುವ ಎಡರುಗಳ ತುಳಿ
ಹರಿಸು ಸಂತೋಷದೋಕುಳಿ
-ಸುಬ್ಬು ಪದ್ಮನಾಭ್

Monday, September 4, 2017

ನಿನ್ನ ನೋಡಲೆಂತೋ


ನಿನ್ನ ಕಣ್ಣಿನ ಮಿಂಚು 

ನೋಡಲೆನ್ನ ಸಂಚು

ಸುಂದರ ಹೂನಗೆ 
ತುಟಿ ಕೆಂಡಸಂಪಿಗೆ

ಹಣೆಯಲ್ಲಿ ಮಿನುಗುವ ಬಿಂದಿ
ನೋಡಿ ನಾನಾಗದಿರೆನೆ ಚಿಂದಿ

ಕೇಶ ರಾಶಿಯ ಬಾಲಿಕೆ 
ಅಂದೇ ಸೋತೆನಲ್ಲೆ ಏತಕೆ
-ಸುಬ್ಬು ಪದ್ಮನಾಭ

Monday, August 28, 2017

ದೇವ ಮಂದಿರ

ದೇವ ಮಂದಿರ ಭಜನೆ ಜೀವನದ ಅಲಂಕಾರ ಮನಸ್ಸಿನ ಉದ್ದಾರಕ್ಕೆ ಮಾತ್ರ , ಯಾವ ದೇವರು ನಮ್ಮ ಪೊಳ್ಳು ಭಕ್ತಿಯನ್ನು ಮೆಚ್ಚಲಾರ ಮನಸ್ಸನ್ನು ಒಂದು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಪೂಜೆ ಧ್ಯಾನ ಜಪ ತಪ ಒಂದು ಸಾಧನ ಮಾರ್ಗವಷ್ಟೇ . ನಾವು ಪೂಜೆ ಮಾಡಿ ದೇವರಿಗೆ ಅದು ಕೊಡು ಇದು ಕೊಡು ಅಂತ ಕೇಳುವುದರಿಂದ ಅವನಿಗೆ ಕೇಳಿದ್ದು ದಕ್ಕುತ್ತದೆ ಎಂದು ಯಾವ ಭರವಸೆಯೂ ಇಲ್ಲ . ಯಾರಿಗೂ ತೊಂದರೆ ಕೊಡದೆ ಸಕಲರಿಗೂ ಒಳ್ಳೆಯದಾಗಲೆಂಬ ಭಾವ ಒಳಗಿಂದ ಇರಬೇಕು . ಒಂದು ಉದಾಹರಣೆ : ಬೇರೆಯವರ ಸಾಧನೆ ಉದ್ದಾರ ಕಂಡು ಹೊಟ್ಟೆಯುರಿ ಪಡುವ ಮನೋಧರ್ಮ ಹೋದಾಗ ನಮಗೆ ಗೊತ್ತಿಲ್ಲದ ಹಾಗೆ ಮನಸ್ಸಿಗೆ ಮರೆಮಾಚಿರುವ ಕೊಳಕು ತೊಳೆಯುತ್ತಾ ಹೋದಂತೆ ,ಮರ್ಮದ ಮಾರ್ಗ ಆಚೆ ಸರಿಯುತ್ತದೆ ಹಾಗೆಯೇ ಸತ್ಕರ್ಮಗಳು ಮಾಡಿಕೊಂಡು ಹೋದರೆ ನಮ್ಮ ಆಂತರ್ಯ ವಿಕಾಸವಾಗುತ್ತದೆ , ಚಿಂತನೆಗಳು ವಿಕಾಸಗೊಳ್ಳುತ್ತದೆ, ಸಕಲ ಜೀವರಾಶಿಯಲ್ಲೂ  ಭಗವಂತನಿರುವುದು ಅರಿವಿಗೆ ಬಂದುಬಿಡುತ್ತದೆ .  
-ಸುಬ್ಬು ಪದ್ಮನಾಭ  

