Friday, September 14, 2018

ರವಿಚಂದ್ರನ್ ರವರ ಈ ಸುಮಧುರ "ಯಾರೇ ನೀನು ರೋಜಾ ಹೂವೆ " ಗೀತೆ ಕಡೆಯದಾಗಿತ್ತು

ರವಿಚಂದ್ರನ್ ರವರ ಈ ಸುಮಧುರ "ಯಾರೇ ನೀನು ರೋಜಾ ಹೂವೆ " ಗೀತೆ ಕಡೆಯದಾಗಿತ್ತು 
---------------------------------------------
ಅಕ್ಕ - ೨೦೧೮ - ಹತ್ತನೇ ಕನ್ನಡ ಸಮ್ಮೇಳನ ಈ ಹಾಡಿನ ತಕ್ಷಣ ನಿಲ್ಲಿಸಿಬಿಟ್ಟರು . ಮುಂದೆ ಓದಿ 
ಯಾಕೆ ಹೀಗಾಯ್ತು ? ಇನ್ನೂ ಇಪ್ಪತ್ತಕ್ಕೂ ಹೆಚ್ಚು ಹಾಡುಗಳನ್ನು ಹಾಡಬೇಕಿದ್ದ ವಿಜಯ್ ಪ್ರಕಾಶ್ ಸಂಗೀತ ಸಂಜೆ ಈ ಹಾಡಿನ ನಂತರ ನಿಂತು ಹೋಯ್ತು . ಕಾರಣ ಅಮೇರಿಕಾದಲ್ಲಿ ಕಾನೂನಿನ ನಿಯಮಗಳಿಗೆ ಎಲ್ಲರೂ ತಲೆ ಬಾಗಲೇಬೇಕು . ಕಟ್ಟಡದ ಮೇಲ್ವಿಚಾರಣೆಗೆ ನೇಮಕವಾಗಿದ್ದ ಫೈರ್ ಮಾರ್ಷಲ್ ಗೆ ಈ ರೀತಿಯ ಅಧಿಕಾರವಿರುತ್ತದೆ . ಅವರು ಕಟ್ಟಡದಲ್ಲಿ ನಿಯಮವಾಗಿರುವ ಹಾಗೆ ಎಲ್ಲಾ ನಡೆದರೆ ಮಾತ್ರ ಸುಮ್ಮನೆ ಇರ್ತಾರೆ ಇಲ್ಲ ಅಂದ್ರೆ ಚೇತಾವಣಿ 2 ಬಾರಿ ನೀಡುತ್ತಾರೆ . ಮೂರನೆ ಬಾರಿ ಸಂಗೀತ ಸಂಜೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದು ಎಲ್ಲರಿಗೆ ಅಕ್ಕ ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದರು. ಈ ಹಿಂದಿನ ಹಾಡುಗಳಿಗೆ ಡಾನ್ಸ್ ಮಾಡುತ್ತಿರುವಾಗ ನೆಲ ಅಲ್ಲಾಡುತ್ತಿದ್ದಿದ್ದು ನಾನು ಹಿಂದೆ ತಿಳ್ಸಿದ್ದೆ .
ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಫೈರ್ ಮಾರ್ಷಲ್ ಈ ರೀತಿ ತೀರ್ಮಾನ ತೆಗೆದುಕೊಂಡರು .
