Friday, December 7, 2018

ಬೃಹತ್ತಾಗಿ ಬೆಳೆದಿರುವ ಬೆಂಗಳೂರು


ಬೆಂಗಳೂರಿನಲ್ಲಿ ಈಗ ಎಲ್ಲಿಂದ ಎಲ್ಲಿಗೆ ಹೋಗುವುದಕ್ಕೂ ಅನುಕೂಲ ಜಾಸ್ತಿಯಾಗಿದೆ . ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ನನ್ನ ಫ್ಲೈಟ್ ರಾತ್ರಿ ೧೨:೪೦ ಕ್ಕೆ ಬಂದಿಳಿಯಿತು , ೧:೦೧ ಕ್ಕೆ ಆಚೆ ಬಂದೆ. ನನಗೆ ಮುಂಚೆಯಿಂದಲೂ ಬೆಂಗಳೂರಿನಲ್ಲಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ಇಷ್ಟ . ರಾತ್ರಿ ೧:೦೧ ಕ್ಕೆ ಬಸ್ ತುಂಬಾ ಜನ ಅದರಲ್ಲೂ ನಿಂತು ಪ್ರಯಾಣಿಸುತ್ತಿದ್ದರು .ಅಷ್ಟು ರಾತ್ರಿಯಲ್ಲಿ ೧೫ ರಿಂದ ೨೦ ಬಸ್ ಗಳು ನಿಂತಿತ್ತು .ಬಿ ಎಂ ಟಿ ಸಿ ಬಸ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ . ಎಲ್ಲಾ ಬಸ್ ಗಳು ತುಂಬಿತ್ತು . ಏರ್ಪೋರ್ಟ್ ಆಚೆ ಎಲ್ಲಾ ಕಡೆ ಕಣ್ಣು ಹಾಯಿಸಿದೆ . ಕೃಷ್ಣರಾಜ ಮಾರುಕಟ್ಟೆಯಲ್ಲಿ ಎಷ್ಟು ಜನರಿರುತ್ತಾರೋ ಅಷ್ಟೇ ಜನರು ಇವತ್ತು ಏರ್ಪೋರ್ಟ್ ನಲ್ಲಿ ಸಿಕ್ತಾರೆ , ಎರಡರಲ್ಲೂ ಅಷ್ಟು ಜನರು . ಒಂದು ಕಾಲ ಇತ್ತು , ಆಕಾಶದಲ್ಲಿ ಪ್ರಯಾಣ ಮಾಡುವವರ ಭಾರತೀಯರ ಸಂಖ್ಯೆ ತುಂಬಾ ಕಡಿಮೆ ಇತ್ತು . ಆದರೆ ಇವತ್ತಿನ ಭಾರತ ಸಂಪೂರ್ಣ ಬದಲಾಗಿದೆ , ಮಧ್ಯಮ ವರ್ಗದ ಜನರೂ ಕೂಡ ಫ್ಲೈಟ್ ಹತ್ತಿ ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗುತ್ತಿದ್ದಾರೆ . ದೇಶದೊಳಗಂತೂ ಪ್ರತಿ ಫ್ಲೈಟ್ ತುಂಬಿರುತ್ತೆ . ಡೊಮೆಸ್ಟಿಕ್ ಚೆಕ್ ಇನ್ ನೋಡಿದರೆ ತಿಳಿಯುತ್ತೆ , ಅಮೇರಿಕಾ ದೇಶದಲ್ಲೂ ಹೀಗೆಯೇ. ಯಾವಾಗ ದೇಶದ ಮಧ್ಯಮವರ್ಗದ ಜನರಿಗೆ ಮನೆ ಕಾರ್ ಮತ್ತು ಫ್ಲೈಟ್ ಎಟುಕಿಸುತ್ತೋ , ದೇಶದ ಪ್ರಗತಿ ಖಂಡಿತಾ ಸಾಧ್ಯ. ಇದಂತೂ ತುಂಬಾ ಒಳ್ಳೆಯ ವಿಷಯ. ಇಷ್ಟೊಂದು ಜನಸಂಖ್ಯೆ ಇರುವ ರಾಷ್ಟ್ರ ಈ ರೀತಿ ಬೆಳೆದರೆ ಮಾತ್ರ ಪ್ರಪಂಚದ ಎಲ್ಲಾ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಬಸ್ ಏರುವಾಗ ಈ ರೀತಿ ಭಾವನೆಗಳು ವಿಷಯಗಳೆಲ್ಲವೂ ನನ್ನಲ್ಲಿ ಹರಿಯುತ್ತಿತ್ತು . ಈ ಆಲೋಚನೆಗಳೊಂದಿಗೆ ಸೀದಾ ಬನಶಂಕರಿಗೆ ಹತ್ತಿದೆ , ಬಸ್ ಅಲ್ಲಿ ನನ್ನ ಪಕ್ಕ ಇದ್ದವರನ್ನು ಪರಿಚಯ ಮಾಡ್ಕೊಂಡೆ , ಮಾತನಾಡತೊಡಗಿದೆ ಅವರು ಕೂಡ ಪುಣೆ ಇಂದ ಬಂದಿಳಿದ ಕನ್ನಡಿಗರು . ಯಾವಾಗ ಅಮೆರಿಕಕ್ಕೆ ಹೋದ್ರಿ ಅಲ್ಲಿಂದ ವಿಷಯ ಶುರು ಆಯಿತು. 
ಈಗ ಕಳೆದ ೧೨ ವರ್ಷದಿಂದ ಅಮೇರಿಕಕ್ಕೆ ಹೋಗಿದ್ದು . ಓದು ಮುಗಿದ ಮೇಲೆ ೧೦ ವರ್ಷಗಳ ಕಾಲ ನಮ್ಮ ಬೆಂಗಳೂರಿನಲ್ಲಿ ಇದ್ದೆ. ಆ ಕಾಲಕ್ಕೂ ಈ ಕಾಲಕ್ಕೂ ಜನರು ೪೦ ಲಕ್ಷದಿಂದ ೧.೨ ಕೋಟಿಯಷ್ಟು ಬೆಂಗಳೂರಿನಲ್ಲಿ ಏರಿದೆ . ಅಷ್ಟೊಂದು ಜನರು ರಸ್ತೆಯಲ್ಲಿ ಓಡಾಡಬೇಕು ಎಂದರೆ ಟ್ರಾಫಿಕ್ ಇದ್ದೆ ಇರುತ್ತೆ . ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯಾದಲ್ಲಿ ಕೂಡ ಇರುವ ಜನರಿಗೆ ರಸ್ತೆಯಲ್ಲಿ ಟ್ರಾಫಿಕ್ ತುಂಬಾ ಇರುತ್ತದೆ . ವ್ಯತ್ಯಾಸ ಏನೆಂದರೆ ಅಲ್ಲಿ ಒಬ್ಬರ ಹಿಂದೆ ಇನ್ನೊಬ್ಬರು ನಿಂತಿರುತ್ತಾರೆ , ಲೇನ್ ಸಿಸ್ಟಮ್ ಪಾಲನೆ ಮಾಡುತ್ತಾರೆ , ಇಲ್ಲಿ ಅಷ್ಟಿಲ್ಲ ಅನ್ನೋದು ಬಿಟ್ರೆ ನನಗೆ ಅಷ್ಟೊಂದು ವ್ಯತ್ಯಾಸ ಬೇರೆ ಕಾಣುವುದಿಲ್ಲ . ನನಗೆ ೮ ಮೈಲಿ ಪ್ರಯಾಣ ಮಾಡಕ್ಕೆ ಅಲ್ಲಿ ಕೂಡ ೪೫ ನಿಮಷ ತೆಕೊಳುತ್ತೆ . ಅವರ ಹತ್ತಿರ ದಾರಿಯುದ್ದಕ್ಕೊ ಅವರ ಹತ್ತಿರ ಈ ವಿಷಯಗಳೆಲ್ಲವನ್ನೂ ಮಾತಾಡ್ಕೊಂಡು ಬನಶಂಕರಿ ಬಂದಿದ್ದೆ ಗೊತ್ತಾಗ್ಲಿಲ್ಲ ಬಂದಿಳಿದಾಗ ೨:೪೫ ಬೆಳಗಿನ ಜಾವ . ಆಟೋದವರು ಅಂದ್ರೆ ನನಗೆ ತುಂಬಾ ಅಭಿಮಾನ ಕಾರಣ ಹಿಂದೊಮ್ಮೆ ಸಿಲ್ಕ್ ಬೋರ್ಡ್ ಜಂಕ್ಷನ್ ಅಲ್ಲಿ ಆಕ್ಸಿಡೆಂಟ್ ಬೈಕ್ ಹಿಂದಿನ ಚಕ್ರಕ್ಕೆ ಕಾಲು ಇಕ್ಕಿಹಾಕೊಂಡು ಕಾಲು ಮೂಳೆ ಮುರಿದಿತ್ತು . ಆ ಘಟನೆಯಾದ ಸ್ಥಳಕ್ಕೆ ಆಟೋದವರು ನಿಲ್ಲಿಸಿ ನನ್ನನ್ನು ಬಿ ಟಿ ಎಂ ನ ಆಸ್ಪತ್ರೆಗೆ ಸೇರಿಸಿದ್ದರು. ಮನೆಗೆ ಆಟೋ ಹತ್ಕೊಂಡೆ , ಆಟೋದವರ ಹತ್ರ ಮಾತಾಡ್ಕೊಂಡು ಮನೆಗೆ ಬಂದೆ . 
ಇವತ್ತಿನ ದಿವಸ ಬೃಹತ್ತಾಗಿ ಬೆಳೆದು ನಿಂತಿರುವ ಬೆಂಗಳೂರಿನಲ್ಲಿ ನಮ್ಮ ಕಂಪೋರ್ಟ್ಗಿಂತ ಹೆಚ್ಚು ಸಮಯ ಉಳಿಸುವುದು ಮುಖ್ಯ. ಅದಕ್ಕೆ ಸ್ವಲ್ಪ ನಾವು ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು ಮುಖ್ಯ ಅನ್ನಿಸುತ್ತದೆ .ಸಮಯ ಉಳಿಸುವುದಕ್ಕೆ ಮೆಟ್ರೋ ರೈಲ್ ಪ್ರಯಾಣವಂತೂ ತುಂಬಾ ಒಳ್ಳೆಯದು. ಮೊನ್ನೆ ಹೀಗೆ ನನ್ನ ಹೆಂಡತಿಯ ನೃತ್ಯ ಪ್ರದರ್ಶನ ದೂರದರ್ಶನ ಚಂದನ ವಾಹಿನಿಯವರ ಕಾರ್ಯಕ್ರಮ ರಾತ್ರಿ ೯:೩೦ ಗೆ ಮುಗಿಯಿತು . ಅರ್ಧ ಕಿಲೋಮೀಟರ್ ನಡೆದರೆ ಸಾಕು ಸೆಂಟ್ರಲ್ ಕಾಲೇಜು ಟ್ರೈನ್ ನಿಲ್ದಾಣ ಇದೆ . ಅಲ್ಲಿ ಹತ್ತಿಕೊಂಡು ಬೆಂಗಳೂರು ದಕ್ಷಿಣ ಭಾಗಕ್ಕೆ ಮೆಟ್ರೋ ಏರಿ ಬಂದೆವು . ರಾತ್ರಿ ೧೦:೨೦ ಕ್ಕೆ ಎಲಚೇನಹಳ್ಳಿ ತಲುಪಿದರೆ ಆಟೋ ರಿಕ್ಷಾಗಳು ತುಂಬಾ ಸಿಗುತ್ತದೆ ಮತ್ತು ಬಸ್ ಕೂಡ ಅಷ್ಟು ರಾತ್ರಿಯಲ್ಲಿ ಸಿಗುತ್ತದೆ . ಒಂದಂತೂ ನಿಜ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ಹೋಗಲಿಕ್ಕೆ ಮೆಟ್ರೋ , ಬಸ್ , ಆಟೋ ರಿಕ್ಷಾ ಮತ್ತು ಕ್ಯಾಬ್ ( ಉಬರ್ ಅಥವಾ ಓಲಾ ) ವ್ಯವಸ್ಥೆ ಹೆಚ್ಚು ಹೆಚ್ಚು ಆಗಿದೆ . ಜನ ಜಂಗುಳಿ ವಿಪರೀತ ಯಾಕೆಂದರೆ ತುಂಬಾ ಅವಕಾಶ ಹಿಂದೆಂಗಿಂತಲೂ ಬೆಂಗಳೂರಿನಲ್ಲಿ ಈಗ ಅತಿ ಹೆಚ್ಚು . ನಾನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ರಾಜ್ಯದ ಜನರನ್ನು ಬೆಂಗಳೂರಿನಲ್ಲಿ ಮಾತನಾಡಿಸಿದ್ದೇನೆ . 
