ಮನುಷ್ಯನಿಗೆ ಕಷ್ಟ ಬರುವುದು ನಮ್ಮ ಕಲಿಕೆಗಾಗಿ ಮಾತ್ರ . ಅದರಿಂದ ಕಲಿತು ನಮ್ಮೊಳಗೇ ಸರ್ವಶ್ರೇಷ್ಠನಾಗಿ ಬೆಳೆಯುವುದಕ್ಕೆ . ಸ್ವತ: ಶ್ರೀ ರಾಮಚಂದ್ರನೇ ೧೪ ವರ್ಷ ಕಾಡಿಗೆ ಹೋದ , ಹೆಂಡತಿ ಮಕ್ಕಳೂ ಬೇರೆ ಬೇರೆ ಕಡೆ . ವಾಪಸ್ ಬಂದ ಮೇಲೂ ರಾಜ್ಯಭಾರ ಮಾಡ್ಲೆ ಇಲ್ಲ . ಶಿವನನ್ನು ವರಿಸ್ಕೊಂಡಿದ್ದ ರಾವಣನ ಕೊಂದೆ ಎಂಬ ಪಾಪಪ್ರಜ್ಞೆಗೆ ತಪಸ್ಸು ಮಾಡಲು ಹೊರಟಿದ್ದ . ಇದು ನರ ಜನ್ಮಕ್ಕೆ "ಕಷ್ಟ " ಮೀಸಲು ಎಂದು ಹೇಳಿಕೊಟ್ಟ ಪಾಠ ನಮ್ಮ ಗುರುಗಳು ಹೇಳಿಕೊಟ್ಟಿದ್ದಾರೆ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ನಮ್ಮ ಮೇಲೆ ನಾವೇ ಮರುಕಬಾರದು , ಅಯ್ಯೋ ಯಾಕೆ ಹೀಗಾಯ್ತು ಅಂತ ಕಂಗಾಲು ಆಗಲೇಬಾರದು . ನಮ್ಮ ಎಲ್ಲಾ ಸ್ಥಿತಿಗಳಿಗೆ ನಮ್ಮ ಬುದ್ದಿಯ ನಿರ್ಧಾರವೇ ಕಾರಣ . ದೇವರು ಎಂಬ ಶಕ್ತಿಯನ್ನು ನಾವು ಒಲಿಸಿಕೊಳ್ಳಲು ನಿತ್ಯ ಸಾಧನೆ ಮಾಡಬೇಕು. ನಿತ್ಯ ಧ್ಯಾನವೋ ಭಜನೆಯೋ ಮಂತ್ರವೋ ಯೋಗವೋ ಹೀಗೆ ಮಾಡಿಕೊಂಡು ಮನಸ್ಸು ಶುದ್ಧವಾಗುತ್ತ ನಿರ್ಮಲ ಮನಸ್ಥಿತಿಗೆ ಬರುತ್ತಿದ್ದರೆ ಸಾಧಕ ಸಾಧನೆಯ ಹಾದಿಯನ್ನು ಬಹಳ ಚೆನ್ನಾಗಿ ಹಿಡಿದಿದ್ದಾನೆ ಎಂದರ್ಥ . ಇಲ್ಲವಾದರೆ ಹೊರಗಡೆಯಿಂದ ನನ್ನ ಮನಸ್ಸನ್ನು ಕದಡುತ್ತಿರುವ ಎಲ್ಲಾ ಸಾಧನವನ್ನು ನಿರ್ಧಾಕ್ಷಿಣ್ಯವಾಗಿ ಕಿತ್ತು ಹಾಕಿ ಎಂದರು ಮತ್ತೆ ಮತ್ತೆ ಪ್ರಯತ್ನಿಸಿ ಬಿಡಬೇಡಿ ಯಾಕೇಂದರೆ ಅಷ್ಟರಲ್ಲೇ ನಿಮ್ಮ ಬುದ್ದಿ ನಿಮಗೆ ಬಿಟ್ಟುಬಿಡು ಅಂತ ಹೇಳ್ತಿರುತ್ತೆ , ಅದರ ಮಾತು ಕೇಳ್ಬೇಡಿ ಸಾಧನೆ ಮುಂದುವರಿಸಿಕೊಂಡು ಹೋಗುವುದಕ್ಕೆ ಹುಮ್ಮಸ್ಸು ತಂದುಕೊಳ್ಳಿ . ಅದರ ಕುರಿತಾದ ವಿಡಿಯೋಗಳು ನೋಡಿ ಆದರೆ ಬಿಡಬೇಡಿ. ಈಗ ಐದುವರೆ ವರ್ಷ ಆಯಿತು ನಿತ್ಯ ೨ ಗಂಟೆ ಧ್ಯಾನ ಮಂತ್ರ ಜಪ ನನ್ನ ಬದುಕಿಗೆ ಬಂದಿದೆ . ವಿಷ್ಣು ಸಹಸ್ರನಾಮ ಲಲಿತಾ ಸಹಸ್ರನಾಮ , ವೇದ ಮಂತ್ರಗಳು ಇದ್ದರೆ ಊಟ ತಿಂಡಿಯ ಕಡೆ ಗಮನವೇ ಇರುವುದಿಲ್ಲ ಹಾಗೆ ನನ್ನ ಸಾಧನೆ ನಡೆಯುತ್ತಿದೆ . ಮನಸ್ಸು ತುಂಬಾ ನಿರ್ಮಲವಾಗಿದೆ ಎಂದು ಹೇಳುವುದಕ್ಕೆ ಹೇಳಿದೆ . ಇದಕ್ಕೆಂದೇ ಕುವೆಂಪುರವರು ಬರೆದಿದ್ದು ಹಿಂದೆ ಗುರು ಇರ್ಬೇಕು ಮುಂದೆ ಗುರಿ ಇರ್ಬೇಕು ಅಂತ🙏
No comments:
Post a Comment