ದೇವ ಮಂದಿರ ಭಜನೆ ಜೀವನದ ಅಲಂಕಾರ ಮನಸ್ಸಿನ ಉದ್ದಾರಕ್ಕೆ ಮಾತ್ರ , ಯಾವ ದೇವರು ನಮ್ಮ ಪೊಳ್ಳು ಭಕ್ತಿಯನ್ನು ಮೆಚ್ಚಲಾರ ಮನಸ್ಸನ್ನು ಒಂದು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಪೂಜೆ ಧ್ಯಾನ ಜಪ ತಪ ಒಂದು ಸಾಧನ ಮಾರ್ಗವಷ್ಟೇ . ನಾವು ಪೂಜೆ ಮಾಡಿ ದೇವರಿಗೆ ಅದು ಕೊಡು ಇದು ಕೊಡು ಅಂತ ಕೇಳುವುದರಿಂದ ಅವನಿಗೆ ಕೇಳಿದ್ದು ದಕ್ಕುತ್ತದೆ ಎಂದು ಯಾವ ಭರವಸೆಯೂ ಇಲ್ಲ . ಯಾರಿಗೂ ತೊಂದರೆ ಕೊಡದೆ ಸಕಲರಿಗೂ ಒಳ್ಳೆಯದಾಗಲೆಂಬ ಭಾವ ಒಳಗಿಂದ ಇರಬೇಕು . ಒಂದು ಉದಾಹರಣೆ : ಬೇರೆಯವರ ಸಾಧನೆ ಉದ್ದಾರ ಕಂಡು ಹೊಟ್ಟೆಯುರಿ ಪಡುವ ಮನೋಧರ್ಮ ಹೋದಾಗ ನಮಗೆ ಗೊತ್ತಿಲ್ಲದ ಹಾಗೆ ಮನಸ್ಸಿಗೆ ಮರೆಮಾಚಿರುವ ಕೊಳಕು ತೊಳೆಯುತ್ತಾ ಹೋದಂತೆ ,ಮರ್ಮದ ಮಾರ್ಗ ಆಚೆ ಸರಿಯುತ್ತದೆ ಹಾಗೆಯೇ ಸತ್ಕರ್ಮಗಳು ಮಾಡಿಕೊಂಡು ಹೋದರೆ ನಮ್ಮ ಆಂತರ್ಯ ವಿಕಾಸವಾಗುತ್ತದೆ , ಚಿಂತನೆಗಳು ವಿಕಾಸಗೊಳ್ಳುತ್ತದೆ, ಸಕಲ ಜೀವರಾಶಿಯಲ್ಲೂ ಭಗವಂತನಿರುವುದು ಅರಿವಿಗೆ ಬಂದುಬಿಡುತ್ತದೆ .
-ಸುಬ್ಬು ಪದ್ಮನಾಭ
-ಸುಬ್ಬು ಪದ್ಮನಾಭ
No comments:
Post a Comment