ಎರಡು ಕೋಣೆಯ ಮಾಡು ಎದೆಯ ಆಲಯದೊಳಗೆ
ಹೊರ ಕೋಣೆಯ ಒಳಗೆ ಲೋಗರಾಟವನಾಡು
ವಿರಮಿಸೊಬ್ಬನೆ ನೀನು ಒಳಮನೆಯ ಶಾಂತಿಯಲಿ
ವರ ಯೋಗ ಸೂತ್ರವಿದು - ಮಂಕತಿಮ್ಮ
ಹೊರ ಕೋಣೆಯ ಒಳಗೆ ಲೋಗರಾಟವನಾಡು
ವಿರಮಿಸೊಬ್ಬನೆ ನೀನು ಒಳಮನೆಯ ಶಾಂತಿಯಲಿ
ವರ ಯೋಗ ಸೂತ್ರವಿದು - ಮಂಕತಿಮ್ಮ
2002 ನೇ ಇಸವಿ ಬೆಂಗಳೂರು - ಚಿಕ್ಕ ವಯಸ್ಸಿಂದಲೂ ಪ್ರವಚನ ಮಾಲಿಕೆ ಉಪನ್ಯಾಸ ಕೇಳಲು ತುಂಬಾ ಇಷ್ಟವಾಗುತ್ತಿತ್ತು . ಮೈಸೂರಿನಲ್ಲಿ ಬೆಳೆಯುತ್ತಿದ್ದಾಗ ನನ್ನ ತಂದೆ ಎಲ್ಲಾ ಕಡೆ ಕೈ ಹಿಡ್ಕೊಂಡು ನಡಿಸ್ಕೊಂಡು ಕರೆದುಕೊಂಡು ಹೋಗುತ್ತಿದ್ದರು . ಸ್ವಲ್ಪ ದೂರ ಇದ್ದರೆ ನಮ್ಮ ತಂದೆಯವರ ಬೈಸಿಕಲ್ ಮೇಲೆ ಡಬಲ್ ರೈಡ್ . ಒಂದು ದಿನವೂ ಈ ಜೀವಕ್ಕೆ "ಬೋರ್" ಅನ್ನೋದೇ ಆಗಿಲ್ಲ ....ನಿಜವಾಗಿ ಆಗಿಲ್ಲ . ಮನೆಯ ಹತ್ತಿರ ಎಲ್ಲಿ ಯಾರದ್ದು ಉಪನ್ಯಾಸ ಇದೆ ಅಂತ ನಿತ್ಯವೂ ದಿನಪತ್ರಿಕೆ ನೋಡುತ್ತಿದ್ದೆ.
ಕೆಲಸ ಮಾಡುವುದಕ್ಕೆ ಅಂತ ಬೆಂಗಳೂರಿಗೆ ಬಂದ ಮೇಲೆ ಬಂಡೆ ಕಲ್ಲುಗಳಿದ್ದ ತಂಪಾದ ಮರಗಳಿದ್ದ ಶುಭ್ರ ವಾತಾವರಣವಿದ್ದ ಜಾಗ ಬೆಂಗಳೂರಿನಲ್ಲಿ -ಬ್ಯೂಗಲ್ ರಾಕ್ ನನಗೆ ತುಂಬಾ ಇಷ್ಟವಾದ ಜಾಗ. ಹಾಗೆ ದಿನಪತ್ರಿಕೆ ಓದಿ ಆಚೆ ಎಲ್ಲಾ ಕಡೆ ನನ್ನ ಹೀರೋ ಹೋಂಡಾ ಸ್ಪ್ಲೆಂಡರ್ ಗಾಡಿ ತೆಗೆದುಕೊಂಡು ಓಡಾಡಿ ಆದ ಮೇಲೆ ಎಲ್ಲಾದ್ರೂ ಹೋಗಿ ಸುಮ್ಮನೆ ಕುಳಿತುಕೊಳ್ಳಬೇಕು ಅನ್ನಿಸುತಿತ್ತು. ದಟ್ಟವಾದ ಮರಗಳ ಮಧ್ಯೆ ಸುಮ್ಮನೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕೂರುತ್ತಿದ್ದೆ . ಡಿವಿಜಿ ಯವರು ಓಡಾಡುತ್ತಿದ್ದ ಜಾಗ . ಅಲ್ಲಿ ಅವರು ಬಂದು ಕೂರುತ್ತಿದ್ದ ಜಾಗ ಎಂದು ತುಂಬಾ ಜನ ಹಿರಿಯರು ತಿಳಿಸುತ್ತಿದ್ದರು. ಆ ಜಾಗ ಅವರಿಗೂ ಹೆಚ್ಚು ಸಂತೋಷವಾಗುತ್ತಿತ್ತಂತೆ. ಜಾಗದ ಮಹತ್ವ ಅಂತ ಒಂದು ಇದ್ದೇ ಇರುತ್ತೆ ಅಂತ ಆಗ ನನ್ನ ಅನುಭವಕ್ಕೆ ಬರಲಾರಂಭಿಸಿತು.
ಕೇವಲ ಕರೆ ಸ್ವೀಕರಿಸುವುದಕ್ಕೆ ನನ್ನ ಬಳಿ ಆಗ ನೋಕಿಯಾ ಫೋನ್ ಇತ್ತು . ಹಾಗಾಗಿ ಯಾವಾಗಲೂ ಫೋನ್ ನೋಡುವ ದುರಭ್ಯಾಸ ಇರಲಿಲ್ಲ . ಡಿವಿಜಿಯವರ ಗುಂಗಿನಲ್ಲೇ ಇರ್ಬೇಕಾದ್ರೆ ನನಗೆ ಸಿಕ್ಕೇ ಬಿಡ್ತು ನೋಡಿ ನನ್ನ ಎದುರು ಸಿಕ್ಕೇ ಬಿಡ್ತು . ಅದೇ ಮಂಕುತಿಮ್ಮನ ಕಗ್ಗ ಯಜ್ಞ .