"ಸತ್ತವರ ನೆರಳು " ನಾಟಕ ನೋಡಿದ ಮೇಲೆ ನನಗೆ ಅನಿಸಿದ್ದು

ರೂಪದಲ್ಲಿರುವುದು ಆಕೃತಿಯಲ್ಲಿರುವುದು ವ್ಯಕ್ತಿತ್ವದಲ್ಲಿರುವುದು ನಾನೆಂದುಕೊಂಡಿರುವುದೇ ಮಿಥ್ಯ , ಜಗತ್ ಸತ್ಯ ಆದರೆ ದೇಹದಲ್ಲಿ ನಾನಿದ್ದೇನೆ ಎನ್ನುವುದು ಮಿಥ್ಯ, ನನ್ನೊಳಿಹ ಅವನಿಗೆ (ನ ನಗೆ) ರೂಪವಿಲ್ಲ ಆಕೃತಿ ಇಲ್ಲ ಮತ್ತು ವ್ಯಕ್ತಿತ್ವ ಇಲ್ಲ , ಆನಂದ ರೂಪವೇ ಆ ನಾನು . ನಾನು ಅವನೊಳಗೆ ಅವನೇ ನನ್ನೊಳಗೆ.
-ಸುಬ್ಬು ಪದ್ಮನಾಭ್

ಸ್ವರಾಭಿಷೇಕ ಕಾರ್ಯಕ್ರಮ - ಜಯಶ್ರೀ

ಕಾಳಿಂಗರಾಯರು ಹೇಳಿದ ಮಾತನ್ನು ಸ್ವರಾಭಿಷೇಕ ಕಾರ್ಯಕ್ರಮದಲ್ಲಿ ಜಯಶ್ರೀಯವರು ತಿಳಿಸಿದರು : ಸ್ವರಗಳು ಸೇರಿ ಕುಣಿತಾ ಇದೆ . ಸಾಹಿತ್ಯಗಳನ್ನು , ಸ್ವರಗಳನ್ನು ನೋಡ್ಬೇಕು , ಅದಕ್ಕೆ ಬಣ್ಣ ರೂಪ ಮತ್ತು ವ್ಯಕ್ತಿತ್ವ ಇರುತ್ತೆ . ಅದು ನಮ್ಮ ಕಣ್ಣ ಮುಂದೆ ಬೆಳೆಯಬೇಕು ,ಹಾಗೆ ಹಾಡಬೇಕು, ಅನುಭವಿಸಬೇಕು. ಸಂಗೀತದಲ್ಲಿ ಅನುಭವಿಸುವುದೇ ಬೇರೆ ಅದರಲ್ಲಿ ಪಾಂಡಿತ್ಯ ಎದ್ದು ಕಾಣುತ್ತೆ , ಇದರಲ್ಲಿ ಸನ್ನಿವೇಶ ಎದ್ದು ಕಾಣುತ್ತೆ , ವ್ಯಕ್ತಿತ್ವ ಬೆಳೆಯುತ್ತೆ ಮತ್ತು ಸನ್ನಿವೇಶ ಎದ್ದು ಕಾಣುತ್ತೆ . ಸಾಹಿತ್ಯ ಬೆಳೆಯುತ್ತೆ . ಎಂತಾ ಮಾತು ನೋಡಿ .

