Sunday, June 12, 2016

ಅಂದ ಚಂದ


ಉಂಗುರ ಪೋಣಿಸಿದ ಉದ್ದನೆಯ ಬೆಟ್ಟು
ಹೆಣ್ಣಿನಂದ ಹೆಚ್ಚಿಸುವೆ ನೀ ಹಣೆಗೆ ಬಟ್ಟು
ನೀಳ ಮೂಗಿನ ಮೇಲಿದೆ ಮೂಗುತಿ
ದಿನವಿಡೀ ಕಣ್ಣ ಕುಕ್ಕುವೆ ನನ್ನಾರತಿ
ಕೊರಳಿಗೊಂದೆಳೆ ಸರ ಆಹಾ ಎಷ್ಟು ಸುಂದರ 
ಇರುಳಿಗಿರುವ ಚಂದಿರ ಸನಿಹ ನೀನಿರೆ ಹಂದರ 
ಘಲು ಘಲು ಗೆಜ್ಜೆಯ ನಡೆಯುವ ಪಾದ
ಹಂಸನಡಿಗೆಗೆ ಮನೆಯಂಗಳ ಸುನಾದ 
ಹುಡುಗನ ಕಣ್ಣಿಗೆ ನೋಟದ ಹುಚ್ಚು
ನೋಡಲು ನಿನ್ನ ಹೆಚ್ಚಿಸುವುದು ಕಿಚ್ಚು
-ಸುಬ್ಬು ಪದ್ಮನಾಭ
22 March 2016

No comments:

Post a Comment