Sunday, July 29, 2018

ಏನಿಲ್ಲ - ನಾನಿಲ್ಲ


ಪಂಚಭೂತಗಳಲ್ಲಿ ಅವನಿಲ್ಲ
ಅವನಿಲ್ಲದೆ ಅವುಗಳಿಲ್ಲ 
ಜೀವರಾಶಿಯಲಿ ಅವನಿಲ್ಲ
ಅವನಿಂದಲೇ ಅವುಗಳೆಲ್ಲ 
ದೇಹವೇ ನಾನೆಂದು ನಂಬಿಲ್ಲ
ಚತುರ್ಥ ಸ್ಥಿತಿಯೂ ಇದೆಯಲ್ಲಾ
ಅನುಭವಕೆ ಬಂದರೆ ನಾನಿಲ್ಲ
ನಾನು ಹೋದರೆ ಅವನೇ ಎಲ್ಲಾ 
- ಸುಬ್ಬು ಪದ್ಮನಾಭ

No comments:

Post a Comment