Memory of my lifetime- Yosemite Valley full day hike to dome

Memory of my lifetime- Yosemite Valley full day hike to dome
————————————————————————————
With few small hiking experience Ex :Mission peak hike in Fremont, Mount Madonna in Monterey, CA, Grand Canyon south rim hike for 6 Kms in Arizona and Zion National forest hike for 3 Kms in Utah , This time I chose Yosemite National park to go beyond 24 Kms and 5000 feet elevation to test my limits for one full day. Indeed, limit was tested , Sub dome and Half dome hike is the longest and most steepest hike that I encountered in any national parks so far. From the base 22.5 kms hike distance and gains 5000 feet elevation. This is more than double the distance in elevation gain as most difficult hikes in Yosemite plus it requires the mountaineering component at the end climbing the cables. If you have an intense fear of height like me I would not recommend you to climb the cables to climb the half dome first time around.
For a normal fit person, Sub-dome /Half dome hike easily takes 12-13 hours of non stop hike before you get back to your lodge when it gets dark else you need flash lights at night and it becomes even more challenging as many flies try to enter you through nose and mouth while breathing. Best is to start the hike at dawn or just before.
Woke up at 5 am and left our lodge at 6 am after a fresh coffee and started hiking without knowing what to expect on a beautiful summer day in Yosemite Valley in Yosemite National Park, California USA. Hike began along the mist trail which follows the Merced river up hundreds of steps to the top of Vernal falls. 
First part of this trail is mostly paved and travels alongside the Merced river until we arrive at the Vernal falls footbridge. Hundreds of granite steps mostly rough ones are hiked to get to the top of Vernal falls. I experienced nice and cool water fall spray on the body from the Vernal falls while climbing up and completely got drenched along the way while getting to the top of Vernal falls. Took 10 min rest, ate energy bar and banana , drank water and regained energy. Another mile and a half of granite steps hike up an elevation of additional 1000 feet further up from here will get you Nevada falls. Trail continues up another steep section of stairs to the top of Nevada falls. I must tell you Merced river roars very strong falling off the cliff at Nevada falls, you will thoroughly enjoy the sights and sounds of Merced river plummeting over the brink of the fall. On the top of Nevada falls, this was our last chance to refill the water and we started climbing up again towards sub dome which is additional 5 kms further up. Believe me we need plenty of water to stay fit and if we carry filter bottle we can fill up the water from the beautiful flowing Merced river from the little Yosemite valley at around 2000 feet as this is our last refill option. Beyond the top of Nevada falls, There is long sandy hot section and our effort to hike on those hot sand takes lot of effort as well even though it looks flat. This is through little Yosemite Valley before we get the sub dome.
Further up on the elevation we get sub dome and half dome that has most striking features on the Yosemite landscape. Its not only inspired adventuresome spirits to climb it and hike it but also geologists to study it and artists to capture its unique beauty on canvas and on film. Spoke to Lady ranger on the way, As per forest rangers, there are many people who get hurt with Injured knees , ankles and call emergency. Search and rescue team identifies at least 100 incidents each year in half dome trail. Appropriate footwear is important as granite rocks are wet and slippery at places due to water falls sprinkles, so hiking shoes with good traction is the key. 
At this point I was getting hydrated enough ,as I went further up and up on higher elevation towards sub dome I needed plenty of water . Best thing always is to listen to the body before pushing too hard. Many dehydrated people call rangers for assistance from this point . While climbing the sub dome last 50 meters before getting half dome, I started slightly getting uncomfortable due to time factor , cramped legs ,non availability of water in my bag and also fear of height while climbing up the sub-dome.
Quenching the thirst is the key in order to avoid the cramps in legs. If you start to get black out or feel that its too much of a push one should return. If I open up the bottle I used to drink at least half liter at one go to regain the energy as there was less oxygen at 5000 feet elevation, I was getting super tired and suddenly body needs are different. I could realize why we worhip air and water at that point. Experience to look down from this level on huge rocks, soaking into the those beautiful moments would transcend few for sure to the world of spirituality. If one is lucky it may be experienced. More I see the view from the top of this Yosemite mountain range more I thank God for his creation, Inside of me through this creation I completely experienced his presence everywhere . Scenery from the mountain top is really spectacular, breath taking and it transcends to a different zone as I mentioned. With this spiritual experience up on the mountain top of the world I started descending 5000 feet down to the ground at 3:10 pm.
Goal was to get back to the ground by 8:30 pm and glad that was accomplished that as well. While coming down, John Muir trail was hiked that bypasses Vernal fall to experience the different route with completely different scenic points, I could see Hazardous conditions of it in the middle of this summer, Imagine the state during spring , fall or winter. There are water falls which will directly fall on the trail making it dangerous to take this trail during other seasons as this trail is pretty rough too to hike down.
For sure ,Sub-dome hike of Yosemite National park has created a memory of my lifetime since it was extremely challenging and most strenuous hike of my life. When I returned from the hike, watch was showing 57658 steps which is roughly 25 Kilometers of total hike in 14 hrs and 24 minutes. This is more than a double distance with elevation of 5000 feet. Having pain all over the body from head to toe with so much strain and pain, there was sense of accomplishment. Felt happy about the hike, thanked God , Parents and Family. On a lighter note when I returned , I could literally count how many nerves were shivering inside me, thats how much I was exhausted.
Any hikers out there if you are training for a long hike, Sub dome and half dome in Yosemite National Park is the one you should consider, you will be in for a spectacular experience of your life time.