ಚಿನ್ಮಯ ಮಿಷನ್ ನ ಸ್ವಾಮೀ ಬ್ರಹ್ಮಾಜಿಯವರ ಪ್ರವಚನಕ್ಕೆ ಹೋದೆ . ಅಲ್ಲಿ ಕಲ್ತಿದ್ದು ಇಡೀ ಜೀವನ ಸಾಗಿಸುವಷ್ಟು ಅಪಾರವಾದ ಜ್ಞಾನ . ನಂತರ ಜ್ಞಾನ ಬಿಕ್ಷುಕನಾಗ್ಬಿಟ್ಟೆ .ಮನಸ್ಸಿಗೆ ಗೊತ್ತಾಗ್ತಾ ಇತ್ತು ಬಹಳ ನೆಮ್ಮದಿ ಇದೆ ಅನ್ನಿಸುವುದಕ್ಕೆ ಶುರು ಆಗ್ತಿತ್ತು. ಅದನ್ನ ಹಿಡ್ಕೊಂಡು ನಾನೇ ಇನ್ನಷ್ಟು ಆಳವಾಗಿ ಅಧ್ಯಯನ ಮಾಡಬೇಕು ಅನ್ನಿಸುವಷ್ಟು ನೆಮ್ಮದಿ ಸಂತೋಷ ಸಮಯ ಕಳೆಯುವುದಕ್ಕೆ ಯೋಜನಾ ಮಾರ್ಗಗಳು . ಎಲ್ಲವೂ ಒಟ್ಟೊಟ್ಟಿಗೆ ಸಿಕ್ಕಂತಾ ಅನುಭವಗಳು ಕೊಡುವ ಸಂತೋಷ ಬಲ್ಲವರಿಗಷ್ಟೇ ಗೊತ್ತು .
ಯಾಕೆ ಇದೆಲ್ಲಾ ವಿಷ್ಯ ಹೇಳ್ತಾ ಇದ್ದೀನಿ ಅಂದ್ರೆ ಮನೆನಲ್ಲಿ ೧೫ ದಿನಗಳಷ್ಟು ಕಾಲ ಬೆಳಗಿಂತ ರಾತ್ರಿಯ ತನಕ ಇದ್ದಿದ್ದು ನನ್ನ ಜೀವನದಲ್ಲಿ ಇದೇ ಮೊದಲು . ನಮ್ಮ ತಂದೆ ಯಾವಾಗ್ಲೂ ಒಂದು ಮಾತು ಹೇಳ್ತಿದ್ರು ಜೀವನದಲ್ಲಿ ಲೋಕ ಸುತ್ತು ಇಲ್ವಾ ಕುಳಿತುಕೊಂಡು ಕೋಶ ಓದು . ಇವರೆಡರಲ್ಲಿ ಒಂದು ಚೆನ್ನಾಗಿ ಮಾಡಿದವರಿಗೆ ಮೈಕ್ ನೀಡುತ್ತಾರೆ . ಅವರ ಮಾತುಗಳನ್ನು ಕೇಳೋಣ ನಡಿ ಎಂದು ಹೇಳುತ್ತಿದ್ದರು - ಅವರೆಡರಿಂದ ಮಾತ್ರ ಬರೋದು ಜ್ಞಾನ ಅಂತ . ನನಗೋ ಎರಡೂ ಇಷ್ಟ ಅಂತ ನಮ್ಮ ತಂದೆಗೆ ತಟ್ ಅಂತ ಆಗ್ಲೇ ಹೇಳ್ಬಿಟ್ಟೆ .
ಕೆನ್ನೆ ಸವರಿದ್ರು .
ಕೆನ್ನೆ ಸವರಿದ್ರು .
ಇನ್ನೊಂದು ತಿಂಗಳೇನು ಜೀವನ ಪರ್ಯಂತ ಮನೇನಲ್ಲೇ ಕೂತ್ಕೊಂಡಿರು ಅಂದ್ರು ಕೂರಬಲ್ಲೆ . ಜೀವನದಲ್ಲಿ ಓದೋದಕ್ಕೆ ತಿಳ್ಕೊಳೋದಕ್ಕೆ ಮನೆಯೇ ಸಾಕು . ಪುಸ್ತಕ ಇದೆ ಟಿವಿ ಇದೆ ಬೇಕು ಅಂದ್ರೆ ಗಂಟೆ ಗಟ್ಟಲೆ ಸ್ನೇಹಿತರ ಹತ್ತಿರ ಮಾತಾಡಬೋದು ಕೂಡ .
ಮನೆಯಲ್ಲಿ ಇರೋದೇ ಎಷ್ಟು ಚೆನ್ನಾಗಿರುತ್ತೆ ಅನ್ನಿಸೋಕ್ಕೆ ಶುರು ಆಗೋಗಿದೆ . ಅಭ್ಯಾಸಗಳಿಗೆ ಉತ್ತೇಜನ ಕೊಡುವುದಕ್ಕೆ ಮನೆಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ ಅನ್ನಿಸಲು ಶುರುವಾಗಿದೆ
No comments:
Post a Comment