Thursday, January 4, 2018

ಬಬ್ರುವಾಹನ

ಏನು ಪಾರ್ಥ ? ಹಾಹಾ
ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ
ಈಗ ಆ ಶಕ್ತಿ ನಿನ್ನಲ್ಲಿಲ್ಲ
ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದುಹೋಗಿ ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ .
ಹ್ಞೂ ,,ಎತ್ತು ನಿನ್ನ ಗಾಂಡೀವ ... ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ
ಶಿವನನ್ನು ಗೆದ್ದ ನಿನ್ನ ಶೌರ್ಯ ನನಗು ಸ್ವಲ್ಪ ತಿಳಿಯಲಿ
ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ
ಮಧಾಂತ , ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ !! ಸುರಲೋಕಕ್ಕೆ ಸೋಪಾನ ಕಟ್ಟಿ ಮತ್ಸ್ಯ ಯಂತ್ರವನ್ನ ಭೇದಿಸಿ ರಣಾಂಗಣದಲ್ಲಿ  ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನೂ ತಿಳಿದಿದೆಯೋ
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೊಳ್ ಆರ್ಜಿಸಿದ ಆ  ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆಕಾಯ್ದು  ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ
ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪಥವಮ್ ಪಡೆದವನೋ
ಆಗ್ರಹಗಳೆದುರಾಗೋ ಆರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ ,ಉಗ್ರಪ್ರತಾಪಿ
ಓಹೋಹೋ ಉಗ್ರಪ್ರತಾಪಿ, ಹಾಂ  ಹಹಹ
ಸಭೆಯೊಳಗೆ ದ್ರೌಪತಿಯ ಸೀರೆಯನ್ನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೂ ಗುಂಡಿಗೆಯು ನಿನಗೆಲ್ಲೋ
ಖಂಡಿಸದೆ ಉಳಿಸುವೆ
ಹೋಗೋ ಹೋಗೆಲೊ ಶಿಖಂಡೀ... ಈ.......
ಪಡಾಪಡಾ ಶಿಖಂಡಿಯೆಂದಡಿಗಡಿಗೆ ನುಡಿಯಬೇಡಲೋ ಮೂಡ
ಖಂಡೆರೆದೆ ಗುಂಡಿಗೆಯ ಖಂಡಿಸುತ
ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ದಂಡ
ಭೂಮಂಡಲದೊಳ ಕಂಡ ಕೀರ್ತಿ ಪ್ರಚಂಡಾ
ಚಂಡನೂ ಪ್ರಚಂಡನೂ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಬಂಗ
ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಬ್ರುವಾಹನ  
ಮುಚ್ಚು ಬಾಯಿ ಜಾರಿಣಿಯ ಮಗನೆ
ಏ ಪಾರ್ಥ , ನನ್ನ ತಾಯಿ ಜಾರಿಣಿಯೋ ಪತಿವೃತೆಯೋ ಎಂಬ ನಿರ್ಧಾರಕ್ಕೋಸ್ಕರವೇ  ಈ ಯುದ್ಧ
ಮುಗಿಯಿತು ನಿನ್ನ ಆಯಸ್ಸು
ಅದನ್ನ ಮುಗಸಕ್ಕೇ ಇಲ್ಲಿ ಯಾರಿದರೆ ನಿನ್ನ ಸಹಾಯಕ್ಕೆ
ಶಿಖಂಡಿನ ಮುಂದೆ ನಿಲ್ಸಿ ಭೀಷ್ಮನ ಕೊಂದ ಹಾಗೆ ನನ್ನನ್ನು  ಕೊಲ್ಲೋದಕ್ಕೆ ಇಲ್ಲಿ ಯಾವ ಶಿಖಂಡಿನು ಇಲ್ಲ
ಧರ್ಮರಾಯನ ಬಾಯಲ್ಲಿ ಅಬದ್ಧ ನುಡ್ಸಿ ದ್ರೋಣಾಚಾರ್ಯರನ್ನ ಕೊಂದ ಹಾಗೆ ನನ್ನ ಕೊಲ್ಲಲು ಸುಳ್ಳು ಹೇಳೋದಕ್ಕೆ ಧರ್ಮರಾಯ ಇಲ್ಲಿಲ್ಲ
ಹ್ಞೂ  , ರಥದ ಚಕ್ರ ಮುರಿದಿದ್ದಾಗ ಕವಚಕುಂಡಲಗಳನ್ನ ದಾನ ಪಡೆದು ಕರ್ಣನ್ನ ಕೊಲ್ಸಿದ  ಹಾಗೆ ನನ್ನನ್ನ ಕೊಲ್ಸಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ
ಇರೋದು ಪತೀವ್ರತೆಯಾದ ಮಗನಾದ ನಾನು ಪತ್ನಿದ್ರೋಹಿಯಾದ ನೀನು !!!

No comments:

Post a Comment