Friday, July 7, 2017

ಜನ್ರು ಜೇಬಿಗೆ ದುಡ್ಡು ಬಂತು


ಜನ್ರು ಜೇಬ್ಗೆ ದುಡ್ ಬಂತು
ಆಚೆ ತಿನ್ನೋದ್ ಜಾಸ್ತಿ ಆಯ್ತು
ಅನ್ನಾ ಸಾರು ಸಿಂಪಲ್ ಅಂತು
ಪಿಜ್ಜಾ ಬರ್ಗರ್ ಸ್ಪೆಷಲ್ ಆಯ್ತು
ದೋಸೆ ಹಿಟ್ಟು ಅಂಗ್ಡಿಗ್ ಬಂತು
ಮನೇ ಇಡ್ಲಿ ಮರ್ತೇ ಹೋಯ್ತು 
ಮನೆ ಕೆಲಸ ಆಚೆ ಹೋಯ್ತು
ಮನೆಮಂದಿಗ್ ರೋಗ ಬಂತು
ಕೂತ್ ಮಾಡೋ ಕೆಲಸ ಬಂತು
ದೇಹ ದಣಿಸದೆ ಕಾಯ್ಲೆ ತಂತು 
ವರ್ಷ ವರ್ಷವೂ ಉರುಳಿ ಹೋಯ್ತು
ಏನಿಕ್ಕೆ ಹುಟ್ಟಿದೀನಿ ಕೇಳ್ಬೇಡಾ ಅಂತು 
-ಸುಬ್ಬು ಪದ್ಮನಾಭ

Tuesday, June 20, 2017

ನಿನ್ನ ಸೇರುವ ಮುನ್ನ


ಕಾಲವೆಂಬ ಹರಿವ ನದಿಯಲ್ಲಿ
ಬಾಳೆಂಬ ದೋಣಿಯ ಪಯಣ 
ನನ್ನೊಳಿಹ ಅಸುರರನು ಸೆದೆಬಡಿ 
ಒಳಿತಿನೆಡೆ ಉತ್ಸಾಹದಿ ಮುನ್ನಡೆವೆ
ಸ್ಥಿರಚಿತ್ತ ಮನವ ಕೊಡುವೆಯ 
ಬಾಳಿಬದುಕುವೆ ನಾಲ್ಕು ದಿನ
ಬಾಳೆಂಬ ದೋಣಿಯ ಪಯಣ
ಭವಸಾಗರ ಸೇರುವ ಮುನ್ನ 
-ಸುಬ್ಬು ಪದ್ಮನಾಭ

Saturday, April 15, 2017

ಕನಸು

ಕನಸು ಶುರುವಾದರೆ ಮನಸ್ಸು ಕುಣಿಯುವುದಯ್ಯ  
ರಾತ್ರಿ ನಿದ್ದೆಯ ಕನಸು ಮನಸಿಗೆ ತ್ರಾಸ ಕೇಳಯ್ಯ 
ಇರುಳಿಗೆ ನಿದ್ದೆ ಬಾರದಿರುವ ಕನಸು ಬೇಕಯ್ಯ  
ಕನಸಿಗೆ ಹಗಲಿರುಳು ದುಡಿಯೇ ಬಾಳು ಬೆಳಕಯ್ಯ !!
-ಸುಬ್ಬು ಪದ್ಮನಾಭ್

Tuesday, April 4, 2017

ಆತ್ಮೋನ್ನತಿಗೆ ದಾರಿ

ಓ ಮನವೇ
ಕಪಟದಿ ಗೆಲುವು ದೊರಕಿದರೆ ಹೊರಗೆ
ಸುಡುವುದು ಸೋಲಿನ ನಂಜು ಒಳಗೆ
ಪ್ರತಿಫಲ ಬಯಸದೆ ಜಗದೊಡೆಯನ ಜೊತೆಯಿರೆ
ಆತ್ಮೋನ್ನತಿಗೆ ದಾರಿ ಎಲ್ಲರಲ್ಲವನ ನೋಡುತಿರೆ
-ಸುಬ್ಬು ಪದ್ಮನಾಭ್

