Thursday, April 30, 2020

ಮುಕ್ತಿ - ಮೋಕ್ಷ

ಮುಕ್ತಿ - ಮೋಕ್ಷ
----------------
ಸತ್ವ ರಜಸ್ ತಮಸ್ಸನ್ನು 
ಮೀರಿದ ಚೇತನ ನೀನೆಯಾ 

ಮಾಯೆ ಎಂಬ ಭ್ರಮೆಗೆ ಸಿಕ್ಕಿ
ಸ್ವ  ಸ್ವಭಾವವ ಮರೆತೆಯಾ

ದೇಹ ಮುಖ್ಯ ಅದೇ ಕೃತ್ಯ
ಬುದ್ದಿ ಮರ್ಮ ತಿಳಿದೆಯಾ

ಶ್ರದ್ದೆ ಭಕ್ತಿ ಅಂತರಾಳ ಹೊಕ್ಕಿ
ಚಿತ್ತ ಶುದ್ಧ ಮಾಡುವೆಯಾ

ವೇದ ವಿದ್ಯೆ ಜ್ಞಾನ ಪಡೆದು
ವೇದಾಂತಿಯಾಗಿ ಬಿಡುವೆಯಾ           

ದೇಹ ಬಿಟ್ಟು ಬಿಡುವ ತನಕ
ಧ್ಯಾನಾಸಕ್ತ ಆಗುವೆಯಾ 

ಗುರುಗಳ ಕೃಪೆಗೆ ಮೊರೆ ಹೊಕ್ಕಿ 
ಆದಿಗುರು ಅನುಗ್ರಹ ಪಡೆವೆಯಾ

ಸತ್ವ ರಜಸ್ ತಮಸ್ಸನ್ನು 
ಮೀರಿದ ಚೇತನ ನೀನೆಯಾ

-ಸುಬ್ರಹ್ಮಣ್ಯ ಪದ್ಮನಾಭ
ಏಪ್ರಿಲ್ ೩೦ , ೨೦೨೦



No comments:

Post a Comment