ತುಂಬಾ ಜನರಿಗೆ 7-8 ಹಾಡಿನ ನಂತರವೇ ಮುಗಿದು ಹೋಯಿತಲ್ಲ ಅಂತ ಅತಿಯಾದ ಬೇಸರದಿಂದ ಅಲ್ಲೆಯೇ ಕಾದು ಕುಳಿತರು . ಶುಭ ಸಮಾಚಾರ ಬರುತ್ತದೆ ಎಂದು ಕಾದು ಕುಳಿತಿರುವಾಗ ರಾತ್ರಿ ಗಂಟೆ 11:40 pm ಅಷ್ಟೇ . ಹಿಂದೆರಡು ದಿನಗಳು ಕಾರ್ಯಕ್ರಮಗಳು ಮುಗಿಯುವಾಗ ಬೆಳಗಿನ ಜಾವ ಗಂಟೆ 1:20 am ಮೇಲೆ ಆಗಿತ್ತು . ದುರದೃಷ್ಟವಶಾತ್ ಶುಭ ಸಮಾಚಾರ ಬರಲೇ ಇಲ್ಲ . ಅವರು ಪೂರ್ತಿ ಮೈಕ್ ಸಿಸ್ಟಮ್ ಎಲ್ಲಾ ಸೇರಿ ಸ್ವಿಚ್ ಆಫ್ ಮಾಡ್ತಾರೆ . ಕನಿಷ್ಠ ಅಂದರೆ ಮೈಕ್ ಕೂಡ ಕೊಡುವುದಿಲ್ಲ . ವಿಜಯ್ ಪ್ರಕಾಶ್ ನಂತಹ ಪ್ರತಿಭೆ ನಮ್ಮ ಮಧ್ಯ ಇದ್ದು ಸಂಗೀತ ಸಂಜೆ ನಡೆಸಿಕೊಡುವಾಗ ಹೀಗೆ ಆಯ್ತಲ್ಲ ಅನ್ನೋದು ಹೆಚ್ಚಿನ ನೋವು ತಂದಿದ್ದು .
ಮೂರು ದಿನಗಳಿಂದ ವಿಜಯ್ ಪ್ರಕಾಶ್ ನೆರೆದಿದ್ದ 3500ಕ್ಕೂ ಹೆಚ್ಚು ಜನರನ್ನು ರಂಜಿಸಲು ಕಾಯುತ್ತಿದ್ದರು , ವೇದಿಕೆ ಮೇಲೆ ಹಾಡುವ ಯಾವ ಗಾಯಕರನ್ನಾದರೂ ಕೇಳಿ ಜನರು ಎನರ್ಜಿ/ಜೋಷ್ ತೋರ್ಸಿದ್ರೆ ಮಾತ್ರ ಕಲಾವಿಧನಿಗೆ ಸಂತೋಷ ಆಗೋದು . ಅಷ್ಟು ಹೈ ಎನರ್ಜಿ ಆಡಿಯನ್ಸ್ ಸಿಗೋದು ತುಂಬಾ ಕಷ್ಟ ಕೂಡ . ಅದಕ್ಕೆಂದೇ ಎಷ್ಟೊಂದು ಕಸರತ್ತು ಸಂಗೀತ ಸಂಜೆಗೆ ಮುಂಚೆ ನಡೆಸಬೇಕಾಗುತ್ತದೆ . ಅವರು ಅಕ್ಕ ಕಾರ್ಯಕ್ರಮಕ್ಕೆ ಬಂದಿದ್ದು ಅವರ ಭಾಗ್ಯ, ಬರದೇ ಇದ್ದರೆ ಅವರ loss ಅಂತ ಕೂಡ ಮೊದಲೇ ತಿಳಿಸಿ ಸಂಗೀತ ಸಂಜೆ ಶುರು ಮಾಡಿದ್ದರು . ಆದರೆ ಬಿಲ್ಡಿಂಗ್ ಫ್ಲೋರ್ ಅಲ್ಲಾಡುತ್ತಿದ್ದಿದ್ದು ನನ್ನ ಗಮನಕ್ಕೆ ಕೂಡ ಬಂದಿತ್ತು . ಇದರಲ್ಲಿ ಯಾರ ತಪ್ಪೂ ಇಲ್ಲ , ಕಟ್ಟಡದ ಸುರಕ್ಷತೆಯ ದೃಷ್ಟಿಯಿಂದ ಹೀಗೆ ನಿರ್ಧಾರ ತೆಗೆದುಕೊಂಡರು ಅಂತ ಅಷ್ಟೇ ನಮಗೆ ವಿಷಯ ತಿಳಿದಿದ್ದು. ಎದೆ ತುಂಬಿ ಹಾಡು ಶುರು ಮಾಡಿ ಮುಗಿಸುವ ಮುಂಚೆಯೇ ಸೌಂಡ್ ಸಿಸ್ಟಮ್ ಬಂದ್ ಮಾಡಿ ವಿಜಯ್ ಪ್ರಕಾಶ್ ಮತ್ತು ತಂಡದವರು ವೇದಿಕೆಯಿಂದ ಕೆಳಗೆ ಇಳಿಯಬೇಕಾಯಿತು. 