Friday, September 14, 2018

ನವೀನ ಸಜ್ಜು- ಜಮ್ಮ ಜಮ್ಮ ಜಮ್ಮಾ ಜಾ - ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಿಂದ

ನವೀನ ಸಜ್ಜು- ಜಮ್ಮ ಜಮ್ಮ ಜಮ್ಮಾ ಜಾ - ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಿಂದ 
---------------------------------------------------
ನವೀನ್ ಸಜ್ಜುರವರನ್ನು ಭೇಟಿ ಮಾಡಿ ಸಂತೋಷ ಆಯಿತು . ಜನರು ಅವರು ಹಾಡುತ್ತಿದ್ದಾಗ ಕೆಳಗೆ ಬರಲು ಕೇಳಿಕೊಂಡರು . ತಕ್ಷಣ ನಮ್ಮೊಟ್ಟಿಗೆ ಬಂದು ಹಾಡಿದರು ಕುಣಿದರು . ಮೈಕ್ ವಿಪರೀತ ಸಮಸ್ಯೆ ಕೊಡುತ್ತಲೇ ಇತ್ತು . ಮಧ್ಯ ಮಧ್ಯ ಕಟ್ ಆಗೋದು ತುಂಬಾ , ಆದರೂ ಪಾಪ ಅವರ ಬೆಂಕಿ ಕಡಿಮೆ ಆಗ್ಲೇ ಇಲ್ಲ . ಇದು ಅವರ ಮೊದಲ ಬಾರಿ ಅಮೇರಿಕ ಪ್ರವಾಸ . ಒಂದು ಒಳ್ಳೆಯ ಮ್ಯೂಸಿಷಿಯನ್ ಅದಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ವ್ಯಕ್ತಿ ಅಂತ ಅನ್ನಿಸಿತು ಅವರ ಮಾತು ವಿಚಾರಗಳು ಕೇಳಿ . ಓದುವುದಕ್ಕೆ ಬರೆಯುವುದಕ್ಕೆ ಇಷ್ಟವಿಲ್ಲದೆ ಐದನೇ ತರಗತಿಯಿಂದಲೇ ಮನೆ ಮನೆಗೆ ಹೋಗಿ ಹಾಡಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಕೆರೆಯಿಂದ ಮೈಸೂರಿಗೆ ಬಂದು ಹತ್ತನೇ ತರಗತಿ ತನಕ ಓದಿದರು. orchestraದವರ ಹತ್ರ ಸೇರ್ಕೊಂಡು ಕಷ್ಟ ಪಟ್ಟು ಸಂಗೀತ ಜೀವನ ನಡೆಯುತ್ತಿದ್ದಾಗ ಪವನ್ ಕುಮಾರ್ ಇವರನ್ನು ನೋಡಿ ಲೂಸಿಯಾ ಚಿತ್ರದಲ್ಲಿ ಜಮ್ಮು ಜಮ್ಮು ಹಾಡು ಹಾಡುವುದಕ್ಕೆ ಇವರಿಗೆ ಅವಕಾಶ ಕಲ್ಪಿಸಿಕೊಟ್ಟರು. ಆಮೇಲೆ ನವೀನ ಸಜ್ಜು ಬೇರೆ ಲೆವೆಲ್ ಗೆ ಹೋಗಿಯೇ ಬಿಟ್ಟರು . ಇವತ್ತು ಶ್ರುತಿ ಹರಿಹರನ್ ವೇದಿಕೆ ಮೇಲೆ ಬಂದು ಕುಣಿಯುತ್ತಾರೆ , ಆ ಮಟ್ಟಿಗೆ ಬೆಳೆದರೂ ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಹಾಡುಗಾರಿಕೆ ಅತ್ಯುತ್ತಮ ಮಟ್ಟದ್ದು . ನವೀನ , ಇನ್ನೂ ಹತ್ತಲವಾರು ಸಾರಿ ಅಮೆರಿಕಕ್ಕೆ ಬಂದು ಜನರನ್ನು ರಂಜಿಸಲಿ .

https://www.facebook.com/subbu.padmanabh/videos/10217391556999284/

No comments:

Post a Comment