Friday, March 24, 2017

ಬೆಟ್ಟದಷ್ಟು ಕಷ್ಟ


ಕಷ್ಟವು ಬೆಟ್ಟದಷ್ಟು ಎತ್ತರವಾದರೇನು  
ಅದರೊಳಗಿಹ ಸತ್ವ ಬದುಕಿಗೆ ತತ್ವ  

ನೀಲಾಕಾಶದಷ್ಟು ಮನ ವಿಶಾಲವಾಗಿರಲು

ನಿನ್ನೊಳಿಹ ಚೇತನ ನಲಿವುದು ಓ ನೋಡ 
ಜ್ಞಾನದ ಹಸಿರಲಿ ಕರಗುವುದು ನೀ ಹಾಡ

-ಸುಬ್ಬು ಪದ್ಮನಾಭ 

Tuesday, March 14, 2017

ನಿಮಗೆಂದೆ ಬಾಳುವೆ


ನಗು ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ
ಉಸಿರು ಸಾಕು ಬೆರೆತ ಮೇಲೆ
ಬೇರೇನು ಬೇಕು ಹೇಳು ಆಮೇಲೆ
-ಸುಬ್ಬು ಪದ್ಮನಾಭ

ಬದುಕಿನ ಸೊಬಗು

ಬಿಸಿಲಿನ ಬೇಗೆಯಲ್ಲಿ ಬಳಲಿದ ದಾರಿಹೋಕನಿಗೆ
ಮರದ ನೆರಳು ತಂಪನ್ನೀಯದೆ ಬಿಡುವುದೇ
ಕಷ್ಟ ಕಾರ್ಪಣ್ಯಗಳ ಎದುರಿಸಿದವನಿಗೆ
ಜೀವನದ ಸುಖವು ಸೊಬಗು ನೀಡದಿರುವುದೇ
-ಸುಬ್ಬು ಪದ್ಮನಾಭ

ರಂಗು ರಂಗು

ಬದುಕಿಗೆ ಆವರಿಸೋ
ವಿಸ್ಮಯವೇ ಈ ಬಣ್ಣ
ರಂಗು ರಂಗು
ಕಂಗಳಿಗೆ
ನೀವಾದಿರಿ
ಕಾರಣ
ಒಳಗಿರುವ ಮಗುವ
 ಕಾಪಾಡಿಕೋ ಪ್ರತಿ ಕ್ಷಣ
ನಿತ್ಯ ಪ್ರೀತಿಯ ದಿಬ್ಬಣ
 ಆಸೆ ಮೆರೆದರೆ ಲಕ್ಷಣ
-ಸುಬ್ಬು ಪದ್ಮನಾಭ

ಮಕರಂದದ ಹೊನಲು


ನಗುವೇ ಹೂವಾಗಿ ಮನದಿ ಚಿಗುರಲು
 ಸವಿ ಮಾತೆಲ್ಲಾ ಮಕರಂದದ ಹೊನಲು
ಪ್ರೇಮದ ಸುಮ ಅರಳದೆ ಉಳಿದೀತೆ
 ಪ್ರಣಯ ಸಂಗೀತ ಮೂಡದೆ ಇದ್ದೀತೆ ?
-ಸುಬ್ಬು ಪದ್ಮನಾಭ

Friday, March 3, 2017

ಫ್ರೆ೦ಡ್ ಶಿಪ್ನ ನೆಪದಲಿ


ತಿಳಿ ಮನಸಿನಲೇ ದೋಸ್ತಿ 
ಉಳಿ ಗುರುತುಗಳೇ ಆಸ್ತಿ  

ಮುರಿದು ತೆಗೆಯಲಾಗಲ್ಲ
ಬರಲೇ ಹಿಂದಿಂದೆ ಮೆಲ್ಲ 

-ಸುಬ್ಬು ಪದ್ಮನಾಭ್

ನಿಮಗೆಂದೆ ಬಾಳುವೆ


ನಗು ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ

ಉಸಿರು ಸಾಕು ಬೆರೆತ ಮೇಲೆ
ಬೇರೇನು ಬೇಕು ಹೇಳು ಆಮೇಲೆ

-ಸುಬ್ಬು ಪದ್ಮನಾಭ

Tuesday, February 14, 2017

ಏನಿದು ?