35 ನಿಮಿಷದ ನಂತರ ಕಾದು ಕುಳಿತವರೆಲ್ಲರಿಗೂ ನಿರಾಸೆ ಕಾದಿತ್ತು. ಅಕ್ಕ ವ್ಯವಸ್ಥಾಪಕರು ಪುನಃ ಕೇಳಿಕೊಂಡರು ಫೈರ್ ಮಾರ್ಷಲ್ ಒಪ್ಲಿಲ್ಲ . ಅಕ್ಕ ಸಮಿತಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅಮರ್ನಾಥ್ ಗೌಡ್ರು ಬಂದು ಇಲ್ಲಿಗೆ ಅಕ್ಕ- ೨೦೧೮ ಹತ್ತರ ಕನ್ನಡ ಸಮ್ಮೇಳನ ಕಾರ್ಯಕ್ರಮ ಇಲ್ಲಿಗೆ ಅಂತ್ಯವಾಗಿದೆ ಎಂದು ತಿಳಿಸಿದರು , ಅದನ್ನು ಹೇಳುವುದಕ್ಕೆ ಮಾತ್ರ ಮೈಕ್ ವ್ಯವಸ್ಥೆ ಮಾಡಿ ಕೊಟ್ಟರು .
ಎಷ್ಟು ಸಿಗಬೇಕೋ ಅಷ್ಟೇ ದಕ್ಕುವುದು ಅಂತ ತಿಳಿದು ಎಲ್ಲ ಸ್ನೇಹಿತರೊಡನೆ ಬೆಳಗಿನ ಜಾವ 4:30 am ಗಂಟೆಯ ವರಗೆ ಹರಟೆ ಹೊಡೆದು ಏರ್ಪೋರ್ಟ್ ಗೆ ಹೊರಟು ಬಂದೆ. ಬೆಳಗಿನ ಜಾವ 6:30 am ಗಂಟೆಯ ಫ್ಲೈಟ್ ಹಿಡ್ಕೊಂಡು ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ವಾಪಸ್ ಬಂದೆ . ಆದರೆ ಕಾರ್ಯಕ್ರಮದ ಗುಂಗಿನಿಂದ ಹೊರಗೆ ಬರುವುದಕ್ಕೆ 5-6 ದಿವಸಗಳಾದರು ಬೇಕು ಅಂತ ಕಾಣುತ್ತೆ. ಪ್ರಜ್ಞೆಗೆ ಸಿನೆಮಾಗಗಳಿಗಿಂತ ಸಿನಿಮಾ ಹಾಡುಗಳು ಹೋಗಿ ಕೂರುತ್ತದೆ ಅದರಿಂದಲೇ ಹಾಡುಗಳು ಹೆಚ್ಚು ನಮಗೆ ಇಷ್ಟವಾಗುವುದು .ಜನರು ಹಾಡುತ್ತಾರೆ ಕುಣಿಯುತ್ತಾರೆ ಅಂದರೆ ಆ ಚಿತ್ರಗಳಲ್ಲಿ ಅಭಿನಯ ಮಾಡಿರುವ ಕಲಾವಿಧರ ಮೇಲಿನ ಪ್ರೀತಿ ಮತ್ತು ವೇದಿಕೆ ಮೇಲೆ ಹಾಡುತ್ತಿರುವ ಸಂಗೀತ ಕಲಾವಿಧರ ವಿದ್ಯೆ ಮತ್ತು ಹಾಡಿನಿಂದ ಬರುವ ಉತ್ಸಾಹಕ್ಕೆ ಮಾತ್ರ , ಅಲ್ವಾ ?
ವಿಜಯ್ ಪ್ರಕಾಶ್ರವರಿಗೆ ಜೈ ಕನ್ನಡಾಂಬೆಗೆ ಜೈ

https://www.facebook.com/subbu.padmanabh/videos/10217379262611932/

No comments:

Post a Comment