ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Saturday, May 16, 2020
ಸತ್ಯದೃಷ್ಟಿ
ನಸುಗತ್ತಲೆಯ ಮರೆತು ಬಾಹ್ಯ ಕಣ್ಣುಗಳು
ಹಗ್ಗವನ್ನೇ ಹಾವೆಂದು ತಿಳಿಯುವ ಹಾಗೆ
ಪದೇ ಪದೇ ಮಂಕಾಗುವ ಬುದ್ದಿ
ಪೂರ್ವನಿರ್ಧಿತ ಆಲೋಚನೆಗೆ ಸಿಲುಕಿದ ಹಾಗೆ
ಅರಿವೆಂಬ ಜ್ಯೋತಿ ಇಹುದೆಂದು ತಿಳಿಯಿತು
ಗುರುವಿನನುಗ್ರಹ ದೊರಕಲು ನಮಗೆ
No comments:
Post a Comment