ಮೊದಲ ಮಧುರವಿದು 
ಮನ ಮೀಟಿ ಅರಳಿದೆ 
ಉಸಿರಿನ ಉತ್ಸವವಿದು 
ಎದೆಯ ಚಿಪ್ಪಲಿ ಅವಿತಿದೆ
-ಸುಬ್ಬು ಪದ್ಮನಾಭ 

Monday, February 13, 2017

ರಸಿಕ ಮನದ ಶೃಂಗಾರ ಕವನ


ಲತೆಯಲ್ಲಿ ನಗುವ ಹೂವಿನ 
ಗಂಧವ ಹೀರುವ ದುಂಬಿಯೋ 
ಮಿಂಚು ಕಣ್ಣಿನ ಹೊಳಪಿಗೆ 
ಹೃದಯದಂಚಿನ ಮಿಡಿತವೊ 
ಸಾಗರ ಹುಡುಕುವ ನದಿಗೆ 
ನಿತ್ಯ ಹರಿಯುವ ಹಂಬಲವೋ 
ಆಗಸದಿರದ ರವಿಯ ಕಾಂತಿಗೆ
ಕಾದು ಕೂರುವ ಸೆಳೆತವೋ 
-ಸುಬ್ಬು ಪದ್ಮನಾಭ

Thursday, February 9, 2017

ಕವಿ ಕಾಣದ ಶೃಂಗಾರದ ರಸಕಾವ್ಯ


ಹುಟ್ಟುವುದೇತಕೆ ಗೆಳೆಯ
ಸಾಧಿಸಿ ಸಾರ್ಥಕವಾಗಿಸಲು 
ಬದುಕುವುದೇತಕೆ ಗೆಳತಿ  
ಪ್ರೀತಿಸಿ ಪ್ರೇಮದೊಂದಿಗಿರಲು

-ಸುಬ್ಬು ಪದ್ಮನಾಭ 


ಎರಡು ಸಾರಿ ಮನುಷ್ಯ ಹುಟ್ಟುತ್ತಾನೆಂದು ಯಾರೋ ಪುಣ್ಯಾತ್ಮರು ಹೇಳಿದ್ದಾರೆ.
ಒಂದು ಅವನ ನಿಜವಾದ ಜನ್ಮ ದಿನ ಇನ್ನೊಂದು ಯಾತಕ್ಕೆ ಜನ್ಮ ತಾಳಿದ್ದು ಎಂದು ತಿಳಿದುಕೊಂಡ ದಿನ 

Wednesday, February 8, 2017

ಕೋಟಿ ಕೋಟಿಯೂ ಕನ್ನಡ


ಹೂವಿನ ಕುಸುಮದಲಿ 
ಕನ್ನಡ ತನವೊಂದಿದೆ 
ಹೃದಯದ ಬಡಿತದಲಿ 
ಕಂಪಿನ ಕನ್ನಡವೊಂದಿದೆ 
ನಾಡಿಯ ಮಿಡಿತದಲಿ
ತಂಪಿನ ಕನ್ನಡವೊಂದಿದೆ 
ಕನ್ನಡ ತನವೊಂದಿರಲು 
ಉಸಿರುಸಿರೂ ಹಾಡಿದೆ 
ಕನ್ನಡ ಬದುಕಿಗೆ ಕನ್ನಡ
ಏಳು ಕೋಟಿಯೂ ಕನ್ನಡ 
-ಸುಬ್ಬು ಪದ್ಮನಾಭ

Thursday, January 12, 2017

ಯದ್ ಭಾವಂ ತದ್ ಭವತಿ

ಹೊರಗೆ ಮಣ್ಣಿನ ಬಿಂಬ 
ಮನಸೊಳಗೆ ಪ್ರತಿಬಿಂಬ !
ಯದ್ ಭಾವಂ ತದ್ ಭವತಿ !

