ನನ್ನ ಮನದ ನಾಲ್ಕು ಹನಿ ಕಂಬನಿ
--------------------------
ನಮ್ಮ ಸಮಯ ದಿನಾ ಬೇಗ ಬೇಗ ಕಳೆದು ಹೋಗುತ್ತಿದೆ ಎಂದು ನನಗನಿಸುತ್ತದೆ. ನಾವು ಕೆಲಸ ಮಾಡಿದ್ರು ಸಮಯ ಹೋಗುತ್ತೆ ಮಾಡದೆ ಇದ್ರೂ ಹೋಗುತ್ತೆ . ಅದಕ್ಕೆ ಮಾಡಿಯೇ ಬಿಡೋಣ ಬಿಡಿ . ಆಗಬೇಕಿರುವ ಕೆಲಸಗಳನ್ನು ಮಾಡದೆ ಕುಳಿತಿರುವ ಬದಲು ಪ್ರಯತ್ನ ಮಾಡಿ ಕಲಿತುಕೊಂಡು ಮತ್ತೆ ಗುರಿ ಮುಟ್ಟುವುದು ಲೇಸು.
--------------------------
ನಮ್ಮ ಸಮಯ ದಿನಾ ಬೇಗ ಬೇಗ ಕಳೆದು ಹೋಗುತ್ತಿದೆ ಎಂದು ನನಗನಿಸುತ್ತದೆ. ನಾವು ಕೆಲಸ ಮಾಡಿದ್ರು ಸಮಯ ಹೋಗುತ್ತೆ ಮಾಡದೆ ಇದ್ರೂ ಹೋಗುತ್ತೆ . ಅದಕ್ಕೆ ಮಾಡಿಯೇ ಬಿಡೋಣ ಬಿಡಿ . ಆಗಬೇಕಿರುವ ಕೆಲಸಗಳನ್ನು ಮಾಡದೆ ಕುಳಿತಿರುವ ಬದಲು ಪ್ರಯತ್ನ ಮಾಡಿ ಕಲಿತುಕೊಂಡು ಮತ್ತೆ ಗುರಿ ಮುಟ್ಟುವುದು ಲೇಸು.
ಈ ಜೀವ ಏನು ಇದರ ಸಾಧ್ಯತೆ ಅಗಾಧತೆ ಏನು ಎಂದು ಪರಿಶೋಧಿಸಬೇಕಿದ್ರೆ ಆ ನಿಟ್ಟಿನಲ್ಲಿಯೂ ಕೂಡ ಸ್ವಲ್ಪ ಯೋಚನೆ ಮಾಡ್ಬೇಕು ತಾನೇ ? ಸಮಯ ಮಿಂಚಿ ಹೋಗ್ತಾ ಇದೆ ತಾನೇ ? ಮುಂದೆ ಹಾಕಿಕೊಂಡು ಇರೋದಕ್ಕೆ ನಮಗೆ ನಮ್ಮೊಳಗಿರುವ ತಪ್ಪು ಕಲ್ಪನೆಗಳೇ ಕಾರಣ . ಅಮರರಂತೂ ಅಲ್ಲ ಗೊತ್ತಿದೆ . ಆದರೆ ತುಂಬಾ ಸಮಯವಿರುವ ಹಾಗೆ ತಪ್ಪು ಕಲ್ಪನೆಗಳೂ ಬೇಡ.
ನಾನು ಕೆಲಸ ಮಾಡುವ ಕಂಪನಿಯಲ್ಲಿ ಒಟ್ಟು ಇದೇ ವರ್ಷ ೫ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಲ್ಲರೂ ೪೦ ರ ಒಳಗಡೆ ಇರುವವರೇ ಅದರಲ್ಲಿ ೩ ಜನರು ನನಗೆ ಗೊತ್ತಿದ್ದವರು .
ನನ್ನ ಜೊತೆ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದಿದ ೨ ಗೆಳೆಯರು ಇವತ್ತು ಇಲ್ಲ . ನಿತ್ಯ ಕಾಲೇಜಲ್ಲಿ ಮಾತನಾಡುತ್ತಿದ್ದ ಗೆಳೆಯರವರು.
ಸಂತೋಷ ಆನಂದದಿಂದ ಬದುಕಿದ್ರೆ ನಾವು ನೂರು ವರ್ಷ ಬದುಕಿದರೂ ಅದು ಚುಟುಕದ ಜೀವನ ಅನ್ನಿಸುತ್ತದೆ ಅಲ್ಲವೆ ? ಹೀಗೆ ಬಂದು ಹಾಗೆ ಹೋಗುತ್ತೆ . ನಮ್ಮ ಇಲ್ಲಿವರೆಗಿನ ಬದುಕೇ ನೋಡಿ ಎಷ್ಟು ಬೇಗ ಕಳೆದು ಹೋಯಿತು ಅನ್ನುಸುತ್ತಿಲ್ವಾ ? ಇನ್ನೂ ಜಗಳ ಹೊಟ್ಟೆಕಿಚ್ಚು ಲೋಭಿತನ ಒತ್ತಡ ಜಂಜಾಟ ಹಿಂಸೆ ಕೋಪ ಇದಕ್ಕೆಲ್ಲಾ ಟೈಮ್ ಎಲ್ಲಿಂದ ತರೋಣ ಹೇಳಿ ? ನಾವು ಯಾವುದೇ ಸಮಯದಲ್ಲಿ ಸಾಯಬಹುದು ಎಂಬುದರ ಅರಿವು ಇದ್ದರೆ ನಮ್ಮ ಜೀವನವನ್ನು ಚೆನ್ನಾಗಿ ನಡಿಸ್ಕೊಂಡು ಹೋಗ್ತೀವಿ . ಯೋಚಿಸಿ ನೋಡಿ ....
ನಮ್ಮ ಬದುಕು ಬಹಳ ಚುಟುಕಾದ ಪಯಣವಾಗಿರೋದ್ರಿಂದ ಬಹಳ ಆನಂದವಾಗಿ ಹಿತವಾಗಿ ಸಂತೋಷದಿಂದ ನಡೆಸುವುದು ಒಳ್ಳೆಯದು . ನಮಗೆ ಹೇಗೆ ಬೇಕೋ ಹಾಗೆ . ನಮ್ಮಲ್ಲಿ ಕಾಡುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದುಕೊಳ್ಳುವುದಕ್ಕೆ ಎಂದು ಇರುವುದೇ ನಮ್ಮ ಜೀವನ.
ನಮಗೆ ಬ್ರಹ್ಮಾಂಡದ ಬಗ್ಗೆ ಗೊತ್ತಿಲ್ದೆ ಇದ್ರುವೇ ಸಾಯುವುದರೊಳಗೆ ನಮ್ಮೊಳಗೇ ಉಸಿರಾಡುತ್ತಿರುವ ಈ ಜೀವದ ಬಗ್ಗೆಯಾದರೂ ತಿಳಿದುಕೊಳ್ಳಬೇಕು ಅಲ್ಲವೆ ? ಪ್ರಯತ್ನ ಪಡದೆ ಹೋಗುವುದು ತಪ್ಪೇನಲ್ಲ ಆದರೂ ಸರಿಯೂ ಅಲ್ಲ ಅನಿಸುತ್ತದೆ.🙏
- ಸುಬ್ಬು ಪದ್ಮನಾಭ
Sep 7 , 2019
- ಸುಬ್ಬು ಪದ್ಮನಾಭ
Sep 7 , 2019
No comments:
Post a Comment