Sunday, October 13, 2019

ಯಾವುದು ಶಿಕ್ಷಣ ?


ಜೀವನದ ಕಷ್ಟ ನಷ್ಟ ನೋವು ಬೇನೆ ಶಿಕ್ಷೆಯಾಗದೆ
ಶುದ್ಧ ಜ್ಞಾನದ ಶಿಕ್ಷಣ ನನಗಾಗುವುದೇ ?

ಹೊರಗಿನ ವಸ್ತುಗಳಲ್ಲಿ ಶಾಂತಿಯಿದೆ ಎಂದು ತಿಳಿದಿದೆ
ಅವನಿಗೆ ಶರಣಾಗದೆ ಬುದ್ದಿಯ ಭ್ರಾಂತಿ ಹೋಗುವುದೇ ?

ನೊಂದು ಬೆಂದು ಕೆಸರಿನ ಕಮಲದ ಹಾಗೆ ಮೀಯದೆ
ನನ್ನೊಳಗೆ ಅವನಿರುವಿಕೆಯ ಅರಿವಾಗುವುದೇ ?  
-ಸುಬ್ಬು ಪದ್ಮನಾಭ    

No comments:

Post a Comment