ಆಂತರ್ಯ

ಬೆಳಕೆಂಬುದು ಅವನಿರುವಿಕೆಯ ಪ್ರತೀಕ
ಬುದ್ದಿಯ ಕ್ಷಮತೆಗೆ ಎಟುಕದು ಯಾತ್ರಿಕ 
ಕಾಣಿಸುವುದೇ ಕತ್ತಲಾದ ಬಳಿಕ ನೆರಳು 
ಆಂತರ್ಯ ತಿಳಿಯದೆ ಇರುವಿಕೆಯ ತಿರುಳು !!
--ಸುಬ್ಬು ಪದ್ಮನಾಭ್

ಜೀವನೋತ್ಸಾಹ

ಬದುಕಿನಲಿ ಹಲವನುಭ ರಸಪಾಕ ಜೊತೆಯಿರಲಿ
ಬಾಹು ಭುಜಗಳಿಗೆ ಕಡೆತನಕ ಬಲವಿರಲಿ
ಜೀವನವೆಂಬ ವಿಶ್ವ ವಿದ್ಯಾಲಯವ ಪ್ರೀತಿಸಲಿ
ದೈವಕೃಪೆ ಜೀವನೋತ್ಸಾಹ ಮಿನುಗುತಿರಲಿ !!

-ಸುಬ್ಬು ಪದ್ಮನಾಭ್
 

ಮಿಗೆ

ಅವಿತ ಭಯ ತೆಗೆ 
ಜೀವನ ಪ್ರೀತಿ ಉಗೆ 
ಮನದ ನವಿಲು ನಗೆ 
ಸನಿಹ ನೀನಿರೆ ಮಿಗೆ

-ಸುಬ್ಬು ಪದ್ಮನಾಭ್

ಅಮ್ಮ

🙏
ಲೋಕಕ್ಕೆ ಬಂದ ಮೇಲೆ ನೀ ಕಲಿಸಿದ ಮೊದಲ ಪಾಠ
ಮರೆತಿಲ್ಲ ವರ್ಷವಿಡೀ ನೀನಿತ್ತ ಅಮೃತ ದ್ರವ್ಯದೂಟ 
ಒಡಲನ್ನೇ ಅಡುಗೆಮನೆಯಾಗಿಸಿ ಎನಗೆ ಉಣಬಡಿಸಿದೆ 
ನಿನ್ನ ಮಮತೆಯನ್ನು ಧಾರೆಯಾಗಿ ನನ್ನೆಡೆಗೆ ಹರಿಸಿದೆ 
ಜನ್ಮ ನೂರೆತ್ತಿ ಬಂದರೂ ನಿನ್ನ ಋಣ ತೀರಿಸಲಾದೀತೆ !!

-ಸುಬ್ಬು ಪದ್ಮನಾಭ್

ಸ್ಪರ್ಶ

ರವಿಯ ಕಿರಣಗಳ ಸ್ಪರ್ಶದಿಂದಲ್ಲವೇ 
ನೆಚ್ಚಗಾಗುವುದು ಸಮಸ್ತ ಜೀವಿತವು

ಸ್ವ ಸ್ವರೂಪ ಪರಚೇತನ ಬೆಳಕಿನಾಗಸದಿ 
ಶಕ್ತಿ ಸಂತಸ ಉಕ್ಕಿ ಚಿಮ್ಮುವುದು ಮನದಿ 

ಸಹಸ್ರ ವರುಷ ಕಳೆದರೇನು ಬೆಳಕಿಗೆ
ತೆನೆಗೆ ಸ್ಪರ್ಶ ಬೇಡವೇ ತಂಡುಲ ಪ್ರಾಪ್ತಿಗೆ

ಜಗದಲ್ಲೊಬ್ಬ ರವಿ ಸಾಕು ಸಕಲ ಜೀವರಾಶಿಗೆ
ಒಡಲರಮನೆಗೆ ಬೇಕಿರುವ ಚೇತನವಿದು ಮಿಗೆ !

-ಸುಬ್ಬು ಪದ್ಮನಾಭ್