Sunday, December 11, 2022

Adishankaracharya - Dec 11 2022 - Notes in Kannada

 ೭.ಶಂಕರಾಚಾರ್ಯರಿಗೆ ಸಂಬಧಪಟ್ಟ ಶ್ಲೋಕ.

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್ 

ನಮಾಮಿ ಭಾಗವದ್ಪಾದಂ ಶಂಕರಂ ಲೋಕಶಂಕರಂ 


ಪುಸ್ತಕಾಲಯ - ಪುಸ್ತಕಗಳಿರುವ ಸ್ಥಾನ.

ಗ್ರಂತಾಲಯ - ಗ್ರಂಥಗಳು ಇರುವ ಸ್ಥಾನ .


ವೇದಗಳನ್ನು ಯಾರು ಬೆರೆದಿದ್ದಲ್ಲ . ದಾರ್ಶನಿಕ , ಋಷಿ ಮುನಿಗಳಿಗೆ ಗೋಚರವಾದದ್ದು .

ಶ್ರುತಿ - ಕೇಳಿಸ್ಕೊಳ್ಳುವ ಮೂಲಕ ಬರುವ ಜ್ಞಾನ .

ಸ್ಮೃತಿ - ಬರವಣಿಗೆಗೆ ಬಂದಿರುವ ಕಾರಣ ಅದೇ ಜ್ಞಾನ ಸ್ಮೃತಿಯಾಗಿದೆ .

ಪುರಾಣದಲ್ಲಿ ಹಲವಾರು ಇದೆ.

ಜೀವಿಗಳ ಮೇಲಿರುವ ಕಾರುಣ್ಯ .

ಶ್ರುತಿ ಸ್ಮೃತಿ ಮತ್ತು ಪುರಾಣವೆಲ್ಲ ಶಂಕರಾಚಾರ್ಯರ ಶರೀರವೇ ದೇವಾಲಯವಾಗಿತ್ತು .ಲೋಕಕ್ಕೆ ಶುಭವನ್ನು ಕೋರುವವರೇ ಶಂಕರಂ ಎಂದರ್ಥ .

ಶಂಕರಾಚಾರ್ಯರು ದೀಪ ಮತ್ತು ಪ್ರದೀಪವಾಗಿದ್ರು .

ಬೇರೆಯವರಲ್ಲಿರುವ ತಪ್ಪು ಕಲ್ಪನೆಗಳನ್ನು ದೀಪದಂತೆ ಅವತರಿಸಿ ಪ್ರದೀಪಿಸಿದರು ( ಬೆಳಗಿದರು , ಬೆಳಗುತ್ತಿದ್ದಾರೆ ಮತ್ತು ಬೆಳಗುತ್ತಲೇ ಇರುತ್ತಾರೆ ) ಅಂತಹ ಜಗದ್ಗುರುಗಳಿಗೆ ನಥಮಸ್ಥಕರಾಗಿದ್ದೇವೆ ಅಂದರೆ ನಮಸ್ಕರಿಸುತ್ತೇವೆ. 

ಸೂರ್ಯ ಹೇಗೆ ಲೋಕವನ್ನೇ ಬೆಳಗುವ ಪ್ರದೀಪವೋ ಹಾಗೆಯೇ ದೇಶದಾದ್ಯಂತ ಆಸ್ತಿಕರ ಪರವಾಗಿ ವಾದ ಮಾಡಿ ಗೆದ್ದು ಜಗದ್ಗುರುಗಳು ಎಂದು ಕರೆಸಿಕೊಂಡರು.


ಈ ಶ್ಲೋಕದ ಮೂಲಕ ನಮನ ಸಲ್ಲಿಸುವುದು ಅವರಿಗೆ ಒಳ್ಳೇದಾಗ್ಲಿ ಅಂತ ಅಲ್ಲ ನಮಗೆ ಒಳ್ಳೇದಾಗ್ಲಿ ಅಂತ .


ಉಪನಯನ ಮಾಡಬೇಕು ಎಂದುಕೊಂಡಾಗ ಶಂಕರರ ತಂದೆ ಶಿವಗುರುವಿನ ಕಾಲವಾಗುತ್ತದೆ. 

ಉಪನಯನವಾಗುತ್ತದೆ.

ಸನ್ಯಾಸ ತೆಗೆದುಕೊಂಡು ಭಿಕ್ಷೆ ಸ್ವೀಕರಿಸಿ ಜೀವನ ಸಾಗಿಸುತ್ತಾರೆ .

ಸನ್ಯಾಸಿ ಅಂದರೆ ಹೆಣ್ಣು ಹೊನ್ನು ಮಣ್ಣು ಮೂರನ್ನು ತ್ಯಾಗ ಮಾಡಿ ದೇಶಕ್ಕೆ ಒಳ್ಳೇದಾಗುವುದಕ್ಕೆ ರಾಜ್ಯಗಳನ್ನೆಲ್ಲಾ ಪರ್ಯಾಟನೆ ಮಾಡುತ್ತಾರೆ .

ಅವರನ್ನು ನೋಡಿಕೊಳ್ಳುವುದು ಗೃಹಸ್ತರಾದ ನಮ್ಮಂತವರ ಜವಾಬ್ದಾರಿ.


ಒಂದು ದಿನ ಬಾಲ ಸನ್ಯಾಸಿ ಭಿಕ್ಷೆ ಬೇಡುವುದಕ್ಕೆ ಬಂದಾಗ ಬಡವರ ತಾಯಿ ಒಣಗಿದ ನಲ್ಲಿಕಾಯಿಯನ್ನು ಬಹಳ ನೋವಿನಿಂದ ಕೊಡುತ್ತಾಳೆ. ಹಾಲೋ ಅಕ್ಕಿನೋ ಅನ್ನವನ್ನೋ ಕೊಡಲು ಆಗುತ್ತಿಲ್ಲವಲ್ಲ ಎಂದು ನೋವು ಮಾಡಿಕೊಂಡು ಕೊಡುತ್ತಾಳೆ .

ಬಾಲ ಶಂಕರನ ಮನಸ್ಸು ಮಿಡಿಯುತು. ಬೆಲೆ ಬಾಳುವುದನ್ನು ಕೊಟ್ಟಿದ್ದಾಳೆ ಎಂದು ಆ ಬಾಲ ಸನ್ಯಾಸಿ ಮಹಾಲಕ್ಷ್ಮಿಯನ್ನು ಕುರಿತು ಕನಕಧಾರಾ ಸ್ತೋತ್ರವನ್ನು ಸ್ತುತಿಸುತ್ತಾರೆ.

ಕಷ್ಟವನ್ನು ಪಡುತ್ತಿರುವ ಆ ತಾಯಿಗೆ ಸಾಕ್ಷಾತ್ ಪರಶಿವನೇ ಮಹಾಲಕ್ಷ್ಮಿಗೆ ತಿಳಿಸಿ ಮನೆಯಲ್ಲಿ ಶ್ರೀಮಂತಿಕೆ ತುಂಬುತ್ತಾನೆ. ಸನ್ಯಾಸಿಗಳಿಗೆ ಅಷ್ಟು ಶಕ್ತಿ ಇರುತ್ತದೆ . ಅವರ ಒಂದು ದರ್ಶನ ಅಥವಾ ಆಶೀರ್ವಾದ ನಮ್ಮ ಆತ್ಮದ ವಿಚಾರವನ್ನು ತಿಳಿದುಕೊಳ್ಳುವ ಜ್ಞಾನಕ್ಕೆ ಮತ್ತು ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕೆ ಕೃಪೆ ಮಾಡುತ್ತಾರೆ . 

No comments:

Post a Comment