ಇಷ್ಟೊಂದು ರಾಜ್ಯದ ಜನರು ಬೆಂಗಳೂರಿಗೆ ಬರುತ್ತಾರೆ ಎಂದು ನನಗಂತೂ ೮೦ ರ ದಶಕದಲ್ಲಿ ತಿಳಿದಿರಲಿಲ್ಲ . ಅವರೆಲ್ಲರಿಗೂ ಬೆಂಗಳೂರು ತುಂಬಾ ಇಷ್ಟ ಅನ್ನೋ ಮಾಹಿತಿ ಅವರನ್ನು ಮಾತನಾಡಿಸಿದ ಮೇಲೆ ತಿಳಿಯಿತು . ಹವಾಮಾನ ಬೆಂಗಳೂರಿನದು ತುಂಬಾ ಚೆನ್ನಾಗಿದೆ . ನಮ್ಮ ಮೈಸೂರಿಗಿಂತಲೂ ಒಂದು ಪಟ್ಟು ಚೆನ್ನಾಗಿದೆ. ಜನ ತುಂಬಾ ಇರೋ ಕಡೆ ಕಸ ಮಾಲಿನ್ಯ ಇದ್ದಿದ್ದೇ ಆದ್ದರಿಂದ ನಮ್ಮ ಬೆಂಗಳೂರನ್ನು ಇನ್ನೂ ಸುಂದರವಾಗಿ ಕಾಪಾಡಿಕೊಳ್ಳಲು ಸರ್ಕಾರದ ಎಲ್ಲಾ ಕೆಲ್ಸಗಳ ಜೊತೆಗೆ ಜನಸಾಮಾನ್ಯರು ಕೈ ಜೋಡಿಸುವ ಅಗತ್ಯ ಇದೆ . ಜನರು ಸ್ವತ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಸ್ವತ್ಛ ಭಾರತ ಅಭಿಯಾನ ಇನ್ನಿಪ್ಪತ್ತು ವರ್ಷದಲ್ಲಿ ಒಳ್ಳೆಯ ಕೆಲ್ಸಗಳೊಂದಿಗೆ ಹೆಚ್ಚಿನ ಪುಷ್ಟಿ ಪಡೆದುಕೊಳ್ಳುವುದರ ಮೂಲಕ ಸರ್ಕಾರದ ಅತ್ಯುತ್ತಮ ಅಭಿಯಾನ ಅನ್ನಿಸಿತು . ನಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಿದರೆ ಬದಲಾವಣೆ ನಿಧಾನ ಗತಿಯಲ್ಲಾದರೂ ಸರಿ ಆಗೇ ಆಗುತ್ತದೆ ಅನ್ನಿಸುವುದಕ್ಕೆ ಶುರುವಾಗಿದೆ .
