Friday, September 14, 2018

ನವೀನ ಸಜ್ಜು ಜೊತೆ ಒಂದು ಸುಂದರ ಸಂಜೆ


ನವೀನ ಸಜ್ಜು ಜೊತೆ ಒಂದು ಸುಂದರ ಸಂಜೆ 
-----------------------------------
ಬದುಕಿರೋವರಗೆ ನಾಲ್ಕು ಜನಕ್ಕೆ ಉಪಯೋಗವಾಗಿ ಇರುವುದೇ ಜೀವನ . ಇಂಥ ಸಾಹಿತ್ಯ ಸಂಗೀತ ಯಾವತ್ತೂ ಮರೀಬಾರದು. ಇಂಥ ಸುಂದರವಾದ ಹಾಡುಗಳನ್ನು ತೆಗೆದುಕೊಂಡು ಹಾಡಿದ್ದಾರೆ ಅಂದರೆ ಇಂತ ಸಾಹಿತ್ಯಕ್ಕೆ ಇನ್ನೂ ತುಂಬಾ ಬೆಲೆ ಎಂದೇ ಅರ್ಥ . ಇದಕ್ಕೆ ಅಂತಾನೆ ನಾನು ನವೀನ ಸಜ್ಜುರವರಿಗೆ ವಿಶೇಷವಾಗಿ ಅಭಿನಂದಿಸುತ್ತೇನೆ. ಇದು ನನ್ನ ಅಚ್ಚುಮೆಚ್ಚಿನ ಸಾಹಿತ್ಯ ಸಂಗೀತ ನವೀನ ಅವರ ಧ್ವನಿಯಲ್ಲಿ ಕೇಳಿ ಬಹಳ ಸಂತೋಷ ಆಯಿತು . ಹಾಡು ಮುಗಿಯುದರೊಳಗೆ ಕಣ್ಣಂಚಿನಲ್ಲಿ ನೀರು ಚೆಲ್ಲಿತ್ತು .
ನವೀನ ಸರ್ , ನಿಮ್ಮನ್ನು ಮಾತಾಡಿಸಿ ತುಂಬಾ ಸಂತೋಷ ಆಯಿತು . ನಿಮ್ಮ ಈ ಹಾಡಿನಲ್ಲಿ ಸ್ವಲ್ಪ ಕುನಾಲ್ ಗಾಂಜಾವಾಲಾ ಟಚ್ ಇದೆ , ಇಷ್ಟ ಆಯಿತು . ಬೇಕಾಗಿರೋ ಭಾವನೆ ತುಂಬಾ ಚೆನ್ನಾಗಿ ಕೊಟ್ಟಿದೀರ. ನಿಮ್ಮನ್ನ ಲೈವ್ ಕೇಳೋಕ್ಕೆ ಸಕತ್ ಮಜ ಇದೆ . ಮತ್ತೆ ಮತ್ತೆ ಬನ್ನಿ ಅಮೆರಿಕಕ್ಕೆ , ಮಾತಾಡೋಣ ಸದ್ಯದಲ್ಲೇ . ನೀವು ಅಪ್ಪಟ ಕನ್ನಡದ ಅದ್ಭುತ ಪ್ರತಿಭೆ. ನಿಮ್ಮ ಆಸೆ ಆಕಾಂಕ್ಷೆಗಳೆಲ್ಲವೂ ಪೂರೈಸಲಿ. ಪವನ್ ಕುಮಾರ್ ಗೆ ಮೊದಲು ಧನ್ಯವಾದಗಳು , ನಿಮ್ಮನ್ನು ಸಿನಿಮಾಕ್ಕೆ ತಂದು ಒಳ್ಳೆ ಕೆಲಸ ಮಾಡಿದರೆ ಸರ್ .ಶುಭವಾಗಲಿ

https://www.facebook.com/subbu.padmanabh/videos/10217409972099650/

No comments:

Post a Comment