Thursday, January 12, 2017

ಅಮ್ಮ

🙏
ಲೋಕಕ್ಕೆ ಬಂದ ಮೇಲೆ ನೀ ಕಲಿಸಿದ ಮೊದಲ ಪಾಠ
ಮರೆತಿಲ್ಲ ವರ್ಷವಿಡೀ ನೀನಿತ್ತ ಅಮೃತ ದ್ರವ್ಯದೂಟ 
ಒಡಲನ್ನೇ ಅಡುಗೆಮನೆಯಾಗಿಸಿ ಎನಗೆ ಉಣಬಡಿಸಿದೆ 
ನಿನ್ನ ಮಮತೆಯನ್ನು ಧಾರೆಯಾಗಿ ನನ್ನೆಡೆಗೆ ಹರಿಸಿದೆ 
ಜನ್ಮ ನೂರೆತ್ತಿ ಬಂದರೂ ನಿನ್ನ ಋಣ ತೀರಿಸಲಾದೀತೆ !!

-ಸುಬ್ಬು ಪದ್ಮನಾಭ್

No comments:

Post a Comment