ಒಂದು ಕೋಟಿ ಜನರು ವಾಸಿಸುವ ಈ ಮಹಾನ್ ನಗರದಲ್ಲಿ ಮೆಟ್ರೋ ಸೌಲಭ್ಯವಂತು ಜನರಿಗೆ ವಿಪರೀತ ಸುಲಭ ಮಾಡಿಕೊಟ್ಟಿದೆ . ನನ್ನ ಮಗನಿಗೆ ಮೆಟ್ರೋ ಪ್ರಯಾಣ , ಬಸ್ ನಲ್ಲಿ ಹತ್ತಿ ಪ್ರಯಾಣ ಮಾಡೋದು ದೊಡ್ಡ ಮಗನಿಗೆ ೧ ತಿಂಗಳು ಜೊತೆ ಜೊತೆ ಹೋಗಿ ಹೇಳಿಕೊಟ್ಟೆ . ಇವತ್ತಿಗೆ ಅವನು ಒಗ್ಗಿ ಕೊಳ್ಳುತ್ತಿದ್ದಾನೆ . ಒಬ್ಬನೇ ಮೆಟ್ರೋ ಹತ್ತಿಕೊಂಡು ಬಸ್ ಹತ್ತಿಕೊಂಡು ಹೋಗುತ್ತಾನೆ . ಲೋಕಲ್ ಜನರ ಆಡು ಭಾಷೆಗಳು ಎಲ್ಲಾ ಅರ್ಥವಾಗುತ್ತೆ , ಅವರ ಜೊತೆ ಬೆರೆತು ಮಾತನಾಡುತ್ತಾನೆ . ಎರಡನೇಯವನಿಗಂತೂ ಕಾಲೋನಿ ಜನರೆಲ್ಲರೂ ಪರಿಚಯ . ಮಕ್ಕಳಿರುವ ಮನೆಗೆಲ್ಲ ಬೆಲ್ ಮಾಡಿ ಹೋಗುತ್ತಾನೆ .
ಎಲ್ಲಾ ರೀತಿಯ ಜನರು ಮೆಟ್ರೋ ಪ್ರಯಾಣ ಮಾಡುತ್ತಾರೆ , ಅವರನ್ನೆಲ್ಲ ನೋಡಿ ಅವರ ಜೀವನ ಶೈಲಿ ಎಲ್ಲವನ್ನು ನೋಡಿ ನಮ್ಮ ಜೀವನ ಎಷ್ಟು ಚೆನ್ನಾಗಿ ನಡೀತಿದೆ ಅನ್ನೋ ಮನೋಭಾವನೆ ಕೂಡ ಬಂದೇ ಬರುತ್ತದೆ . ಒಂದು ಕೋಟಿ ಕೇವಲ ಬೆಂಗಳೂರಿನಲ್ಲೇ , ಇಡೀ ಭಾರತದಲ್ಲಿ ೧೨೮ ಕೋಟಿ ಜನರಿಗೆ ಅವರ ಅವಶ್ಯಕತೆಗಳಿಗೆ ಸ್ಪಂದಿಸಿ ಭಾರತ ಇನ್ನೂ ಇಷ್ಟು ಚೆನ್ನಾಗಿ ನಡೆಯುತ್ತಿರುವುದೇ ಬಹಳ ದೊಡ್ಡ ಸೌಭಾಗ್ಯ ಅನ್ನಿಸುತ್ತದೆ . ಅದೂ ಅಲ್ಲದೆ ಜಗತ್ತಿನ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಬಹು ವೇಗದಲ್ಲಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಕೂಡ ಇದೆ . ಇದೆಲ್ಲವನ್ನು ಮಕ್ಕಳಿಗೆ ತಿಳಿಸಿಕೊಟ್ಟೆ . ಅವರು ದೇಶವನ್ನು ದೇಶದ ಜನರನ್ನು ನೋಡುವ ದೃಷ್ಟಿಕೋನ ಎರಡು ವರ್ಷಗಳ ಹಿಂದೆಗಿಂತಲೂ ಇವತ್ತಿಗೆ ತುಂಬಾ ಬದಲಾಗಿದೆ . ನಾವು ನಮ್ಮದು ಎನ್ನುವ ಭಾವ ಅವರಲ್ಲಿ ಬೆಳೆಯುತ್ತಿರುವುದು ನೋಡಿ ಅವರ ಮಾತಿನಿಂದ ತಿಳಿಯುತ್ತದೆ. ಭಾರತವನ್ನು ಅರಿಯಬೇಕಾದರೆ ಭಾರತದ ಹೊರಗಡೆ ಕುಳಿತು ಸಾಧ್ಯವಿಲ್ಲ . ಭಾರತದಲ್ಲಿ ಬದುಕಿದರೆ ಮಾತ್ರ ಸಾಧ್ಯ.

https://www.facebook.com/photo.php?fbid=10217986272066789&set=a.10208158870787899&type=3&theater

No comments:

Post a Comment