ನಮ್ಮ ಕರ್ಮಕ್ಕೆ ತಕ್ಕಂತೆ ಫಲ . ಮನುಷ್ಯನು ಪ್ರಾಣಿ ಜೀವ ಬಳಿ ತೆಗೆದುಕೊಂಡು ಸಹ ಜೀವನ ಮಾಡಬಹುದು ಆದರೆ ಅದಕ್ಕೆ ತಕ್ಕಂತೆ ಫಲವನ್ನು ಇಟ್ಟಿರುತ್ತಾನೆ ಎಂದು ಭಗವದ್ಗೀತೆಯಲ್ಲಿ ಹೇಳಿದೆ.
ಪುಣ್ಯ ಕೆಲಸಗಳಿಗೂ ಅದರದ್ದೇ ಫಲ ಇರುತ್ತದೆ . ಅಪ್ಪಿ ತಪ್ಪಿ ಗೊತ್ತಾಗ್ದೇ ಮಾಡೋ ಕರ್ಮಕ್ಕೂ ಫಲ ಇದ್ದೇ ಇದೆ .
ಇನ್ನು ಗೊತ್ತಾಗಿ ಪ್ರಾಣಿ ಹತ್ಯೆ ಮಾಡಿದರೆ ಫಲ ಕ್ರೂರವಾಗಿ ಇದ್ದೇ ಇರುತ್ತೆ . ಅದನ್ನೇ ತಾನೇ ನಾವು ಅನುಭವಿಸುತ್ತಿರುವುದು ನಾವು ಮಾಡಿರೋ ಕರ್ಮದ ಫಲವನ್ನೇ ....
ಮೇಲೆ ಯಾರು ಕೂತಿಲ್ಲ ಲೆಕ್ಕ ಬರ್ಕೊಂಡು ... ನಮ್ಮ ಲೆಕ್ಕ ಪಾಪ ಪುಣ್ಯದ ಲೆಕ್ಕ ನಾವೇ ಬರ್ಕೊತಾ ಇರ್ತೀವಿ ಅದರ ತುಲನೆ ವಿಶ್ಲೇಷಣೆ ಯಮ ಧರ್ಮರಾಯ ನಮ್ಮ ದೇಹದಿಂದ ಪ್ರಾಣವನ್ನು ಕಸಿದುಕೊಂಡು ಹೋಗುವಾಗ ಮುಂದಿನದ್ದು ತೀರ್ಮಾನವಾಗುತ್ತೆ ಅಂತೇ ಕಥೆಯ ರೂಪದಲ್ಲಿ ತಿಳಿಸಿದ್ದಾರೆ . ಅದಕ್ಕೆ ಹಿರಿಯರು ಹೇಳಿದ್ದು ಪುಣ್ಯದ ಕೆಲಸ ಮಾಡಿ ಪುಣ್ಯದ ಜೀವನ ಮತ್ತೆ ಪಡ್ಕೊಳಿ ಅಂತ ಇಲ್ಲ ಅಂದ್ರೆ ನೆಮ್ಮದಿಯ ಬದುಕು ಖಂಡಿತ ಸಿಗಲ್ಲ ಅಂತ ....
No comments:
Post a Comment